ಪಾತ್ರಗಳ ನಡುವಿನ ಸಾರಾಂಶ!

saramsha kannada movie review

Saramsha 3/5

ಹೌದಲ್ವಾ? ನಮ್ಮ ಆಸಕ್ತಿಯೇ ಬೇರೆ, ನಾವು ಬದುಕುತ್ತಿರುವ ರೀತಿಯೇ ಬೇರೆ. ನಮ್ಮ ಜೀವನ ಶೈಲಿಯಿಂದ ಜಗತ್ತು ನಮ್ಮನ್ನು ನೋಡುತ್ತಿರುವ ರೀತಿಯಂತೂ ಇನ್ನೂ ಬೇರೇನೇ ಆಗಿದೆ. saramsha kannada movie review ಯಾರದ್ದೋ ಮರ್ಜಿಗೆ, ಮತ್ತಿನ್ಯಾರದ್ದೋ ಸಮಾಧಾನಕ್ಕೆ ಎಷ್ಟು ಶುಷ್ಕವಾಗಿ ಜೀವಿಸುತ್ತಿದ್ದೇವೆ… ಸಮಾಜದ ಸಿದ್ದ ಸೂತ್ರಗಳಲ್ಲಿ ಸಿಕ್ಕಿಕೊಂಡು, ನಾವಲ್ಲದ ನಾವಾಗಿಯೇ ಬದುಕಿ ಕಟ್ಟಕಡೆಯದಾಗಿ ಒಂದು ದಿನ ಮಣ್ಣಲ್ಲಿ ಮಣ್ಣಾಗಿಬಿಡಬೇಕಾ? ಯಾವುದೋ ಮರದ ಸೌದೆಯಮೇಲೆ ಮಲಗಿ ಬೂದಿಯಾಗಬೇಕಾ? ನಮ್ಮದು, ನಮ್ಮತನ ಅನ್ನೋದಕ್ಕಿಲ್ಲಿ ಬೆಲೆಯೇ ಇಲ್ಲವಾ? ಅದ್ಭುತ ಪಾತ್ರಗಳನ್ನು ಸೃಷ್ಟಿಸಿ, ಕ್ರಿಯಾಶೀಲವಾಗಿ ಬರೆದುಕೊಂಡಿರಬೇಕು ಅಂತಾ ಬಯಸಿದವನೊಬ್ಬ ತನಗೆ ಸಂಬಂಧವೇ ಇಲ್ಲದ ಜಗತ್ತಿನಲ್ಲಿ ಲೆಕ್ಕ ಬರೆದುಕೊಂಡಿರುತ್ತಾನೆ. ಇನ್ನೇನೋ ಆಗಬೇಕು ಅಂದುಕೊಂಡು ಕನಸು ಕಂಡವನು ಕಿರಾಣಿ ಅಂಗಡಿಯಲ್ಲಿ ದಿನಸಿಯನ್ನು ತೂಕ ಹಾಕಿಕೊಂಡು, ಪೊಟ್ಟಣ ಕಟ್ಟಿಕೊಂಡೇ ಸವೆದುಹೋಗುತ್ತಾನೆ.saramsha kannada movie review

ಸೃಜನಶೀಲವಾಗಿ ಬೆಳೆಯಬೇಕು ಅಂತಾ ಬಯಸಿದ ಹೆಣ್ಣೊಬ್ಬಳು ತನ್ನಿಡೀ ಜೀವನವನ್ನು ಅಡುಗೆಮನೆಯಲ್ಲಿ ಬೆಂದು ಬೆಂದೇ ಕಳೆದುಕೊಳ್ಳುತ್ತಾಳೆ. ಇದನ್ನು ಹಣೆಬರಹ ಅಂದುಕೊಳ್ಳಬೇಕಾ? ನಾವೇ ಮಾಡಿಕೊಂಡ ಯಡವಟ್ಟು ಅಂತಾ ತೀರ್ಮಾನಿಸಬೇಕಾ? ನಮ್ಮನ್ನು ನಾವೇ ಒಮ್ಮೆ ಆತ್ಮವಿಮರ್ಶೆ ಮಾಡಿಕೊಂಡರೆ, ನಡೆದು ಬಂದ ಹಾದಿಯನ್ನೊಮ್ಮೆ ಹಿಂತಿರುಗಿ ನೋಡಿದರೆ ಏಲ್ಲವೂ ಶೂನ್ಯ ಅನ್ನಿಸಿಬಿಡುತ್ತದೆ. ಹೀಗೆ ಚಿಂತಿಸುವ ಒಂದು ಪಾತ್ರವನ್ನು ಸೃಷ್ಟಿಸಿ ಅಮೂರ್ತವಾದ ವಿಚಾರಗಳನ್ನು ಮೂರ್ತ ರೂಪಕ್ಕೆ ತಂದು ನಿಲ್ಲಿಸಿರುವ ಚಿತ್ರ ʻಸಾರಾಂಶʼ. ತೀರಾ ಅಬ್ಸ್ಟ್ರಾಕ್ಟ್ ಅನ್ನಿಸುವ ವಿಚಾರಗಳನ್ನು, ಒಂದೇ ಗುಕ್ಕಿಗೆ ಓದಿಬಿಡಬಲ್ಲ ಕಥೆಯನ್ನು ದೃಶ್ಯಕ್ಕೆ ಅಳವಡಿಸುವುದು ನಿಜಕ್ಕೂ ಸವಾಲಿನ ಕೆಲಸ. ʻಸಾರಾಂಶʼದ ಮೂಲಕ ನಿರ್ದೇಶಕ ಸೂರ್ಯ ವಸಿಷ್ಠ ಅದನ್ನು ಸಾಧಿಸಿದ್ದಾರೆ. ಲೇಖಕನೊಬ್ಬ ಪಾತ್ರಗಳನ್ನು ಸೃಷ್ಟಿಸಬಲ್ಲ. ಆದರೆ, ಪಾತ್ರಗಳೇ ಎದ್ದು ಬಂದು ಲೇಖಕನನ್ನು ಪ್ರಶ್ನಿಸುವಂತಾದರೆ ಹೇಗಿರುತ್ತದೆ? ʻಸಾರಾಂಶʼ ಸಿನಿಮಾವನ್ನೊಮ್ಮೆ ನೋಡಿದರೆ ನಿಮಗದರ ಅರಿವಾಗುತ್ತದೆ.saramsha kannada movie review

ಇಲ್ಲಿ ಏನು ನಡೆಯುತ್ತಿದೆ? ಒಂದು ಪಾತ್ರ, ಅದರ ನಡುವೆಯೇ ಸುಳಿಯುವ ಇನ್ನೆರಡು ಕ್ಯಾರೆಕ್ಟರುಗಳು. ಮತ್ತೇನೋ ಗೊಂದಲ, ಗೋಜಲು ಅನ್ನಿಸುವಷ್ಟರಲ್ಲೇ ಎಲ್ಲವೂ ನಿರಾಳ ಇವೆಲ್ಲದರ ಒಟ್ಟು ಮೊತ್ತವೇ ಸಾರಾಂಶ. ಥೇಟು ಮನುಷ್ಯನ ಬದುಕಿನಂತೆ. ಯಾವುದೂ ಹೀಗೀಗೇ ಅಂತಾ ಕರಾರುವಕ್ಕಾಗಿ ನಿರ್ಣಯಿಸಲು ಸಾಧ್ಯವಾಗದಂಥವು… ಅದನ್ನು ಒಂಭತ್ತು ಅಧ್ಯಾಯಗಳನ್ನಾಗಿ ವಿಂಗಡಿಸಿ ಕೊಟ್ಟಿದ್ದಾರೆ.

ಸಾರಾಂಶ ಚಿತ್ರ ಮಾಮೂಲಿ ಸಿನಿಮಾಗಳನ್ನು ನೋಡುವ ಪ್ರೇಕ್ಷಕರಿಗೆ ಖಂಡಿತಾ ರುಚಿಸುವುದಿಲ್ಲ. ಸಿನಿಮಾವನ್ನು ಸಾಹಿತ್ಯದಂತೆ ಓದುವ, ಆಳಕ್ಕಿಳಿದು ಅರ್ಥಮಾಡಿಕೊಳ್ಳುವವರಿಗೆ ʻವಾಹ್ʼ ಅನ್ನಿಸುವಂತೆ ಮಾಡುತ್ತದೆ. ಕನ್ನಡದಲ್ಲಿ ಇಂಥದ್ದೊಂದು ಪ್ರಯೋಗ ನಿಜಕ್ಕೂ ಸ್ವಾಗತಾರ್ಹ.saramsha kannada movie review

ದೀಪಕ್ ಸುಬ್ರಹ್ಮಣ್ಯ ಎಂದಿನಂತೆ ಅದ್ಭುತವಾಗಿ ನಟಿಸಿದ್ದಾರೆ. ಸೂರ್ಯ ವಸಿಷ್ಠ ಮತ್ತು ಶೃತಿ ಹರಿಹರನ್ ಕೂಡಾ ಸಹಜವಾಗಿ ಸಿನಿಮಾದ ಭಾಗವಾಗಿದ್ದಾರೆ. ಹಲವು ದಿನಗಳ ನಂತರ ತೆರೆ ಮೇಲೆ ಕಾಣಿಸಿಕೊಂಡಿರುವ ಆಸಿಫ್ ಕ್ಷತ್ರಿಯಾ ಖುಷಿ ಕೊಡುತ್ತಾರೆ. ಈ ಥರದ ಸ್ಕ್ರಿಪ್ಟ್ಗೆ ಬಹುಶಃ ಅನಂತ್ ಭಾರದ್ವಾಜ್ ಬಿಟ್ಟು ಬೇರೊಬ್ಬರು ಛಾಯಾಗ್ರಹಣ ಮಾಡಲು ಸಾಧ್ಯವೇ ಇರಲಿಲ್ಲವೇನೋ. ಅಷ್ಟರ ಮಟ್ಟಿಗೆ ಅನಂತ್ ಅವರ ಕೆಲಸ ಅಚ್ಚುಕಟ್ಟಾಗಿದೆ. ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಕೂಡಾ ಸಿನಿಮಾಗೆ ಗಾಂಭೀರ್ಯತೆ ತಂದುಕೊಟ್ಟಿದೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…