ಸಾಮರ್ಥ್ಯ ದ್ವನಿಸುರುಳಿ ಟ್ರೇಲರ್ ಬಿಡುಗಡೆ.

ಕಾರ್ತಿಕ್ ಮೂವೀಸ್ ಲಾಂಛನದಲ್ಲಿ ರಾಜರಬಂಡಿ ಕಾರ್ತಿಕ್ ನಿರ್ಮಿಸುತ್ತಿರುವ ಸಾಮರ್ಥ್ಯ ಚಿತ್ರದ ಟ್ರೇಲರ್ ಹಾಗೂ ಧ್ವನಿಸಾಂದ್ರಿಕೆ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದಲ್ಲಿ ನಡೆಯಿತು. ಚುಕ್ಕಿ ಶಿವಾನಂದ ಟ್ರೇಲರ್ ಲೋಕರ್ಪಣೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.WhatsApp Image 2022 05 30 at 11.14.57 PM

ನಾಯಕ ಬಾಲಾಜಿಶರ್ಮ ಮಾತನಾಡಿ ತುಣುಕುಗಳಲ್ಲಿ ಡೈರಕ್ಟರ್ ವಾಸು ಅವರ ಶ್ರಮ ಎದ್ದು ಕಾಣಿಸುತ್ತಿದೆ. ಸಕಲೇಶಪುರದ ಅನುಭವವನ್ನು ಮರೆಯಲಿಕ್ಕೆ ಆಗುವುದಿಲ್ಲ. ಕಲೈ, ತ್ರಿಭುವನ್ ಎರಡು ಹಾಡುಗಳಿಗೆ, ಅರ್ಜುನ್-ಡಿಫರೆಂಟ್‌ಡ್ಯಾನಿ-ಕೌರವ ವೆಂಕಟೇಶ್-ವಿನೋಧ್
ಅವರುಗಳು ತಲಾ ಒಂದೊಂದು ಸಾಹಸಕ್ಕೆ ಸಂಯೋಜನೆ ಮಾಡಿದ್ದಾರೆ. ಕರೋನ ಸಮಯದಲ್ಲಿ ಧೈರ್ಯ ಮಾಡಿ ನಿರ್ಮಾಪಕರು ಮುಂದೆ ಬಂದರು. ಅಂಬರೀಷ್ ಹುಟ್ಟುಹಬ್ಬದಂದು ಸಮಾರಂಭ ನಡೆದಿರುವುದು
ಖುಷಿ ತಂದಿದೆ ಎಂದರು.A23I3195 scaled e1653969070886

ಎಲ್ಲಾ ತರಹ ಉದ್ಯಮಗಳನ್ನು ಕಂಡಿದ್ದೇನೆ. ಸಿನಿಮಾ ವ್ಯವಹಾರ ತಿಳಿಯಲು ಬಂಡವಾಳ ಹೂಡಿದೆ. ಆದರೂ ಇದನ್ನು ಮಾಡಲು ಎರಡು ಗುಂಡಿಗೆ ಇರಬೇಕು. ಸಕಲೇಶಪುರ, ಹಾಸನ, ಚಿಕ್ಕಮಗಳೂರು, ಬೆಂಗಳೂರು ಕಡೆಗಳಲ್ಲಿ ೩೫ ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲಾಗಿದೆ ಎಂಬುದು ನಿರ್ಮಾಪಕ ಶ್ರೀನಾಥ್ ನುಡಿ. A23I1357 1 scaledಅಡಿಷನ್ ನಡೆಸದೆ ಆಯ್ಕೆಯಾಗಿದ್ದನೆಂದು ನಾಯಕಿ ಗಗನಮಧು ಖುಷಿ ಹಂಚಿಕೊಂಡರು. ಕೇಳಿದ ಕ್ಯಾಮಾರ ಉಪಕರಣಗಳನ್ನು ನೀಡಿದ್ದಕ್ಕೆ ಇಷ್ಟು ಚೆಂದವಾಗಿ ಮೂಡಿಬಂದಿದೆ. ಎರಡು ಹಾಡುಗಳನ್ನು ಮಗ ಸೆರೆಹಿಡಿದಿದ್ದಾನೆಂದು ಛಾಯಾಗ್ರಾಹಕ ಕೆ.ಕೃಷ್ಣಕುಮಾರ್
ಮಾಹಿತಿ ನೀಡಿದರು. WhatsApp Image 2022 05 30 at 11.14.57 PM 2ಶುರುವಿನಲ್ಲಿ ಚಿತ್ರವನ್ನು ಮ್ಯಾಜಿಕ್ ರಂಗ ಮಾಡಬೇಕಾಗಿತ್ತು. ಆದರೆ ಅವರ ಧೋರಣೆ ಬುದ್ದಿ ನಿರ್ಮಾಪಕರಿಗೆ ಹಿಡಿಸದ ಕಾರಣ ಅದರ ಜವಬ್ದಾರಿಯನ್ನು ನನಗೆ ಹೊರಿಸಿದರು. ಮೊದಲು ನಿರ್ಮಾಪಕರು ಸೇಫ್ ಆಗಬೇಕೆಂಬುದು ನನ್ನ ಧ್ಯೇಯ.A23I1833 scaled

೧೯೯೪ರಲ್ಲಿ ರವಿತೇಜ ಚಿತ್ರದ ಮೂಲಕ ನಿರ್ದೇಶಕನಾಗಿ ಗುರುತಿಸಿಕೊಂಡು, ಇಲ್ಲಿಯವರೆಗೂ ೨೪ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದೇನೆ. ಲವ್ ಕಂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದಾಗಿದೆ ಎಂದು ನಿರ್ದೇಶಕ ಹೆಚ್.ವಾಸು ಹೇಳಿದರು. ತಾರಾಗಣದಲ್ಲಿ ಶೋಭರಾಜ್, ಅವಿನಾಶ್, ದಶರತ್‌ಅಭಿ, ರವೀಂದ್ರನಾಥ್, ಪೆಟ್ರೋಲ್
ಪ್ರಸನ್ನ, ಮಡೆನೂರು ಮನು, ಸ್ವಾತಿ, ಶಶಿಕುಮಾರ್ ಹಾಗೂ ಒಂದು ಹಾಡಿಗೆ ನವ ಪ್ರತಿಭೆ ರಾಯಚೂರಿನ ಅಭಿ ಹೆಜ್ಜೆ ಹಾಕಿದ್ದಾರೆ. ಅಂದಹಾಗೆ ಚಿತ್ರವು ಜುಲೈ ಮೊದಲ ವಾರದಲ್ಲಿ
ತೆರೆಗೆ ಬರುವ ಸಾದ್ಯತೆ ಇದೆ.A23I6208 scaled

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…