ಪ್ರಥಮ್ ಭಯಂಕರ ಪವಾಡ ಮಾಡಬಹುದಾ?

nata bhayankara kannada movie review

ಪ್ರಥಮ್ ಪಾಲಿಗೆ ʻಇರು. ಇಲ್ಲಾಂದ್ರೆ ಎದ್ನಡಿʼ ಎನ್ನುವಂತಾ ಪರಿಸ್ಥಿತಿ ಎದುರಾಗಿದೆ. ನಟ ಭಯಂಕರ ಎನ್ನುವ ಸಿನಿಮಾ ರೂಪಿಸಿ, ತೆರೆಗೆ ತರೋತನಕ ಪ್ರಥಮ್ ಪಟ್ಟಿರುವ ಪಾಡು ಅಷ್ಟಿಷ್ಟಲ್ಲ. ಸಿನಿಮಾ ಆರಂಭಿಸಿದ ಹೊತ್ತಿಗೇ ಕೋವಿಡ್ಡು ಕೋವಿಯಲ್ಲಿ ತಿವಿದಿತ್ತು. ನಂತರ ಚಿತ್ರವನ್ನು ಕಂಪ್ಲೀಟ್ ಮಾಡಲು ಹರಸಾಹಸ ಪಟ್ಟರು. ಎಲ್ಲೆಲ್ಲಿಂದಲೋ ದುಡ್ಡು ಹೊಂಚಿ ತಂದು ಸಿನಿಮಾ ಮುಗಿಸಿದರು.nata bhayankara kannada movie review

ಬಿಗ್ ಬಾಸು ಸೇರಿದಂತೆ ಇತ್ಯಾದಿ ಶೋಗಳಲ್ಲಿ ಪ್ರಥಮನನ್ನು ನೋಡಿದ ಜನ ಭಾವಿಸಿರೋದಕ್ಕೂ ಇವರ ಒರಿಜಿನಲ್ ವ್ಯಕ್ತಿತ್ವಕ್ಕೂ ತುಂಬಾನೇ ಡಿಫರೆನ್ಸ್ ಇದೆ. ಕ್ಯಾಮೆರಾ ನೋಡಿದೇಟಿಗೆ ಬಡಬಡ ಮಾತಾಡುವ ಪ್ರಥಮ್ ವಾಸ್ತವವಾಗಿ ಗಂಭೀರವಾಗಿ ಚಿಂತಿಸುವ, ದೂರಾಲೋಚನೆಯ ಮನುಷ್ಯ. ಮೇಲ್ನೋಟಕ್ಕೆ ಗಮನಿಸಿದವರು ʻಪೆಕರ, ಬಕರಾʼ ಅಂತೆಲ್ಲಾ ಲೇವಡಿ ಮಾಡುವುದಿದೆ. ಆದರೆ, ಯಾವ ಕಾರಣಕ್ಕೂ ಪ್ರಥಮ್ ಹಾಗಲ್ಲ. ವಿಪರೀತ ಜ್ಞಾಪಕ ಶಕ್ತಿಯಿರುವ ವ್ಯಕ್ತಿ. ಕಳೆದ ಜನ್ಮದಲ್ಲಿ ಯಾರಾದರೂ ಆಡಿದ ಮಾತನ್ನು ಈ ಜನ್ಮದಲ್ಲೂ ನೆನಪಿಟ್ಟುಕೊಳ್ಳುವ ಜಾಣ. ʻನಾನು ಹೀಗಿದ್ದರೇನೆ ಜನ ಇಷ್ಟಪಡೋದು.ʼ ಎನ್ನುವ ತಪ್ಪು ಕಲ್ಪನೆ ಅಥವಾ ಮಾರ್ಕೆಟಿಂಗ್ ಸ್ಟಾಟರ್ಜಿಯಿಂದಲೋ ಪ್ರಥಮ್ ಲೋಕದ ಕಣ್ಣಿಗೆ ಬೇರೆಯದ್ದೇ ಬಗೆಯಲ್ಲಿ ಅನಾವರಣಗೊಳ್ಳುತ್ತಿದ್ದಾರೆ.nata bhayankara kannada movie review

ಮೊದಲೆಲ್ಲಾ ಪ್ರಚಾರವೊಂದರಿಂದಲೇ ಎಲ್ಲವನ್ನೂ ಸಾಧಿಸಬಲ್ಲೆ ಎನ್ನುವ ರೀತಿ ವರ್ತಿಸುತ್ತಿದ್ದ ಈ ನಟ ಭಯಂಕರ ಕ್ರಮೇಣ ಸಾಕಷ್ಟು ಬದಲಾಗಿದ್ದಾರೆ. ಇವತ್ತಿಗೂ ಪ್ರಥಮ್ ಸಿನಿಮಾ ಮಾಡುವುದಾದರೆ ದುಡ್ಡು ಹಾಕೋರು ಸಾಕಷ್ಟು ಜನ ಇದ್ದಾರೆ. ಆದರೆ ಈ ಸಲ ನೀಲೇಶ್ ಮತ್ತು ವಿಜಯೇಂದ್ರ ಒಡೆಯರ್ ಜೊತೆ ಸೇರಿ ಸಿನಿಮಾ ಆರಂಭಿಸಿದರು. ನಟ ಭಯಂಕರ ಅಂದುಕೊಂಡಿದ್ದಕ್ಕಿಂತಾ ಹೆಚ್ಚು ದುಡ್ಡು ತಿಂದುಬಿಟ್ಟ. ಗ್ರಾಫಿಕ್ಸ್ ಕೆಲಸಕ್ಕೇ ಸಿಕ್ಕಾಪಟ್ಟೆ ಖರ್ಚಾಯ್ತು. ಸಿನಿಮಾವೊಂದಕ್ಕೆ ಪ್ರಥಮ್ ಪಡುತ್ತಿರುವ ಪಾಡು ಕಂಡು ಧ್ರುವಾ ಸರ್ಜಾ ಸಹಾಯ ಹಸ್ತ ಚಾಚಿದರು. ತಮ್ಮ ಕೈಯಿಂದ ಇಪ್ಪತ್ತು ಲಕ್ಷ ರುಪಾಯಿ ಕೊಟ್ಟು ಸಿನಿಮಾದ ಪಬ್ಲಿಸಿಟಿ ಇತ್ಯಾದಿಗಳನ್ನು ಧೃವ ನೆರವೇರಿಸಿದ್ದಾರೆ.nata bhayankara kannada movie reviewಸ್ವತಃ ಧೃವಾ ಬಂದು ಬೆನ್ನಿಗೆ ನಿಂತಿದ್ದಾರೆ ಅಂದರೆ, ನಟ ಭಯಂಕರ ಸಿನಿಮಾ ಒಂದು ಮಟ್ಟಕ್ಕೆ ಗುಣಮಟ್ಟ ಹೊಂದಿರುತ್ತದೆ ಅಂತಾ ತಾನೆ ಅರ್ಥ. ಎಲ್ಲದರ ಜೊತೆಗೆ ಸದ್ಯ ಪ್ರಥಮನ ನಟ ಭಯಂಕರನಿಗೆ ಯಾವ ಪ್ರತಿಸ್ಪರ್ಧಿಯೂ ಇಲ್ಲ. ಬಾಲಿವುಡ್, ಟಾಲಿವುಡ್, ಕಾಲಿವುಡ್ಡಿನ ಸಿನಿಮಾಗಳು ಎರಡು ವಾರಕ್ಕೆ ಮುನ್ನವೇ ಬಂದು ಹೋಗಿವೆ. ದರ್ಶನ್ ಅವರ ಕ್ರಾಂತಿ ಕೂಡಾ ಕಳೆದವಾರವೇ ಪ್ರದರ್ಶನ ಕಂಡಿದೆ. ಹೀಗಿರುವಾಗ ಈ ವಾರ ಯಾವ ದೊಡ್ಡ ಎದುರಾಳಿ ಸಿನಿಮಾಗಳೂ ನಟ ಭಯಂಕರನ ಜೊತೆಗೆ ಬರುತ್ತಿಲ್ಲ. ಸದ್ಯ ಜನ ನಾನಾ ರೀತಿಯ ಸಿನಿಮಾಗಳನ್ನು ನೋಡಿ ಸುಸ್ತಾಗಿದ್ದಾರೆ. ಈಗ ಮಾನಸಿಕ ನೆಮ್ಮದಿಗಾಗಿ ಅಪ್ಪಟ ಮನರಂಜನೆಯ ಸಿನಿಮಾವೊಂದರ ಅಗತ್ಯವಿದೆ. ಕಾಮಿಡಿ ಮತ್ತು ಹಾರರ್ ಹಂದರವನ್ನು ಒಂದೇ ಗುಕ್ಕಿಗೆ ಹಿಡಿದಿಟ್ಟಿದ್ದಾರೆ. ರಿಲೀಸಾಗಿರುವ ಟ್ರೇಲರ್, ಸದ್ಯದ ಪ್ರಚಾರದ ಭರಾಟೆ ನೋಡಿದರೆ ಈ ನಟ ಭಯಂಕರವಾಗಿ ಸೌಂಡು ಮಾಡುವ ಲಕ್ಷಣಗಳು ಕಾಣುತ್ತಿವೆ….!

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…