Siren 3.5/5
ಕನ್ನಡ ಚಿತ್ರರಂಗದಲ್ಲಿ ಹೊಸ ನಟ-ನಟಿಯರಿಗಂತೂ ಭರಪೂರ ಅವಕಾಶವಿದೆ. ಇಲ್ಲಿ ನಿಜಕ್ಕು ಪ್ರತಿಭಾವಂತರು ಸರಿಯಾದ ಹಾದಿಯಲ್ಲಿ ಪರಿಶ್ರಮ ಪಟ್ಟರೆ, ಒಂದೊಮ್ಮೆ ಫಲಿತಾಂಶ ತಡವಾದರೂ; ಗೆಲುವು ಶತಸಿದ್ಧ!!. ಆ ಸಾಲಲ್ಲಿ ಸದ್ಯ ಕಾಣ ಸಿಕ್ಕಿದ್ದು ‘ಸೈರನ್’ ಚಿತ್ರದ ನಾಯಕ ‘ಪ್ರವೀರ್ ಶೆಟ್ಟಿ’. ಹೌದು. ಈತ ಚಿತ್ರರಂಗಕ್ಕೆ ಅಡಿಯಿಡುವ ಮೊದಲು, ಇಲ್ಲಿ ನೆಲೆಯೂರಲು ಬೇಕಾದ ಅಷ್ಟೂ ತರಬೇತಿಯನ್ನ ಮೂಗಿಸಿಕೊಂಡೇ ಇಂಡಸ್ಟ್ರಿಗೆ ಬಂದು ಸೈರನ್ ಮಾಡಿದ್ದಾನೆ.
ಅಸಲಿಗೆ ಇದೇ ಶುಕ್ರವಾರ ತೆರೆಕಂಡ ಈ ಸೈರನ್ ಚಿತ್ರದ ಮೂಲಕ ಈತ ಸಖತ್ ಭರವಸೆ ಮೂಡಿಸುತ್ತಾನೆ. ದೊಡ್ಡವರ ಮನೆಯ ಹುಡುಗನಾದರೂ, ಎಲ್ಲಿಯೂ ಆ ಲಕ್ಷಣ ಕಾಣದಂತೆ, ತಗ್ಗಿಬಗ್ಗಿಯೇ ಆಫ್ ದಿ ಸ್ಕ್ರೀನ್ ಇದ್ದು, ಆನ್ ಸ್ಕ್ರೀನ್ ಸಿನಿಮಾದಲ್ಲಿ ಮಾತ್ರ ಸಂಪೂರ್ಣವಾಗಿ ತೊಡಗಿಸಿಕೊಂಡ ಪರಿಣಾಮ; ಒಬ್ಬ ಪ್ರತಿಭಾವಂತ ನಟನಾಗಿ ಗುರುತಿಸಿಕೊಳ್ಳುವ ಲಕ್ಷಣ ಕಾಣುತ್ತಿದೆ. ಆ ಮಟ್ಟಿಗೆ ಶೆಟ್ಟಿ ಸೈರನ್ ಸೌಂಡಿನೊಂದಿಗೆ ಭರ್ಜರಿ ಎಂಟ್ರಿ ಹಾಕಿಸಿಕೊಂಡಿದ್ದಾರೆ.
ಸ್ಲಿಮ್ ಫಿಟ್ನೊಂದಿಗೆ ಎತ್ತರದ ನಿಲುವು ಹೊಂದಿರುವ ಈ ಸ್ಪುರದ್ರೂಪಿ ನಟನಿಗೆ, ಈಗಿನ್ನೂ ಇಪ್ಪತ್ಮೂರರ ಪ್ರಾಯ. ವರಷ ಕಳೆದಂತೆ ಅನುಭವದ ಮೂಟೆ ಹೆಗಲೇರಿ, ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಾಣುವ ಸೂಚನೆ ಕೊಟ್ಟಿದ್ದಾನೆ ಪ್ರವೀರ್. ಇಲ್ಲಿ ಚಿತ್ರದ ಕಥೆ,ಚಿತ್ರಕತೆಗೆ ಹಿಡಿದಿಡಿವ ಶಕ್ತಿಯಿದ್ದು, ಪ್ರಮುಖ ಪಾತ್ರಧಾರಿಗಳು ಸಹಜ ಅಭಿನಯದೊಂದಿಗೆ ಸಾಥ್ ನೀಡಿದ್ದಾರೆ. ಅಲ್ಲಿಗೆ ಚಿತ್ರವು ನೋಡಿಸಿಕೊಂಡು ಹೋಗುವ ಶಕ್ತಿ ಹೊಂದಿದ್ದು, ತೆರೆಕಂಡಲ್ಲೆಲ್ಲ ಸಖತ್ ಸದ್ದು ಮಾಡುತ್ತಾ ಥೀಯೇಟರ್ ಸಂಖ್ಯೆ ಹೆಚ್ಚಿಸಿಕೊಂಡಿದೆ.
ಚಿತ್ರ ಆರಂಭದ ಹತ್ತು ನಿಮಿಷದಲ್ಲೇ ಅನುಮಾನಾಸ್ಪದ ಕೊಲೆಯತ್ತ ಹೊರಳಿಕೊಂಡು ಪ್ರೇಕ್ಷಕರನ್ನ ಹಿಡಿದಿಟ್ಟು ವೇಗ ಪಡೆಯುತ್ತಲೇ ಸಾಗುತ್ತದೆ. ಈ ಕೊಲೆಗೆ ಸೀಬಂಧಿಸಿ ಸ್ಪೆಷಲ್ ಆಫೀಸರ್ ಆಗಿ ಇನ್ವೆಸ್ಟಿಗೇಶನ್ನಿಗೆ ಇಳಿಯುವ ನಾಯಕನಿಗೆ, ತಾನು ಬೆನ್ನು ಹತ್ತಿದ ಆ ಒಂದು ಕೊಲೆ ಹತ್ತಾರು ಆಯಾಮ ಪಡೆಯುವ ಜೊತೆಗೆ ಆಗಾಗ ರೋಚಕ ತಿರುವು ನೀಡುತ್ತಾ ಸಾಗುವ ‘ಥ್ರಿಲ್ಲಿಂಗ್ ಸ್ಕ್ರೀನ್ ಪ್ಲೇ’ ಭರ್ಜರಿಯಾಗಿ ಸಾಥ್ ನೀಡಿದೆ. ಬ್ಯಾಂಕ್ ಹುಡುಗಿಯೊಬ್ಬಳು ಕಾಣೆಯಾಗಿ ಸುಟ್ಟು ಕರಕಲಾಗಿ ಹೆಣ ಸಿಗುವಲ್ಲಿಂದ ಹೆಣ್ಣು ಮಕ್ಕಳ ಮನಮುಟ್ಟುತ್ತಾ ಸಾಗಿ, ಶುಭಂ ಹೇಳುವ ಹೊತ್ತಿಗೆ “ಎಂಥದ್ದೇ ಪಾಪಿಗೂ, ಒಳಿತಿನ ಕಾಲಕ್ಕೆ ಮನಸು ಬದಲಾಗಬಹುದು” ಎಂಬ ಥೀಮಿನೊಂದಿಗೆ, ಎಲ್ಲರಿಗೂ ಹಿಡಿಸುವ ಚಿತ್ರವು ಅನಿರೀಕ್ಷಿತ್ಷಿತ ತಿರುವು ಪಡೆದು “ಟೈಟಾಗಿ”ಯೇ ಕೊನೆಗೊಳ್ಳುತ್ತದೆ. ಒಟ್ಟಿನಲ್ಲಿ ಹೊಸ ನಟನ ಮೊದಲ ಚಿತ್ರ ಪ್ರೇಕ್ಷಕ ಕೊಂಚವೇ ಹೊಟ್ಟೆಗಿಳಿಸಿ ನೋಡಿದರೆ, ಚಿತ್ರ ಗೆದ್ದು ಬೀಗಲಿದೆ. ಅದರಂತೆ, ಹೊಸ ಭರವಸೆಯೊಂದಿಗೆ ಚಿತ್ರರಂಗಕ್ಕೆ ಅಡಿಯಿಟ್ಟ ಪ್ರವೀರ್ ಶೆಟ್ಟಿ ಆ ಗೆಲುವಲ್ಲೇ ಕನ್ನಡ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಾಣುವಂತಾಗಲಿ..