‘ಪ್ರೇಮಂ’ ಪ್ರೀತಿಯ ಕಥೆಯಲ್ಲಿ ಏರಿಳಿತಗಳು

Premam Kannada Movie

ಈ ಹಿಂದೆ ಇಂಜಿನೀಯರ್ಸ ಮತ್ತು ಗಂಡುಲಿ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ವಿನಯ್ ರತ್ನಸಿದ್ದಿ ಈಗ ಮತ್ತೊಂದು ಪ್ರೇಮಕಥೆ ಹಿಡಿದುಕೊಂಡು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇದೇ ತಿಂಗಳಲ್ಲಿ ತೆರೆಗೆ ಬರಲು ಸಿದ್ದವಾಗಿರುವ ಪ್ರೇಮಂ Premam Kannada Movie ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ವಿನಯ್ ರತ್ನಸಿದ್ದಿ ಅವರೇ ಚಿತ್ರದ ನಾಯಕನಾಗಿ ನಟಿಸುವುದರ ಜೊತೆಗೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ. ಶಕುಂತಲಾ, ವೈಷ್ಣವಿ, ಸುಶ್ಮಿತಾ, ಮಂಜುಶ್ರೀ, ಕಾವೇರಿ ಹಾಗೂ ಪ್ರಿಯಾಂಕಾ ಸೇರಿ ೬ ಜನ ನಾಯಕಿಯರು ಚಿತ್ರದಲ್ಲಿದ್ದಾರೆ. ರತ್ನಸಿದ್ದಿ ಫಿಲಂಸ್ ಮೂಲಕ ಚಂದನ, ಅಮರೇಂದ್ರ ವರದ ಹಾಗೂ ಪ್ರಸಾದ್ ಬಿಜಿ, ಈ ಚಿತ್ರವನ್ನು ನಿರ್ಮಿಸಿದ್ದಾರೆ.Premam KANNADA MOVIE 2

ಈ ಸಂದರ್ಭದಲ್ಲಿ ನಾಯಕ ವಿನಯ್ ರತ್ನಸಿದ್ದಿ ಮಾತನಾಡಿ ಪರಿಶುದ್ದವಾದ ಪ್ರೇಮಕ್ಕೆ ಎಂದೂ ಸಾವಿಲ್ಲ ಎಂದು ಹೇಳುವ ಕಥೆ ನಮ್ಮ ಪ್ರೇಮಂ ಟುಟು ಚಿತ್ರದಲ್ಲಿದೆ. ಫಸ್ಟ್ ಲಾಕ್‌ಡೌನ್‌ನಲ್ಲಿ ೨ ಪಾತ್ರಗಳನ್ನಿಟ್ಟುಕೊಂಡು ಈ ಚಿತ್ರವನ್ನು ಪ್ರಾರಂಭಿಸಿದ್ದೆವು. ಅದೀಗ ೨೦೦ ಪಾತ್ರಗಳಾಗಿದೆ. ಟುಟು ಎಂದರೆ ೨ ವಿಕ್ಟರಿ, ೨ ಥಿಂಕಿಂಗ್ ಏನಾದರೂ ಆಗಬಹುದು. ಚಿತ್ರದಲ್ಲಿ ಎರಡು ರೀತಿಯ ಆಲೋಚನೆಗಳ ಬಗ್ಗೆ ಹೇಳಿದ್ದೇವೆ, ಬುದ್ದಿನಂತನಲ್ಲದ, ಹೆಡ್ಡನಂತಿರುವ ನಾಯಕನ ಜೀವನದಲ್ಲಿ ಬರುವ ತಿರುವುಗಳು, ಆತನಗಾಗುವ ಪ್ರೀತಿ, ಆ ಪ್ರೀತಿಯಿಂದಾಗುವ ತೊಳಲಾಟಗಳು, ಅದರಿಂದ ಆತ ಹೇಗೆ ಹೊರಬರುತ್ತಾನೆ ಎನ್ನುವುದೇ ಪ್ರೇಮಂ ಟುಟು ಕಥೆ.

ಇದನ್ನೂ ಓದಿ:  ರಾಜವರ್ಧನ್ ‘ಗಜರಾಮ’ ಸಿನಿಮಾದ ಸ್ಪೆಷಲ್ ನಂಬರ್ ಗೆ ಹೆಜ್ಜೆ ಹಾಕಿದ ರಾಗಿಣಿ

Premam KANNADA MOVIE 2

ಚಿತ್ರದಲ್ಲಿ ಬಿಟ್ ಸೇರಿ ೪ ಹಾಡುಗಳು, ೪ ಫೈಟ್‌ಗಳಿವೆ. ನಾಯಕನ ಜೀವನದಲ್ಲಿ ಆರು ಜನ ನಾಯಕಿಯರು ಒಂದೊದು ಹಂತದಲ್ಲಿ ಬಂದು ಪ್ರೀತಿಯ ಅನುಭವ ತೋರಿಸುತ್ತಾರೆ. ಅವರಲ್ಲಿ ಯಾರದು ಪರಿಶುದ್ದವಾದ ಪ್ರೀತಿ, ಅದು ಆತನಿಗೆ ಸಿಗುತ್ತೋ ಇಲ್ಲವೋ ಎನ್ನುವುದು ಚಿತ್ರದ ಕೊನೆಯಲ್ಲಿ ಗೊತ್ತಾಗುತ್ತದೆ, ಈ ಹಂತದಲ್ಲಿ ಉಂಟಾಗುವ ಗೊಂದಲಗಳು ಆತನ ಬದುಕುವ ರೀತಿಯನ್ನೇ ಬದಲಾಯಿಸುತ್ತವೆ. ಈ ೬ ಜನ ನಾಯಕಿಯರು ಕಥೆಗೆ ಪೂರಕವಾಗಿಯೇ ಬರುತ್ತಾರೆ, ತುಮಕೂರು ಬಳಿಯ ಹೊನ್ನುಡಿಕೆಯಲ್ಲಿ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ಉಳಿದಂತೆ ಬೆಂಗಳೂರು, ವಿಮಾನ ನಿಲ್ದಾಣ ಸೇರಿ ೭೦ ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಒಂದಷ್ಟು ಜನರಿಗೆ ಪ್ರೀಮಿಯರ್ ಹಾಕಿದಾಗ ಒಳ್ಳೇಚಿತ್ರ ಎಂಬ ಅಭಿಪ್ರಾಯ ಬಂತು. ಒಳ್ಳೇ ರೇಟಿಗೆ ಡಬ್ಬಿಂಗ್ ರೈಟ್ಸ್ ಕೇಳ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:  ಹೆತ್ತವರ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿದ್ದರೇ ಮಹಾನಟಿ ಕಾಂಚನಾ?

ನಂತರ ನಿರ್ಮಾಪಕರಾದ ತಿಪಟೂರು ಮೂಲದ ಪ್ರಸಾದ್ ಮಾತನಾಡಿ ನಾನು ಪ್ರೈವೇಟ್ ಸೆಕ್ಟರ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಟ್ರೈಲರ್ ನೋಡಿದಾಗ ಇಷ್ಟವಾಯ್ತು, ತುಂಬಾ ಎಫರ್ಟ್ ಹಾಕಿ ಸಿನಿಮಾ ಮಾಡಿದ್ದಾರೆ ಎಂದರು. ಮತ್ತೊಬ್ಬ ನಿರ್ಮಾಪಕ ಅಮರೇಂದ್ರ ವರದ ಮಾತನಾಡಿ ವಿನಯ್ ಜೊತೆ ೨೦೧೭ರಿಂದಲೂ ನಾನಿದ್ದೇನೆ. ಇಬ್ಬರೂ ಸೇರಿ ಇಂಜಿನಿಯರ್, ಗಂಡುಲಿ ನಂತರ ಈ ಚಿತ್ರವನ್ನು ಮಾಡಿದ್ದೆವೆ ಎಂದರು.Premam KANNADA MOVIE 2

ನಾಯಕಿಯರಲ್ಲೊಬ್ಬಳಾದ ಮಂಜುಶ್ರೀ ಮಾತನಾಡಿ ನಾನು ಮೂಲತಃ ಮಾಡೆಲ್, ಈಗಾಗಲೇ ೨ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಈ ಚಿತ್ರದಲ್ಲಿ ನಾಯಕಿ ಪಾತ್ರ ಮಾಡಿದ್ದೇನೆ ಎಂದರು. ಇನ್ನು ಈ ಚಿತ್ರದ ಹಾಡುಗಳಿಗೆ ಅಜಯ್ ಶ್ರೀನಿವಾಸಮೂರ್ತಿ ಅವರ ಸಂಗೀತ ಸಂಯೋಜನೆಯಿದ್ದು, ಆನಂದ್ ಇಳಯರಾಜಾ, ಅರುಣ್ ಮತ್ತು ಮನು ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ, ಅಲ್ಲದೆ ಈ ಚಿತ್ರಕ್ಕೆ ವಿನಯ್ ಅವರ ಸಂಕಲನ, ನಾಗರಾಜ ಹುಲಿವಾನ್ ಅವರ ಡಿಟಿಎಸ್, ಯೇಷನ್ ಅವರ ವಿಎಫ್‌ಎಕ್ಸ್ ಕೆಲಸವಿದೆ,ಚಂದ್ರಪ್ರಭ,
ಲೋಕೆಶ್ ರಾಜಣ್ಣ,ಉಮೇಶ್ ಕಿನ್ನಾಳ,ಶಿವಮೊಗ್ಗ ರಾಮಣ್ಣ ಮುಂತಾದವರ ತಾರಬಳಗವಿದೆ

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…