ಸಿಹಿಯಾದ ಸಿನಿಮಾ ಶುಗರ್‌ ಲೆಸ್!

sugarless kannada movie review

Sugarless 4.0

ಆ ಹುಡುಗ ಅಪ್ಪ-ಅಮ್ಮ ಇಲ್ಲದೆ ಬೆಳೆದವನು. ಎದುರಿಗಿದ್ದವರನ್ನು ತನ್ನ ಮಾತಿನಿಂದಲೇ ಮರುಳು ಮಾಡುವ ವಿಪರೀತ ಲವಲವಿಕೆ ವ್ಯಕ್ತಿತ್ವ. ರಿಯಲ್ ಎಸ್ಟೇಟ್ ಕಂಪೆನಿಯೊಂದರಲ್ಲಿ ಕೆಲಸ ಮಾಡುವ ಈತನಿಗೆ ಸಹೋದ್ಯೋಗಿ ಹುಡುಗಿ ಜೊತೆಯಾಗುತ್ತಾಳೆ. ತೀರಾ ಕದ್ದು ಮುಚ್ಚಿ ಓಡಾಡುವ ಪ್ರಮೇಯವೇನೂ ಇರೋದಿಲ್ಲ. ಡೈರೆಕ್ಟಾಗಿ ತನ್ನ ಮನೆಗೇ ಕರೆದುಕೊಂಡು ಹೋಗಿ ಪರಿಚಯಿಸುತ್ತಾಳೆ. ಮನೆಯವರು ಕೂಡಾ ಅಕ್ಕರಯಿಂದ ಮಾತಾಡಿ ಕಳಿಸುತ್ತಾರೆ. ಯಾಕೆಂದರೆ, ಇವರು ಸಿಹಿಯನ್ನೇ ತುಂಬಿಕೊಂಡ ʻಸಕ್ಕರೆ ಮನೆʼಯ ಸದಸ್ಯರು!sugarless kannada movie review
ಬದುಕಲು ಬೇಕಿರುವ ಬುದ್ದಿವಂತಿಕೆ, ಕೆಲಸದ ಜೊತೆಗೆ ಮದುವೆಯೂ ಆಗುತ್ತದೆ. 28ನೇ ವಯಸ್ಸಿಗೇ ಜೀವನ ಸೆಟ್ಲಾಯ್ತು ಅಂದುಕೊಳ್ಳೋ ಮುಂಚೇನೆ ಡಯಾಬಿಟೀಸು ಬಳುವಳಿಯಾಗಿ ಬಂದಿರುತ್ತದೆ. ತಾನಾಗಿಯೇ ಒಲಿದುಬಂದ ಸಂಬಂಧ, ಮನಸಾರೆ ಇಷ್ಟಪಟ್ಟ ಹುಡುಗಿ ಎಲ್ಲವೂ ಕೈಬಿಟ್ಟುಹೋಗುತ್ತದೆ ಅನ್ನೋ ಭಯದಲ್ಲಿ ಖಾಯಿಲೆಯನ್ನು ಮುಚ್ಚಿಟ್ಟಿದ್ದು ತಪ್ಪಾ? ಅನ್ನೋದು ಎದುರಾಗುವ ಬಹುಮುಖ್ಯ ಪ್ರಶ್ನೆ.
ಇವತ್ತಿನ ಒತ್ತಡದ ಲೈಫಲ್ಲಿ ಶುಗರ್ ಅನ್ನೋದು ಯಾವಾಗ ಯಾರಿಗೆ ಶುರುವಾಗುತ್ತದೋ ಹೇಳಲಿಕ್ಕಾಗುವುದಿಲ್ಲ. ಮೊದಲೆಲ್ಲಾ ಒಂದು ಹಂತದ ವಯಸ್ಸು ಮೀರಿ ಆಯಸ್ಸು ಕರಗಿದ ಮೇಲೆ ಈ ಕಾಯಿಲೆ ಅಟಕಾಯಿಸಿಕೊಳ್ಳುತ್ತದೆ ಅನ್ನೋ ನಂಬಿಕೆ ಇತ್ತು. ಇವತ್ತು ಆಡುವ ಮಕ್ಕಳಿಂದ ಹಿಡಿದ ಅಲ್ಲಾಡುವ ಮುದುಕರ ತನಕ ಯಾರಿಗೆ ಬೇಕಿದ್ದರೂ ಇದು ವಕ್ಕರಿಸಿಕೊಳ್ಳಬಹುದು. ಈ ಸಿಹಿಮೂತ್ರ ರೋಗವನ್ನು ಬರದಂತೆ ನೋಡಿಕೊಂಡು, ಬಂದಮೇಲೆ ಉಲ್ಬಣವಾಗದಂತೆ ಮೇಂಟೇಂನ್ ಮಾಡೋದು ಪ್ರತಿಯೊಬ್ಬರ ಸವಾಲಾಗಿದೆ.sugarless kannada movie review
ಹೀಗಿರುವಾಗ ಇಷ್ಟು ಚಟುವಟಿಕೆಯಿಂದಿರುವ, ಸಿಹಿ ಪದಾರ್ಥಗಳನ್ನು ಚಪ್ಪರಿಸಿಕೊಂಡು ತಿನ್ನುವ ಹುಡುಗನಿಗೆ ಡಯಾಬಿಟೀಸ್ ಜೊತೆಯಾಗುತ್ತದೆ. ಇನ್ನು ಸಿಹಿಯಿಂದ ದೂರಬಿದ್ದೇ ಜೀವಿಸಬೇಕು ಅಂದಾಗ ಆಗುವ ಆತನ ಮಾನಸಿಕ ಸ್ಥಿತಿಗಳು, ಸಮಾಜ ಡಯಾಬಿಟೀಸ್ ಬಂದವರನ್ನು ಟ್ರೀಟ್ ಮಾಡುವ ರೀತಿಗಳನ್ನೆಲ್ಲಾ ಶುದ್ಧ ಹಾಸ್ಯದ ಮೂಲಕ ಹೇಳಿರುವ ಚಿತ್ರ ಶುಗರ್ ಲೆಸ್. ಕ್ಷಣ ಕ್ಷಣವೂ ನಗಿಸುತ್ತಲೇ ಭಾವುಕತೆಗೂ ದೂಡುವ ಕಥೆ, ಸಂಭಾಷಣೆ ಇದರಲ್ಲಿದೆ. ಸಂಭಾಷಣೆಕಾರ ದಿ|| ಗುರು ಕಶ್ಯಪ್ ಮೂಡಿಸಿ ಹೋಗಿರುವ ಅಮೂಲ್ಯ ಗುರುತುಗಳಲ್ಲಿ ಶುಗರ್ ಲೆಸ್ ಕೂಡಾ ಸೇರ್ಪಡೆಯಾಗಿದೆ. ʻʻಮಕ್ಕಳು ಅನ್ನಿಸಿಕೊಳ್ಳೋಕೆ ಹೊಟ್ಟೇಲಿ ಹುಟ್ಟಲೇಬೇಕು ಅಂತೇನಿಲ್ಲ. ಎದೆಯಲ್ಲಿ ಪ್ರೀತಿ ಹುಟ್ಟಿದರೂ ಸಾಕುʼʼ ಎನ್ನುವ ಮಾತು ಸಾರ್ವಕಾಲಿಕವಾಗಿ ಜೀವಂತವಾಗಿರಲಿದೆ. ಕಾಮಿಡಿ, ಎಮೋಷನ್ನುಗಳೆಲ್ಲವನ್ನೂ ಸಮಪ್ರಮಾಣದಲ್ಲಿ ಬೆರೆಸಿರುವ ನಿರ್ದೇಶಕ ಕೆ.ಎಂ. ಶಶಿಧರ್ ಅಚ್ಚುಕಟ್ಟಾದ ಸಿನಿಮಾ ಕಟ್ಟಿದ್ದಾರೆ ಮತ್ತು ಗೆದ್ದಿದ್ದಾರೆ.sugarless kannada movie review
ಪೃಥ್ವಿ ಅಂಬಾರ್ ಎಂದಿನಂತೆ ಅಮೋಘವಾಗಿ ಪಾತ್ರ ನಿರ್ವಹಿಸಿದ್ದಾರೆ. ಇಡೀ ಚಿತ್ರದಲ್ಲಿ ಧರ್ಮಣ್ಣ, ನವೀನ್ ಪಡಿಲ್ ಕಾಮಿಡಿ, ದತ್ತಣ್ಣನ ಆಪ್ತತೆ ಸಿಹಿಯಂತೆ ತುಂಬಿಕೊಂಡಿದೆ. ಒಂದೇ ದೃಶ್ಯದಲ್ಲಿ ಬಂದರೂ ಹೊನ್ನವಳ್ಳಿ ಕೃಷ್ಣ ಉಳ್ಳಾಡಿಕೊಂಡು ನಗುವಂತೆ ಮಾಡುತ್ತಾರೆ. ಪ್ರಿಯಾಂಕಾ ತಿಮ್ಮೇಶ್, ಗಿರೀಶ್ ಜತ್ತಿ ಮೊದಲಾದವರು ಚಿತ್ರವನ್ನು ಶುಗರ್ ಪ್ಲಸ್ ಆಗಿಸಿದ್ದಾರೆ! ಮನೆಯಲ್ಲಿ ಇರೋ ಬರೋರೆಲ್ಲರ ಜೊತೆಗೆ, ಒಟ್ಟಾಗಿ ಥೇಟರಿಗೆ ನುಗ್ಗಿ, ನೋಡಬಹುದಾದ ಸಿನಿಮಾ ಇದು. ಮಿಸ್ ಮಾಡ್ಕೋಬೇಡಿ!sugarless kannada movie review

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…