ಸಿಂಹಗುಹೆ ಆಡಿಯೋ ಬಿಡುಗಡೆ

Sinhaguhe audio release

ಈ ಹಿಂದೆ ಸಮರ್ಥ, ತಾಜಾ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ಎಸ್‌ಜಿಆರ್ ಅವರ ನಿರ್ದೇಶನದ ೩ನೇ ಚಿತ್ರ ಸಿಂಹಗುಹೆ. ರವಿ ಶಿರೂರು, ನಿವಿಶ್ಕಾ ಪಾಟೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಹಾಡುಗಳಿಗೆ ಇತ್ತೀಚೆಗೆ ನಟ ಅನಿರುದ್ದ ಅವರು ಚಾಲನೆ ನೀಡಿದರು. ಎಸಿ ಮಹೇಂದರ್ ಅವರ ಛಾಯಾಗ್ರಹಣ, ಸತೀಶ್ ಆರ್ಯನ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ,Sinhaguhe audio release
ಈ ಸಂದರ್ಭದಲ್ಲಿ ನಿರ್ದೇಶಕ ಎಸ್‌ಜಿಆರ್ ಮಾತನಾಡುತ್ತ ಇದೊಂದು ಸಸ್ಪೆನ್ಸ್, ಕ್ರೈಂ, ಮರ್ಡರ್ ಮಿಸ್ಟ್ರಿ ಇರುವ ಚಿತ್ರವಾಗಿದ್ದು. ಜಾಗರಹಳ್ಳಿ ಎಂಬ ಊರಲ್ಲಿ ಮನೆಯೊಂದರ ಮುಂದೆ ಬಹುತೇಕ ಚಿತ್ರದ ಕಥೆ ನಡೆಯುತ್ತದೆ. ಸಿಂಹಗುಹೆ ಎನ್ನುವುದು ಆ ಮನೆಯ ಹೆಸರು, ನಾಯಕ ಕೂಡ ವಿಷ್ಣು ಅಭಿಮಾನಿ. ಹಾಸನ, ಸಕಲೇಶಪುರ, ಮೂಡಿಗೆರೆ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ, ನನ್ನ ಹಿಂದಿನ ಚಿತ್ರಗಳಿಗೆ ಕೆಲಸಮಾಡಿದ ಮಹೇಂದರ್ ಅವರೇ ಈ ಚಿತ್ರಕ್ಕೂ ಸಿನಿಮಾಟೋಗ್ರಫಿ ಮಾಡಿದ್ದಾರೆ, ಚಿತ್ರವೀಗ ಬಿಡುಗಡೆಗೆ ರೆಡಿ ಇದ್ದು, ಮೇ ಎಂಡ್ ಅಥವಾ ಜುಲೈ ಮೊದಲವಾರ ರಿಲೀಸ್ ಮಾಡುವ ಯೋಜನೆಯಿದೆ ಎಂದು ಹೇಳಿದರು. Sinhaguhe audio releaseಚಿತ್ರದ ನಾಯಕ ರವಿ ಶಿರೂರ್ ಮಾತನಾಡಿ ಇದೊಂದು ಚಿಕ್ಕ ಪ್ರಯತ್ನ, ಅಭಿನಯದೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದೇನೆ. ಹಳ್ಳಿಯಲ್ಲಿ ಟ್ಯಾಂಕರ್ ಓಡಿಸಿಕೊಂಡಿರುವ ಹುಡುಗನ ಪಾತ್ರ ನನ್ನದು. ಆ ಹಳ್ಳಿಯಲ್ಲಿ ಒಂದು ಮರ್ಡರ್ ನಡೆದಾಗ ಅದು ಈ ಹುಡುಗನನ್ನು ಹೇಗೆ ಎಲ್ಲೆಲ್ಲಿಗೆ ಕರೆದುಕೊಂಡು ಹೋಯಿತು ಎಂಬುದನ್ನು ಚಿತ್ರದ ಮೂಲಕ ಹೇಳಿದ್ದೇವೆ ಎಂದು ವಿವರಿಸಿದರು, ನಾಯಕಿ ನಿವಿಶ್ಕಾ ಪಾಟೀಲ್ ಮಾತನಾಡುತ್ತ ಇದೇ ನನ್ನ ಮೊದಲ ಚಿತ್ರ, ಇದರ ನಂತರ ನಾಲ್ಕು ಸಿನಿಮಾ ಆಯಿತು,ಹಾಗಾಗಿ ನನಗೆ ಈ ಚಿತ್ರ ತುಂಬಾ ಪ್ರಾಮುಖ್ಯ, ಸೀರಿಯಲ್‌ನಲ್ಲಿ ಅಭಿನಯಿಸುತ್ತಿದ್ದ ನನಗೆ ರವಿ ಸರ್ ಕರೆದು ಅವಕಾಶ ನೀಡಿದರು ಎಂದು ಹೇಳಿದರು,Sinhaguhe audio release
ಮತ್ತೊಬ್ಬ ನಾಯಕಿ ಅನುರಾಧಾ ಮಾತನಾಡಿ ನಾನೊಬ್ಬ ಡ್ಯಾನ್ಸರ್. ಒಂದಷ್ಟು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನೂ ಮಾಡಿದ್ದೇನೆ, ಇದರಲ್ಲಿ ಸೆಕೆಂಡ್ ಲೀಡ್ ಆಗಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು, ಸಂಗೀತ ನಿರ್ದೇಶಕ ಸತೀಶ್ ಆರ್ಯನ್ ಮಾತನಾಡಿ ಈ ಸಿನಿಮಾ ಪ್ರಾರಂಭವಾದಾಗ ನಾನಿರಲಿಲ್ಲ, ಮ್ಯೂಸಿಕ್ ಮಾಡಿಕೊಡಿ ಅಂತ ನಿರ್ದೇಶಕರು ನನ್ನ ಬಳಿ ಬಂದರು, ಮೊದಲು ೩ ಹಾಡು ಅಂತಿತ್ತು, Sinhaguhe audio releaseನಂತರ ಅದು ೪ ಆಯ್ತು. ನಾನೂ ಸಹ ೨ ಹಾಡುಗಳನ್ನು ಹಾಡಿದ್ದೇನೆ ಎಂದರು. ಸಾಹಿತಿ ಶಿವನಂಜೇಗೌಡ ಮಾತನಾಡಿ ಚಿತ್ರದಲ್ಲಿ ನಾನು ಭೂಮಿ ತಿರುಗುವುದು ಎಂಬ ಹಾಡನ್ನು ಬರೆದಿದ್ದೇನೆ ಎಂದರು, ಮುಖ್ಯ ಅತಿಥಿಯಾಗಿದ್ದ ಅನಿರುದ್ದ ಮಾತನಾಡಿ ಹೊಸ ತಂಡಕ್ಕೆ ಪ್ರೋತ್ಸಾಹ ನೀಡಲು ನಾನಿಲ್ಲಿ ಬಂದಿದ್ದೇನೆ, ಇವರ ಕೆಲಸ ನನಗೆ ಬಹಳ ಇಷ್ಟವಾಯ್ತು, ಹಾಡು ಚೆನ್ನಾಗಿ ಮೂಡಿಬಂದಿದೆ ಎಂದರುSinhaguhe audio release

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…