’ರಾಘು’ ಟ್ರೇಲರ್ ರಿಲೀಸ್…ಸೋಲೋ ಆಕ್ಟರ್ ಆಗಿ ಬಂದ ಚಿನ್ನಾರಿ ಮುತ್ತನಿಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಸಾಥ್

Raghu' Trailer Released...Chinnari Mutta, who came as a solo actor, has a hat trick with hero Shivanna Sath.

‘ರಾಘು’ ಟ್ರೇಲರ್ ರಿಲೀಸ್…ಸೋಲೋ ಆಕ್ಟರ್ ಆಗಿ ಬಂದ ಚಿನ್ನಾರಿ ಮುತ್ತನಿಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಸಾಥ್

ಕನ್ನಡ ಚಿತ್ರರಂಗದಲ್ಲೀಗ ಪ್ಯಾನ್ ಇಂಡಿಯಾ ಸಿನಿಮಾಗಳ ಜೊತೆ ಜೊತೆಯಲಿ ಭಿನ್ನ-ವಿಭಿನ್ನ ಹಾಗೂ ಪ್ರಯೋಗಾತ್ಮಕ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಇದೇ ಸಾಲಿಗೆ ಒಂದಿಷ್ಟು ಕೌತುಕಗಳನ್ನು ತನ್ನ ಒಡಲಿನಲ್ಲಿಟ್ಟುಕೊಂಡಿರುವ ರಾಘು ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ 28ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿರುವ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಹೊಸ ಬಗೆಯ ರಾಘು ಚಿತ್ರದ ಟ್ರೇಲರ್ ಅನಾವರಣಗೊಂಡಿದೆ.

‘ರಾಘು’ಗೆ ಶಿವಣ್ಣ ಬಲRaghu' Trailer Released...Chinnari Mutta, who came as a solo actor, has a hat trick with hero Shivanna Sath.

ಯುವ ನಿರ್ದೇಶಕ ಎಂ ಆನಂದ್ ರಾಜ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ರಾಘು ಸಿನಿಮಾ ಕನ್ನಡದ ಮಟ್ಟಿಗೆ ಪ್ರಯೋಗಾತ್ಮಕ ಚಿತ್ರವಾಗಿದೆ. ಹೊಸ ಬಗೆ ಥ್ರಿಲ್ ನೀಡುವ ಈ ಸಿನಿಮಾ ಪೂರ್ತಿ ವಿಜಯ್ ರಾಘವೇಂದ್ರ ಒಬ್ಬರೇ ಇರಲಿದ್ದಾರೆ. ಇದನ್ನು ಸೋಲೋ ಆಕ್ಟಿಂಗ್ ಸಿನಿಮಾ ಎನ್ನಬಹುದು. ಸೋಲೋ ಆಗಿ ಬರ್ತಿರುವ ಚಿನ್ನಾರಿ ಮುತ್ತನಿಗೆ ಶಿವಣ್ಣ ಸಾಥ್ ಕೊಟ್ಟಿದ್ದಾರೆ. ರಾಘು ಟ್ರೇಲರ್ ಗೆ ಶಿವಣ್ಣನ ಪವರ್ ಫುಲ್ ವಾಯ್ಸ್ ಸಿಕ್ಕಿದ್ದು, ಚಿತ್ರದ ಖದರ್ ಮತ್ತಷ್ಟು ಹೆಚ್ಚಿದೆ. ಜೀವನದ ದಾರಿಯಲ್ಲಿ ಕಷ್ಟ ಎಂಬ ಗುಡಿಗಳಿರುತ್ತದೆ. ಆದರೆ ಇವನ ದಾರಿಯಲ್ಲಿ ಆಪತ್ತು ಎಂಬ ಅಡ್ಡ ದೊಡ್ಡ ಗೋಡೆ ನಿಂತಿತ್ತು ಎಂಬ ಪಂಚಿಂಗ್ ಡೈಲಾಗ್ ಮೂಲಕ ರಾಘು ಟ್ರೇಲರ್ ತೆರೆದುಕೊಳ್ಳಲಿದೆ. ಶಿವಣ್ಣನ ವಾಯ್ಸ್, ವಿಜಯ್ ರಾಘವೇಂದ್ರ ಆಕ್ಟಿಂಗ್, ಉದಯ್ ಲೀಲಾ ಛಾಯಾಗ್ರಹಣ, ಸೂರಜ್ ಜೋಯಿಸ್ ಸಂಗೀತ ನೋಡುಗರ ಗಮನಸೆಳೆಯುತ್ತಿದೆ.Raghu' Trailer Released...Chinnari Mutta, who came as a solo actor, has a hat trick with hero Shivanna Sath.

ಟ್ರೇಲರ್ ರಿಲೀಸ್ ಬಳಿಕ ಮಾತನಾಡಿದ ವಿಜಯ್ ರಾಘವೇಂದ್ರ, ರಾಘು ಸಿನಿಮಾ ಬಗ್ಗೆ ಮಾತಾನಾಡಲು ತುಂಬಾ ಅಂಶವಿದೆ. ಸಿನಿಮಾ ಹಿಂದೆ ಪಟ್ಟಿರುವ ಶ್ರಮ, ಟೆನ್ನಿಕಾಲಿಟಿಸ್ ಸೇರಿದಂತೆ ತುಂಬಾ ವಿಚಾರಗಳ ಬಗ್ಗೆ ಮಾತಾಡಬೇಕು. 28ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾದ ಟ್ರೇಲರ್ , ಸಾಂಗ್ ನೋಡಿ ಖುಷಿಪಡುತ್ತಿದ್ದೇವೋ ಅವೆಲ್ಲರದ ಬಗ್ಗೆ ಮಾತನಾಡಲು 28 ಆಗಬೇಕು. ಜನ ಸಿನಿಮಾ ನೋಡಬೇಕು. ಈಗ ಒಂದು ಹಿತವಾದ ಗೊಂದಲವಿದೆ. ಅದು ನಮ್ಮ ರಾಘು ಸಿನಿಮಾದ ಬಲ. ಸೋಲೋ ಆಕ್ಟರ್ ಚಿತ್ರವಾಗಿದ್ದು, ಒಬ್ಬನೇ ಕಲಾವಿದ ಇಡೀ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. 28ಕ್ಕೆ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಬೆಂಬಲಿಸಿ ಎಂದರು.Raghu' Trailer Released...Chinnari Mutta, who came as a solo actor, has a hat trick with hero Shivanna Sath.


ನಿರ್ದೇಶಕ ಎಂ.ಆನಂದ್ ರಾಜ್ ಮಾತನಾಡಿ, ರಾಘು ಪಯಣಕ್ಕೆ ಬೆಂಬಲ ಕೊಟ್ಟ ನಿರ್ಮಾಪಕರಿಗೆ ಧನ್ಯವಾದ. ಎಲ್ಲಾ ಆಕ್ಟರ್ಸ್ಸ್ ಹಾಕಿಕೊಂಡು ಸಿನಿಮಾ ಮಾಡಿದಾಗ ನಿರ್ಮಾಪಕರು ಸಿಗುವುದು ಕಷ್ಟ. ಇನ್ನೂ ಸೋಲೋ ಆಕ್ಟರ್ ಇಟ್ಟುಕೊಂಡು ಕಥೆ ಎಣೆದು ಸಿನಿಮಾ ಮಾಡುವುದು ತುಸು ಕಷ್ಟವೇ. ಇದು ಸಂಪೂರ್ಣ ಟೆಕ್ನಿಕಲ್ ಚಿತ್ರವಾಗಿದ್ದು, ಸೋಲೋ ಆಕ್ಟರ್ ಕಥೆಯಾಗಿದ್ರೂ ಸಾಂಗ್ಸ್, ಫೈಟ್ಸ್, ಟ್ವಿಸ್ಟ್ ಎಲ್ಲವೂ ಇದೆ. ಇದೇ 28ಕ್ಕೆ ಥಿಯೇಟರ್ ನಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿ ಎಂದರು.Raghu' Trailer Released...Chinnari Mutta, who came as a solo actor, has a hat trick with hero Shivanna Sath.

ನಿರ್ಮಾಪಕ ರನ್ವಿತ್ ಶಿವಕುಮಾರ್, ರಾಘು ಬರೀ ಸಿನಿಮಾವಲ್ಲ. ನಮ್ಮ ತಂಡಕ್ಕೆ ಒಂದು ಎಮೋಷನ್. ಹೊಸ ತಂಡ ಹೊಸ ಪ್ರೊಡಕ್ಷನ್ ಜೊತೆ ಬಂದಾಗ ಜನರಿಗೆ ತಲುಪಿಸಲು ಇರುವ ಸೇತುವ ಮಾಧ್ಯಮ. ಆರಂಭದಿಂದ ಇಲ್ಲಿವರೆಗೂ ಅದೇ ಪ್ರೀತಿ ತೋರಿಸುತ್ತಿದ್ದೀರ. ಅಂದುಕೊಂಡತೆ ಅಚ್ಚುಕಟ್ಟಾಗಿ ಸಿನಿಮಾ ಮುಗಿಸಿಕೊಂಡಿದ್ದೇವೆ. ದೊಡ್ಮನೆಯಿಂದ ಬೆಂಬಲ ಸಿಕ್ಕಿದೆ. ಶಿವಣ್ಣ ಸಿನಿಮಾ ನೋಡಿ ಖುಷಿಪಟ್ಟರು. ಕನ್ನಡಕ್ಕೆ ನಮ್ಮ ತಂಡದಿಂದ ಒಳ್ಳೆ ಸಿನಿಮಾ ಕೊಟ್ಟಿದ್ದೇವೆ. ಎಲ್ಲರೂ ಸಿನಿಮಾ ನೋಡಿ ಹಾರೈಸಿ ಎಂದರು.WhatsApp Image 2023 04 20 at 3.26.35 PM 1

ನಿರ್ಮಾಪಕ ಅಭಿಷೇಕ್ ಕೋಟ ಮಾತನಾಡಿ, ರಾಘು ಸರ್ ಅದ್ಭುತ ಕಲಾವಿದರು. ಆನಂದ್ ಗೆ ಧನ್ಯವಾದ. ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆ ಸಿನಿಮಾ ಮಾಡಿ. ಇದೇ 28ಕ್ಕೆ ಥಿಯೇಟರ್ ನಲ್ಲಿ ಸಿನಿಮಾ ನೋಡಿ ಎಂದರು.


ಡಿಕೆ ಎಸ್ ಸ್ಟುಡಿಯೋ, ಕೋಟಾ ಫಿಲಂ ಫ್ಯಾಕ್ಟರಿ ಪ್ರೊಡಕ್ಷನ್ ನಡಿ ರಾಘು ಸಿನಿಮಾವನ್ನು ರನ್ವಿತ್ ಶಿವಕುಮಾರ್ ಹಾಗೂ ಅಭಿಷೇಕ ಕೋಟ ನಿರ್ಮಾಣ ಮಾಡಿದ್ದಾರೆ. ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿದ್ದು, ಉದಯ್ ಲೀಲಾ ಛಾಯಾಗ್ರಹಣ, ವಿಜತೇತ್ ಚಂದ್ರ ಸಂಕಲನ, ರಿತ್ವಿಕ್ ಮುರುಳಿದರ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಸೂರಜ್ ಜೋಯಿಸಿ ಸಂಗೀತ ನಿರ್ದೇಶನ ಮಾಡಿರುವ ಚಿತ್ರದ ಎರಡು ಹಾಡುಗಳಿಗೆ ವಾಸುಕಿ ವೈಭವ್ ಹಾಗೂ all ok ಧ್ವನಿಯಾಗಿದ್ದಾರೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…