ಕರ್ನಾಟಕ ಚಲನ ಚಿತ್ರ ನಿರ್ದೇಶಕರ ಕಲ್ಯಾಣ ಸಮಿತಿಯು ಒಂದು ದಿನದ ಕಾರ್ಯಗಾರವನ್ನು ದಿನಾಂಕ 06.08.2023 ರಂದು ನಾಗರ ಭಾವಿ ಯಲ್ಲಿ ಇರುವ ಕನ್ಯಾಕುಮಾರಿ ಶಾಲಾ ಆವರಣದ ವಾಸುದೇವ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮವು ನೂತಾನವಾಗಿ ಸಿನಿಮಾರಂಗ ಪ್ರವೇಶಿಸುವ ಯುವಕರಿಗೆ, ಚಿತ್ರರಂಗ ಒಳಗೊಂಡ ಹಲವು ವಿಭಾಗಗಳ ಕುರಿತು ಮಾಹಿತಿಯನ್ನು ನೀಡಿತು.
ಸ್ವಾಗತ ಭಾಷಣ ಮಾಡುವುದರ ಮೂಲಕ ಶ್ರೀ ಶ್ರೀನಾಥ್ ವಸಿಷ್ಠ- (ನಿರ್ದೇಶಕ ಮತ್ತು ನಟ) ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಥೆ, ಚಿತ್ರಕಥೆ, ಸಂಭಾಷಣೆಯ ಕುರಿತಾಗಿ ನಿರ್ದೇಶಕ ಸಿದ್ದು ಪೂರ್ಣ ಚಂದ್ರ ಮಾತನಾಡಿ ಉಪಯುಕ್ತ ಮಾಹಿತಿಗಳನ್ನು ನೀಡಿದರು.
ಚಿತ್ರ ಗಟ್ಟಿ ಯಾಗಿ ನಿಲ್ಲುವುದಕ್ಕೆ ಕಥೆ ಎಷ್ಟು ಮುಖ್ಯ ಎಂಬುದನ್ನು ಸ್ವಾರಸ್ಯಕರ ವಾಗಿ ತಿಳಿಸಿದರು.
ಶ್ರಿ ಮಂಜುನಾಥ್ ಮಸ್ಕಲ ಮಟ್ಟಿ ಅವರು ಅಭಿನಯದ ಆಯಾಮಗಳು, ಕಲಾವಿದನಿಗೆ ನವರಸಗಳ ಅವಶ್ಯಕತೆಗಳ ಬಗ್ಗೆ ಮತ್ತು ಅದರಿಂದ ಕಲಾವಿದನಾಗಿ ಆಗುವ ಪ್ರಯೋಜನಗಳನ್ನು ಸೂಕ್ಷ್ಮವಾಗಿ ವಿವರಿಸುವುದರ ಜೊತೆಗೆ ಒಬ್ಬ ಪರಿ ಪಕ್ವ ಕಲಾವಿದನಾಗಿ ಹೊರ ಹೊರಹೊಮ್ಮಲು ಮಾಡಬೇಕಾದ ವಿಚಾರಗಳನ್ನು ಚಿಕ್ಕ ದಾಗಿ – ಚೊಕ್ಕವಾಗಿ ವಿವರಿಸಿದರು.
ಶ್ರೀ ರಾಧಾಕೃಷ್ಣ ಪಲ್ಲಕ್ಕಿ ಅವರು ಐತಿಹಾಸಿಕ, ಮತ್ತು ಪೌರಾಣಿಕ ಚಿತ್ರಗಳ ಬಗ್ಗೆ ಸ್ವಾರಸ್ಯಕರ ಘಟನೆಗಳನ್ನು ಹೇಳುವುದರ ಮೂಲಕ ಅಲ್ಲಿ ಎದುರಾಗಬಹುದಾದ ಸಮಸ್ಯೆಗಳು ಮತ್ತು ಅನುಭವಗಳನ್ನು ಹೇಳುತ್ತಾ ಪೌರಾಣಿಕ ಚಿತ್ರದ ಚಿತ್ರೀಕರಣದ ತಾಣಕ್ಕೆ ಕೇಳುವವರನ್ನು ಕೊಂಡೊಯ್ದು ಮೂಕ ವಿಸ್ತೃತಗೊಳಿಸಿದರು. ಜೊತೆಗೆ ಚಿತ್ರಗಳ ನಿರ್ಮಾಣದ ಮುನ್ನ ನಿರ್ದೇಶಕ ಮಾಡಬೇಕಾದ ಮುಖ್ಯ ತಯಾರಿ ಬಗ್ಗೆ ತಿಳಿಸಿದರು.
ಚಿತ್ರ ಸಾಹಿತ್ಯದ ಬಗ್ಗೆ, ಒಂದು ಚಲನಚಿತ್ರಕ್ಕೆ ಸಾಹಿತ್ಯ ಎಷ್ಟು ಅವಶ್ಯಕ, ಸಾಹಿತ್ಯ, ಸಂಭಾಷಣೆ ಚಿತ್ರದ ಜೀವಾಳ ಎಂಬದನ್ನು ವಿವರಿಸಿದವರು ನಿರ್ದೇಶಕ ಮತ್ತು ಸಾಹಿತಿ ಅರಸು ಅಂತಾರೆ. ಈಗಿನ ದಿನ ಮಾನಗಳಲ್ಲಿ ಚಿತ್ರ ಮಾಡುವುದು ಸುಲಭ, ಆದರೆ ಚಿತ್ರ ಪೂರ್ಣವಾದ ಮೇಲೆ ಅದನ್ನು ಮಾರಾಟ ಮಾಡುವುದು ಕಷ್ಟದ ಕೆಲಸ, ಇದನ್ನು ಹೇಗೆ ರೂಢಿಸಿಕೊಳ್ಳ ಬೇಕು ಮತ್ತು ಗ್ರೀನ್ ಮ್ಯಾಟ್ ಷೂಟ್ ಹೇಗೆ ಮಾಡಬೇಕು, ಇದಕ್ಕೆ ಬೆಳಕು ಹೇಗೆ ಮಾಡುಬೇಕು, green matige ಕಲಾವಿದರ ಉಡುಪು ಹೇಗಿರಬೇಕು ಇವೆಲ್ಲದರ ಬಗ್ಗೆ ನಿರ್ದೇಶಕ ಸೆಬಾಸ್ಟಿನ್ ಡೇವಿಡ್ ಮಾತನಾಡಿದರು.
ನಟ ನಿರ್ದೇಶಕ, ತಂತ್ರಜ್ಞಾನ ಇವುಗಳಲ್ಲಿ ಬೆಳೆಯಬೇಕಾದರೆ ನಮ್ಮಲ್ಲಿ ಇರಬೇಕಾದ ಗುಣಗಳು, ಮತ್ತು ಸಿನಿಮಾ ನಿರ್ದೇಶಕರಿಗೆ ಇರಬೇಕಾದ ಸಾಮಾಜಿಕ ಬದ್ಧತೆಯ ಕುರಿತು ನಟ – ನಿರ್ದೇಶಕ ಮತ್ತು ಛಾಯಾಗ್ರಾಹಕರಾಗಿ ಲೋಕೇಂದ್ರ ಸೂರ್ಯ ಮಾತನಾಡಿದರು.
ಖ್ಯಾತ ಸಾಹಿತಿಗಳು, ನಿರ್ದೇಶಕರು, ನಟರು ಆಗಿರುವ ಶ್ರೀ ನಾಗೇದ್ರ ಪ್ರಸಾದ್ ಭಾರತ ಸಾಹಿತ್ಯದ ಮೂಲ, ಅಜ್ಞಾನರಲ್ಲಿ ಅಡಗಿದ್ದ ಸಂಗೀತದ ಜ್ಞಾನ, ದೇಹದ ನಾಡಿ ಮೀಡಿತದಲ್ಲಿ ಜೀವಂತವಾಗಿರುವ ಸಂಗೀತ, ಸಮಾಜದಲ್ಲಿ ಸಂಗೀತದ ಪಾತ್ರ ಇವುಗಳ ಬಗ್ಗೆ ಪರಿಚಯಿಸಿದರು.
ಅನುಭವಿ ನಿರ್ದೇಶಕರಾದ ಶ್ರೀ ಹರಿಹರನ್, ಶ್ರೀ ಹರೀಶ್ ಕುಂದೂರು ಮತ್ತು
ಶ್ರೀ ವಸಂತ್ ವಿಷ್ಣು ಅವುಗಳು ಸಿನಿಮಾದ ನಿರ್ದೇಶನದಲ್ಲಿ ಎದುರಾಗಬಹುದಾದಾ ಸಮಸ್ಯೆಗಳು, ಅದನ್ನು ಜಾಣ್ಮೆ ಯಿಂದ ನಿಭಾಯಿಸುವ ರೀತಿಯನ್ನು ತಿಳಿಸಿದರು. ಒಟ್ಟಾರೆ ಸಮಿತಿಯ ಆಡಳಿತ ಮಂಡಳಿಯ ಎಲ್ಲರ ಪರಿಶ್ರಮದಿಂದ ಒಂದು ದಿವಸದ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ರಾಜ್ಯದ ಬೇರೆ ಬೇರೆ ಭಾಗಗಳಿಂದ ನಿರ್ದೇಶಕರ ಕಲ್ಯಾಣ ಸಮಿತಿಯು ಆಯೋಜಿಸಿದ್ದ ಒಂದು ದಿವಸ ದ ಕಾರ್ಯಾಗಾರ ಕ್ಕೆ ಬಂದಿದ್ದ ನೂರಕ್ಕೆ ಹೆಚ್ಚು ಆಸಕ್ತರು ಮುಂದೆ ತಮ್ಮ ಜೀವನವನ್ನು ಚಿತ್ರ ಜಗತ್ತಿನಲ್ಲಿ ಕಟ್ಟಿಕೊಳ್ಳಲು ಈ ಕಮ್ಮಟ ಉಪಯುಕ್ತ ವಾಯಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಅಭಿನಯ, ನಿರ್ದೇಶನ, ಕಥೆ- ಚಿತ್ರಕಥೆ- ಸಾಹಿತ್ಯ ರಚನೆ- ಸಂಭಾಷಣೆ, ಸಂಕಲನ ಹೀಗೆ ಬೇರೆ ಬೇರೆ ತರಗತಿಗಳನ್ನು ಪ್ರಾರಂಭಿಸುವ ಆಲೋಚನೆ ಯನ್ನು ಸಮಿತಿ ಹೊಂದಿದೆ. ಈ ಕಾರ್ಯಾಗಾರ ನಿರ್ದೇಶಕ ಕಲ್ಯಾಣ ಸಮಿತಿಯ ಮೊದಲ ಮೆಟ್ಟಿಲು, ಇದರ ಯಶಸ್ಸು ಮುಂದೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಬುನಾದಿ. ಅನುಭವಿ ನಿರ್ದೇಶಕರ ಉತ್ಸಾಹ ಇಮ್ಮಡಿಯಾಗಿದೆ, ಚಿತ್ರರಂಗಕ್ಕೆ ಬರಲು ಉತ್ಸಾಹ ದಿಂದ ಇರುವ ಯುವ ಪೀಳಿಗೆಗೆ ಮಾರ್ಗದರ್ಶನ ಮಾಡಲು ಸಿದ್ಧರಾಗಿದ್ದಾರೆ. ನಿರ್ದೇಶಕರ ಅನುಭವ ಮತ್ತು ಕಾರ್ಯ ದಕ್ಷತೆಯು ಮುಂಬರುವ ಯುವಕರಿಗೆ ಸ್ಪೂರ್ತಿಯಾಗಲಿ ಎಂಬುದು ಆಶಯ.