ಸಾಯುವ ಮುಂಚೆ ಬದುಕುವುದು ಹೇಗೆ?

ಭಯಾನಕ ಬಿಲ್ಡಪ್ ಜೊತೆಗೆ ತೆರೆ ಮೇಲೆ ಹೀರೋ ಎಂಟ್ರಿ ಮಾಮೂಲಿ. ಆದರೆ ಇಲ್ಲಿ ಮಾರ್ಚುರಿಯ ಸ್ಟ್ರೆಚರ್ ನಲ್ಲಿ ಸತ್ತು ಮಲಗಿದವನು ಎದ್ದು ಕೂರುವ ದೃಶ್ಯದೊಂದಿಗೆ ಸಿನಿಮಾ ಆರಂಭವಾಗುತ್ತದೆ. ಅದು ತುರ್ತು ನಿರ್ಗಮನ!thurthu nirgamana movie release date and time 2022 countdown cast trailer and more 62b015929fb4b 1655707026

ಸಾವು ಮತ್ತು ಬದುಕಿನ ನಡುವೆ ಇರುವ ದ್ವಂದ್ವಗಳ ಕುರಿತಾದ ಸಿನಿಮಾ ಇದು. ಇಲ್ಲಿ ಯಾರೂ ಶಾಶ್ವತರಲ್ಲ. ಎಲ್ಲರೂ ಒಂದಲ್ಲಾ ಒಂದು ದಿನ ಎದ್ದು ಹೋಗಲೇಬೇಕು. ಹಾಗೆ ಎದ್ದು ಹೋದಮೇಲೂ ಹೆಸರು ಉಳಿಯುವಂತಾ ಕೆಲಸ ಮಾಡಬೇಕು ಅಂದುಕೊಂಡವರು ಕೆಲವರು. ಸುಮ್ಮನೇ ಟೈಂ ಪಾಸ್ ಮಾಡಿ ಜಾಗ ಖಾಲಿ ಮಾಡುವವರು ಹಲವರು.
ಬದುಕಿದ್ದಷ್ಟೂ ದಿನ ನಾವು ಯಾರು? ನಮ್ಮ ಸುತ್ತಲಿನ ಪರಿಸರ ಹೇಗಿದೆ? ಜೊತೆಗಿರುವವರ ಫೀಲಿಂಗ್ಸ್ ಏನು? ನಮ್ಮನ್ನು ಹೆತ್ತವರು ನಮ್ಮಿಂದ ಏನು ಬಯಸುತ್ತಿದ್ದಾರೆ? ಅನ್ನೋದನ್ನು ತಿಳಿದೇ ಇರಲ್ಲ. ಎಲ್ಲವನ್ನೂ ಒಂದು ರೀತಿಯಲ್ಲಿ ಯಾಂತ್ರಿಕವಾಗಿ ಕಾಣುತ್ತಿರುತ್ತೇವೆ. ಆಫೀಸಿಗೆ ಹೋಗುವ ಅಪ್ಪ ಸಂಜೆ ಬರುತ್ತಾರೆ, ವಾಕ್ ಮಾಡಿ, ಟೀವಿ ನೋಡಿ ಮಲಗುತ್ತಾರೆ… ಅಮ್ಮ ಅಡುಗೆ ಮಾಡಿಕೊಂಡು ಮನೆಯಲ್ಲಿರುತ್ತಾರೆ ಅನ್ನೋದನ್ನು ಬಿಟ್ಟರೆ, ಅವರ ಆಂತರ್ಯದ ಬಯಕೆಗಳೇನು? ಅವರ ಬಾಲ್ಯ ಹೇಗಿತ್ತು? ಅವರು ಬದುಕು ಕಟ್ಟಿಕೊಂಡ ಬಗೆ ಯಾವುದು ಅನ್ನೋದು ಕೂಡಾ ಅನೇಕ ಮಕ್ಕಳು ತಿಳಿದುಕೊಂಡಿರುವುದಿಲ್ಲ.thurthu nirgamana 287

– ಹೀಗೆ ಬದುಕನ್ನು ತೀರಾ ಹಗುರವಾಗಿ ಪರಿಗಣಿಸಿದ, ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದ ಹುಡುಗನೊಬ್ಬನ ಆತ್ಮ ಕಥೆಯಂತಾ ಸಿನಿಮಾ ʻತುರ್ತು ನಿರ್ಗಮನʼ. ʻʻವಯಸ್ಸು ಎಷ್ಟೇ ಆದರೂ ಜೀವದ ಮೇಲಿನ ಪ್ರೀತಿ ಕೊನೆಯಾಗಲ್ಲ. ಯಾರು ಯಾವಾಗ ಬೇಕಾದರೂ ಸಾಯಬಹುದು.ʼʼ ಅಂತಾ ಥಿಯರಿ ಮಂಡಿಸುತ್ತಾ ಕೈಲಿ ಚೈನು ಹಿಡಿದು, ಸತ್ತವರ ಲೆಕ್ಕ ಬರೆಯುವ ಚಿತ್ರಗುಪ್ತೆಯಂಥಾ ಹೆಣ್ಣು, ʻʻಯಾವುದೇ ಆಸೆ ಇರದವನು, ಹುಟ್ಟಿದ ಮೇಲೆ ನಾವಿಡೋ ಹೆಜ್ಜೆ ಆರಡಿ ಮೂರಡಿ ಕಡೆ. ಇದರ ನಡುವೆ ಬದುಕು ಬೋರೆದ್ದುಹೋಗಬಾರದು ಅಂತಾ, ನಮ್ಮ ಮನರಂಜನೆಗಾಗಿ ಕನಸು, ಗುರಿ, ಸಾಧನೆ, ವೀಕೆಂಡ್ ವಿಥ್ ರಮೇಶ್ ಅಂತೆಲ್ಲಾ ಕಾಲ ಕಳೀತಿರ್ತೀವಿ. ಏಜ್ ಬಾರ್ ಆದಮೇಲೆ ಸಾಯಬಾರದು, ಫ್ರೆಶ್ ಆಗಿದ್ದಾಗಲೇ ಸಾಯಬೇಕು. ಅದಕ್ಕೇ ನನ್ನ ಎಕ್ಸ್ ಪರಿ ಡೇಟನ್ನು ನಾನೇ ಫಿಕ್ಸ್ ಮಾಡಿಕೊಂಡುಬಿಟ್ಟೆ.ʼʼ ಎನ್ನುತ್ತಾ ಜೀವಿಸೋದೇ ಅಲರ್ಜಿ ಎನ್ನುವಂತೆ ಆತ್ಮಹತ್ಯೆ ಮಾಡಿಕೊಂಡು ಬಂದವನು ಮತ್ತು ʻʻನಾನ್ಯಾಕೆ ಸಾಯುತ್ತೇನೆ? ಏನು ತಪ್ಪು ಮಾಡಿದ್ದೇನೆಂದು ಸಾಯಬೇಕು?ʼʼ ಅಂತಾ ಪ್ರಶ್ನಿಸುವ ಅಪಘಾತಕ್ಕೀಡಾಗಿ ಸತ್ತವನು – ಈ ಮೂರೂ ಪಾತ್ರಗಳ ಚರ್ಚೆಯ ಮೂಲಕ ತೆರೆದುಕೊಳ್ಳುವ ಕಥೆ ಈ ಚಿತ್ರದ್ದು.

ಬೇಕಾಬಿಟ್ಟಿಯಾಗಿ ಬದುಕು ನಡೆಸುವ ಹುಡುಗನೊಬ್ಬ ಸತ್ತ ಮೇಲೆ ಟೈಂ ಲೂಪ್ ಮೂಲಕ ಮತ್ತೆ ಬಂದು ತನ್ನ ಬದುಕಿನ ರೀತಿಯನ್ನು ತಿದ್ದಿಕೊಳ್ಳುವ ಪ್ರಧಾನ ಅಂಶದ ಮೇಲೆ ಸಿನಿಮಾ ಕಟ್ಟಲಾಗಿದೆ. ಮತ್ತೆ ಮತ್ತೆ ಎದುರಾಗುವ ಒಂದೇ ಥರದ ದೃಶ್ಯಗಳು ಗೊಂದಲ ಅನ್ನಿಸಿದರೂ, ತಾಳ್ಮೆಯಿಂದ ನೋಡಿದರೆ ಭಿನ್ನ ಒಳಹುಗಳು ಗೋಚರಿಸುತ್ತವೆ. ವ್ಯಕ್ತಿ ಸಡನ್ನಾಗಿ ಸತ್ತುಹೋದರೆ, ದೇಹದಿಂದ ದೂರವಾದ ಆತ್ಮ ಎಷ್ಟು ವಿಲಗುಡುತ್ತದೆ? ತಾನು ಸತ್ತಿದ್ದೇನೆ ಅಂತಾ ಒಪ್ಪಿಕೊಳ್ಳಲು ಅದು ನಡೆಸುವ ಒದ್ದಾಟಗಳೇನು? ಎಂಬಿತ್ಯಾದಿ ಸ್ಪಷ್ಟ ವಿಚಾರಗಳನ್ನು ಅಮೂರ್ತ ಪಾತ್ರಗಳ ಮೂಲಕ ಬಿಡಿಸಿಟ್ಟಿರುವ ಚಿತ್ರ ತುರ್ತು ನಿರ್ಗಮನ.
ತಂಗಿಯನ್ನು ಮದುವೆಯಾಗಬಯಸುವ ಹುಡುಗನ ಮುಂದೆ ಕೂತು ಖಡಕ್ಕಾಗಿ ಮಾತಾಡುವ ಅಣ್ಣ, ಅಪ್ಪನ ಜೊತೆ ಬ್ಯಾಡ್ಮಿಂಟನ್ ಆಡುವ, ತಾಯಿಯನ್ನು ಕೆಫೆಗೆ ಕರೆದುಕೊಂಡು ಹೋಗುವ ಮಗ, ಬಿಟ್ಟು ಹೋದವವಳ ಮುಂದೆ ನಿಂತು ಪಾಪ ನಿವೇದನೆ ಮಾಡಿಕೊಳ್ಳುವ ಹುಡುಗನ ದೃಶ್ಯಗಳು ಎಲ್ಲರನ್ನೂ ಆತ್ಮವಿಮರ್ಶೆಗೆ ಒಡ್ಡಿಕೊಳ್ಳುವಂತೆ ಮಾಡುತ್ತವೆ. ಜೊತೆಗೆ ಇಡೀ ಸಿನಿಮಾದ ಪವರ್ ಹೆಚ್ಚಿಸಿದೆ. ಇಂಥ ಇನ್ನಷ್ಟು ವಿಚಾರಗಳು ಬೇಕಿತ್ತು ಅಂತಲೂ ಅನ್ನಿಸುತ್ತದೆ.

ಕನ್ನಡದಲ್ಲಿ ಇಂಥದ್ದೊಂದು ಸಿನಿಮಾ ಹಿಂದೆ ಬಂದಿರಲಿಲ್ಲ. ಸುನೀಲ್ ರಾವ್ ಹೇಳಿಕೊಳ್ಳುತ್ತಿದ್ದಂತೇ ತೀರಾ ಹೊಸ ಬಗೆಯ ಕಥೆಯೊಂದಿಗೆ ಅವರು ಕಂಬ್ಯಾಕ್ ಆಗಿದ್ದಾರೆ. ಇಷ್ಟು ವರ್ಷದ ಗ್ಯಾಪ್ ನಂತರವೂ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಸುಧಾರಾಣಿ ಜೀವಮಾನದಲ್ಲಿ ಇಂಥದ್ದೊಂದು ಪಾತ್ರ ಹಿಂದೆಂದೂ ಮಾಡಿರಲಿಲ್ಲ. ಮುಂದೆ ಸಿಗುತ್ತದಾ ಗೊತ್ತಿಲ್ಲ. ಅಚ್ಯುತ್ ಕುಮಾರ್ ಅವರಿಗೆ ಕೂಡಾ ಇದು ಭಿನ್ನ ಪಾತ್ರವೇ. ಅಪ್ಪನಾಗಿ ನಾಗೇಂದ್ರ ಶಾ ತುಂಬಾನೇ ಇಷ್ಟವಾಗುತ್ತಾರೆ. ಕಡಿಮೆ ಮಾತು, ವಿಶಿಷ್ಠ ಅಭಿನಯದಿಂದ ಸೆಳೆಯುತ್ತಾರೆ. ಸಂಯುಕ್ತಾ ಹೆಗಡೆ ಕೂಡಾ ಸುಂದರವಾದ ಪಾತ್ರದಲ್ಲಿ ಅಷ್ಟೇ ಚೆಂದಗೆ ನಟಿಸಿದ್ದಾಳೆ. ಅರುಣಾ ಬಾಲರಾಜ್, ಹಿತಾ ಚಂದ್ರಶೇಖರ್ ಎಲ್ಲರೂ ಇಷ್ಟವಾಗುತ್ತಾರೆ. ರಾಜ್ ಬಿ ಶೆಟ್ಟಿಯವರ ಕ್ಯಾಬ್ ಡ್ರೈವರ್ ಪಾತ್ರದ ಕಲ್ಪನೆ ಮತ್ತು ಅವರ ಅಭಿನಯ ಚಿತ್ರದ ಹೈಲೇಟ್.

ನಿಜಕ್ಕೂ ಹೊಸ ಪ್ರಯತ್ನದ ʻತುರ್ತು ನಿರ್ಗಮನʼ ಮನಸ್ಸಿನಲ್ಲಿ ಉಳಿಯುವ ಚಿತ್ರ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…