ಕರ್ನಾಟಕ ಚಲನ ಚಿತ್ರ ನಿರ್ದೇಶಕರ ಕಲ್ಯಾಣ ಸಮಿತಿಯ ಒಂದುದಿನದ ಕಾರ್ಯಗಾರ ಯಶಸ್ವಿಯಾಗಿದೆ.

The one-day workshop of the Karnataka Film Directors Welfare Committee was a success.

ಕರ್ನಾಟಕ ಚಲನ ಚಿತ್ರ ನಿರ್ದೇಶಕರ ಕಲ್ಯಾಣ ಸಮಿತಿಯು ಒಂದು ದಿನದ ಕಾರ್ಯಗಾರವನ್ನು ದಿನಾಂಕ 06.08.2023 ರಂದು ನಾಗರ ಭಾವಿ ಯಲ್ಲಿ ಇರುವ ಕನ್ಯಾಕುಮಾರಿ ಶಾಲಾ ಆವರಣದ ವಾಸುದೇವ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮವು ನೂತಾನವಾಗಿ ಸಿನಿಮಾರಂಗ ಪ್ರವೇಶಿಸುವ ಯುವಕರಿಗೆ, ಚಿತ್ರರಂಗ ಒಳಗೊಂಡ ಹಲವು ವಿಭಾಗಗಳ ಕುರಿತು ಮಾಹಿತಿಯನ್ನು ನೀಡಿತು.The one-day workshop of the Karnataka Film Directors Welfare Committee was a success.

ಸ್ವಾಗತ ಭಾಷಣ ಮಾಡುವುದರ ಮೂಲಕ ಶ್ರೀ ಶ್ರೀನಾಥ್ ವಸಿಷ್ಠ- (ನಿರ್ದೇಶಕ ಮತ್ತು ನಟ) ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಥೆ, ಚಿತ್ರಕಥೆ, ಸಂಭಾಷಣೆಯ ಕುರಿತಾಗಿ ನಿರ್ದೇಶಕ ಸಿದ್ದು ಪೂರ್ಣ ಚಂದ್ರ ಮಾತನಾಡಿ ಉಪಯುಕ್ತ ಮಾಹಿತಿಗಳನ್ನು ನೀಡಿದರು.
ಚಿತ್ರ ಗಟ್ಟಿ ಯಾಗಿ ನಿಲ್ಲುವುದಕ್ಕೆ ಕಥೆ ಎಷ್ಟು ಮುಖ್ಯ ಎಂಬುದನ್ನು ಸ್ವಾರಸ್ಯಕರ ವಾಗಿ ತಿಳಿಸಿದರು.The one-day workshop of the Karnataka Film Directors Welfare Committee was a success.

ಶ್ರಿ ಮಂಜುನಾಥ್ ಮಸ್ಕಲ ಮಟ್ಟಿ ಅವರು ಅಭಿನಯದ ಆಯಾಮಗಳು, ಕಲಾವಿದನಿಗೆ ನವರಸಗಳ ಅವಶ್ಯಕತೆಗಳ ಬಗ್ಗೆ ಮತ್ತು ಅದರಿಂದ ಕಲಾವಿದನಾಗಿ ಆಗುವ ಪ್ರಯೋಜನಗಳನ್ನು ಸೂಕ್ಷ್ಮವಾಗಿ ವಿವರಿಸುವುದರ ಜೊತೆಗೆ ಒಬ್ಬ ಪರಿ ಪಕ್ವ ಕಲಾವಿದನಾಗಿ ಹೊರ ಹೊರಹೊಮ್ಮಲು ಮಾಡಬೇಕಾದ ವಿಚಾರಗಳನ್ನು ಚಿಕ್ಕ ದಾಗಿ – ಚೊಕ್ಕವಾಗಿ ವಿವರಿಸಿದರು.The one-day workshop of the Karnataka Film Directors Welfare Committee was a success.

ಶ್ರೀ ರಾಧಾಕೃಷ್ಣ ಪಲ್ಲಕ್ಕಿ ಅವರು ಐತಿಹಾಸಿಕ, ಮತ್ತು ಪೌರಾಣಿಕ ಚಿತ್ರಗಳ ಬಗ್ಗೆ ಸ್ವಾರಸ್ಯಕರ ಘಟನೆಗಳನ್ನು ಹೇಳುವುದರ ಮೂಲಕ ಅಲ್ಲಿ ಎದುರಾಗಬಹುದಾದ ಸಮಸ್ಯೆಗಳು ಮತ್ತು ಅನುಭವಗಳನ್ನು ಹೇಳುತ್ತಾ ಪೌರಾಣಿಕ ಚಿತ್ರದ ಚಿತ್ರೀಕರಣದ ತಾಣಕ್ಕೆ ಕೇಳುವವರನ್ನು ಕೊಂಡೊಯ್ದು ಮೂಕ ವಿಸ್ತೃತಗೊಳಿಸಿದರು. ಜೊತೆಗೆ ಚಿತ್ರಗಳ ನಿರ್ಮಾಣದ ಮುನ್ನ ನಿರ್ದೇಶಕ ಮಾಡಬೇಕಾದ ಮುಖ್ಯ ತಯಾರಿ ಬಗ್ಗೆ ತಿಳಿಸಿದರು.The one-day workshop of the Karnataka Film Directors Welfare Committee was a success.

ಚಿತ್ರ ಸಾಹಿತ್ಯದ ಬಗ್ಗೆ, ಒಂದು ಚಲನಚಿತ್ರಕ್ಕೆ ಸಾಹಿತ್ಯ ಎಷ್ಟು ಅವಶ್ಯಕ, ಸಾಹಿತ್ಯ, ಸಂಭಾಷಣೆ ಚಿತ್ರದ ಜೀವಾಳ ಎಂಬದನ್ನು ವಿವರಿಸಿದವರು ನಿರ್ದೇಶಕ ಮತ್ತು ಸಾಹಿತಿ ಅರಸು ಅಂತಾರೆ. ಈಗಿನ ದಿನ ಮಾನಗಳಲ್ಲಿ ಚಿತ್ರ ಮಾಡುವುದು ಸುಲಭ, ಆದರೆ ಚಿತ್ರ ಪೂರ್ಣವಾದ ಮೇಲೆ ಅದನ್ನು ಮಾರಾಟ ಮಾಡುವುದು ಕಷ್ಟದ ಕೆಲಸ, ಇದನ್ನು ಹೇಗೆ ರೂಢಿಸಿಕೊಳ್ಳ ಬೇಕು ಮತ್ತು ಗ್ರೀನ್ ಮ್ಯಾಟ್ ಷೂಟ್ ಹೇಗೆ ಮಾಡಬೇಕು, ಇದಕ್ಕೆ ಬೆಳಕು ಹೇಗೆ ಮಾಡುಬೇಕು, green matige ಕಲಾವಿದರ ಉಡುಪು ಹೇಗಿರಬೇಕು ಇವೆಲ್ಲದರ ಬಗ್ಗೆ ನಿರ್ದೇಶಕ ಸೆಬಾಸ್ಟಿನ್ ಡೇವಿಡ್ ಮಾತನಾಡಿದರು.The one-day workshop of the Karnataka Film Directors Welfare Committee was a success.

ನಟ ನಿರ್ದೇಶಕ, ತಂತ್ರಜ್ಞಾನ ಇವುಗಳಲ್ಲಿ ಬೆಳೆಯಬೇಕಾದರೆ ನಮ್ಮಲ್ಲಿ ಇರಬೇಕಾದ ಗುಣಗಳು, ಮತ್ತು ಸಿನಿಮಾ ನಿರ್ದೇಶಕರಿಗೆ ಇರಬೇಕಾದ ಸಾಮಾಜಿಕ ಬದ್ಧತೆಯ ಕುರಿತು ನಟ – ನಿರ್ದೇಶಕ ಮತ್ತು ಛಾಯಾಗ್ರಾಹಕರಾಗಿ ಲೋಕೇಂದ್ರ ಸೂರ್ಯ ಮಾತನಾಡಿದರು.The one-day workshop of the Karnataka Film Directors Welfare Committee was a success.

ಖ್ಯಾತ ಸಾಹಿತಿಗಳು, ನಿರ್ದೇಶಕರು, ನಟರು ಆಗಿರುವ ಶ್ರೀ ನಾಗೇದ್ರ ಪ್ರಸಾದ್ ಭಾರತ ಸಾಹಿತ್ಯದ ಮೂಲ, ಅಜ್ಞಾನರಲ್ಲಿ ಅಡಗಿದ್ದ ಸಂಗೀತದ ಜ್ಞಾನ, ದೇಹದ ನಾಡಿ ಮೀಡಿತದಲ್ಲಿ ಜೀವಂತವಾಗಿರುವ ಸಂಗೀತ, ಸಮಾಜದಲ್ಲಿ ಸಂಗೀತದ ಪಾತ್ರ ಇವುಗಳ ಬಗ್ಗೆ ಪರಿಚಯಿಸಿದರು.The one-day workshop of the Karnataka Film Directors Welfare Committee was a success.

ಅನುಭವಿ ನಿರ್ದೇಶಕರಾದ ಶ್ರೀ ಹರಿಹರನ್, ಶ್ರೀ ಹರೀಶ್ ಕುಂದೂರು ಮತ್ತು
ಶ್ರೀ ವಸಂತ್ ವಿಷ್ಣು ಅವುಗಳು ಸಿನಿಮಾದ ನಿರ್ದೇಶನದಲ್ಲಿ ಎದುರಾಗಬಹುದಾದಾ ಸಮಸ್ಯೆಗಳು, ಅದನ್ನು ಜಾಣ್ಮೆ ಯಿಂದ ನಿಭಾಯಿಸುವ ರೀತಿಯನ್ನು ತಿಳಿಸಿದರು. ಒಟ್ಟಾರೆ ಸಮಿತಿಯ ಆಡಳಿತ ಮಂಡಳಿಯ ಎಲ್ಲರ ಪರಿಶ್ರಮದಿಂದ ಒಂದು ದಿವಸದ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.The one-day workshop of the Karnataka Film Directors Welfare Committee was a success.

ರಾಜ್ಯದ ಬೇರೆ ಬೇರೆ ಭಾಗಗಳಿಂದ ನಿರ್ದೇಶಕರ ಕಲ್ಯಾಣ ಸಮಿತಿಯು ಆಯೋಜಿಸಿದ್ದ ಒಂದು ದಿವಸ ದ ಕಾರ್ಯಾಗಾರ ಕ್ಕೆ ಬಂದಿದ್ದ ನೂರಕ್ಕೆ ಹೆಚ್ಚು ಆಸಕ್ತರು ಮುಂದೆ ತಮ್ಮ ಜೀವನವನ್ನು ಚಿತ್ರ ಜಗತ್ತಿನಲ್ಲಿ ಕಟ್ಟಿಕೊಳ್ಳಲು ಈ ಕಮ್ಮಟ ಉಪಯುಕ್ತ ವಾಯಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.The one-day workshop of the Karnataka Film Directors Welfare Committee was a success.

ಮುಂದಿನ ದಿನಗಳಲ್ಲಿ ಅಭಿನಯ, ನಿರ್ದೇಶನ, ಕಥೆ- ಚಿತ್ರಕಥೆ- ಸಾಹಿತ್ಯ ರಚನೆ- ಸಂಭಾಷಣೆ, ಸಂಕಲನ ಹೀಗೆ ಬೇರೆ ಬೇರೆ ತರಗತಿಗಳನ್ನು ಪ್ರಾರಂಭಿಸುವ ಆಲೋಚನೆ ಯನ್ನು ಸಮಿತಿ ಹೊಂದಿದೆ. ಈ ಕಾರ್ಯಾಗಾರ ನಿರ್ದೇಶಕ ಕಲ್ಯಾಣ ಸಮಿತಿಯ ಮೊದಲ ಮೆಟ್ಟಿಲು, ಇದರ ಯಶಸ್ಸು ಮುಂದೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಬುನಾದಿ. ಅನುಭವಿ ನಿರ್ದೇಶಕರ ಉತ್ಸಾಹ ಇಮ್ಮಡಿಯಾಗಿದೆ, ಚಿತ್ರರಂಗಕ್ಕೆ ಬರಲು ಉತ್ಸಾಹ ದಿಂದ ಇರುವ ಯುವ ಪೀಳಿಗೆಗೆ ಮಾರ್ಗದರ್ಶನ ಮಾಡಲು ಸಿದ್ಧರಾಗಿದ್ದಾರೆ. ನಿರ್ದೇಶಕರ ಅನುಭವ ಮತ್ತು ಕಾರ್ಯ ದಕ್ಷತೆಯು ಮುಂಬರುವ ಯುವಕರಿಗೆ ಸ್ಪೂರ್ತಿಯಾಗಲಿ ಎಂಬುದು ಆಶಯ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…