ನವೆಂಬರ್‌ ಮಳೆಯಲ್ಲಿ ನಾಗಶೇಖರ್ ಪ್ರೇಮಕಥೆ

november malayil naanum avalum movie

ಸಂಜು ವೆಡ್ಸ್ ಗೀತಾ, ಮೈನಾ, ಅಮರ್ ನಂಥಾ ಅದ್ಭುತ ದೃಶ್ಯಕಾವ್ಯಗಳನ್ನು ಕನ್ನಡ ಬೆಳ್ಳಿ ತೆರೆಗೆ ಕೊಡುಗೆಯಾಗಿ ನೀಡಿದ ನಾಗಶೇಖರ್ ಈಗೇನು ಮಾಡ್ತಿದ್ದಾರೆ ಎನ್ನುವ ಪ್ರಶ್ನೆಗೆ ಅವರೇ ಮಾಧ್ಯಮದ ಮುಂದೆಬಂದು ಉತ್ತರ ನೀಡಿದ್ದಾರೆ. ನಾಗಶೇಖರ್ ನಾಯಕನಾಗಿ ನಟಿಸಿ, ನಿರ್ದೇಶಿಸುತ್ತಿರುವ “ನವೆಂಬರ್ ಮಳೆಯಲ್ ನಾನುಂ ಅವಳುಂ” ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಬೆಂಗಳೂರಿನ ಮಿನರ್ವ ಮಿಲ್ ಆವರಣದಲ್ಲಿ ತಮ್ಮ ಮುಂಬರುತ್ತಿರುವ ಪ್ರಾಜೆಕ್ಟ್‌ ಗಳ ಬಗ್ಗೆ ವಿವರಿಸಿದರು.WhatsApp Image 2022 08 18 at 11.50.11 PM

ಮಳೆಯ ಸೀನೊಂದರ ಚಿತ್ರೀಕರಣ ನಡೆಸಿದ ನಂತರ ನಡೆದ ಅಲ್ಲೇ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ತಂಡದ ಜೊತೆ ಸಂಪೂರ್ಣ ಮಾಹಿತಿ ನೀಡಿದರು. ತಮಿಳು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಕನ್ನಡ ಹಾಗೂ ತೆಲುಗಿಗೆ ಡಬ್ ಆಗಲಿದೆ. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಸೆನ್ಸಾರ್ ಶಿವು, ಫೋಲೀಸ್ ಕಮೀಷನ್ ಪಾತ್ರ ಮಾಡುತ್ತಿರುವ ಸುಮನ್ ರಂಗನಾಥ್, ಏಳು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಡೆಲ್ಲಿ ಗಣೇಶ್, ಅರ್ಜುನ್, ರಾಜಶೇಖರ್, ರಾಜಶೇಖರ ರೆಡ್ಡಿ, ಸಹನಿರ್ಮಾಪಕರಾದ ನಾಗೇಂದ್ರ ಶೆಟ್ಟಿ, ಛಾಯಾಗ್ರಾಹಕ ಸತ್ಯ ಹೆಗ್ಡೆ ಮುಂತಾದವರು ಹಾಜರಿದ್ದು ಮಾತನಾಡಿದರು.november malayil naanum avalum movie

ಇದು ಮಳೆಗಾಲದಲ್ಲಿ ನಡೆಯೋ ಪ್ರೇಮಕಥೆ. ತಮಿಳುನಾಡಲ್ಲಿ ನವೆಂಬರ್‌ ನಲ್ಲಿ ಭಾರೀಮಳೆ, ಹಾಗಾಗಿ ಈ ಚಿತ್ರಕ್ಕೆ ನವೆಂಬರ್ ಮಳೆಯಲ್ ನಾನುಂ ಅವಳುಂ ಶೀರ್ಷಿಕೆ ಇಟ್ಟಿದ್ದೇನೆ. ಮೊದಲು ಈ ಕಥೆಯನ್ನು ಬೇರೆ ಹೀರೋಗಾಗಿ ಮಾಡಿದ್ದೆ. ಇಲ್ಲಿ ನಾಯಕನಿಗೆ ಸೀಳುತುಟಿಯಿರುತ್ತೆ. ಆತನಿಗೆ ತಾನೊಬ್ಬ ದೊಡ್ಡ ಸಿಂಗರ್ ಆಗಬೇಕೆಂಬ ಕನಸು. ಆತನ ಜೀವನದಲ್ಲೊಂದು ಲವ್ ಸ್ಟೋರಿ. ಇದು ಚಿತ್ರದ ಕಂಟೆಂಟ್. ಆ ನಾಯಕ ಈ ಕಥೆ ಮಾಡಿದರೆ ಸೆನ್ಸಾರ್ ನಿಂದ ಪ್ರಾಬ್ಲಂ ಆಗಬಹುದು ಎಂದಾಗ ನಾನು ಸ್ನೇಹಿತ ಸೆನ್ಸಾರ್ ಶಿವು ಬಳಿ ಚರ್ಚಿಸಿದೆ. ಈ ಕಥೆ ಕೇಳಿದ ಶಿವು ಇದರಲ್ಲಿ ನೀನೇ ಹೀರೋ ಆದ್ರೆ ಚೆನ್ನಾಗಿರುತ್ತೆ ಎಂದರು. ನನ್ನ ಮೇಲೆ ಯಾರಪ್ಪ ಬಂಡವಾಳ ಹಾಕ್ತಾರೆ ಎಂದಾಗ, ಬೇರೆ ಯಾಕೆ ನಾನೇ ಹಾಕ್ತೇನೆ ಎಂದು ಈಗವರೇ ಪ್ರೊಡ್ಯೂಸ್ ಮಾಡ್ತಿದ್ದಾರೆ. ನಾಗೇಂದ್ರ ಶೆಟ್ಟರೂ ಜೊತೆಗೆ ಕೈಜೋಡಿಸಿದ್ದಾರೆ. ತಮಿಳಲ್ಲಿ ಈ ಥರದ ಕಥೆಯನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬ ಕಾರಣಕ್ಕೆ ಮೊದಲು ತಮಿಳಲ್ಲಿ ಮಾಡುತ್ತಿದ್ದೇನೆ. ಅಲ್ಲದೆ ನವೆಂಬರ್ 11ಕ್ಕೇ ಚಿತ್ರವನ್ನು ರಿಲೀಸ್ ಮಾಡುತ್ತಿದ್ದೇವೆ.november malayil naanum avalum movie

ಮಲಯಾಳಂನ ಅನು ಸಿತಾರಾ ನಾಯಕಿ ಪಾತ್ರ ಮಾಡಿದ್ದು, ಏಳು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಡೆಲ್ಲಿ ಗಣೇಶ್, ದತ್ತಣ್ಣ, ರಂಗಾಯಣ ರಘು ಕೂಡ ಅಭಿನಯಿಸಿದ್ದಾರೆ. ಐಡಿಯಲ್ ಹೋಮ್ಸ್‌ ನ ರಾಜಶೇಖರ್ ಅವರು ಸಿಎಂ ಪಾತ್ರ ಮಾಡಿದ್ದಾರೆ, ಶಬ್ಬೀರ್ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದು, ಮದನ್ ಕಾರ್ಕಿ(ವೈರಮುತ್ತು ಮಗ) ಸಾಹಿತ್ಯ ಬರೆದಿದ್ದಾರೆ. ವೇಣು ವೇಲ್ ಮುರುಗನ್ ಕೋಪ್ರೊಡ್ಯೂಸರ್ ಆಗಿದ್ದಾರೆ. ಇದರ ಜೊತೆಗೆ ಲವ್ ಮಾಕ್ಟೇಲ್ ನ ತೆಲುಗು ವರ್ಷನ್ ಕೂಡ ರೆಡಿಯಾಗಿದೆ. ಅದರಲ್ಲಿ ಸತ್ಯದೇವ್ ಹೀರೋ ಪಾತ್ರ ಮಾಡಿದ್ದು, ತಮನ್ನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಭಾವನಾರವಿ ಪ್ರೊಡ್ಯೂಸ್‌ ಮಾಡಿದ್ದಾರೆ ಎಂದು ವಿವರಿಸಿದರು. ಎ2 ಮ್ಯೂಸಿಕ್‌ ನವರು ಹಾಡುಕೇಳಿ ಅರ್ಧಕೋಟಗೆ ಆಡಿಯೋ ರೈಟ್ಸ್ ತಗೊಂಡಿದ್ದಾರೆ. 3 ಕೋಟಿಗೆ ಹಿಂದಿ ರೈಟ್ಸ್ ಮಾರಾಟವಾಗಿದೆ ಎಂಬ ಮಾಹಿತಿಯನ್ನೂ ನೀಡಿದರು.

ನಟಿ ಸುಮನ್ ರಂಗನಾಥ್ ಮಾತನಾಡಿ ನಾಗಶೇಖರ್ ಕಾಲ್ ಮಾಡಿ ಈ ಪೋಲಿಸ್ ಕಮೀಷನರ್ ಪಾತ್ರದ ಬಗ್ಗೆ ಹೇಳಿದರು. ಚಿಕ್ಕದಾದರೂ ಪ್ರಮುಖ ಪಾತ್ರ, ಯೂನಿಫಾರ್ಮ್ ಹಾಕಿದಕೂಡಲೇ ಅದೇನೋ ಪವರ್ ಬಂದುಬಿಡುತ್ತೆ ಎಂದು ಹೇಳಿದರು. ಹಿರಿಯ ಕಲಾವಿದ ಡೆಲ್ಲಿ ಗಣೇಶ್ ಮಾತನಾಡಿ ಸೌತ್ ಇಂಡಿಯಾ ಸಿನಿಮಾಗಳು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿವೆ. 47ವರ್ಷಗಳಿಂದ ಬಣ್ಣ ಹಚ್ಚುತ್ತಿದ್ದೇನೆ. ಇದರಲ್ಲೊಂದು ಸಾಫ್ಟ್ ನೇಚರ್ ವ್ಯಕ್ತಿಯಪಾತ್ರ ಮಾಡಿದ್ದೇನೆ ಎಂದು ಹೇಳಿದರು. ನಟ ಅರ್ಜುನ್ ಮಾತನಾಡಿ ನಾಗಶೇಖರ್ ಮುಹೂರ್ತಕ್ಕೆ ಕರೆದಿದ್ದರು. ಚಿತ್ರದಲ್ಲಿ ಒಬ್ಬ ಇನ್ವೆಸ್ಟಿಗೇಶನ್ ಆಫೀಸರ್ ಪಾತ್ರ ಮಾಡಿದ್ದೇನೆ ಎಂದರು. ನಿರ್ಮಾಪಕರಾದ ಶಿವು, ನಾಗೇಂದ್ರ ಶೆಟ್ಟಿ, ಅಲ್ಲದೆ ತೆಲುಗು ನಿರ್ಮಾಪಕರೂ ಸಹ ತಮ್ಮ ಅಭಿಪ್ರಾಯ ಹಂಚಿಕೊಂಡರು.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…