ಧರ್ಮ ಕೈಯಲ್ಲಿ ತಲ್ವಾರ್! ನಾಯಕ್ ನಹೀ ಖಳ್ ನಾಯಕ್ ಅಂದ್ರು ಕ್ಯಾಟ್ಬರೀಸ್

Talwar in the hands of Dharma! Nayak Nahi Khal Nayak Andru Catburys

ಚಿತ್ರಕ್ಕೆ ಸಿಕ್ತು ಯು/ಎ ಸರ್ಟಿಫಿಕೇಟ್

ಧರ್ಮ ಕೀರ್ತಿರಾಜ್ ಹಾಗೂ ಅದಿತಿ ಅಭಿನಯದ ತಲ್ವಾರ್ ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ ಮತ್ತು ಮ್ಯೂಟ್ಸ್ ಇಲ್ಲದೆ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಇದೊಂದು ವಿಭಿನ್ನ ರೌಡಿಸಂ ಕಥಾಹಂದರ ಇರುವ ಸಿನಿಮಾ. ಈ ಚಿತ್ರದಲ್ಲಿ ಕ್ಯಾಟ್ ಬರೀಸ್ ಎಂದೇ ಕರೆಸಿಕೊಳ್ಳುವ ಧರ್ಮ ಕೀರ್ತಿರಾಜ್ ಖಳನಟನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಧರ್ಮ ಕೀರ್ತಿರಾಜ್ ಅವರಿಗೂ ಈ ಸಿನಿಮಾ ಹೊಸ ಇಮೇಜ್ ಸಿಗುತ್ತದೆ ಎಂಬ ಭರವಸೆ ಇದೆ.Talwar in the hands of Dharma! Nayak Nahi Khal Nayak Andru Catburys

ಕಥೆ, ಚಿತ್ರಕಥೆ ಸಂಭಾಷಣೆ ಬರೆದು ರಾಘವ ಮುರಳಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಮುಮ್ತಾಜ್ ಚಿತ್ರ ನಿರ್ದೇಶಿಸಿದ್ದ ರಾಘವ ಮುರಳಿ ಮತ್ತು ಧರ್ಮ ಕೀರ್ತಿರಾಜ್ ಕಾಂಬಿನೆಷನ್ ನ ಎರಡನೇ ಸಿನಿಮಾ ಇದು. ಇನ್ನು, ಈ ಚಿತ್ರದಲ್ಲಿ ಮಜಾಭಾರತ ಖ್ಯಾತಿಯ ಮಿನಿ ದರ್ಶನ್ ಎಂದೇ ಕರೆಸಿಕೊಳ್ಳುವ ಅವಿನಾಶ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಪಡೆಯುತ್ತಿರುವ ಅವಿನಾಶ್, ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.Talwar in the hands of Dharma! Nayak Nahi Khal Nayak Andru Catburys

ಈ ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ವಿಶೇಷ ಪಾತ್ರದಲ್ಲಿ ಜಯರಾಮ್ ಕಾರ್ತಿಕ್ (JK) ಕಲ್ಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರು ಮಂಗಳೂರಿನ ರೌಡಿ ಕಲ್ಕಿ ಎಂಬ ಪಾತ್ರ ನಿರ್ವಹಿಸುತ್ತಿರುವುದು ವಿಶೇಷತೆಗಳಲ್ಲೊಂದು. ಈ ಚಿತ್ರ ಟಚ್ ಸ್ಟೋನ್ ಪಿಕ್ಚರ್ ಬ್ಯಾನರ್ ನಲ್ಲಿ ನಿರ್ಮಾಣವಾಗಿದ್ದು, ಸುರ್ನಳ್ಳಿ ಜಯರಾಮ್ ಅರ್ಪಿಸಿದ್ದಾರೆ. ಈ ಚಿತ್ರಕ್ಕೆ ಸುರೇಶ್ ಬೈರಸಂದ್ರ ಬಂಡವಾಳ ಹಾಕಿದ್ದಾರೆ, ಶ್ರೀನಗರ ಕಿಟ್ಟಿ ಅಭಿನಯದ ಬಹುಪರಾಕ್ ಚಿತ್ರಕ್ಕೆ ಸಹ ನಿರ್ಮಾಪಕರಗಿದ್ದ ಇವರು ಈ ಚಿತ್ರವನ್ನು ತಮ್ಮ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಇವರು ಅನುಭವ ಇರುವ ಛಾಯಾಗ್ರಾಹಕರು ಆಗಿರುವುದರಿಂದ ಈ ಚಿತ್ರಕ್ಕೆ ತಾವೇ ಕ್ಯಾಮರಮಾನ್ ಆಗಿ ತಮ್ಮ ಕೈ ಚಳಕ ತೋರಿಸಿರುವುದು ಮತ್ತೊಂದು ವಿಶೇಷ.Talwar in the hands of Dharma! Nayak Nahi Khal Nayak Andru Catburys

ಕೆ.ಬಿ. ಪ್ರವೀಣ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಈ ಚಿತ್ರದ ಹಾಡುಗಳ ಹಕ್ಕುಗಳನ್ನು ಈಗಾಗಲೇ ಸರಿಗಮ ಆಡಿಯೋ ಕಂಪನಿ ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಈ ಚಿತ್ರದಲ್ಲಿ 5 ಭರ್ಜರಿ ಸಾಹಸ ದೃಶ್ಯಗಳಿವೆ. ವಿನೋದ್, ಡ್ಯಾನಿ ಮತ್ತು ಕುಂಫು ಚಂದ್ರು ಅವರುಗಳು ಸಾಹಸ ನಿರ್ದೇಶನ ಮಾಡಿದ್ದಾರೆ.Talwar in the hands of Dharma! Nayak Nahi Khal Nayak Andru Catburys

ಈ ಚಿತ್ರದ ಇನ್ನೊಂದು ವಿಶೇಷತೆ ಏನೆಂದರೆ, ‘ರೋಜ್ ಹಿಡಿದು ಲವ್ ಮಾಡಿದ್ರೆ ಪ್ರೀತಿಸಿದ ಇಬ್ಬರು ನೋವು ಪಡ್ತಾರೆ, ಆದರೆ ಲಾಂಗ್ ಇಡ್ಕೊಂಡು ಜೀವನ ಮಾಡಿದ್ರೆ ಆ ಲಾಂಗ್ ನಿಂದ ಅದೆಷ್ಟು ಫ್ಯಾಮಿಲಿ ಹಾಳಾಗ್ತವೆ ಎಂಬ ಸಂದೇಶವನ್ನು ಈ ಚಿತ್ರ ದಲ್ಲಿ ಹೇಳಲಾಗಿದೆ. ಇದು ರಕ್ತ ಹರಿಸುವ ರೌಡಿಸಂ ಚಿತ್ರವಾಗಿದ್ದರೂ, ಅಲ್ಲಲ್ಲಿ, ಎಮೋಷನ್ ಟಚ್ ಇದೆ ಎಂಬುದು ಚಿತ್ರ ತಂಡದ ಮಾತು.Talwar in the hands of Dharma! Nayak Nahi Khal Nayak Andru Catburys

ಸದ್ಯ ಯು/ಎ ಸರ್ಟಿಫಿಕೇಟ್ ಪಡೆದಿರುವ ಈ ಚಿತ್ರ ರಿಲೀಸ್ ಆಗಲು ತಯಾರಿ ನಡೆಸಿದೆ. ಸೆಪ್ಟೆಂಬರ್  ಮೊದಲ ವಾರದಲ್ಲಿ ಟೀಸರ್ ರಿಲೀಸ್ಬಿ ಡುಗಡೆಯಾಗಲಿದೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…