ಡಬಲ್‌ ಮೀನಿಂಗ್‌ ಜೊತೆ ಸೆಳೆಯುವ ಸೆಂಟಿಮೆಂಟಿನ ಪೆಟ್ರೋಮ್ಯಾಕ್ಸ್!

petromax kannada movie review

Petromax 3.5/5

ಅವರು ಮೂರು ಜನ ಹುಡುಗರು. ಒಬ್ಬಳು ಹುಡುಗಿ. ಕಸದ ತೊಟ್ಟಿ, ಬಸ್ಸು, ಬೋಗಿ ಇತ್ಯಾದಿ ಜಾಗಗಳಲ್ಲಿ ಸಿಕ್ಕವರು. ಅನಾಥಾಶ್ರಮದಲ್ಲಿ ಒಟ್ಟಿಗೇ ಬೆಳೆದವರು. ಮೂರು ಜನ ಹುಡುಗರೊಂದಿಗೇ ಹೆಚ್ಚು ಒಡನಾಟದ ಕಾರಣಕ್ಕೋ ಏನೋ ಹುಡುಗಿ ಕೂಡಾ ಹುಡುಗನಂತೇ ಮಾತಾಡುತ್ತೆ. ಬಾಯಿತುಂಬ ರತಿ ವಿಜ್ಞಾನವನ್ನೇ ತುಂಬಿಕೊಂಡಿರತ್ತೆ.maxresdefault 12

ನಾಲ್ಕೂ ಜನ ಬೆಳೆದು ದೊಡ್ಡವರಾಗಿರುತ್ತಾರೆ. ಬದುಕಿಗಾಗಿ ಒಂದೊಂದು ಪ್ರೊಫೆಷನ್ ಆಯ್ಕೆ ಮಾಡಿಕೊಂಡಿರುತ್ತಾರೆ. ಇನ್ನು ಇಲ್ಲಿಂದ ಜಾಗ ಖಾಲಿ ಮಾಡಿ, ನಿಮ್ಮ ಜೀವನ ನೀವು ರೂಪಿಸಿಕೊಳ್ಳಿ ಅಂತಾ ಅನಾಥಾಶ್ರಮದ ಹಿರಿಯರು ಆಜ್ಞೆ ಹೊರಡಿಸುತ್ತಾರೆ. ಅಲ್ಲಿಂದ ಶುರುವಾಗುತ್ತದೆ ಚತುರ್ಭುಜಗಳ ಚೇಷ್ಟೆ ಪ್ರಸಂಗಗಳು. ಮೂರು ತುಂಡು ಒಂದು ಚೆಂಡಿನ ಜೊತೆಗೆ ಒಂದು ಬೀಜ ಕೂಡಾ ಸೇರಿಕೊಳ್ಳುತ್ತದೆ!petromax kannada movie review

ಮೂವರು ಹುಡುಗರ ಜೊತೆಗೆ ಒಬ್ಬಳು ಹುಡುಗಿ ಇದ್ದಾಳೆ. ಯಾರಿಗೂ ಮದುವೆ ಕೂಡಾ ಆಗಿಲ್ಲ ಅಂದರೆ ಜಗತ್ತಿನ ಲೆಕ್ಕಾಚಾರವೇ ಬೇರೆ. ಮನೆ ಬಾಡಿಗೆಗೆ ಕೊಡಲು ಯಾರೂ ಒಪ್ಪಲ್ಲ. ಈ ಮನೆ ಹುಡುಕಾಟದಲ್ಲಿ ಮನಸ್ಸಿಗೆ ಹತ್ತಿರವಾಗುವವರು ಸಿಗುತ್ತಾರೆ. ಹೆತ್ತವರನ್ನು ಬಿಟ್ಟು ನಡೆದವರು. ಇದ್ದೂ ಇಲ್ಲದವರು, ಯಾರೂ ಇಲ್ಲದೆಯೂ ಎಲ್ಲ ದಕ್ಕಿಸಿಕೊಂಡವರ ಕತೆ ಇಲ್ಲಿ ತೆರೆದುಕೊಳ್ಳುತ್ತದೆ. ಸಿನಿಮಾ ಆರಂಭದಿಂದ ಮುಗಿಯೋತನಕ ಅವರವರ ಆತ್ಮಕತೆಯನ್ನು ಅವರೇ ನಿರೂಪಿಸಿಕೊಳ್ಳುವ ಶೈಲಿಯಲ್ಲೇ ಸಾಗುತ್ತದೆ. ಬೀಜ, ಬ್ರಾ, ಕಾಯಿ, ಕಾಚ, ಕಾಂಡೋಮ್, ರತಿವಿಜ್ಞಾನದಂಥ ಪದಗಳು ಹೇರಳವಾಗಿ ಬಳಕೆಯಾಗಿದೆ. ಒಂದು ವೇಳೆ ಇದನ್ನು ಯಾರಾದರೂ ಅಶ್ಲೀಲ ಅಂತಾ ಭಾವಿಸಿದರೆ ಕೊನೆಯಲ್ಲಿ ಅದಕ್ಕೆ ಉತ್ತರವನ್ನೂ ನೀಡಿದ್ದಾರೆ.petromax kannada movie review

ಪರಮ ಪೋಲಿತನ, ಚೇಷ್ಟೆ ಮಾತುಗಳೊಂದಿಗೆ ಕಾಡುವ ಅಂಶಗಳನ್ನೂ ಸೇರಿಸಿ ಆಡುವ ಬಾಯಿಗೆ ಬೀಗ ಜಡಿಯುವ ತಂತ್ರವನ್ನು ನಿರ್ದೇಶಕ ವಿಜಯ ಪ್ರಸಾದ್ ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದ್ದಾರೆ. ಇಲ್ಲೂ ಅದನ್ನೇ ಮುಂದುವರೆಸಿದ್ದಾರೆ.petromax kannada movie review

ನೀನಾಸಂ ಸತೀಶ್ ಸಹಜ ನಟ. ಜನ ಇವರನ್ನು ಸಾಮಾನ್ಯ ಜನರ ಪ್ರತಿನಿಧಿ ಎನ್ನುವಂತೆ ಸ್ವೀಕರಿಸಿದ್ದಾರೆ. ಇಲ್ಲಿನ ಪಾತ್ರ ಕೂಡಾ ಅದಕ್ಕೆ ಪೂರಕವಾಗೇ ಇದೆ. ಬೊಂಬೆಗಳ ಲವ್ ಅರುಣ್ ಮತ್ತು ನಾಗಭೂಷಣ್ ಕೂಡಾ ಅಷ್ಟೇ ಲೀಲಾಜಾಲವಾಗಿ ಸಿಕ್ಕ ಪಾತ್ರಗಳನ್ನು ಬಡಿದು ಬಾಯಿಗೆ ಹಾಕಿಕೊಂಡಿದ್ದಾರೆ. ಅದ್ಭುತವಾಗಿ ನಟಿಸಿರುವ ಹರಿಪ್ರಿಯಾ ಕಡೆಯಲ್ಲಿ ಮೈಚಳಿ ಬಿಟ್ಟು ಮಲಗಿದರೆ, ಕಾರುಣ್ಯಾ ರಾಮ್ ಬಾಯಿ ಚಳಿ ಬಿಟ್ಟು ಮಾತಾಡಿದ್ದಾರೆ.
ಪಡ್ಡೆಗಳ ಪಾಲಿಗೆ ಪೆಟ್ರೋಮ್ಯಾಕ್ಸ್ ಸುತ್ತಿಟ್ಟ ಪ್ರೆಸೆಂಟೇಶನ್ ಕವರ್ ಥರಾ ಕಲರ್ ಫುಲ್ಲು. ಬಿಚ್ಚಿ ನೋಡುವ ತವಕ ಇರುವವರೆಲ್ಲಾ ನುಗ್ಗಿ ನೋಡಬಹುದು!

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…