ಸಿನಿಮಾರಂಗದಲ್ಲೀಗ NFT ಜಮಾನ ಶುರುವಾಗಿದೆ. ಏನಿದು NFT? ಹೇಗೆ ಕೆಲಸ ಮಾಡುತ್ತದೆ?

ಸಿನಿಮಾರಂಗದಲ್ಲೀಗ NFT ಜಮಾನ ಶುರುವಾಗಿದೆ. ಸ್ಟಾರ್​ ಹೀರೋಗಳು ನಟಿಸೋ ತಮ್ಮ ಸಿನಿಮಾದಲ್ಲಿ ಬಳಸಿದ ಬೈಕ್ ಕಾರು. ಗನ್​​ ಆ ಹೀರೋ ಪ್ರತಿಮೆ ಇತ್ಯಾದಿ ವಸ್ತುಗಳನ್ನ ಸೇಮ್​ ಟು ಸೇಮ್​​ ಮಾಡಿ ಮಾರುಕಟ್ಟೆಗೆ ಮಾರಾಟಕ್ಕೆ ಬಿಡೋ ಪದ್ಧತಿ ಈಗ ಚಿತ್ರರಂಗದಲ್ಲಿ ಶುರುವಾಗಿದೆ. ಅಷ್ಟಕ್ಕೂ NFT ಎಂದರೇನು ಅನ್ನುವುದು ತಿಳಿಯೋಣಾ ಬನ್ನಿ.WhatsApp Image 2022 07 13 at 10.55.07 PM

ಏನಿದು NFT? ಹೇಗೆ ಕೆಲಸ ಮಾಡುತ್ತದೆ?

ಡಿಜಿಟಲ್‌ ಸ್ವರೂಪಕ್ಕೆ ಪರಿವರ್ತಿಸಬಹುದಾದ ಪೇಂಟಿಂಗ್‌, ಫೋಟೋ, ವಿಡಿಯೋ, ಜಿಫ್‌, ಸಂಗೀತ, ಸೆಲ್ಫಿ, ಟ್ವೀಟ್‌ ಅನ್ನು ಕೂಡ ಎನ್‌ಎಫ್‌ಟಿ ಮಾಡಬಹುದು. ಎನ್‌ಎಫ್‌ಟಿಗಳು ಬ್ಲಾಕ್‌ಚೈನ್‌ ವ್ಯವಹಾರದ ಮೂಲಕ ನಡೆಯುತ್ತವೆ. ಬ್ಲಾಕ್‌ಚೈನ್‌ ಎಂದರೆ ಒಂದು ನಿಮ್ಮ ಬ್ಯಾಂಕ್‌ ಪಾಸ್‌ಬುಕ್‌ನಂಥ, ಎಲ್ಲ ವಹಿವಾಟುಗಳೂ ದಾಖಲಿಸಲಾಗಿರುವ ಡಿಜಿಟಲ್‌ ಲೆಡ್ಜರ್‌. ಇದಕ್ಕೆ ನಿಮ್ಮ ಮಾಲಿಕತ್ವದ ಪ್ರಮಾಣಪತ್ರವನ್ನು ಬ್ಲಾಕ್‌ಚೈನ್‌ ನಿಗದಿಪಡಿಸುತ್ತದೆ. ಇದು ಒಂದು ರೀತಿ ಕಾಪಿರೈಟ್‌ ಇದ್ದಂತೆ. ಸಾಮಾನ್ಯವಾಗಿ ನಾವು ಗೂಗಲ್‌ನಲ್ಲಿ ನಮಗೆ ಬೇಕಾದ ಫೋಟೋವನ್ನು ಹುಡುಕಿ, ಅವುಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುತ್ತೇವೆ ಅಥವಾ ಡೌನ್‌ಲೋಡ್‌ ಮಾಡಲು ಸಾಧ್ಯವಿಲ್ಲ ಎಂದರೆ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುತ್ತೇವೆ. ಹೀಗೇ ಸುಲಭವಾಗಿ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಬಹುದಲ್ಲವೇ? ಇವುಗಳಿಗೆ ಕೋಟ್ಯಂತರ ಹಣ ನೀಡುವ ಅಗತ್ಯವಿದೆಯೇ ಎಂದು ಅನಿಸಬಹುದು. ಆದರೆ ಹಾಗೆ ಮಾಡಿದರೆ ಅದು ನಮ್ಮದಾಗದು. ಕಾಪಿರೈಟ್‌ ಇರುವ ಚಿತ್ರವನ್ನು ಹಣ ಕೊಟ್ಟು ಎಷ್ಟು ಮಂದಿ ಬೇಕಾದರೂ ಖರೀದಿಸಬಹುದು. ಆದರೆ ಅದರ ಮೌಲ್ಯ ನೀಡಿ ಒಬ್ಬ ಮಾತ್ರವೇ ಖರೀದಿಸಬಹುದು.WhatsApp Image 2022 07 13 at 10.55.08 PM


ಎನ್‌ಎಫ್‌ಟಿಗಳನ್ನು ಬದಲಾಯಿಸಲಾಗದಿರುವುದು ಎಂಬುದಾಗಿ ಪರಿಗಣಿಸಲಾಗಿದೆ, ಏಕೆಂದರೆ ಅದು ಅನನ್ಯ ಅಂಶಗಳನ್ನು ಒಳಗೊಂಡಿವೆ, ಹಾಗಾಗಿ ಅದನ್ನು ಬೇರೆ ಯಾವುದೇ ಸರಕು ಇಲ್ಲವೇ ಸ್ವತ್ತಿನೊಂದಿಗೆ ವಿನಿಮಯ ಮಾಡಿಕೊಳ್ಳಲಾಗುವುದಿಲ್ಲ. ಇದು ಒಂದು ಮನೆಯಾಗಿರಬಹುದು ಇಲ್ಲವೇ ಚಿತ್ರಕಲೆಯಾಗಿರಬಹುದು. ನೀವು ಚಿತ್ರಕಲೆಯ ಫೋಟೋ ತೆಗೆಯಬಹುದು ಅಥವಾ ಅದರ ಪ್ರಿಂಟ್ ಖರೀದಿಸಬಹುದು. ಆದರೆ ಮೂಲ ಚಿತ್ರಕಲೆ ಒಂದೇ ಆಗಿರುತ್ತದೆ. ಅದಕ್ಕೆ ಸಮಾನವಾದುದು ಇನ್ನೊಂದಿರುವುದಿಲ್ಲ.nfttt

ಮಾರ್ವೆಲ್ಸ್ ಸಿನಿಮಾ ಬಳಿಕ ಭಾರತೀಯ ಸಿನಿಮಾಗಳು NFT ಮಾರುಕಟ್ಟೆಯಲ್ಲಿ ರಾರಾಜಿಸಲು ಸಿದ್ಧವಾಗಿವೆ. ಪ್ಯಾನ್ ಇಂಡಿಯಾ ಸಿನಿಮಾ ಕಾನ್ಸೆಪ್ಟ್ ನಡಿ ಡಿಜಿಟಲ್ ಲೋಕದಲ್ಲಿ NFT ಹೊಸ ಕ್ರಾಂತಿಗೆ ನಾಂದಿ ಹಾಡಲು ಸಜ್ಜಾಗಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ವೊಬ್ಬರು ತಮ್ಮದೇ ಸ್ವತಃ ಮಾರುಕಟ್ಟೆಯಲ್ಲಿ ಸಿನಿಮಾ ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ NFT ವಲಯದಲ್ಲಿ ಭಾರತೀಯ ಚಿತ್ರರಂಗ ದಾಖಲೆ ಬರೆಯುವ ನಿರೀಕ್ಷೆಯಲ್ಲಿದೆ.TMS58vwwAvZZDct5fbgv

NFTಯಲ್ಲಿ ಬಿಡುಗಡೆಯಾಲಿವೆ ಈ ಸಿನಿಮಾಗಳು?

ಕೆಜಿಎಫ್ ಬಳಿಕ NFT ವಲಯಕ್ಕೆ ಸದ್ಯ ಪ್ಯಾನ್ ಇಂಡಿಯಾ ಸಿನಿಮಾ ರಾಕೆಟ್ರಿ ಪ್ರವೇಶಿಸಿದೆ. ಇದಾದ ಬಳಿಕ ಲಾಲ್ ಸಿಂಗ್ ಚಡ್ಡಾ, ಸಲಾರ್, ಆದಿಪುರುಷ, ಬ್ರಹ್ಮಾಸ್ತ್ರ ಸೇರಿದಂತೆ ಹಲವು ಸಿನಿಮಾಗಳು ಎಂಟ್ರಿ‌ ಕೊಡಲಿವೆ ಎನ್ನಲಾಗ್ತಿದೆ. ಕೇವಲ ಪ್ಯಾನ್ ಇಂಡಿಯಾ ಸಿನಿಮಾ ಮಾತ್ರವಲ್ಲ ಸ್ಯಾಂಡಲ್ ವುಡ್ ಚಿತ್ರರಂಗ ಕೂಡ NFT ಮಾರುಕಟ್ಟೆಯನ್ನು‌ ನಿರೀಕ್ಷಿಸುತ್ತಿದೆ. ಮೆಟಾವರ್ಸ್ ಮೂಲಕ ತಮ್ಮ ನೆಚ್ಚಿನ ಸ್ಟಾರ್ಸ್ ಭೇಟಿಯಾಗಲು‌ ಫ್ಯಾನ್ಸ್ ಕಾತುರರಾಗಿದ್ದಾರೆ. ದುಬೈ ಟೆಕ್ ಕಂಪನಿಯೊಂದು ಇಂಡಿಯನ್ ಸ್ಟಾರ್ ಜೊತೆ ಕೈ ಜೋಡಿಸಿದ್ದು, NFT ಮಾರುಕಟ್ಟೆಗೆ ಕನ್ನಡ ಚಿತ್ರರಂಗ ಉತ್ತಮ ವೇದಿಕೆಯಾಗಿದೆ.9dc1928a9ac810e90d6aa64e1bf14011

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…