ಪ್ರಣವ್ ಆಡಿಯೋ ಕಂಪನಿ ಆರಂಭ.‌

ಮೊದಲ ಹೆಜ್ಜೆಯಾಗಿ “ಸಾಟರ್ಡೆ ನೈಟ್ಸ್” ಆಲ್ಬಂ ಸಾಂಗ್ ಬಿಡುಗಡೆ.

ಕನ್ನಡ ಚಿತ್ರರಂಗದಲ್ಲಿ ಹಾಡುಗಳಿಗೆ ಅದರದೇ ಆದ ಮಹತ್ವವಿದೆ. ಎಷ್ಟೋ ವರುಷ ಕಳೆದರೂ ಇಂಪಾದ ಹಾಡುಗಳು ಇನ್ನೂ ಗುನುಗುವಂತಿದೆ. ಅಷ್ಟೇ ಪ್ರತಿಷ್ಠಿತ ಆಡಿಯೋ ಕಂಪನಿಗಳೂ ಕರ್ನಾಟಕದಲ್ಲಿದೆ. ಜನಮನ ಗಿದ್ದಿದೆ.
ಸಂತೃಪ್ತಿ ಕಂಬೈನ್ಸ್ ಅವರ ಪ್ರಣವ್ ಆಡಿಯೋ ಕಂಪನಿ ಸಹ ಇತ್ತೀಚೆಗೆ ಆರಂಭವಾಗಿದೆ. ಕಂಪನಿಯ ಮೊದಲ ಹೆಜ್ಜೆಯಾಗಿ “ಸಾಟರ್ಡೆ ನೈಟಲಿ” ಎಂಬ ಆಲ್ಬಂ ಸಾಂಗ್ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಸಮರ್ಥನಂ ಸಂಸ್ಥೆಯ ಮಹಂತೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.WhatsApp Image 2022 05 08 at 7.54.31 AM 1

ನನಗೆ ಹಣ ಮಾಡುವ ಉದ್ದೇಶವಿಲ್ಲ.‌ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದಷ್ಟೇ ಉದ್ದೇಶ. ನಮ್ಮ ಪ್ರಣವ್ ಆಡಿಯೋ ಕಂಪನಿಯ ಮೊದಲ ಪ್ರಯತ್ನವಾಗಿ ಈ ಆಲ್ಬಂ ಸಾಂಗ್ ಹೊರತಂದಿದ್ದೀವಿ. ಮುಂದೆ ಸಿನಿಮಾ ನಿರ್ಮಾಣ ಮಾಡುವ ಉದ್ದೇಶವಿದೆ.‌ ಸದ್ಯದಲ್ಲೇ ಈ ಕುರಿತು ಮಾಹಿತಿ ನೀಡುತ್ತೇನೆ ಎಂದರು ಪ್ರಣವ್ ಆಡಿಯೋ ಮಾಲೀಕರಾದ ವಿರೂಪಾಕ್ಷಿ.

“ಸಾಟರ್ಡೆ ನೈಟಲಿ” ಬೆಂಗಳೂರಿನ ಎಂ.ಜಿ.ರಸ್ತೆ ಹಾಗೂ ಚರ್ಚ್ ರಸ್ತೆಯಲ್ಲಿ ಚಿತ್ರೀಕರಣವಾದ ಹಾಡು. ಮುಂದೆ ಚಿತ್ರ ಮಾಡುವ ಉದ್ದೇಶವಿದೆ. ಅದಕ್ಕೂ ಮುಂಚೆ ಈ‌ ಆಲ್ಬಂ ಸಾಂಗ್ ನಿರ್ದೇಶನ ಮಾಡಿದ್ದೀನಿ. “ಇರುವುದೆಲ್ಲವ ಬಿಟ್ಟು” ಸಿನಿಮಾ ಖ್ಯಾತಿಯ ಶ್ರೀ ಹಾಗೂ ಪೂಜಾ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಸಿದ್ದಾರ್ಥ್ ಹಾಡು ಬರೆದು ನಿರ್ಮಾಣ ಮಾಡಿದ್ದಾರೆ. ಪ್ರೇಮ್ ಭರತ್ ಸಂಗೀತ ನೀಡಿದ್ದಾರೆ. ನಾಗರಾಜ್ ಛಾಯಾಗ್ರಹಣ ಮಾಡಿದ್ದಾರೆ. ಶ್ರೇಯಸ್ಸ್ ಭೈರವ್ ನೃತ್ಯ ನಿರ್ದೇಶನವಿರುವ ಈ ಹಾಡನ್ನು ಅನಿರುದ್ಧ್ ಶಾಸ್ತ್ರಿ ಹಾಡಿದ್ದಾರೆ ಎಂದು ಆಲ್ಬಂ ಸಾಂಗ್ ನಿರ್ದೇಶಕ ರವಿಕುಮಾರ್ ಮಾಹಿತಿ ನೀಡಿದರು.WhatsApp Image 2022 05 08 at 7.54.31 AM

ನಾನು “ಇರುವುದೆಲ್ಲವ ಬಿಟ್ಟು” ಹಾಗೂ “ಗಜಾನನ ಗ್ಯಾಂಗ್” ಚಿತ್ರಗಳಲ್ಲಿ ನಟಿಸಿದ್ದೇನೆ. ಇದು ನಾನು ನಟಿಸಿರುವ ಮೊದಲ ಆಲ್ಬಂ ಸಾಂಗ್. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡಿದ ತೃಪ್ತಿಯಿದೆ ಎಂದರು ನಾಯಕ ಶ್ರೀ.

ನಾನು ಮೂಲತಃ ಸಿವಿಲ್ ಎಂಜಿನಿಯರ್. ಹಾಡು ಬರೆಯುವುದು ನನ್ನ ಹವ್ಯಾಸ.‌ ಅನೇಕ ಹಾಡುಗಳನ್ನು ಬರೆದಿದ್ದೇನೆ.‌ ಆದರೆ‌ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಈ ಆಲ್ಬಂ ಸಾಂಗನ್ನು ನಾನೇ ನಿರ್ಮಾಣ ಕೂಡ ಮಾಡಿದ್ದೀನಿ ಎನ್ನುತ್ತಾರೆ ಸಿದ್ದಾರ್ಥ್.WhatsApp Image 2022 05 08 at 7.54.31 AM 2

ಈ ಆಡಿಯೋ ಕಂಪನಿ ಮಾಲೀಕರಾದ ವಿರೂಪಾಕ್ಷಿ ನನ್ನ ಸ್ನೇಹಿತರು. ಒಳ್ಳೆಯ ಉದ್ದೇಶವಿಟ್ಟುಕೊಂಡು ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ. ಇನ್ನೂ ಆಲ್ಬಂ ಸಾಂಗ್ ನ ನಿರ್ಮಾಪಕ ಸಿದ್ದಾರ್ಥ್ ಅವರ ಮಾತು ಕೇಳಿ ಸಂತೋಷವಾಯಿತು. ನಾಯಕ ಶ್ರೀ ಸೇರಿದಂತೆ ಇಡೀ ತಂಡಕ್ಕೆ ಶುಭವಾಗಲಿ ಉಮೇಶ್ ಬಣಕಾರ್.

ನಾಯಕಿ ಪೂಜಾ, ಸಂಗೀತ ನಿರ್ದೇಶಕ ಪ್ರೇಮ್ ಭರತ್, ನಿರ್ಮಾಣ ಉಸ್ತುವಾರಿ ವಹಿಸಿಕೊಂಡಿರುವ ಪ್ರೇಮ್ ಹೊಸ್ಮನಿ, ಪ್ರಣವ್ ಆಡಿಯೋ ಕಂಪನಿ ಬ್ಯುಸಿನೆಸ್ ಹೆಡ್ ರಶ್ಮಿತಾ ಹಾಗೂ ನೃತ್ಯ ನಿರ್ದೇಶಕ ಶ್ರೇಯಸ್ಸ್ ಭೈರವ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…