‘ಎ ಡೇ ಇನ್ ದಿ ಸಿಟಿ’ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಎಂಟ್ರಿ ಕೊಟ್ಟ ವೆಂಕಟ್ ಭಾರದ್ವಾಜ್, ಇದೀಗ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಇದೇ ಶುಕ್ರವಾರ (ಜುಲೈ 22) ಚಿತ್ರ ಬಿಡುಗಡೆಯಾಗುತ್ತಿದ್ದು, ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಆಗಿದೆ. ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಾ.ಮಾ. ಹರೀಶ್ ಅವರ ಸಮ್ಮೂಖದಲ್ಲಿ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ತಮ್ಮ ಹಿಂದಿನ ಚಿತ್ರಗಳಂತೆ, ‘ಶ್ರೀರಂಗ’ ಮೂಲಕ ಹೊಸ ಶಿನಾವವ ನವೀನ್ ಎಂಬ ಹೊಸ ಹೀರೋನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ ವೆಂಕಟ್ ಭಾರದ್ವಾಜ್. ಮೂಲತಃ ರಂಗಭೂಮಿಯವರಾದ ನವೀನ್, ವಿಮು ಥಿಯೇಟರ್ಸ್ನ ಹಲವು ನಾಟಕಗಳಲ್ಲಿ ನಟಿಸಿದ್ದರಂತೆ. ಅಷ್ಟೇ ಅಲ್ಲ, ವೆಂಕಟ್ ಭಾರದ್ವಾಜ್ ಅವರ ‘ಆಮ್ಲೆಟ್’ ಚಿತ್ರದಲ್ಲೂ ನಟಿಸಿದ್ದರಂತೆ. ಈ ಚಿತ್ರದಲ್ಲಿ ಅವಕಾಶ ಸಿಕ್ಕ ಕುರಿತು ಮಾತನಾಡುವ ಅವರು, ‘ಒಮ್ಮೆ ವೆಂಕಟ್ ಅವರನ್ನು ಭೇಟಿ ಮಾಡುವುದಕ್ಕೆ ಹೋಗಿದ್ದೆ. ಕಾರ್ ಹತ್ತಬೇಕು ಎನ್ನುವಷ್ಟರಲ್ಲಿ, ಒನ್ಲೈನ್ ಹೇಳಿದ್ರು. ನೀವೇ ಮಾಡಬೇಕು ಎಂದರು. ಕಥೆ ಕೇಳಿ ಖುಷಿಯಾಯ್ತು. ಆದರೆ, ನನ್ನದೇ ಬೇರೆ ಕೆಲಸವಿದ್ದರಿಂದ ನಟಿಸುವುದಕ್ಕೆ ಕಷ್ಟವಾಯ್ತು. ಈ ವಿಷಯವನ್ನು ಅವರಿಗೆ ಹೇಳಿದೆ. ಈ ಮಧ್ಯೆ, ಅವರು ಬೇರೆಯವರನ್ನು ಹುಡುಕುತ್ತಿದ್ದರು. ಯಾರೂ ಆಯ್ಕೆಯಾಗಿರಲಿಲ್ಲ. ಕೊನೆಗೆ ಅವರ ಹೆಂಡತಿ ಫೋನ್ ಮಾಡಿ, ‘ಈ ಪಾತ್ರ ನಿಮಗಾಗಿ ಬರೆದಿದ್ದು, ನೀವು ಯಾಕೆ ಮಾಡುತ್ತಿಲ್ಲ …’ ಎಂದರು. ನನಗೆ ಸ್ವಲ್ಪ ಕಮಿಟ್ಮೆಂಟ್ ಇದ್ದುದ್ದು ಹೇಳಿದೆ. ಕೊನೆಗೆ ಟೈಮ್ ಸೆಟ್ ಆಗಿ ನಟಿಸಲು ಒಪ್ಪಿಕೊಂಡೆ. ನನಗಾಗಿ ಬರೆದ ಕಥೆ, ನನಗೇ ಕೊನೆಗೆ ಸಿಕ್ಕಿತು’ ಎಂದು ಖುಷಿ ವ್ಯಕ್ತಪಡಿಸುತ್ತಾರೆ ಶಿನಾವ್.
ಈ ಚಿತ್ರದ ಹೀರೋ ಅವರಾದರೂ, ತಾನು ಹೀರೋ ಅಲ್ಲ ಅಂತ ಹೇಳಿಕೊಳ್ಳುತ್ತಾರೆ ಶಿನಾವ್. ‘ಚಿತ್ರದ ಹೀರೋ ನಾನಲ್ಲ. ಕಾಣದೇ ಇರೋದು ಇನ್ನೊಂದಿದೆ. ಅದಕ್ಕೆ ಮಿಮಿಕ್ರಿ ಗೋಪಿ ಧ್ವನಿ ಕೊಟ್ಟಿದ್ದಾರೆ. ಸುಧೀರ್ ಅವರ ಧ್ವನಿ ಕೊಟ್ಟು ಆ ಪಾತ್ರವನ್ನು ವಿಶೇಷವಾಗಿಸಿದ್ದಾರೆ. ಇದು ರೆಟ್ರೋರಿಂದ ಮೆಟ್ರೋವರೆಗೂ ಸಾಗುವ ಚಿತ್ರ. ಅದರಲ್ಲೂ ಕಾಮಿಡಿ ಬಹಳ ಅದ್ಭುತವಾಗಿದೆ. ಯಾವುದೇ ಸಂದೇಶವಿಲ್ಲ. ಫ್ಯಾಮಿಲಿಯವರು ನೋಡಿ ನಲಿಯುವ ಚಿತ್ರ’ ಎನ್ನುತ್ತಾರೆ.
ಸುಧೀರ್ ಅವರ ಧ್ವನಿಯನ್ನು ಮಿಮಿಕ್ರಿ ಮಾಡಿರುವ ವಿಷಯವನ್ನು ಕನ್ಫರ್ಮ್ ಮಾಡುವ ವೆಂಕಟ್, ‘ಅದಕ್ಕೂ ಮೊದಲು ನಂದಕಿಶೋರ್ ಮತ್ತು ತರುಣ್ ಅವರನ್ನು ಭೇಟಿ ಮಾಡಿ ಅನುಮತಿ ಕೇಳಿದೆ. ಆಮೇಲೆ ಸಿನಿಮಾ ತೋರಿಸಿದೆ. ಖುಷಿಪಟ್ಟರು. ಬಹಳ ವರ್ಷಗಳ ನಂತರ ಸುಧೀರ್ ಅವರನ್ನು ಚಿತ್ರಮಂದಿರಗಳಲ್ಲಿ ನೋಡಬಹುದು’ ಎನ್ನುತ್ತಾರೆ.
ಈ ಚಿತ್ರದಲ್ಲಿ ಶಿನಾವ್ಗೆ ಮೂವರು ನಾಯಕಿಯರಿದ್ದಾರೆ. ಈ ಪೈಕಿ ಮಾತನಾಡುವ ವಂದನಾ ಶೆಟ್ಟಿ, ‘ಇದು ನನ್ನ ಮೊದಲ ಸಿನಿಮಾ. ಸ್ವಾತಿ ಎಂಬ ಯುವತಿಯ ಪಾತ್ರ ಮಾಡಿದ್ದೇನೆ. ಬಹಳ ಫನ್ನಿಯಾದ ಪಾತ್ರ. ಒಳ್ಳೆಯ ಅನುಭವವಾಯ್ತು. ಶೂಟಿಂಗ್ ಸಮಯದಲ್ಲಿ ನಿರ್ದೇಶಕರು ಒಂದಿಷ್ಟು ವಿಷಯಗಳನ್ನು ಹೇಳಿಕೊಡುತ್ತಿದ್ದರು. ನಾವು ಮಾಡುತ್ತಿದ್ದೆವು. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿರಲಿಲ್ಲ. ಹೇಗೆ ಮಾಡಿದ್ವಿ? ಸರಿಯೋ, ತಪ್ಪ? ಗೊತ್ತಾಗುತ್ತಿರಲಿಲ್ಲ. ಏನಾದರೂ ಹೇಳಿ ಎಂದರೆ ಇಷ್ಟು ಸಾಕು ಎನ್ನುತ್ತಿದ್ದರು. ಸರಿನಾ ತಪ್ಪಾ ಗೊತ್ತಾಗುತ್ತಿರಲಿಲ್ಲ’ ಎನ್ನುತ್ತಾರೆ ವಂದನಾ ಶೆಟ್ಟಿ.
ಋತು ಕ್ರಿಯೇಷನ್ಸ್ನಡಿ ಈ ಚಿತ್ರವನ್ನು ಸುಮಾ ಸಿ.ಆರ್. ನಿರ್ಮಾಣ ಮಾಡಿದ್ದು, ಬಿ.ಎಂ. ದಿಲೀಪ್ ಸಹ ನಿರ್ಮಾಣ ಮಾಡಿದ್ದಾರೆ. ವೆಂಕಟ್ ಭಾರದ್ವಾಜ್ ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಶಿನವ್ ಹಾಗೂ ವಂದನಾ ಶೆಟ್ಟಿ ಜೊತೆಗೆ, ರಚನಾ ರಾಯ್, ರೂಪ