ಹಿಂದಿಗೆ ರಿಮೇಕ್ ಆಗ್ತಿದೆ ಅನೂಪ್ ಭಂಡಾರಿ ಚೊಚ್ಚಲ ಚಿತ್ರ ರಂಗಿತರಂಗ…ಅಕ್ಷಯ್ ಕುಮಾರ್ ಅಥವಾ ಶಾಹಿದ್ ಕಪೂರ್ ಯಾರಾಗ್ತಾರೆ ಚಿತ್ರದ ನಾಯಕ?

rangitaranga hindi remake

ಬಾಲಿವುಡ್ ನಲ್ಲಿಯೂ ರಂಗು ಮೂಡಿಸಲು ಸಜ್ಜಾದ ರಂಗಿತರಂಗ…ಅಕ್ಷಯ್ ಕುಮಾರ್ ಗೆ ಆಕ್ಷನ್ ಕಟ್ ಹೇಳ್ತಾರಾ ಅನೂಪ್ ಭಂಡಾರಿ?

ರಂಗಿತರಂಗ…ಕನ್ನಡ ಸಿನಿಲೋಕದಲ್ಲಿ ಹೊಸ ಅಲೆ ಎಬ್ಬಿಸಿದ್ದ ಸಿನಿಮಾ. ಸಂಪೂರ್ಣ ಹೊಸಬರ ತಂಡ ಸೇರಿಕೊಂಡು ಮಾಡಿದ್ದ ಈ ಚಿತ್ರ ಗೆದ್ದ ಪರಿ ಕಂಡು ಇಡೀ ಇಂಡಸ್ಟ್ರೀ ಒಮ್ಮೆ ದಂಗ್ ಆಗಿತ್ತು. ನಿರ್ದೇಶಕ ಅನೂಪ್‌ ಭಂಡಾರಿ ಅವರ ಚೊಚ್ಚಲ ಪ್ರಯತ್ನ ಅದಾಗಿತ್ತು. ಅವರ ಸಹೋದರ ನಿರೂಪ್‌ ಭಂಡಾರಿ ಹೀರೋ ಆಗಿ ಆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದರು. ನಟಿಯರಾದ ರಾಧಿಕಾ ನಾರಾಯಣ್‌ ಮತ್ತು ಆವಂತಿಕಾ ಶೆಟ್ಟಿ ಕೂಡ ಇದು ಮೊದಲ ಸಿನಿಮಾ. ಮೊದಲ ಹೆಜ್ಜೆಯಲ್ಲಿಯೇ ಇವರೆಲ್ಲರೂ ಸಕ್ಸಸ್ ಸಿಕ್ಸರ್ ಬಾರಿಸಿದ್ದರು. ಈಗ ರಂಗಿತರಂಗ ಬಿಡುಗಡೆಯಾಗಿ ಏಳು ವರ್ಷ ಗತಿಸಿದೆ. ಚಿತ್ರತಂಡ ಆ ನೆನಪುಗಳ ಯಾನವನ್ನು ನೆನೆದು ಸಂಸತಪಟ್ಟಿದೆ. ಇದೇ ಸಂಭ್ರಮದಲ್ಲಿರುವ ಸಿರಿಗನ್ನಡಂ ಪ್ರೇಕ್ಷಕ ಕಾಲರ್ ಮೇಲೆತ್ತುವ ಸುದ್ದಿ ರಂಗಿತರಂಗ ಬಳಗದಿಂದ ರಿವೀಲ್ ಆಗಿದೆ.akshay kumar

ರಂಗಿತರಂಗ ಬಾಲಿವುಡ್ ಗೆ ರಿಮೇಕ್ ಆಗ್ತಿದೆ ಎಂಬ ಬಡಾ ಖಬರ್ ವೊಂದು ಸೌತ್ ಟು ನಾರ್ತ್ ಚರ್ಚೆಯಲ್ಲಿದೆ. ಬಿಟೌನ್ ಸ್ಟಾರ್ ನಟರೊಬ್ಬರು ರಂಗಿತರಂಗ ರಿಮೇಕ್ ನಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ. ಅದ್ರಲ್ಲಿಯೂ ಪ್ರಮುಖವಾಗಿ ಕಿಲಾಡಿ ಅಕ್ಷಯ್ ಕುಮಾರ್ ಅಥವಾ ಶಾಹಿದ್ ಕಪೂರ್ ಹೀರೋ ಆಗಿ ನಟಿಸಲಿದ್ದಾರೆ ಎನ್ನಲಾಗ್ತಿದೆ. ಸ್ವತಃ ನಿರ್ದೇಶಕ ಅನೂಪ್ ಭಂಡಾರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ವದಂತಿ ಹಬ್ಬಿದೆ.WhatsApp Image 2022 07 06 at 9.50.58 AM 1 e1657434568133

ರಂಗಿತರಂಗ ಸಿನಿಮಾದ ಹಿಂದಿ ರಿಮೇಕ್ ಬಗ್ಗೆ ಮೊದಲಿನಿಂದಲೂ ದೊಡ್ಡ ಚರ್ಚೆ ನಡೆಯುತ್ತಲೇ ಇದೆ. ಇದೀಗ ದೊಡ್ಡ ನಿರ್ಮಾಪಕರೊಬ್ಬರು ರಂಗಿತರಂಗವನ್ನು ಹಿಂದಿಯಲ್ಲಿ ಹೊರತರಲು ಉತ್ಸುಕರಾಗಿದ್ದಾರಂತೆ. ಮುಂಬೈನ ಕಾರ್ಪೊರೇಟ್ ಸ್ಟುಡಿಯೋಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.WhatsApp Image 2022 07 06 at 9.50.58 AM

2015 ಜುಲೈ 3 ರಂದು ರಂಗಿತರಂಗ ರಾಜ್ಯದಾದ್ಯಂತ ತೆರೆಗೆ ಬಂದಿತ್ತು. ಒಂದು ವರ್ಷ ಥಿಯೇಟರ್ ನಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ಚಿತ್ರ, ಆ ಬಳಿಕ ವಿದೇಶಗಳಲ್ಲೂ ರಂಗಿತರಂಗ ಅಬ್ಬರ ಜೋರಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಊಹೆಗೂ ನಿಲುಕದಂತೆ ಇತಿಹಾಸ ಸೃಷ್ಟಿಸಿದ ಈ ಚಿತ್ರಕ್ಕೆ ಅನೂಪ್ ಆಕ್ಷನ್ ಕಟ್ ಹೇಳಿದ್ದರು. ನಿರೂಪ್ ನಾಯಕನಾಗಿ ಆವಂತಿಕ ಹಾಗೂ ರಾಧಿಕಾ ನಾಯಕಿಯರಾಗಿ ಕಮಾಲ್ ಮಾಡಿದ್ದರು. ಅಜನೀಶ್ ಸಂಗೀತದ ಕಂಪು ಇರುವ ಈ ಚಿತ್ರ ಬಾಲಿವುಡ್ ಅಂಗಳದಲ್ಲೂ ರಂಗು‌ ಮೂಡಿಸಲಿದೆ ಎನ್ನಲಾಗ್ತಿದೆ. ಸದ್ಯಕ್ಕೆ ಅನೂಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಚಿತ್ರ ವಿಕ್ರಾಂತ್ ರೋಣ ರಿಲೀಸ್ ಗೆ ಎದುರು‌ ನೋಡುತ್ತಿದ್ದಾರೆ. ಇದಾದ ಬಳಿಕ ಕಿಚ್ಚ ಅನೂಪ್ ಜೊತೆಯಾಗಿ ಬಿಲ್ಲರಂಗ ಭಾಷಾ ಸಿನಿಮಾಕ್ಕೆ ಮುನ್ನುಡಿ ಬರೆಯಲಿದ್ದಾರೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…