ಎಲ್ಟು ಮುತ್ತಾ’ನಿಗೆ ಜೊತೆಯಾದ ಹೊಂಬಾಳೆಯ ಶೈಲಜಾ ವಿಜಯ್ ಕಿರಗಂದೂರು

Hombale's Shailaja Vijay joined Kirgandur for 'Eltu Mutta'

ಹೊಸಬರ ಎಲ್ಟು ಮುತ್ತಾ ಟೈಟಲ್ ಪೋಸ್ಟರ್ ರಿಲೀಸ್…ಸಾಥ್ ಕೊಟ್ಟ ಶೈಲಜಾ ವಿಜಯ್ ಕಿರಗಂದೂರು, ಸಂಗೀತ ಕಟ್ಟಿ ಹಾಗೂ ಎಎಂಆರ್ ರಮೇಶ್


ಕನ್ನಡ ಚಿತ್ರರಂಗದಲ್ಲೀಗ ಯುವ ಪ್ರತಿಭೆಗಳ ಪರ್ವ ಆರಂಭವಾಗಿದೆ. ಹೊಸಬರು ಮಾಡುತ್ತಿರುವ ಸಿನಿಮಾ ಯಶಸ್ಸು ಕಾಣುತ್ತಿದೆ. ಬಗೆಬಗೆಯ ಶೀರ್ಷಿಕೆಗಳ ಮೂಲಕವೇ ಸಿನಿಮಾಗಳು ಸೆಟ್ಟೇರುತ್ತಿವೆ. ಇದೀಗ ಅಂಥದ್ದೇ ವಿಭಿನ್ನ ಟೈಟಲ್ ಮೂಲಕ ಗಮನ ಸೆಳೆಯುತ್ತಿದೆ ಎಲ್ಟು ಮುತ್ತಾ ಸಿನಿಮಾ.Hombale’s Shailaja Vijay joined Kirgandur for ‘Eltu Mutta’

Hombale's Shailaja Vijay joined Kirgandur for 'Eltu Mutta'

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಹೈ5 ಸ್ಟುಡಿಯೋ ನಿರ್ಮಾಣ ಸಂಸ್ಥೆ ಉದ್ಘಾಟನೆ ಹಾಗೂ ಎಲ್ಟು ಮುತ್ತಾ ಸಿನಿಮಾದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೊಂಬಾಳೆ ಸಂಸ್ಥೆಯ ಸಂಸ್ಥಾಪಕ ವಿಜಯ್ ಕಿರಗಂದೂರು ಪತ್ನಿ ಶೈಲಜಾ ವಿಜಯ್ ಕಿರಗಂದೂರು, ಸಂಗೀತ ಕಟ್ಟಿ, ಎಎಂಆರ್ ರಮೇಶ್ ಹೊಸಬರ ಕನಸಿಗೆ ಸಾಥ್ ಕೊಟ್ಟರು.Hombale's Shailaja Vijay joined Kirgandur for 'Eltu Mutta'

ನಿರ್ದೇಶಕರಾದ ರಾ ಸೂರ್ಯ ಮಾತನಾಡಿ, ಇಡೀ ತಂಡ ನನ್ನ ಮೇಲೆ ಭರವಸೆ ಇಟ್ಟಿದೆ. ಆ ಭರವಸೆ, ನನ್ನ ಏನಾದರೂ ಮಾಡಲು ಫುಶ್ ಮಾಡುತ್ತಿದೆ. ಪ್ರತಿಯೊಬ್ಬರು ಒಂದು ದಿನ ಹೊಸಬರು ಆಗಿರುತ್ತಾರೆ. ಅವರು ನಂತರ ಹಳಬರು ಆಗುತ್ತಾರೆ. ಅದಕ್ಕೆ ಕಾರಣ ನಿಮ್ಮ ಪ್ರೋತ್ಸಾಹ, ಆಶೀರ್ವಾದ. ನಾವು ಈಗ ಹೊಸಬರು, ನಮ್ಮನು ಹಳಬರನಾಗಿ ಮಾಡಿ ,ಬೆಂಬಲ ನಮ್ಮ ಮೇಲೆ ಇರಲಿ. ಸಾವಿಗೆ ಡೋಲು ಬಡಿಯುವವರ ಕಥೆಯನ್ನು ಎತ್ತಿಕೊಂಡು ಸಿನಿಮಾ ಮಾಡಿದ್ದೇನೆ. ಇದು ಸತ್ಯ ಘಟನೆಯ ಆಧಾರಿತ ಸಿನಿಮಾ. ಅದನ್ನು ಫಿಕ್ಷನ್ ವೇನಲ್ಲಿ ಹೇಳಿದ್ದೇನೆ. ಸಿನಿಮಾದಲ್ಲಿ 4 ಹಾಡುಗಳಿವೆ. ಈಗಾಗಲೇ ಡಬ್ಬಿಂಗ್ ಮುಗಿದಿದೆ ಎಂದರು.Hombale's Shailaja Vijay joined Kirgandur for 'Eltu Mutta'

ಹೈಫ್ 5 ಸ್ಟುಡಿಯೋದ ಮೆಂಟರದ ಸತ್ಯ ಶ್ರೀನಿವಾಸನ್ ಮಾತನಾಡಿ, ಹೈಫ್ 5 ಸ್ಟುಡಿಯೋ ಅಂದರೆ ಐದು ಜನರ ಸಂಸ್ಥೆ. ಒಳ್ಳೆ ಕಂಟೆಂಟ್ ಸಿನಿಮಾಗಳನ್ನು ವಿಶ್ವದ ಎಲ್ಲಾ ಸಿನಿಮಾ ಪ್ರೇಮಿಗಳಿಗೆ ತಲುಪಿಸುವುದು. ಈ ನೆಲದ ಕಂಟೆಂಟ್ ನ್ನು ಎಲ್ಲೆಡೆ ಪಸರಿಸುವುದು ಈ ಸಂಸ್ಥೆಯ ಉದ್ದೇಶ ಎಂದರು. ನಾವು ಮೂರು ಕಥೆ ಕೇಳಿದವು. ಆದರೆ ಈ ಚಿತ್ರದ ಕಥೆ ಇಷ್ಟವಾಯ್ತು ಎಂದು ತಿಳಿಸಿದರು.Hombale's Shailaja Vijay joined Kirgandur for 'Eltu Mutta'

ಎಲ್ಟಾ ಮುತ್ತಾ ಸಿನಿಮಾ ಮೂಲಕ ಯುವ ಪ್ರತಿಭೆ ರಾ.ಸೂರ್ಯ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಒಂದಷ್ಟು ಕಿರುಚಿತ್ರ ನಿರ್ದೇಶನದ ಅನುಭವವನ್ನು ಇಟ್ಟುಕೊಂಡು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವೈದ್ಯಕೀಯ ಹಿನ್ನೆಲೆಯುಳ್ಳ ಸೂರ್ಯ ಅವರಿಗೆ ಸಿನಿಮಾ ಮೇಲಿನ ಸೆಳೆತ ಅವರನ್ನು ಚಿತ್ರರಂಗಕ್ಕೆ ಕರೆದು ತಂದು ನಿಲ್ಲಿಸಿದೆ. ಎಲ್ಟು ಮುತ್ತಾ ಸಿನಿಮಾ ಮೂಲಕ ಯುವ ನಟ ಶೌರ್ಯ ಪ್ರತಾಪ್ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇವರಿಗೆ ನಾಯಕಿಯಾಗಿ ಪ್ರಿಯಾಂಕಾ ಮಾಲಲಿ ಸಾಥ್ ಕೊಟ್ಟಿದ್ದಾರೆ. ಕಾಕ್ರೋಚ್ ಸುಧಿ, ಯಮುನಾ ಶ್ರೀನಿಧಿ , ನವೀನ್ ಪಡಿಲ್ ತಾರಾಬಳಗದಲ್ಲಿದ್ದಾರೆ.

ನೈಜ ಘಟನೆಯಾಧಾರಿತ ಎಲ್ಟು ಮುತ್ತಾ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಮಡಿಕೇರಿಯ ನೆಲಜಿಯಲ್ಲಿ ಬಹುತೇಕ ಶೂಟಿಂಗ್ ಮಾಡಲಾಗಿದೆ. ಉಳಿದಂತೆ ಬೆಂಗಳೂರು ಸುತ್ತಮುತ್ತ ಕೂಡ ಚಿತ್ರೀಕರಿಸಲಾಗಿದೆ. ಹೈ5 ಸ್ಟುಡಿಯೋಸ್ ಮೂಲಕ ನಿರ್ದೇಶಕ ರಾ ಸೂರ್ಯ, ನಾಯಕ ಶೌರ್ಯ ಪ್ರತಾಪ್, ಪ್ರಸನ್ನ ಕೇಶವ, ರುಹಾನ್ ಆರ್ಯ ಹಾಗೂ ಬಸವರಾಜೇಶ್ವರಿ ಭೂಮ್ರಡ್ಡಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.Hombale's Shailaja Vijay joined Kirgandur for 'Eltu Mutta'

ಎಲ್ಟಾ ಮುತ್ತಾ ಅಂದರೆ ಚಿತ್ರದ ಎರಡು ಪಾತ್ರಗಳ ಹೆಸರು. ಶೌರ್ಯ ಪ್ರತಾಪ್ ನಾಯಕನಾಗಿ ಬಣ್ಣ ಹಚ್ಚುವುದರ ಜೊತೆಗೆ ಸಹ ನಿರ್ದೇಶಕರಾಗಿ ಹಾಗೂ ಸಹ ಬರಗಾರರನಾಗಿ ಸೂರ್ಯ ಅವರಿಗೆ ಜೊತೆಯಾಗಿ ನಿಂತಿದ್ದಾರೆ. ಪ್ರಸನ್ನ ಕೇಶವ ಸಂಗೀತ, ಮೆಯ್ಯಪ್ಪ ಭಾಸ್ಕರ್ ಛಾಯಾಗ್ರಹಣ, ಕೆ ಯೇಸು ಸಂಕಲನ, ಜ್ಞಾನತಿ ರಾಹುಲ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಅಜಿತ್ ಕೇಶವ, ರಾ ಸೂರ್ಯ ಹಾಗೂ ಶೌರ್ಯ ಪ್ರತಾಪ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…