ಅಲ್ಪಕಾಲದಲ್ಲೇ ಜನಮನ್ನಣೆ ಪಡೆದ ಟಾಕೀಸ್‌ ಆಪ್

Talkies App ( Kannada OTT )

ಇತ್ತೀಚೆಗಷ್ಟೇ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ರಿಲೀಸ್ ಮಾಡಿದ್ದ ಟಾಕೀಸ್‌ ಆ್ಯಪ್‌ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಚ್ಚ ಕನ್ನಡದ ಅತ್ಯುತ್ತಮ ಗುಣಮಟ್ಟದ ಓಟಿಟಿ ವೇದಿಕೆ ಇದಾಗಿದ್ದು ಕನ್ನಡ ನಿರ್ಮಾಪಕರಿಗೆ ಹೊಸ ಭರವಸೆ ಮೂಡಿಸಿದೆ.Talkies App ( Kannada OTT )

ಅಂತಾರಾಷ್ಟ್ರೀಯ ಗುಣಮಟ್ಟದ ಈ ಆ್ಯಪ್‌ನಲ್ಲಿ ಕಳೆದ ಮೂರ್ನಾಲ್ಕು ತಿಂಗಳಲ್ಲಿ ನೂರಾರು ಸಿನಿಮಾ, ಹತ್ತಾರು ವೆಬ್‌ ಸೀರೀಸ್‌, ಮಕ್ಕಳ ಕತೆಗಳು ಸೇರಿದಂತೆ ಸಾಕಷ್ಟು ಕಂಟೆಂಟ್‌ಗಳು ಇಲ್ಲಿ ಲಭ್ಯವಿದ್ದು, ವೀಕ್ಷಕರಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಸಿನಿಮಾ, ನಾಟಕ, ಯಕ್ಷಗಾನ, ಮಕ್ಕಳ ಕಥೆ, ಕಾರ್ಟೂನ್‌ಗಳು ಸೇರಿದಂತೆ ಮನರಂಜನೆಗೆ ಹೆಚ್ಚು ಒತ್ತು ಕೊಡುವಲ್ಲಿ ನಮ್ಮ ತಂಡ ಉತ್ಸುಕವಾಗಿದೆ ಎಂದು ಸಂಸ್ಥೆಯ ಚೇರ್ಮನ್‌ ರತ್ನಾಕರ್‌ ಕಾಮತ್‌ ಅವರು ಹೇಳಿದ್ದಾರೆ.Talkies App ( Kannada OTT )

ಸ್ವಯಂಪ್ರಭಾ ಎಂಟರ್‌ಟೈನ್‌ಮೆಂಟ್‌ ಮತ್ತು ಪ್ರೊಡಕ್ಷನ್ಸ್‌ ಹೊರತಂದಿರುವ ಟಾಕೀಸ್‌ ಆ್ಯಪ್‌, ಈಗಾಗಲೇ ಸಾವಿರಾರು ಚಂದಾದಾರರನ್ನು ಹೊಂದಿದೆ. 1200ಕ್ಕೂ ಅಧಿಕ ಕಲಾವಿದರು, 700ಕ್ಕೂ ಹೆಚ್ಚು ತಂತ್ರಜ್ಞರ ಪ್ರಯತ್ನದ ಫಲವಾದ`ಟಾಕೀಸ್‌ ಆಪ್ ಪ್ರತೀ ತಿಂಗಳು ಎಂಟು ಸಂಚಿಕೆಗಳ ಒಂದು ಹೊಸ ವೆಬ್‌ ಸೀರೀಸ್‌ ಹಾಗೂ ಪ್ರತಿ ವಾರ ಎರಡು ಹೊಸ ಕಂಟೆಂಟ್‌ಗಳನ್ನು ಹೊರತರುತ್ತಿದೆ.Talkies App ( Kannada OTT )

ವಿಜಯ ರಾಘವೇಂದ್ರ, ಪ್ರಮೋದ್‌ ಶೆಟ್ಟಿ, ರಂಜನಿ ರಾಘವನ್‌, ದಿವ್ಯ ಉರುಡುಗ, ಮಂಜು ಪಾವಗಡ, ವೈಷ್ಣವಿ, ಭೂಮಿ ಶೆಟ್ಟಿ, ನಾಗೇಂದ್ರ ಶಾ, ನಿವೇದಿತಾ ಗೌಡ, ಚಂದನ್‌ ಶೆಟ್ಟಿ, ದೀಪಿಕಾ, ಚಂದನಾ ಮುಂತಾದವರು`ಟಾಕೀಸ್‌’ ಸಿನಿಮಾ, ವೆಬ್‌ ಸೀರೀಸ್‌ನ ಭಾಗವಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಹಕೂನ ಮಟಟ, ವನಜಾ, ಗರಂ ಮಸಾಲಾ, ಕರ್ಮ ರಿಟರ್ನ್‌, ವಿಟಮಿನ್‌ ಎಂ ಅಲ್ಲದೆ ಮುಂದಿನ ದಿನಗಳಲ್ಲಿ ಪೊಲೀಸ್‌ ಫೈಲ್ಸ್, ಜಾಲಿ ಬ್ಯಾಚುಲರ್ಸ್, ಲವ್‌ ಬರ್ಡ್ಸ್ ಹಾಗೂ ನಿವೃತ್ತ ಎಸ್‌.ಪಿ ಎಸ್‌.ಕೆ.ಉಮೇಶ್‌ ಅವರ ಕಥಾಸಂಕಲನ ಸೇರಿದಂತೆ ಸಾಕಷ್ಟು ವೆಬ್‌ ಸೀರೀಸ್‌, ಕಿರುಚಿತ್ರಗಳು ಲಭ್ಯವಿದೆ.Talkies App ( Kannada OTT )

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…