ಮಾರಿ ಮೇಲೆ ಬಂದ ಟೋಬಿ ಏನಾದ ಗೊತ್ತಾ?

toby kannada movie review

TOBY 4/5

ರಾಜ್‌ ಬಿ ಶೆಟ್ಟಿ ನಟನೆಯ ಟೋಬಿ ಸಿನಿಮಾ ತೆರೆಗೆ ಬಂದಿದೆ. ಗರುಡಗಮನ ವೃಷಭ ವಾಹನ ಸಿನಿಮಾದ ನಂತರ ರಾಜ್‌ ಶೆಟ್ಟಿ ಬಗ್ಗೆ ವಿಪರೀತ ಕುತೂಹಲ ಕ್ರಿಯೇಟ್‌ ಆಗಿತ್ತು. ಟೋಬಿಯಲ್ಲಿ ಶೆಟ್ಟರು ಯಾವ ಅವತಾರದಲ್ಲಿ ಕಾಣಿಸಿಕೊಂಡಿರಬಹುದು ಎನ್ನುವುದರ ಬಗ್ಗೆ ಕ್ಯೂರಿಯಾಸಿಟಿಯಿತ್ತು. ಮೂಗಿಗೆ ದೊಡ್ಡದೊಂದು ಮೂಗುತಿ ತಗುಲುಹಾಕಿಕೊಂಡ ಪೋಸ್ಟರು, ಟೀಸರುಗಳೆಲ್ಲಾ ಹೊರಬಂದಿದ್ದು ಅದಕ್ಕೆ ಕಾರಣ ಅಂದುಕೊಳ್ಳಬಹುದು!
ಅಂತಿಮವಾಗಿ ಟೋಬಿ ತೆರೆಗೆ ಬಂದಿದೆ. ಟಿ.ಕೆ. ದಯಾನಂದ ಅವರ ಕಥೆಯನ್ನು ಆಧರಿಸಿ ರಾಜ್‌ ಬಿ ಬರೆದುಕೊಂಡಿರುವ ಸಿನಿಮಾ ಇದು. ನಿರ್ದೇಶಕನ ಹೆಸರು ಮಾತ್ರ ಬೇರೊಬ್ಬರದಿದೆ ಅಷ್ಟೇ.toby kannada movie review

ದಯಾನಂದ ಅವರ ಕತೆಗಳಲ್ಲಿ ಬರುವ ಪಾತ್ರಗಳ ಗುಣ ಲಕ್ಷಣಗಳೇ ಮಜಬೂತಾಗಿರುತ್ತವೆ. ಯಾವುದೋ ಊರಿನಲ್ಲಿ ಕಂಡ ವಿಚಿತ್ರ, ವಿಲಕ್ಷಣ ವ್ಯಕ್ತಿತ್ವಗಳ ಬೆನ್ನು ಹತ್ತಿ, ಅವರ ಬದುಕಿನ ವಿವರಗಳನ್ನೆಲ್ಲಾ ಕಲೆ ಹಾಕಿ, ಅದನ್ನು ಕಥಾರೂಪಕ್ಕಿಳಿಸೋದು ಅವರ ಶೈಲಿ. ಹಾಗೆ ಕಥೆಯಲ್ಲಿ ಜೀವ ಪಡೆದ ಪಾತ್ರಗಳನ್ನು ತೆರೆಮೇಲೆ ಕಟ್ಟಡಿಕೊಡೋದು ನಿಜಕ್ಕೂ ಕಷ್ಟದ ಕೆಲಸ. ಟೋಬಿ ಎನ್ನುವ ಪಾತ್ರವನ್ನು ತೆರೆಯಲ್ಲಿ ಅರಳಿಸುವುದರ ಹಿಂದೆ ಕೂಡಾ ಅಂಥದ್ದೇ ಶ್ರಮ ಎದುರಾಗಿರುವುದು ಸಿನಿಮಾ ನೋಡಿದಾಗ ಸ್ಪಷ್ಟವಾಗುತ್ತದೆ.toby kannada movie review

ಗೊತ್ತೂ ಗುರಿ ಇಲ್ಲದ ಮೃಗೀಯ ವರ್ತನೆಯ ಹುಡುಗ ರಿಮ್ಯಾಂಡ್‌ ಹೋಂ ಸೇರಿರುತ್ತಾನೆ. ಮಾತು ಬಾರದ ಈತನನ್ನು ಚರ್ಚ್‌ನ ಫಾದರ್ ಒಬ್ಬರು ಪರಿವರ್ತನೆ ಮಾಡುವ ಪ್ರಯತ್ನವನ್ನು ನಿರಂತರ ಚಾಲ್ತಿಯಲ್ಲಿಟ್ಟಿರುತ್ತಾರೆ. ಗ್ರೀಕ್‌ ಭಾಷೆಯಲ್ಲಿ ಟೋಬಿಯಾ ಅಂದರೆ, ʼದೇವರು ಒಳ್ಳೆಯವನುʼ ಎನ್ನುವ ಅರ್ಥವಿದೆ. ಈ ಕಾರಣಕ್ಕೇ ಹುಡುಗನಿಗೆ ಟೋಬಿ ಎನ್ನುವ ಹೆಸರನ್ನೂ ಇಡುತ್ತಾರೆ. ದುರಾದೃಷ್ಟವಶಾತ್‌ ಅವನು ಸೈತಾನನಂತೆ ಬೆಳೆದುನಿಲ್ಲುತ್ತಾನೆ. ಅವನ ಸುತ್ತ ನಡೆಯುವ ಘಟನಾವಳಿಗಳು ಅವನನ್ನು ರಾಕ್ಷಸನನ್ನಾಗಿ ರೂಪಿಸುತ್ತವೆ. ಇವನ ಮುಗ್ಧತೆ, ಮುಂಗೋಪಗಳನ್ನು ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವ ನೀಚನೊಬ್ಬ ಮಾಡಬಾರದ್ದನ್ನೆಲ್ಲಾ ಮಾಡಿ ಮುಗಿಸುತ್ತಾನೆ. ಹಂತ ಹಂತವಾಗಿ ಟೋಬಿಯ ಬದುಕನ್ನು ಅಪೋಶನ ತೆಗೆದುಕೊಳ್ಳುತ್ತಾನೆ. ಈ ಕತೆಯನ್ನು ಮಾರಿ, ಮೂಗುತಿ ಇತ್ಯಾದಿ ರೂಪಗಳನ್ನು ಬೆರೆಸಿ ರಾಜ್‌ ಬಿ ಶೆಟ್ಟರ ತಂಡ ತೆರೆ ಮೇಲೆ ಅರಳಿಸಿದೆ…toby kannada movie reviewಕುಮಟೆಯ ಪರಿಸರ ಕೂಡಾ ಇಲ್ಲಿ ಪಾತ್ರದಂತೆ ಅನಾವರಣಗೊಂಡಿದೆ. ರಾಜ್‌ ಶೆಟ್ಟರ ನಟನೆ, ವರ್ತನೆಗಳೆಲ್ಲಾ ಕೆಲವೊಮ್ಮೆ ಗರುಡಗಮನದ ಪಾತ್ರವನ್ನೇ ಮುಂದುವರೆಸಿದಂತೆ ಕಾಣುತ್ತದೆ. ಚೈತ್ರಾ ಆಚಾರ್‌ ಎಂದಿನಂತೆ ʻಅದ್ಭುತʼ ಅನ್ನಿಸಿಕೊಳ್ಳುವ ನಟನೆ ಮಾಡಿದ್ದಾರೆ. ಹೆಚ್ಚು ಸರಳ ಮತ್ತು ಸಹಜವಾಗಿ ಅಭಿನಯಿಸಿರೋದು ಗೋಪಾಲ್‌ ದೇಶಪಾಂಡೆ. ಪೊಲೀಸ್‌ ಮತ್ತು ಪೀಸಿ ಪಾತ್ರಧಾರಿಗಳೂ ಇಷ್ಟವಾಗುತ್ತಾರೆ. ದೀಪಕ್ ಶೆಟ್ಟಿ ಅವರ ನಟನೆಯಲ್ಲಿ ಅಂಥಾ ಹೊಸತನವೇನೂ ಇಲ್ಲ. ಕಾರ್ಯಕರ್ತೆಯ ಪಾತ್ರದಲ್ಲಿ ಸಂಯುಕ್ತಾ ಹೊರನಾಡ್‌ ನಟಿಸಿರುವ ರೀತಿ ಬ್ಯೂಟಿಫುಲ್. ಹಿನ್ನೆಲೆ ಸಂಗೀತದಲ್ಲಿ ಹೊಸ ಆವಿಷ್ಕಾರಗಳಾಗಿವೆ. ಮಾಂಟೇಜ್‌ ಹಾಡುಗಳು ಚಿತ್ರಕ್ಕೆ ಪೂರಕವಾಗಿವೆ. ಲೈಂಗಿಕ ಇಷ್ಟೆಲ್ಲಾ ಇರುವ ಟೋಬಿ ಚಿತ್ರದ ಸ್ಕ್ರೀನ್‌ ರೈಟಿಂಗ್‌ ಒಂದಿಷ್ಟು ಸ್ಪೀಡಾಗಬೇಕಿತ್ತು. ೪೮ ಫ್ರೇಮ್ಸ್‌ ಅನ್ನು ಅಗತ್ಯಕ್ಕಿಂತಾ ಹೆಚ್ಚು ಬಳಸಿರೋದು ಕಿರಿಕಿರಿ ಅನ್ನಿಸುತ್ತದೆ ಅನ್ನೋದನ್ನು ಬಿಟ್ಟರೆ ಮಿಕ್ಕಂತೆ ಸಿನಿಮಾ ಗುಣಮಟ್ಟದಿಂದ ಕೂಡಿದೆ. ಉತ್ತಮ ಕಂಟೆಂಟ್‌ ಇರುವ ʻಟೋಬಿʼ ಚಿತ್ರವನ್ನು ಧಾರಾಳವಾಗಿ ಒಂದು ಸಲ ನೋಡಿ…toby kannada movie review

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…