ಕೊಪ್ಪದಲ್ಲಿ ಇನಾಮ್ದಾರ್ ಸಿನಿಮಾದ ಸಿಲ್ಕು ಮಿಲ್ಕು ಸಾಂಗ್ ಬಿಡುಗಡೆ : ಸ್ಯಾಂಡಲ್ ವುಡ್ ಘಟೋದ್ಗಜ ಎಂದು ಪ್ರಮೋದ್ ಶೆಟ್ಟಿಗೆ ಟೈಟಲ್ ನೀಡಿದ ನಿರ್ದೇಶಕ

Silku Milku song from movie Inamdar released in Koppa

ಬಹು ನಿರೀಕ್ಷೆಯ ಇನಾಮ್ದಾರ್ ಸಿನಿಮಾ, ಟೀಸರ್ ಮೂಲಕ ರಾಜ್ಯದಾದ್ಯಂತ ಸದ್ದು ಮಾಡಿದ್ದು, ಇದೀಗ ಕೊಪ್ಪದಲ್ಲಿ ತನ್ನ ಮೊದಲ ಹಾಡು ಬಿಡುಗಡೆ ಮಾಡುವ ಮೂಲಕ ಜನರಲ್ಲಿ ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ. ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಸಿನಿಮಾ ಇದಾಗಿದ್ದು, ಕುಂತಿ ಅಮ್ಮ ಪ್ರೊಡಕ್ಷನ್ ಮೂಲಕ ನಿರಂಜನ್ ಶೆಟ್ಟಿ ತಲ್ಲೂರು ಬಂಡವಾಳ ಹೂಡಿದ್ದಾರೆ. ಕೊಪ್ಪದಲ್ಲಿ ಸಿಲ್ಕು ಮಿಲ್ಕು ಹಾಡನ್ನು ಬಿಡುಗಡೆ ಮಾಡುವ ಮೂಲಕ ಕೊಪ್ಪ ಜನತೆಯನ್ನ ಹುಚ್ಚೆಬ್ಬಿಸಿದ ಇನಾಮ್ದಾರ ಚಿತ್ರ ತಂಡ ಮತ್ತಷ್ಟು ಭರವಸೆಯನ್ನು ಮೂಡಿಸುವ ನಿಟ್ಟಿನಲ್ಲಿ ಜನರನ್ನು ಆಕರ್ಷಿಸುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಲಾವಿದರ ದಂಡೆ ಇರುವ ಈ ಸಿನಿಮಾ ಎರಡು ಬಣ್ಣಗಳ ನಡುವಿನ ಘರ್ಷಣೆಯ ಸುತ್ತ ಹೆಣೆದಿರುವ ಕಥೆ ಎಂದು ನಿರ್ದೇಶಕರು ಹೇಳುತ್ತಾರೆ.Silku Milku song from movie Inamdar released in Koppa

ಕೊಪ್ಪದಲ್ಲಿ ಸಾವಿರಾರು ಜನರ ಮುಂದೆ ಕೊಪ್ಪದ ಮಕ್ಕಳ ಕೈಯಲ್ಲಿ ಸಿಲ್ಕು ಮಿಲ್ಕು ಸಾಂಗ್ ಅನ್ನು ಬಿಡುಗಡೆ ಮಾಡಿರುವ ಚಿತ್ರತಂಡ ಕೊಪ್ಪದ ಜನತೆಯನ್ನು ಸ್ಮರಿಸಿಕೊಂಡಿದ್ದಾರೆ, ಖಡಕ್ ಧ್ವನಿಯಲ್ಲಿ ಪ್ರಮೋದ್ ಶೆಟ್ಟಿಯ ಡೈಲಾಗ್ ಕೇಳಿ ಹುಚ್ಚೆದ್ದು ಕುಣಿದ ಕೊಪ್ಪದ ಜನತೆಗೆ ನಿರ್ದೇಶಕ ಸಂದೇಶ ಶೆಟ್ಟಿ ಪ್ರಮೋದ್ ಶೆಟ್ಟಿ ಅವರಿಗೆ ಸ್ಯಾಂಡಲ್ವುಡ್ ಘಟೋದ್ಗಜ ಎಂದು ಬಿರುದನ್ನು ನೀಡಿದ್ದಾರೆ, ಇದು ಕೊಪ್ಪದ ಜನತೆಯಲ್ಲಿ ಮತ್ತಿಷ್ಟು ಜೋಶ್ ತಂದು ಕೊಟ್ಟಿದೆ. ಇಡೀ ಸಿನಿಮಾ ಟೆಕ್ನಿಕಲ್ ಆಗಲಿ, ಕಥೆಯಾಗಲಿ ಎಲ್ಲವೂ ಕೂಡ ಅದ್ಭುತವಾಗಿ ಮೂಡಿ ಬಂದಿದೆ ಹಾಗೂ ಒಬ್ಬ ಹೊಸ ನಿರ್ಮಾಪಕ, ನಿರ್ದೇಶಕ ಉಳಿಯಬೇಕಾದರೆ ನಿಮ್ಮ ಸಹಕಾರ ಅಗತ್ಯ ಎಂದು ಪ್ರಮೋದ್ ಶೆಟ್ಟಿ ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ನಿರಂಜನ್ ಶೆಟ್ಟಿ ಸಿನಿಮಾ ಉತ್ತಮವಾಗಿ ಮೂಡಿ ಬಂದಿದೆ, ಎರಡು ಜನಾಂಗ ಘರ್ಷಣೆಯನ್ನ ತೆರೆ ಮೇಲೆ ತರಲು ನಿರ್ದೇಶಕರು ಹೊಸತನದ ಪ್ರಯತ್ನವನ್ನ ಮಾಡಿದ್ದಾರೆ, ನಿಮಗೆಲ್ಲರಿಗೂ ಈ ಸಿನಿಮಾ ಇಷ್ಟ ಆಗುತ್ತೆ ನಮ್ಮ ತಂಡವನ್ನ ಬೆಂಬಲಿಸಿ, ನೀವು ನಮಗೆ ಶಕ್ತಿಯಾಗಿ ಎಂದು ತಿಳಿಸಿದರು. ಸಂಗೀತ ನಿರ್ದೇಶಕ ರಾಕೇಶ್ ಆಚಾರ್ಯ ಮಾತನಾಡಿ ಇದೊಂದು ಸೂಕ್ಷ್ಮವಾದ ಕಥಾಹಂದರ ಬಲು ಅಚ್ಚುಕಟ್ಟಾಗಿ ಈ ಸಿನಿಮಾವನ್ನ ತೆರೆಯ ಮೇಲೆ ತರಲು ನಿರ್ದೇಶಕರು ಪ್ರಯತ್ನಪಟ್ಟಿದ್ದಾರೆ ಈ ಸಿನಿಮಾದಲ್ಲಿ ನಾನು ಮೂರು ಹಾಡುಗಳನ್ನ ಮಾಡಿದ್ದೇನೆ ನಿಮ್ಮೆಲ್ಲರ ಬೆಂಬಲ ಈ ಸಿನಿಮಾದ ಮೇಲೆ ಇರಲಿ ಎಂದು ಕೇಳಿಕೊಂಡರು. ನಾಯಕ ನಟ ರಂಜನ್ ಛತ್ರಪತಿ, ನಟಿ ಚಿರಶ್ರೀ ಅಂಚನ್ ಹಾಗೂ ಏಸ್ತಾರ್ ನೆರೋನಾ, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಮಹಾಬಲೇಶ್ವರ ಕ್ಯಾದಗಿ, ರಕ್ಷಿತ್ ಶೆಟ್ಟಿ, ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೊಪ್ಪದ ವೇದಿಕೆಯಲ್ಲಿ ಸಂತೋಷವನ್ನು ಹಂಚಿಕೊಂಡರು.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…