ಯೂ ಆರ್‌ ಮೈ ಹೀರೋ ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ನಾಯಕಿಯಾದ ಸಂಹಿತಾ ವಿನ್ಯಾ

ಫ್ಯಾಷನ್‌ ಶೋಗಳ ಮೂಲಕವೇ ಗುರುತಿಸಿಕೊಂಡ ನಟಿಯ ಹೊಸ ಪಯಣ ಇದೇ 17ಕ್ಕೆ ಸಿನಿಮಾ ಬಿಡುಗಡೆ

ಮಾಡೆಲಿಂಗ್‌ಗೂ ಸಿನಿಮಾ ಕ್ಷೇತ್ರಕ್ಕೂ ಅದೆನೋ ಬಿಡಿಸದ ನಂಟಿದೆ. ಅಲ್ಲಿಯವರು ಇಲ್ಲಿ ಇಲ್ಲಿಯವರು ಅಲ್ಲಿ ಆಗಾಗ ತಮ್ಮ ಪ್ರತಿಭೆಯನ್ನು ತೋರಿಸುತ್ತಿರುತ್ತಾರೆ. ಇದೀಗ ಮಾಡೆಲಿಂಗ್‌ನಿಂದ ಆರಂಭವಾದ ಸಂಹಿತಾ ವಿನ್ಯಾ ಅವರ ಜರ್ನಿ ಸಿನಿಮಾವರೆಗೂ ಬಂದು ನಿಂತಿದೆ. ಹಾಗಂತ ಮಾಡೆಲಿಂಗ್‌ ಅವರ ಕೈ ಬಿಟ್ಟಿಲ್ಲ. ಅವಕಾಶ ಎಲ್ಲೆಲ್ಲಿ ಸಿಗುತ್ತದೆಯೋ ಅಲ್ಲಿ ಪ್ರತಿಭೆಯ ಅನಾವರಣ ಮಾಡುತ್ತಿದ್ದಾರವರು. ಇದೀಗ ಇದೆಲ್ಲದಕ್ಕಿಂತ ಒಂದು ಹೆಜ್ಜೆ ಮೇಲೆಯೇ ಹೋಗಿದ್ದಾರೆ. ಅಂದರೆ, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಿರುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನೇನು ಆ ಸಿನಿಮಾ ಇದೇ ೧೭ಕ್ಕೆ ಬಿಡುಗಡೆ ಆಗಲಿದೆ.WhatsApp Image 2022 06 10 at 2.52.55 PM

ಅಂದಹಾಗೆ, ಆ ಸಿನಿಮಾ ಹೆಸರು “ಯೂ ಆರ್‌ ಮೈ ಹೀರೋ”. ಮೂಲ ತೆಲುಗಿನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ, ಹಿಂದಿಯಲ್ಲಿಯೂ ಏಕಕಾಲದಲ್ಲಿ ಚಿತ್ರೀಕರಣಗೊಂಡಿದೆ. ಇನ್ನುಳಿದಂತೆ ಕನ್ನಡ, ತಮಿಳು, ಮಲಯಾಳಂ ಭಾಷೆಗೆ ಡಬ್‌ ಆಗಿ ತೆರೆಗೆ ಬರಲಿದೆ. ಮೊದಲಿಗೆ ಇದೇ 17ಕ್ಕೆ ತೆಲುಗು ಅವತರಣಿಕೆ ತೆರೆಗೆ ಬರಲಿದೆ.WhatsApp Image 2022 06 10 at 2.52.56 PM 1

ಈ ಬಗ್ಗೆ ಹೇಳಿಕೊಳ್ಳುವ ಸಂಹಿತಾ ವಿನ್ಯಾ, “ಈವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆ ಎಲ್ಲ ಸಿನಿಮಾಗಳಿಗಿಂತ ಈ ಸಿನಿಮಾ ತುಂಬ ಡಿಫರಂಟ್.‌ ಏಕೆಂದರೆ, ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ನನ್ನ ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ಬರುತ್ತಿದೆ. ಮೊದಲ ಸಲ ತೆಲುಗು ಟೀಮ್‌ ಜೊತೆಗೆ ಕೆಲಸ ಮಾಡಿದ್ದೇನೆ. ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರೂ, ತೆಲುಗಿನಲ್ಲಿನ ವಾತಾರಣವೇ ಬೇರೆ ಇತ್ತು. ಚಿತ್ರದ ಬಹುತೇಕ ಶೂಟಿಂಗ್‌ ಹೈದರಾಬಾದ್‌ನಲ್ಲಿಯೇ ಮುಗಿದಿದೆ” ಎಂಬುದು ಅವರ ಮಾತು.WhatsApp Image 2022 06 10 at 2.52.56 PM e1654879201591

ಅದೇ ರೀತಿ “ಯೂ ಆರ್‌ ಮೈ ಹೀರೋ” ಸಿನಿಮಾ ಬಗ್ಗೆಯೂ ಹೇಳಿಕೊಳ್ಳುವ ಅವರು, “ಇದೊಂದು ಹಾರರ್‌ ಸಿನಿಮಾ. ಯಾವುದೋ ಒಂದು ಕಾರಣಕ್ಕೆ ಮನೆಯೊಂದನ್ನು ಸೇರಿಕೊಳ್ಳುತ್ತೇನೆ. ಅಲ್ಲಿ ದೆವ್ವದ ಕಾಟ ಶುರುವಾಗುತ್ತದೆ. ನನಗೆ ಅದರ ಮೇಲೆ ನಂಬಿಕೆ ಇಲ್ಲದಿದ್ದರೂ, ಒಂದಷ್ಟು ಅನುಭವ ಆಗುತ್ತದೆ. ಅದರ ಕಾಟ ಹೇಗಿರುತ್ತದೆ? ಕೊನೆಗೆ ಅದರ ಆಟಕ್ಕೆ ಬ್ರೇಕ್‌ ಹಾಕುವುದು ಹೇಗೆ? ಹಾರರ್‌ ಟಚ್‌ ಜತೆಗೆ ಸಸ್ಪೆನ್ಸ್‌ ರೀತಿಯಲ್ಲಿ ಸಿನಿಮಾ ನೋಡಿಸಿಕೊಂಡು ಸಾಗಲಿದೆ ಎನ್ನುತ್ತಾರೆ.WhatsApp Image 2022 06 10 at 2.52.56 PM 2

ಈಗಾಗಲೇ ಹೇಳಿದಂತೆ ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡಿರುವ ಸಂಹಿತಾ ವಿನ್ಯಾ, ಮೆಟ್‌ ಗಾಲಾದಲ್ಲಿಯೂ ಹೆಜ್ಜೆ ಹಾಕಿ ಬಂದಿದ್ದಾರೆ. ಅದರ ಜತೆಗೆ 60ಕ್ಕೂ ಅಧಿಕ ಫ್ಯಾಷನ್‌ ಶೋಗಳಲ್ಲಿ ಸಂಹಿತಾ ಶೋ ಸ್ಟಾಪರ್‌ ಆಗಿ ಭಾಗವಹಿಸಿದ್ದೇನೆ. ಆ ಎಲ್ಲ ಶೋಗಳಿಗೆ ಫಾರೆವರ್‌ ನವೀನ್‌ ಕುಮಾರ್‌ ಫ್ಯಾಷನ್‌ ಡಿಸೈನರ್‌ ಆಗಿದ್ದರು. ಈ ಸಿನಿಮಾಕ್ಕೂ ಅವರೇ ವಸ್ತ್ರ ವಿನ್ಯಾಸ ಮಾಡಿದ್ದಾರೆ.WhatsApp Image 2022 06 10 at 2.52.54 PM

ತೆಲುಗಿನ ಈ “ಯೂ ಆರ್‌ ಮೈ ಹೀರೋ” ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಫಿರೋಜ್‌ ಖಾನ್‌, ಸನಾ ಖಾನ್, ಸಂಹಿತಾ ವಿನ್ಯಾ, ಐಶ್ವರ್ಯಾ, ಮಿಲಿಂದ್‌ ಗುನಾಜಿ, ಮೇಕಾ ರಾಮಕೃಷ್ಣ, ಆನಂದ್‌ ಸೇರಿ ಹಲವರು ನಟಿಸಿದ್ದಾರೆ. ಶೇರ್‌ ಎಂಬುವವರು ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕೇವಲ ನಿರ್ದೇಶನ ಮಾತ್ರವಲ್ಲದೆ, ಸಂಗೀತ, ಕತೆ, ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿದ್ದಾರೆ. ಮಿನ್ನಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಪ್ರವೀಣ್‌ ಕಾವೇಟಿ ಛಾಯಾಗ್ರಹಣ, ಡಿ ವೆಂಕಟ್‌ ಪ್ರಭು ಅವರ ಸಂಕಲನ, ಸಾಯಿರಾಜ್‌ ನೃತ್ಯ ನಿರ್ದೇಶನವಿದೆ.WhatsApp Image 2022 06 10 at 2.52.57 PM

ಇನ್ನು ಕನ್ನಡದಲ್ಲಿ “ಯಾಕೋ ಬೇಜಾರು” ಮತ್ತು “ದಿ ಕೇಸ್‌ ಅಫ್‌ ಹಂಸ” ಸಿನಿಮಾದ ಕೆಲಸಗಳನ್ನು ಮುಗಿಸಿರುವ ವಿನ್ಯಾ, ತಮಿಳಿನ ಸಿನಿಮಾವೊಂದಕ್ಕೂ ಸಹಿ ಮಾಡಿದ್ದಾರೆ. ಅದರ ಅರ್ಧ ಶೂಟಿಂಗ್‌ ಸಹ ಈಗಾಗಲೇ ಮುಗಿದಿದೆ. ಯೂ ಆರ್‌ ಮೈ ಹೀರೋ ಚಿತ್ರದ ನಿರ್ದೇಶಕ ಶೇರ್‌ ಅವರ ಬಾಳಿವುಡ್‌ ಪ್ರಾಜೆಕ್ಟ್‌ನಲ್ಲಿಯೂ ಸಂಹಿತಾ ನಟಿಸಲಿದ್ದಾರೆ. ಈ ಸಿನಿಮಾ ಹೊರತುಪಡಿಸಿದರೆ, ಕನ್ನಡದಲ್ಲಿ ಹಾಲುತುಪ್ಪ, ಅಮೃತಗಳಿಗೆ, ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು, ವಿಷ್ಣು ಸರ್ಕಲ್‌, ಸೂತ್ರಧಾರಿ ಚಿತ್ರಗಳು ತೆರೆಕಂಡಿವೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…