ಶೆಟ್ಟಿ ಈಗ ಫಿಟ್ & ಫೈನ್ ಅಂದರು ಡಾಲಿ!

ಅದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿಯ ಸಿನಿವೇದಿಕೆ. ಅಲ್ಲಿ ನಡೆದದ್ದು ಅವರ ಮಗ ಪ್ರವೀರ್ ಶೆಟ್ಟಿಯ ಚೊಚ್ಚಲ ಪ್ರಯತ್ನದ “ಸೈರನ್” ಸಿನಿಮಾದ ಟ್ರೈಲರ್ ಬಿಡುಗಡೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಹದಿನೈದರ ಸಂಜೆ ನಡೆದ ಈ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್, ರಾಕ್ ಲೈನ್ ವೆಂಕಟೇಶ್, ಟಿವಿ ನೈನ್ ರಂಗನಾಥ್ ಭಾರಧ್ವಜ್ ಸೇರಿದಂತೆ ಹತ್ತಾರು ಗಣ್ಯರ ಉಪಸ್ಥಿತಿ ಇತ್ತು. ಪ್ರಧಾನ ಆಕರ್ಷಣೆಯಾಗಿ ನಟ ರಾಕ್ಷಸ ‘ಡಾಲಿ’ ಜೊತೆಯಾಗಿದ್ದರು.Shetty is now fit & fine said Dolly!

ಚಿತ್ರದ ಟ್ರೈಲರ್ ಬಿಡುಗಡೆಯ ನಂತರ ಮೆಚ್ಚಿ ಮಾತಾಡಿದ ಧನಂಜಯ್, ಪ್ರವೀಣ್ ಶೆಟ್ಟಿ ಹೋರಾಟದ ಬಗ್ಗೆ ಹೆಮ್ಮೆ ಪಡುತ್ತಾ, ಇದೀಗ ಅವರ ಮಗ ಹೀರೋ ಆದ ಬಗ್ಗೆ ಖುಷಿಯಿಂದ “ನಮ್ಮ ಚಿತ್ರರಂಗಕ್ಕೆ ವೆಲ್ ಕಮ್” ಅಂದರು. ಖುದ್ದು ಬ್ಯಾಗ್ರೌಂಡ್ ಇಲ್ಲದೆ ಚಿತರಂಗದಲ್ಲಿ ಸಾಧಿಸುವ ಕನಸುಹೊತ್ತು ಬಂದು ಸತತ ಸರ್ಕಸ್ಸಿನ ನಂತರ ಇದೀಗ ತನ್ನದೇ ಆದ ಅಭಿಮಾನಿ ವರ್ಗ ಸೃಷ್ಟಿಸಿಕೊಂಡಿರೋ ಡಾಲಿ ಧನಂಜಯ್ “ನಮ್ಮ ಚಿತ್ರರಂಗದಲ್ಲಿ ಹೊಸಬರಿಗೆ ತುಂಬಾನೆ ಅವಕಾಶವಿದೆ; ಇಲ್ಲಿ ತಾಳ್ಮೆ ಮತ್ತು ಪರಿಶ್ರಮ ಮುಖ್ಯ ಎನ್ನುತ್ತಾ, “ಸೈರನ್” ಟ್ರೈಲರ್ ಮೂಲಕ ಪ್ರವೀರ್ ಶೆಟ್ಟಿ ಖಡಕ್ ಲುಕ್ನಲ್ಲಿ ಹೊಸ ಭರವಸೆ ಮೂಡಿಸುತ್ತಾರೆ ಎಂದರು.Shetty is now fit & fine said Dolly!

ಮಾತು ಮುಂದುವರೆಸಿ ಹಳೆಯ ನೆನಪಿಗೆ ಜಾರಿದ ಡಾಲಿ “ಈ ಹಿಂದೆ ತನ್ನ ಮೊದ-ಮೊದಲ ಸರ್ಕಸ್ ದಿನಗಳಲ್ಲಿ ಹೋರಾಟಗಾರ ಪ್ರವೀಣ್ ಶೆಟ್ಟಿ ಭೇಟಿಯಾದಾಗ ನೋಡಿದ್ದ ಪ್ರವೀರ್ ಶೆಟ್ಟಿ ಆಗ ಚಿಕ್ಕ ಹುಡುಗನಂತಿದ್ದರು, ಆದರೆ ಈಗ ‘ಶೆಟ್ಟಿ ಫಿಟ್ & ಫೈನ್’ ” ಎಂದು ಖುಷಿ ಪಟ್ಟು, ಇಂಡಸ್ಟ್ರಿಗೆ ವೆಲ್ ಕಮ್ ಎಂದು ಮಾತುಮುಗಿಸಿದರು.Shetty is now fit & fine said Dolly!

ಇನ್ನು ಪ್ರೇಸ್ ಮೀಟಲ್ಲಿ ಚಿತ್ರತಂಡವನ್ನ ಪತ್ರಿಕೆ ಮಾತಿಗಿಳಿಸಿದಾಗ, ಅವರಂದಂತೆ, ಇದೊಂದು ‘ನೈಜ ಘಟನೆ ಆಧಾರಿತ’ ಚಿತ್ರವಂತೆ. ಹೆಣ್ಣೊಬ್ಬಳ ಬಲಾತ್ಕಾರದ ಬೆನ್ನು ಹತ್ತಿ ಹೊರಡುವ, ಥ್ರಿಲ್ಲಿಂಗ್ ಚಿತ್ರಕಥೆಯಿರುವ ಸಿನಿಮಾವಂತೆ. ಚಿತ್ರದಲ್ಲಿ ನಾಯಕ ಪ್ರವೀರ್ ಶೆಟ್ಟಿ ಜೊತೆ ಲಾಸ್ಯ ಪೊನ್ನು, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರ ಲೋಕೇಶ್, ಸ್ಪರ್ಶ ರೇಖಾ, ತಮಿಳಿನ ವಯ್ಯಾಬುರಿ, ಸಾಯಿ ಧೀನ ಸೇರಿ ಘಟಾನುಘಟಿಗಳು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರಂತೆ. ಹಾಗೆಯೆ ಚಿತ್ರ ಅದ್ಧೂರಿಯ ಜೊತೆಗೆ, ಪ್ರೇಕ್ಷಕರನ್ನ ಸೀಟಿನ ತುದಿಗೆ ತಂದು ಕೂರಿಸುವಂತೆ ಮೂಡಿ ಬಂದಿದ್ದು, ಪ್ರೇಕ್ಷಕ ಮೆಚ್ಚಿ ಗೆಲ್ಲಿಸುತ್ತಾನೆ ಎನ್ನುವುದು ಚಿತ್ರತಂಡದ ಮಾತು.Shetty is now fit & fine said Dolly!

ಒಟ್ಟಿನಲ್ಲಿ, ಚಿತ್ರದಲ್ಲಿ ಕೊಲೆಯ ಇನ್ವೆಸ್ಟಿಗೇಶನ್ ನಡೆಸುವ ಖಡಕ್ ಪೊಲೀಸ್ ಪಾತ್ರಧಾರಿಯಾಗಿ ಕಾಣಿಸಿಕೊಂಡ ನವನಟ ಪ್ರವೀರ್ ಶೆಟ್ಟಿ, ತಾನು ಚಿತ್ರರಂಗದಲ್ಲಿ ನೆಲೆಯೂರಲು ಬೇಕಾದಂತೆ, ಸಕಲ ತರಬೇತಿ ಪಡೆದು ಬಂದು ‘ಸೈರನ್’ ಮಾಡಿದ್ದಾರೆ. ಈ ಚಿತ್ರದ ಮೂಲಕ ಸೌಂಡ್ ಮಾಡಲು ಹೊರಟಿರುವ ‘ಆರಡಿ’ ಎತ್ತರದ ‘ಶೆಟ್ಟಿ’ ಶಾರ್ಪ್ ಟ್ರೈಲರ್ ಮೂಲಕ ಸದ್ಯ ಭರವಸೆಯಂತೂ ಹುಟ್ಟಿಸಿದ್ದಾರೆ. ಅದರಂತೆ, ಚಿತ್ರವು ಇದೇ ತಿಂಗಳ ಇಪ್ಪತ್ತಾರನೇ ತಾರೀಖಿಗೆ ಚಿತ್ರಮಂದಿರಕ್ಕೆ ಬರಲಿದ್ದು, ಹೊಸ ಹುಡುಗನ ಅದೃಷ್ಟ ಪರೀಕ್ಷೆ ನಡೆಯಲಿದೆ.

-ನಾಗರಾಜ್ ಅರೆಹೊಳೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…