ರಮೀಜ್ ರಾಕಿ (Rameez Rocky) ಮಡಿಕೇರಿ ಕೊಡಗಿನ ಮೂಲತಾ ಹುಡುಗ , ವಿರಾಜಪೇಟೆ ಕೌವರಿ ಕಾಲೇಜ್ ಪಿಯುಸಿ ಮುಗಿಸಿ ಗೋವಾದಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ಅನ್ನು ಮುಗಿಸಿದರು.
ಆಮೇಲೆ ಮಾಡೆಲಿಂಗ್ ಫೀಲ್ಡ್ ಆಯ್ಕೆ ಮಾಡಿ ಹಲವಾರು ಫ್ಯಾಷನ್ ಶೋ ನಲ್ಲಿ ಭಾಗವಹಿಸಿ , ಶ್ರೀ ನ್ಯಾಷನಲ್ ಫ್ಯಾಶನ್ ಐಕಾನ್ ಹಗೂ ಮಿ.ಆರ್. ಅಂತಾರಾಷ್ಟ್ರೀಯ ಫ್ಯಾಶನ್ ವೀಕ್ ಕಂಪನಿಅಲ್ಲಿ ಕೆಲಸ ಮಾಡಿದ್ರು, ಈಗ ಹಲವಾರು ಫ್ಯಾಷನ್ ಶೋ ಗಳಲ್ಲಿ ತೀರ್ಪುಗಾರರಾಗಿ ಶೋ ಗಳನ್ನು ನಡೆಸಿಕೊಡುತ್ತಿದ್ದಾರೆ.
ಅದರ ಜೊತೆಗೆ ಇವರು ಎಸ್ ನಾರಾಯಣ್ ಮತ್ತು ಮಾಲೂರು ಶ್ರೀನಿವಾಸ್ ಅವರ ನವರಸ ನಟನ ಅಕಾಡೆಮಿಯಲ್ಲಿ ನಟನಾ ತರಬೇತಿಯನ್ನು ಪಡೆದಿದ್ದಾರೆ.
ಮತ್ತೆ ಒಂದಾದ ‘ಲವ್ ಸ್ಟೋರಿ’ ಜೋಡಿ…ನಾಗಚೈತನ್ಯ 23ನೇ ಸಿನಿಮಾಗೆ ಸಾಯಿಪಲ್ಲವಿ ನಾಯಕಿ
ಈಗ ಶಂಕರ್ ಕೋನಮಾನಹಳ್ಳಿ ನಿರ್ದೇಶನ ದಲ್ಲಿ ಆರ್ ಕೆ ಚಂದನ್ ಮತ್ತು ರಾಗಿಣಿ ನಟಿಸುತ್ತಿರುವ ಬಿಂಗೋ ಚಿತ್ರದಲ್ಲಿ ಒಂದು ಸಣ್ಣ ಪಾತ್ರವನ್ನು ಮಾಡುತ್ತಿದ್ದಾರೆ ಮತ್ತು ಇನ್ನು ಹೆಸರಿಡದ ಒಂದು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ರಮೀಜ್ ರಾಕಿ ಅವರು ಚಿತ್ರರಂಗದಲ್ಲಿ ಒಂದು ನೆಲೆ ಊರಬೇಕೆ ಎನ್ನುವ ಕನಸನ್ನು ಕಟ್ಟಿಕೊಂಡಿದ್ದಾರೆ ಅವರು ಕನ್ನಡ ಚಿತ್ರರಂಗದಲ್ಲಿ ನಟನಾಗಬೇಕೆಂಬ ಆಸೆಯೂ ತುಂಬಾ ಇದೆ ಅವರಿಗೆ ಎಲ್ಲಾ ಆಸೆಗಳು ಈಡೇರಲಿ ಎಂದು ಸಿನಿ ಪಾರ್ಕ್ ವತಿಯಿಂದ ಶುಭ ಕೋರುತ್ತೇವೆ.
TRP ಎಂಬ ಗುಮ್ಮ ಕನ್ನಡ ಚಿತ್ರರಂಗಕ್ಕೆ ಆಪತ್ತು…?