ವಿಲಕ್ಷಣ ಲೋಕದಲ್ಲಿ ಓಡಾಡಿಸಿ, ನಗಿಸುವ ವ್ಹೀಲ್ ಚೇರ್ ರೋಮಿಯೋ!

ತಾಯಿಯಿಲ್ಲದ ಮಗು ಅದು. ಹುಟ್ಟಿನಿಂದಲೇ ಕಾಲುಗಳಲ್ಲಿ ಸ್ವಾಧೀನವಿಲ್ಲ. ಎದ್ದು ಓಡಾಡಲೂ ಆಗುವುದಿಲ್ಲ. ಬೇರೆಲ್ಲ ಮಕ್ಕಳಂತೆ ಓಡಲು ಬಯಸಿದರೆ, ತನ್ನ ಹೆಗಲಿಗೆ ಹಾಕಿಕೊಂಡು ರನ್ನಿಂಗ್ ರೇಸ್ ಓಡುವ, ಅನುಕ್ಷಣವೂ ಎದೆಮೇಲೆ ಹಾಕಿಕೊಂಡು ಪೊರೆಯುವ ತಾಯಿ ಮನಸ್ಸಿನ ಅಪ್ಪ. ವಿಕಲ ಚೇತನ ಮಗನಿಗೆ ಮದುವೆ ಮಾಡಿಸುವ ಉಮೇದು ಅಪ್ಪನಿಗೆ. ಕಾಲುಗಳಲ್ಲಿ ಬಲವಿಲ್ಲದಿದ್ದರೂ ಹುಡುಗನಿಗೆ ಬೇರೆಲ್ಲ ಶಕ್ತಿ ಇರುತ್ತದೆ. ವ್ಹೀಲ್ ಚೇರ್ ಮೇಲೆ ಕೂತಿದ್ದರೂ ವಿಟ ಬಯಕೆ ವ್ಯಕ್ತಪಡಿಸುತ್ತಾನೆ. ಮದುವೆ ಬೇಡ ಹುಡುಗಿ ಬೇಕು ಅನ್ನುತಾನೆ.pic

ಕಡೆಗೆ ಹೆತ್ತ ಮಗನ ದಾಹ ತಣಿಸಲು ವೇಶ್ಯಾಗೃಹಕ್ಕೆ ಕರೆದುಕೊಂಡು ಹೋಗುವ ಅಪ್ಪ. ಆ ನಂತರದ ವಿದ್ಯಮಾನಗಳನ್ನೆಲ್ಲಾ ಪರಿಪೂರ್ಣ ಹಾಸ್ಯದೊಂದಿಗೆ ಕಟ್ಟಿರುವ ಚಿತ್ರ ವ್ಹೀಲ್ ಚೇರ್ ರೋಮಿಯೋ.
ಆಗ… ಮಠ, ಎದ್ದೇಳು ಮಂಜುನಾಥ ಸಿನಿಮಾಗಳು ಬಂದಾಗ ಜನ ಸೀಟಿನ ಮೇಲೆ ಕೂರಲಾಗದೇ ಎದ್ದೆದ್ದು ಕುಣಿಯುತ್ತಾ ಸಿನಿಮಾ ನೋಡಿದ್ದರಲ್ಲಾ? ಅದೇ ಥರ ಇಲ್ಲೂ ಫಸ್ಟ್ ಹಾಫ್ ಪೂರ್ತಿ ಬಿಡುವು ಕೊಡದೆ ನಗಿಸುತ್ತಾರೆ. ದ್ವಿತೀಯಾರ್ಧದಲ್ಲಿ ಕಥೆ ಪಥ ಬದಲಿಸುತ್ತದೆ. ರಾಜ್ಯದ ಗಡಿ ಮೀರಿ ಸುತ್ತುತ್ತದೆ. ಅದೊಂಥರಾ ಎಮೋಷನಲ್ ಜರ್ನಿ ಅಂದುಕೊಳ್ಳಬಹುದು.

ಎಷ್ಟೋ ಸಿನಿಮಾಗಳಲ್ಲಿ ರಂಗಾಯಣ ರಘು ರೇಜಿಗೆ ಹುಟ್ಟಿಸಿರುತ್ತಾರೆ. ರಘು ಅಪ್ಪಟ ನಿರ್ದೇಶಕನ ಕಲಾವಿದ ಅನ್ನೋದು ಕೂಡಾ ಆಗಾಗ ಸಾಬೀತಾಗುತ್ತಲೇ ಇರುತ್ತದೆ. ವ್ಹೀಲ್ ಚೇರ್ ರೋಮಿಯೋದಲ್ಲಿ ಒರಿಜಿನಲ್ ರಂಗಾಯಣ ರಘು ಎದ್ದು ಕಾಣುತ್ತಾರೆ. ಅಷ್ಟೊಂದು ನಗಿಸುತ್ತಾರೆ. ಹೀರೋ ಪಾತ್ರದಲ್ಲಿರುವ ರಾಮ್ ಚೇತನ್ ಗೆ ನಿಜಕ್ಕೂ ಕೈ-ಕಾಲು ಊನವಾ ಅನ್ನಿಸುವಷ್ಟರ ಮಟ್ಟಿಗೆ ಸಹಜ ಅಭಿನಯ. ನಾಯಕಿ ಮಯೂರಿಯೇನು ಕಡಿಮೆಯಲ್ಲ. ಅಂಧತ್ವವನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ಸುಚೇಂದ್ರ ಪ್ರಸಾದ್ ಈ ಚಿತ್ರದಲ್ಲಿ ತೀರಾ ಚೆಂದಗೆ ಭಿನಯಿಸಿದ್ದಾರೆ. ಡುಮ್ಮ ಗಿರಿ ನಟನೆ ʻಫನ್ʼಟಾಸ್ಟಿಕ್!81983150

ಈ ಥರದ ಸಬ್ಜೆಕ್ಟನ್ನು ಕನ್ನಡ ಮಾತ್ರವಲ್ಲ ಇತರೆ ಭಾಷೆಗಳಲ್ಲಿ ಕೂಡಾ ಯಾರೂ ಮುಟ್ಟಿದಂತಿಲ್ಲ. ಸಾಮಾನ್ಯಕ್ಕೆ, ಅಂಗ ಊನತೆ ಹೊಂದಿರುವ ಜೀವಗಳ ಒಳ ವೇದನೆಗಳನ್ನು ಯಾರೂ ಅರ್ಥ ಮಾಡಿಕೊಳ್ಳೋದೇ ಇಲ್ಲ. ಅವರಲ್ಲೂ ಎಲ್ಲರಂತೆ ಬಯಕೆಗಳಿರುತ್ತವೆ, ಪ್ರೀತಿ, ಪ್ರೇಮ, ಕಾಮಗಳೆಲ್ಲಾ ಅವರಿಗೂ ಬೇಕು ಅನ್ನೋದನ್ನೇ ಜಗತ್ತು ಮರೆತಿರುತ್ತದೆ. ಅದನ್ನು ನೆನಪಿಸುವ ಕಥಾವಸ್ತು ವ್ಹೀಲ್ ಚೇರ್ ರೋಮಿಯೋದಲ್ಲಿದೆ. ಹೆತ್ತ ಮಗನ ಮನೋ ದೈಹಿಕ ಬಯಕೆಗಳನ್ನು ಅರ್ಥಮಾಡಿಕೊಳ್ಳುವ ಅಪ್ಪ ಮಾತ್ರ ಇಲ್ಲಿಲ್ಲ… ತನ್ನದೇ ಮಗಳು, ಕಟ್ಟಿಕೊಂಡ ಹೆಂಡತಿ ಅನ್ನೋದನ್ನೂ ನೋಡದೆ ತಲೆ ಹಿಡಿಯುವ ಅಪ್ಪನನ್ನೂ ತೋರಿಸಿದ್ದಾರೆ.Wheel Chair Romeo stills 1

ಬದುಕಿನ ಎರಡು ಎಕ್ಸ್ಟ್ರೀಮ್ʼಗಳು ಇಲ್ಲಿ ಅನಾವರಣಗೊಂಡಿವೆ.
ಗಟ್ಟಿಯಾದ್ದೊಂದು ಕಥೆ, ಎಲ್ಲೂ ಗೊಂದಲವಾಗದ ನಿರೂಪಣೆಯ ಜೊತೆಗೆ ಪವರ್ ಫುಲ್ ಸಂಭಾಷಣೆ ಸೇರಿಕೊಂಡು ಹೊಸದೊಂದು ಫೀಲ್ ಕೊಡುವ ಸಿನಿಮಾ ವ್ಹೀಲ್ ಚೇರ್.91808122

ಗುರು ಕಷ್ಯಪ್ ಎನ್ನುವ ಪ್ರಚಂಡ ಪ್ರತಿಭೆಯ ಪ್ರಾಣ ಯಾಕಾದರೂ ಹೋಯ್ತೋ? ಸಿನಿಮಾ ಪೂರ್ತಿ ನೋಡಿದ ಮೇಲೆ ಹೆಚ್ಚು ಕಾಡುವ ವಿಚಾರವಿದು. ಗುರು ಕಷ್ಯಪ್ ಕಣ್ಮುಚ್ಚಿ ತಿಂಗಳುಗಳೇ ಕಳೆದಿವೆ. ಅವರೇ ಸಂಭಷಣೆ ಬರೆದಿಟ್ಟು ಹೋಗಿದ್ದ ಚಿತ್ರಗಳು ತೆರೆಗೆ ಬರುತ್ತಲೇ ಇವೆ. ʻವ್ಹೀಲ್ ಚೇರ್ ರೋಮಿಯೋʼದಲ್ಲಿ ಗುರು ಬರವಣಿಗೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತದೆ.EccyNvHVAAAhe5z

ಗುರುಪ್ರಸಾದ್, ವಿಜಯಪ್ರಸಾದ್ ಮುಂತಾದವರ ಸಾಲಿಗೆ ವ್ಹೀಲ್ ಚೇರ್ ಚಿತ್ರದ ನಿರ್ದೇಶಕ ನಟರಾಜ್ ಕೂಡಾ ಸೇರಿಕೊಳ್ಳುವುದರಲ್ಲಿ ಡೌಟಿಲ್ಲ. ಯಾವುದೇ ಸಬ್ಜೆಕ್ಟನ್ನು ಆಯ್ಕೆ ಮಾಡಿಕೊಂಡು ಅದನ್ನು ತೆರೆಗೆ ಅಳವಡಿಸುವ ಕಸುಬುದಾರಿಕೆ ನಟರಾಜ್ ಗಿದೆ. ಕಲಾವಿದ ತಂತ್ರಜ್ಞರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಕೆಲಸ ತೆಗೆಸಿಕೊಳ್ಳುವ ಜಾಣ್ಮೆಯೂ ಇವರಿಗೆ ಸಿದ್ದಿಸಿದೆ.

ಇತರೆ ಸಿನಿಮಾಗಳ ಗುಂಗಿನಿಂದ ಹೊರಬರಲು ಹೆಣಗಾಡುತ್ತಿರುವರು, ಯಾವ ಸಿನಿಮಾ ನೋಡುವುದು ಅಂತಾ ಗೊಂದಲದಲ್ಲಿರುವವರು ಧಾರಾಳವಾಗಿ ವ್ಹೀಲ್ ಚೇರ್ ರೋಮಿಯೋ ವನ್ನು ನೋಡಿ ಎಂಜಾಯ್ ಮಾಡಬಹುದು. 4/5

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…