ರೆಟ್ರೋರಿಂದ ಮೆಟ್ರೋವರೆಗೂ ಸಾಗುವ ಚಿತ್ರ ‘ಶ್ರೀರಂಗ’

sri ranga kannada movie julay 22nd

‘ಎ ಡೇ ಇನ್ ದಿ ಸಿಟಿ’ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಎಂಟ್ರಿ ಕೊಟ್ಟ ವೆಂಕಟ್ ಭಾರದ್ವಾಜ್, ಇದೀಗ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಇದೇ ಶುಕ್ರವಾರ (ಜುಲೈ 22) ಚಿತ್ರ ಬಿಡುಗಡೆಯಾಗುತ್ತಿದ್ದು, ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಆಗಿದೆ. ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಾ.ಮಾ. ಹರೀಶ್ ಅವರ ಸಮ್ಮೂಖದಲ್ಲಿ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.sri ranga kannada movie

ತಮ್ಮ ಹಿಂದಿನ ಚಿತ್ರಗಳಂತೆ, ‘ಶ್ರೀರಂಗ’ ಮೂಲಕ ಹೊಸ ಶಿನಾವವ ನವೀನ್ ಎಂಬ ಹೊಸ ಹೀರೋನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ ವೆಂಕಟ್ ಭಾರದ್ವಾಜ್. ಮೂಲತಃ ರಂಗಭೂಮಿಯವರಾದ ನವೀನ್, ವಿಮು ಥಿಯೇಟರ್ಸ್ನ ಹಲವು ನಾಟಕಗಳಲ್ಲಿ ನಟಿಸಿದ್ದರಂತೆ. ಅಷ್ಟೇ ಅಲ್ಲ, ವೆಂಕಟ್ ಭಾರದ್ವಾಜ್ ಅವರ ‘ಆಮ್ಲೆಟ್’ ಚಿತ್ರದಲ್ಲೂ ನಟಿಸಿದ್ದರಂತೆ. ಈ ಚಿತ್ರದಲ್ಲಿ ಅವಕಾಶ ಸಿಕ್ಕ ಕುರಿತು ಮಾತನಾಡುವ ಅವರು, ‘ಒಮ್ಮೆ ವೆಂಕಟ್ ಅವರನ್ನು ಭೇಟಿ ಮಾಡುವುದಕ್ಕೆ ಹೋಗಿದ್ದೆ. ಕಾರ್ ಹತ್ತಬೇಕು ಎನ್ನುವಷ್ಟರಲ್ಲಿ, ಒನ್ಲೈನ್ ಹೇಳಿದ್ರು. ನೀವೇ ಮಾಡಬೇಕು ಎಂದರು. ಕಥೆ ಕೇಳಿ ಖುಷಿಯಾಯ್ತು. ಆದರೆ, ನನ್ನದೇ ಬೇರೆ ಕೆಲಸವಿದ್ದರಿಂದ ನಟಿಸುವುದಕ್ಕೆ ಕಷ್ಟವಾಯ್ತು. ಈ ವಿಷಯವನ್ನು ಅವರಿಗೆ ಹೇಳಿದೆ. ಈ ಮಧ್ಯೆ, ಅವರು ಬೇರೆಯವರನ್ನು ಹುಡುಕುತ್ತಿದ್ದರು. ಯಾರೂ ಆಯ್ಕೆಯಾಗಿರಲಿಲ್ಲ. ಕೊನೆಗೆ ಅವರ ಹೆಂಡತಿ ಫೋನ್ ಮಾಡಿ, ‘ಈ ಪಾತ್ರ ನಿಮಗಾಗಿ ಬರೆದಿದ್ದು, ನೀವು ಯಾಕೆ ಮಾಡುತ್ತಿಲ್ಲ …’ ಎಂದರು. ನನಗೆ ಸ್ವಲ್ಪ ಕಮಿಟ್ಮೆಂಟ್ ಇದ್ದುದ್ದು ಹೇಳಿದೆ. ಕೊನೆಗೆ ಟೈಮ್ ಸೆಟ್ ಆಗಿ ನಟಿಸಲು ಒಪ್ಪಿಕೊಂಡೆ. ನನಗಾಗಿ ಬರೆದ ಕಥೆ, ನನಗೇ ಕೊನೆಗೆ ಸಿಕ್ಕಿತು’ ಎಂದು ಖುಷಿ ವ್ಯಕ್ತಪಡಿಸುತ್ತಾರೆ ಶಿನಾವ್.sri ranga kannada movie

ಈ ಚಿತ್ರದ ಹೀರೋ ಅವರಾದರೂ, ತಾನು ಹೀರೋ ಅಲ್ಲ ಅಂತ ಹೇಳಿಕೊಳ್ಳುತ್ತಾರೆ ಶಿನಾವ್. ‘ಚಿತ್ರದ ಹೀರೋ ನಾನಲ್ಲ. ಕಾಣದೇ ಇರೋದು ಇನ್ನೊಂದಿದೆ. ಅದಕ್ಕೆ ಮಿಮಿಕ್ರಿ ಗೋಪಿ ಧ್ವನಿ ಕೊಟ್ಟಿದ್ದಾರೆ. ಸುಧೀರ್ ಅವರ ಧ್ವನಿ ಕೊಟ್ಟು ಆ ಪಾತ್ರವನ್ನು ವಿಶೇಷವಾಗಿಸಿದ್ದಾರೆ. ಇದು ರೆಟ್ರೋರಿಂದ ಮೆಟ್ರೋವರೆಗೂ ಸಾಗುವ ಚಿತ್ರ. ಅದರಲ್ಲೂ ಕಾಮಿಡಿ ಬಹಳ ಅದ್ಭುತವಾಗಿದೆ. ಯಾವುದೇ ಸಂದೇಶವಿಲ್ಲ. ಫ್ಯಾಮಿಲಿಯವರು ನೋಡಿ ನಲಿಯುವ ಚಿತ್ರ’ ಎನ್ನುತ್ತಾರೆ.sri ranga kannada movie

ಸುಧೀರ್ ಅವರ ಧ್ವನಿಯನ್ನು ಮಿಮಿಕ್ರಿ ಮಾಡಿರುವ ವಿಷಯವನ್ನು ಕನ್ಫರ್ಮ್ ಮಾಡುವ ವೆಂಕಟ್, ‘ಅದಕ್ಕೂ ಮೊದಲು ನಂದಕಿಶೋರ್ ಮತ್ತು ತರುಣ್ ಅವರನ್ನು ಭೇಟಿ ಮಾಡಿ ಅನುಮತಿ ಕೇಳಿದೆ. ಆಮೇಲೆ ಸಿನಿಮಾ ತೋರಿಸಿದೆ. ಖುಷಿಪಟ್ಟರು. ಬಹಳ ವರ್ಷಗಳ ನಂತರ ಸುಧೀರ್ ಅವರನ್ನು ಚಿತ್ರಮಂದಿರಗಳಲ್ಲಿ ನೋಡಬಹುದು’ ಎನ್ನುತ್ತಾರೆ.sri ranga kannada movie

ಈ ಚಿತ್ರದಲ್ಲಿ ಶಿನಾವ್ಗೆ ಮೂವರು ನಾಯಕಿಯರಿದ್ದಾರೆ. ಈ ಪೈಕಿ ಮಾತನಾಡುವ ವಂದನಾ ಶೆಟ್ಟಿ, ‘ಇದು ನನ್ನ ಮೊದಲ ಸಿನಿಮಾ. ಸ್ವಾತಿ ಎಂಬ ಯುವತಿಯ ಪಾತ್ರ ಮಾಡಿದ್ದೇನೆ. ಬಹಳ ಫನ್ನಿಯಾದ ಪಾತ್ರ. ಒಳ್ಳೆಯ ಅನುಭವವಾಯ್ತು. ಶೂಟಿಂಗ್ ಸಮಯದಲ್ಲಿ ನಿರ್ದೇಶಕರು ಒಂದಿಷ್ಟು ವಿಷಯಗಳನ್ನು ಹೇಳಿಕೊಡುತ್ತಿದ್ದರು. ನಾವು ಮಾಡುತ್ತಿದ್ದೆವು. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿರಲಿಲ್ಲ. ಹೇಗೆ ಮಾಡಿದ್ವಿ? ಸರಿಯೋ, ತಪ್ಪ? ಗೊತ್ತಾಗುತ್ತಿರಲಿಲ್ಲ. ಏನಾದರೂ ಹೇಳಿ ಎಂದರೆ ಇಷ್ಟು ಸಾಕು ಎನ್ನುತ್ತಿದ್ದರು. ಸರಿನಾ ತಪ್ಪಾ ಗೊತ್ತಾಗುತ್ತಿರಲಿಲ್ಲ’ ಎನ್ನುತ್ತಾರೆ ವಂದನಾ ಶೆಟ್ಟಿ.sri ranga kannada movie

ಋತು ಕ್ರಿಯೇಷನ್ಸ್ನಡಿ ಈ ಚಿತ್ರವನ್ನು ಸುಮಾ ಸಿ.ಆರ್. ನಿರ್ಮಾಣ ಮಾಡಿದ್ದು, ಬಿ.ಎಂ. ದಿಲೀಪ್ ಸಹ ನಿರ್ಮಾಣ ಮಾಡಿದ್ದಾರೆ. ವೆಂಕಟ್ ಭಾರದ್ವಾಜ್ ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಶಿನವ್ ಹಾಗೂ ವಂದನಾ ಶೆಟ್ಟಿ ಜೊತೆಗೆ, ರಚನಾ ರಾಯ್, ರೂಪ

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…