ಸಖತ್ತಾಗಿದೆ ತೋತಾಪುರಿ 2 ಟೇಸ್ಟು!

totapuri 2 review

Totapuri 2 3.5/5

ತೋತಾಪುರಿ ಭಾಗ ೨ Totapuri 2 ಬಿಡುಗಡೆಯಾಗಿದೆ. ಈ ಹಿಂದೆ ಮೊದಲ ಭಾಗ ಬಂದಿತ್ತು. ಒಂದು ವರ್ಗ ಸಿನಿಮಾವನ್ನು ನೋಡಿ ಎಂಜಾಯ್ ಮಾಡಿತ್ತು. ಮತ್ತೊಂದು ವರ್ಗ ಇದರಲ್ಲಿ ಡಬಲ್ ಮೀನಿಂಗ್ ಮಾತುಗಳೇ ತುಂಬಿಕೊಂಡಿವೆ ಅಂತಾ ಬೇಸರ ಮಾಡಿಕೊಂಡಿತ್ತು. ಈಗ ಎರಡೂ ವರ್ಗದವರ ಮನಸ್ಸಿಗೆ ಒಪ್ಪುವ, ಕಾಡುವ, ಕಚಗುಳಿ ಇಡುವ ತೋತಾಪುರಿಯ ಎರಡನೇ ಭಾಗ ತೆರೆಗೆ ಬಂದಿದೆ.totapuri 2 review
ತಮಾಷೆಯ ವಿಷಯಗಳನ್ನು ಹೇಳುತ್ತಲೇ ಗಂಭೀರ ವಿಚಾರಗಳನ್ನೂ ಇಲ್ಲಿ ಬಿಚ್ಚಿಡಲಾಗಿದೆ. ಬರಿಯ ಜಾತಿ ಮಾತ್ರವಲ್ಲ, ಧರ್ಮವನ್ನೂ ಮೀರಿದ್ದು ಪ್ರೀತಿ ಅನ್ನೋದು ಇಲ್ಲಿ ನಿರೂಪಿತಗೊಂಡಿದೆ. ಕಟ್ಟಕಡೆಯಲ್ಲಿ ಸಂವಿಧಾನಕ್ಕಿಂತಾ ದೊಡ್ಡ ನಂಬಿಕೆ, ಅಂಬೇಡ್ಕರರಿಗಿಂತಾ ದೊಡ್ಡ ದೇವರಿಲ್ಲ ಎನ್ನುವಂತಾ ಸಂದೇಶ ಎಂಥವರನ್ನಾದರೂ ಭಾವುಕರನ್ನಾಗಿಸುತ್ತದೆ.

ಇದನ್ನೂ ಓದಿ:ಅದೃಷ್ಟ ವೆನ್ನುವುದು ಪ್ರಯತ್ನವೆಂಬ ತಾಯಿಗೆ , ಅವಕಾಶವೆಂಬ ತಂದೆಗೆ ಜನಿಸುವ ಮಗು.

totapuri 2 reviewಡಾಲಿ ಧನಂಜಯ ಮತ್ತು ಸುಮನ್ ರಂಗನಾಥ್ ಅವರ ಪ್ರೀತಿ, ಹುಡುಕಾಟದ ಭಾಗ ಇಲ್ಲಿ ಪ್ರಧಾನವಾಗಿದೆ. ಜೊತೆಗೆ ಜಗ್ಗೇಶ್, ಅದಿತಿ ಜೋಡಿ ಕೂಡಾ ಆಪ್ತವಾಗಿ ಕಾಣುತ್ತದೆ. ದೊನ್ನೆ ರಂಗಮ್ಮನ ಪಾತ್ರದಲ್ಲಿ ವೀಣಾ ಸುಂದರ್ ಬ್ಯಾಕ್ಲೆಸ್ ಆಗಿ ಕಾಣಿಸಿಕೊಂಡಿರೋದನ್ನು ಅಚ್ಛರಿ ಅಂದುಕೊಳ್ಳಬಹುದು! ಯಾವುದೇ ಸಿನಿಮಾ ಮನಸ್ಸಿಗೆ ಹತ್ತಿರವಾಗಬೇಕು ಅಂದರೆ, ಆ ಚಿತ್ರವನ್ನು ಕಟ್ಟಿದ ವಾತಾವರಣ ಕೂಡಾ ತುಂಬಾ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ತೋತಾಪುರಿ ಸಿನಿಮಾಗೆ ಆಯ್ಕೆ ಮಾಡಿಕೊಂಡಿರುವ ಊರು, ಮನೆಗಳು, ವಾಹನಗಳು ಎಲ್ಲವೂ ಒಂದು ಮೂಡ್ ಕ್ರಿಯೇಟ್ ಮಾಡಿದೆ.

ಇದನ್ನೂ ಓದಿ:ವಿದ್ಯಾರ್ಥಿಗಳಿಂದ ಚಂದನ್ ಶೆಟ್ಟಿ ಸಿನಿಮಾ ಶೀರ್ಷಿಕೆ ಅನಾವರಣ!

totapuri 2 review
ಉಳಿದಂತೆ ಅನೂಪ್ ಸಿಳೀನ್ ಸಂಗೀತ, ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನ ತೋತಾಪುರಿಯ ಅಂದವನ್ನು ಹೆಚ್ಚಿಸಿದೆ. ಈ ಸಲ ನಿರ್ದೇಶಕ ವಿಜಯಪ್ರಸಾದ್ ತೋತಾಪುರಿ ೨ ಮೂಲಕ ಹದವಾಗಿ, ರುಚಿಕಟ್ಟಾದ ತೊಟ್ಟನ್ನು ಕಿತ್ತು ಕೈಗಿಟ್ಟಿದ್ದಾರೆ. ಇಲ್ಲಿ ಡಬಲ್ ಮೀನಿಂಗ್ ಸಂಭಾಷಣೆಯೇ ಇಲ್ಲ ಅಂತೇನಿಲ್ಲ. ಎಷ್ಟು ಬೇಕೋ ಅಷ್ಟನ್ನು ಮಾತ್ರ ಕೊಟ್ಟು, ಮಿಕ್ಕಂತೆ ಭಾವನೆಗಳಿಗೆ ಹೆಚ್ಚು ಜಾಗ ಕೊಟ್ಟಿದ್ದಾರೆ. ಒಂದು ಸಲ ನೋಡಿ ನಿಮಗೇ ಗೊತ್ತಾಗುತ್ತದೆ.totapuri 2 review

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…