ಪುಟಾಣಿ ಕಥೆಯೊಂದನ್ನು ದೀರ್ಘವಾಗಿ ವೃದ್ಧಿಸಿರುವ ಜಮಾಲಿಗುಡ್ಡ

once upon a time in jamaligudda review

Once Upon A Time In Jamaligudda 3/5

ಗುಂಗರು ಕೂದಲು, ತೊದಲು ಮಾತು, ಮುಲ್ಲಂಗಿ ಪ್ಯಾಂಟು, ಕಾಂಟೆಸಾ ಕಾರು – ಹಿಂದಿನ ಸಿನಿಮಾಗೆ ಹೋಲಿಸಿದರೆ ಡಾಲಿ ಹೊಸ ಬಗೆಯಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ!Jamaligudda teaser release, movie release on December 30

ಪುಟಾಣಿ ಕಥೆಯೊಂದನ್ನು ದೀರ್ಘವಾಗಿ ವೃದ್ಧಿಸಿ ದೃಶ್ಯ ರೂಪಕ್ಕೆ ಅಳವಡಿಸಿರುವ ಸಿನಿಮಾ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ. ಎಲ್ಲೆಲ್ಲಿಂದಲೋ ಬಂದ ಪಾತ್ರಗಳು ಜೊತೆಯಾಗುತ್ತವೆ. ಆ ನಂತರ ಅನಿರೀಕ್ಷಿತ ಘಟನೆಗಳಾಗುತ್ತವೆ. ನಡೆಯಬಾರದ್ದೆಲ್ಲಾ ನಡೆದೇ ಹೋಗುತ್ತವೆ. ಯಾವುದೋ ಊರೊಂದರಲ್ಲಿ ಬಾರ್ ಸಪ್ಲೈಯರ್ ಆಗಿರುವ ಹುಡುಗ, ಮಸಾಜ ಪಾರ್ಲರಿನ ಹುಡುಗಿ ಇವರಿಬ್ಬರ ನಡುವಿನ ಲವ್ವು. ದುಷ್ಟ ಹೆಂಗಸೊಬ್ಬಳ ಚಿತಾವಣೆಯಿಂದ ಸೃಷ್ಟಿಯಾಗುವ ಅನಾಹುತಗಳ ಸುತ್ತ ನಡೆಯುವ ಕತೆ ದಿಕ್ಕಾಪಾಲಾಗಿ ಸಂಚರಿಸುತ್ತದೆ. ಪುಟಾಣಿ ಮಗುವೊಂದು ನಡೆಯುವ ಎಲ್ಲ ಘಟನೆಗಳಿಗೆ ಸಾಕ್ಷಿಯಾಗಿ ನಿಲ್ಲುತ್ತದೆ.Jamaligudda teaser release, movie release on December 30

ಜಮಾಲಿಗುಡ್ಡದ ಕುರಿತ ನಿರೂಪಣೆ ಶುರುವಾಗುವುದು ಜೈಲಿನಲ್ಲಿ. ಅಲ್ಲಿ ಹಿರೋಶಿಮಾ-ನಾಗಸಾಕಿ ಎಂಬ ಎರಡು ತದ್ವಿರುದ್ಧ ಪಾತ್ರಗಳು ಒಂದಾಗುತ್ತವೆ. ಮೊದಲು ಬಡಿದಾಡುತ್ತವೆ. ನಂತರ ಒಂದಾಗಿ ಬಿಲ ತೋಡುತ್ತವೆ. ಆಮೇಲೆ ಇನ್ನೇನೋ ಆಗುತ್ತದೆ. ಈ ನಡುವೆ ಲವ್ ಸ್ಟೋರಿಯ ಫ್ಲಾಷ್ ಬ್ಯಾಕ್ ಕೂಡಾ ತೆರೆದುಕೊಳ್ಳುತ್ತದೆ.Jamaligudda teaser release, movie release on December 30

ಜಮಾಲಿಗುಡ್ಡ ಚಿತ್ರದಲ್ಲಿ ಯಶ್ ಶೆಟ್ಟಿ ಎಂದಿನಂತೆ ಅದ್ಭುತ ಅನ್ನಿಸುವಂತೆ ನಟಿಸಿದ್ದಾರೆ. ನಟರಾಕ್ಷಸ ಡಾಲಿ ಎದುರು ನೀನಾ ನಾನಾ ಅಂತಾ ಅಕ್ಷರಶಃ ಅಬ್ಬರಿಸಿದ್ದಾರೆ. ಡಾಲಿ, ಅದಿತಿ ಜೋಡಿ ಕೂಡಾ ಚೆಂದ ಅನ್ನಿಸುತ್ತದೆ. ನಂದಗೋಪಾಲ್ ಮತ್ತು ಪ್ರಕಾಶ್ ಬೆಳವಾಡಿ ನಟನೆ ಅಂದರೆ ಹೀಗಿರಬೇಕು ಅನ್ನೋದನ್ನಿಲ್ಲಿ ತೋರಿಸಿದ್ದಾರೆ. ಭಾವನಾ ʻಭಯಂಕರʼರದ ಜೊತೆಗೆ ʻಮಾದಕತೆʼಯನ್ನು ಮಿಕ್ಸ್ ಮಾಡಿ ನಟಿಸಿದ್ದಾರೆ. ಬ್ಯೂಟಿಫುಲ್ ಕ್ಯಾಮೆರಾ ವರ್ಕ್ ಇಲ್ಲಿದೆ. ಎಲ್ಲವೂ ಇರುವ ಜಮಾಲಿಗುಡ್ಡದಲ್ಲಿ ಇನ್ನೇನೋ ಬೇಕಿತ್ತು ಅನ್ನುವ ಕೊರತೆಯೂ ಸ್ವಲ್ಪ ಹೆಚ್ಚೇ ಇದೆ.Jamaligudda teaser release, movie release on December 30

ಈ ಚಿತ್ರದ ನಿರ್ದೇಶಕ ಕುಶಾಲ್ ಗೌಡ ತಮ್ಮ ಹಿಂದಿನ ಚಿತ್ರದಲ್ಲೂ ಮಿಸ್ ಫೈರ್ ಕಾನ್ಸೆಪ್ಟನ್ನು ಮುಟ್ಟಿದ್ದರು. ಮತ್ತೆ ಅದೇ ಬೆಟ್ಟ ಗುಡ್ಡ, ಮಿಸ್ ಫೈರ್ ಇಲ್ಲೂ ಮುಂದುವರೆದಿದೆ. ಅನೂಪ್ ಸಿಳೀನ್ ಮತ್ತು ಅರ್ಜುನ್ ಜನ್ಯ ಇಬ್ಬರೂ ಇದ್ದು ಸಂಗೀತ-ಹಿನ್ನೆಲೆ ಸಂಗೀತಗಳೆರೆಡೂ ಸಪ್ಪೆ ಅನ್ನಿಸುತ್ತದೆ.Jamaligudda teaser release, movie release on December 30

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…