ಸೌಂಡು ಮಾಡುತ್ತಿದೆ ‘ಸೈರನ್’!!

siren kannada movie review

Siren 3.5/5

ಕನ್ನಡ ಚಿತ್ರರಂಗದಲ್ಲಿ ಹೊಸ ನಟ-ನಟಿಯರಿಗಂತೂ ಭರಪೂರ ಅವಕಾಶವಿದೆ. ಇಲ್ಲಿ ನಿಜಕ್ಕು ಪ್ರತಿಭಾವಂತರು ಸರಿಯಾದ ಹಾದಿಯಲ್ಲಿ ಪರಿಶ್ರಮ ಪಟ್ಟರೆ, ಒಂದೊಮ್ಮೆ ಫಲಿತಾಂಶ ತಡವಾದರೂ‌; ಗೆಲುವು ಶತಸಿದ್ಧ!!. ಆ ಸಾಲಲ್ಲಿ ಸದ್ಯ ಕಾಣ ಸಿಕ್ಕಿದ್ದು ‘ಸೈರನ್’ ಚಿತ್ರದ ನಾಯಕ ‘ಪ್ರವೀರ್ ಶೆಟ್ಟಿ’. ಹೌದು. ಈತ ಚಿತ್ರರಂಗಕ್ಕೆ ಅಡಿಯಿಡುವ ಮೊದಲು, ಇಲ್ಲಿ ನೆಲೆಯೂರಲು ಬೇಕಾದ ಅಷ್ಟೂ ತರಬೇತಿಯನ್ನ ಮೂಗಿಸಿಕೊಂಡೇ ಇಂಡಸ್ಟ್ರಿಗೆ ಬಂದು ಸೈರನ್ ಮಾಡಿದ್ದಾನೆ.Shetty is now fit & fine said Dolly!

ಅಸಲಿಗೆ ಇದೇ ಶುಕ್ರವಾರ ತೆರೆಕಂಡ ಈ ಸೈರನ್ ಚಿತ್ರದ ಮೂಲಕ ಈತ ಸಖತ್ ಭರವಸೆ ಮೂಡಿಸುತ್ತಾನೆ. ದೊಡ್ಡವರ ಮನೆಯ ಹುಡುಗನಾದರೂ, ಎಲ್ಲಿಯೂ ಆ ಲಕ್ಷಣ ಕಾಣದಂತೆ, ತಗ್ಗಿಬಗ್ಗಿಯೇ ಆಫ್ ದಿ ಸ್ಕ್ರೀನ್ ಇದ್ದು, ಆನ್ ಸ್ಕ್ರೀನ್ ಸಿನಿಮಾದಲ್ಲಿ ಮಾತ್ರ ಸಂಪೂರ್ಣವಾಗಿ ತೊಡಗಿಸಿಕೊಂಡ ಪರಿಣಾಮ; ಒಬ್ಬ ಪ್ರತಿಭಾವಂತ ನಟನಾಗಿ ಗುರುತಿಸಿಕೊಳ್ಳುವ ಲಕ್ಷಣ ಕಾಣುತ್ತಿದೆ. ಆ ಮಟ್ಟಿಗೆ ಶೆಟ್ಟಿ ಸೈರನ್ ಸೌಂಡಿನೊಂದಿಗೆ ಭರ್ಜರಿ ಎಂಟ್ರಿ ಹಾಕಿಸಿಕೊಂಡಿದ್ದಾರೆ.

ಸ್ಲಿಮ್ ಫಿಟ್ನೊಂದಿಗೆ ಎತ್ತರದ ನಿಲುವು ಹೊಂದಿರುವ ಈ ಸ್ಪುರದ್ರೂಪಿ ನಟನಿಗೆ, ಈಗಿನ್ನೂ ಇಪ್ಪತ್ಮೂರರ ಪ್ರಾಯ. ವರಷ ಕಳೆದಂತೆ ಅನುಭವದ ಮೂಟೆ ಹೆಗಲೇರಿ, ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಾಣುವ ಸೂಚನೆ ಕೊಟ್ಟಿದ್ದಾನೆ ಪ್ರವೀರ್. ಇಲ್ಲಿ ಚಿತ್ರದ ಕಥೆ,ಚಿತ್ರಕತೆಗೆ ಹಿಡಿದಿಡಿವ ಶಕ್ತಿಯಿದ್ದು, ಪ್ರಮುಖ ಪಾತ್ರಧಾರಿಗಳು ಸಹಜ ಅಭಿನಯದೊಂದಿಗೆ ಸಾಥ್ ನೀಡಿದ್ದಾರೆ. ಅಲ್ಲಿಗೆ ಚಿತ್ರವು ನೋಡಿಸಿಕೊಂಡು ಹೋಗುವ ಶಕ್ತಿ ಹೊಂದಿದ್ದು, ತೆರೆಕಂಡಲ್ಲೆಲ್ಲ ಸಖತ್ ಸದ್ದು ಮಾಡುತ್ತಾ ಥೀಯೇಟರ್ ಸಂಖ್ಯೆ ಹೆಚ್ಚಿಸಿಕೊಂಡಿದೆ.siren kannada movie review

ಚಿತ್ರ ಆರಂಭದ ಹತ್ತು ನಿಮಿಷದಲ್ಲೇ ಅನುಮಾನಾಸ್ಪದ ಕೊಲೆಯತ್ತ ಹೊರಳಿಕೊಂಡು ಪ್ರೇಕ್ಷಕರನ್ನ ಹಿಡಿದಿಟ್ಟು ವೇಗ ಪಡೆಯುತ್ತಲೇ ಸಾಗುತ್ತದೆ. ಈ ಕೊಲೆಗೆ ಸೀಬಂಧಿಸಿ ಸ್ಪೆಷಲ್ ಆಫೀಸರ್ ಆಗಿ ಇನ್ವೆಸ್ಟಿಗೇಶನ್ನಿಗೆ ಇಳಿಯುವ ನಾಯಕನಿಗೆ, ತಾನು ಬೆನ್ನು ಹತ್ತಿದ ಆ ಒಂದು ಕೊಲೆ ಹತ್ತಾರು ಆಯಾಮ ಪಡೆಯುವ ಜೊತೆಗೆ ಆಗಾಗ ರೋಚಕ ತಿರುವು ನೀಡುತ್ತಾ ಸಾಗುವ ‘ಥ್ರಿಲ್ಲಿಂಗ್ ಸ್ಕ್ರೀನ್ ಪ್ಲೇ’ ಭರ್ಜರಿಯಾಗಿ ಸಾಥ್ ನೀಡಿದೆ. ಬ್ಯಾಂಕ್ ಹುಡುಗಿಯೊಬ್ಬಳು ಕಾಣೆಯಾಗಿ ಸುಟ್ಟು ಕರಕಲಾಗಿ ಹೆಣ ಸಿಗುವಲ್ಲಿಂದ ಹೆಣ್ಣು ಮಕ್ಕಳ ಮನಮುಟ್ಟುತ್ತಾ ಸಾಗಿ, ಶುಭಂ ಹೇಳುವ ಹೊತ್ತಿಗೆ “ಎಂಥದ್ದೇ ಪಾಪಿಗೂ, ಒಳಿತಿನ ಕಾಲಕ್ಕೆ ಮನಸು ಬದಲಾಗಬಹುದು” ಎಂಬ ಥೀಮಿನೊಂದಿಗೆ, ಎಲ್ಲರಿಗೂ ಹಿಡಿಸುವ ಚಿತ್ರವು ಅನಿರೀಕ್ಷಿತ್ಷಿತ ತಿರುವು ಪಡೆದು “ಟೈಟಾಗಿ”ಯೇ ಕೊನೆಗೊಳ್ಳುತ್ತದೆ.Shetty is now fit & fine said Dolly! ಒಟ್ಟಿನಲ್ಲಿ ಹೊಸ ನಟನ ಮೊದಲ ಚಿತ್ರ ಪ್ರೇಕ್ಷಕ ಕೊಂಚವೇ ಹೊಟ್ಟೆಗಿಳಿಸಿ ನೋಡಿದರೆ, ಚಿತ್ರ ಗೆದ್ದು ಬೀಗಲಿದೆ. ಅದರಂತೆ, ಹೊಸ ಭರವಸೆಯೊಂದಿಗೆ ಚಿತ್ರರಂಗಕ್ಕೆ ಅಡಿಯಿಟ್ಟ ಪ್ರವೀರ್ ಶೆಟ್ಟಿ ಆ ಗೆಲುವಲ್ಲೇ ಕನ್ನಡ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಾಣುವಂತಾಗಲಿ..

-ನಾಗರಾಜ್ ಅರೆಹೊಳೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…