ದೋಸ್ತಿ ಆನಂದ್‌ ರೂಪಿಸಿದ ಪಂಖುರಿ!

Nange Yaru Illa Illi Song Pankhuri Movie

ನಿಂತ ನೆಲವೇ ಕುಸಿದಂತಿದೆ… ಕಂಡ ಕನಸು ಹುಸಿಯಾಗಿದೆ… ಇಂದೇ ಸಾವು ಬಂದು ಬಿಡಲಿ… ಯಾಕೀ ಬದುಕು…

– ಎದೆ ಭಾರವಾಗಿಸುವ ಈ ಸಾಲುಗಳನ್ನು ಗಾಯಕ ರಾಜೇಶ್ ಕೃಷ್ಣನ್ ಅವರ ದನಿಯಲ್ಲಿ ಕೇಳಿದರೆ ಹೇಗಿರುತ್ತೆ? ಪಂಖುರಿ ಹೆಸರಿನ ಸಿನಿಮಾವೊಂದು ಬರುತ್ತಿದೆ. ದೋಸ್ತಿ ಆನಂದ್ ನಿರ್ದೇಶನದ ಈ ಸಿನಿಮಾದ ಹಾಡೊಂದು ಸದ್ಯ A2 music ನಲ್ಲಿ ಅನಾವರಣಗೊಂಡಿದೆ. ಎಂಥವರನ್ನೂ ಭಾವತೀವ್ರತೆಗೆ ಕೊಂಡೊಯ್ಯುವ ಸಾಲುಗಳು ಮತ್ತು ರಾಜೇಶ್ ಕೃಷ್ಣನ್ ಅವರ ಭಾವ ತುಂಬಿದ ದನಿಯ ಈ ಹಾಡು ಸದ್ಯ ಎಲ್ಲೆಲ್ಲೂ ಮಾರ್ದನಿಸುತ್ತಿದೆ. ಈ ಗೀತೆಯನ್ನು ಹಾಡಿರುವ ರಾಜೇಶ್ ಕೃಷ್ಣನ್ ಅವರೇ ʻʻಸಾಹಿತ್ಯದ ಸಾಲುಗಳನ್ನು ಹಾಡುವಾಗ ನಾನೇ ಗದ್ಗದಿತನಾಗಿದ್ದೆ. ದನಿ ಹೊಮ್ಮದಂತಾಗಿತ್ತು. ಕಣ್ಣು ತೇವವಾಗಿಸಿಕೊಂಡು ಹಾಡಿದ್ದೆ. ಇವತ್ತು ಜನ ಕೂಡಾ ಅಷ್ಟೇ ಭಾವ ಪರವಶರಾಗಿ ಈ ಹಾಡನ್ನು ಆಲಿಸುತ್ತಿದ್ದಾರೆʼ ಎಂದು ಹೇಳಿದ್ದಾರೆ.Nange Yaru Illa Illi Song Pankhuri Movie

ಕುಂದನಾ ನಟಿಸಿರುವ ಪಂಖುರಿ ಸಿನಿಮಾ ಮಹಿಳಾ ದೌರ್ಜನ್ಯದ ವಿರುದ್ಧದ ಕತೆ ಹೊಂದಿದೆ. ಚಿತ್ರದಲ್ಲಿ ಒಂಟಿ ಹೆಣ್ಣೊಬ್ಬಳು ಸಮಾಜದಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾಳೆ ಅನ್ನೋ ವಿಚಾರವನ್ನು ಸವಿವರವಾಗಿ ಬಿಚ್ಚಿಡಲಾಗಿದೆ. ಈ ಸಿನಿಮಾದಲ್ಲಿ ಕುಂದನಾ ಜತೆ ಶಶಿಶೇಖರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಒಂದೊಳ್ಳೆ ಪಾತ್ರದ ನಿರೀಕ್ಷೆಯಲ್ಲಿದ್ದ ನನಗೆ ಉತ್ತಮ ಅವಕಾಶ ದೊರಕಿದೆ ಎಂದು ಯುವ ನಟಿ ಕುಂದಾನ ಹೇಳಿದ್ದಾರೆ. ಪ್ರಕೃತಿ ಪಿಕ್ಚರ್ಸ್ ಬ್ಯಾನರ್ ನಲ್ಲಿ , ಅಫ್ಜಲ್ ಅವರ ಸಹಯೋಗದೊಂದಿಗೆ ಸಿನಿಮಾ ನಿರ್ಮಾಣದ ಮೂಲಕ ಯುವ ನಿರ್ಮಾಪಕಿ ಆಗಿಯೂ ಪಂಖುರಿ ಚಿತ್ರದ ನಟಿ ಕುಂದನಾ ಭಡ್ತಿ ಹೊಂದಿದ್ದಾರೆ. ಶಾರದ ಹೆಸರಿನ ಪಾತ್ರದಲ್ಲಿ ಕುಂದನಾ ನಟಿಸುತ್ತಿದ್ದಾರೆ.Nange Yaru Illa Illi Song Pankhuri Movie

ಚಿಕ್ಕಂದಿನಲ್ಲೇ ಸೆಲೆಬ್ರಿಟಿಯಾಗುವ ಆಸೆ ಕಂಡಿದ್ದರು ಕುಂದನಾ. ಇದೀಗ ‘ಪಂಖುರಿ’ ಚಿತ್ರದ ಮೂಲಕ ಕನ್ನಡ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕುಂದನಾ ಮೂಲತಃ ಆಂಧ್ರದವರು. ಬದುಕು ಕಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ. ಕನ್ನಡವನ್ನು ಲೀಲಾಜಾಲವಾಗಿ ಮಾತನಾಡುವ ಇವರು ಈಗ ಕನ್ನಡದ ಮನೆ ಮಗಳಾಗಿದ್ದಾಳೆ. ಕುಂದನಾ ಇ ಕಾಮರ್ಸ್ ನಲ್ಲಿ ಸ್ನಾಕೋತ್ತರ ಪದವಿ ಪಡೆದಿದ್ದಾರೆ. ಎಂಎನ್ ಸಿ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ.
ಕುಂದನಾ ಸುಂದರವಾದ ಮುಖ ಚಹರೆ, ತಮ್ಮ ಅಭಿನಯದ ಮೂಲಕ ನಿರ್ದೇಶಕ ದೋಸ್ತಿ ವಿ ಆನಂದ ಅವರ ಸಿನಿಮಾಕೆ ಆಯ್ಕೆಯಾದರು. ಇನ್ನೂ ಹೆಸರಿಡದ ಎರಡು ಸಿನಿಮಾಕ್ಕೆ ಆಯ್ಕೆಯಾಗಿ ಗಾಂಧಿನಗರದಲ್ಲಿ ಸುದ್ಧಿಯಾಗಿದ್ದಾರೆ.Nange Yaru Illa Illi Song Pankhuri Movie

ತೀರಾ ಸಣ್ಣ ವಯಸ್ಸಿನಲ್ಲಿಯೇ ನಟಿಯಾಗುವ ಕನಸು ಕಂಡಿದ ಕುಂದನಾ ಸ್ಯಾಂಡಲ್ ವುಡ್ ಹಿರಿಯ ನಟಿ ಲಕ್ಷ್ಮೀಯವರಿಂದ ಹಿಡಿದು ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ತನಕ ಬಹುತೇಕರ ಅಭಿನಯಕ್ಕೆ ಮಾರುಹೋಗಿದ್ದಾರೆ. ಆಪ್ತಮಿತ್ರ, ಶ್ರೀ ಮಂಜುನಾಥ ಚಿತ್ರಗಳಲ್ಲಿನ ಸೌಂದರ್ಯ ಅವರ ನಟನೆಯನ್ನು ಬಹುವಾಗಿ ಮೆಚ್ಚುವ ಕುಂದನಾಗೆ ಅಂಥ ಪಾತ್ರಗಳನ್ನ ಮಾಡುವ ಆಸೆ ಇದೆಯಂತೆ. ಒಟ್ಟಾರೆ ಕೇವಲ ಒಂದು ಪಾತ್ರಕ್ಕೆ ಸಿಮೀತವಾಗದೆ ವಿಭಿನ್ನ ಪಾತ್ರಗಳಲ್ಲಿ ಅಭಿನಯನ ಮಾಡುವ ಆಶಯ ಅವರದ್ದು.Nange Yaru Illa Illi Song Pankhuri Movieಕುಂದನ ಕೇವಲ ನಟನೆ ಮಾತ್ರವಲ್ಲದೆ ನೃತ್ಯದಲ್ಲೂ ಸೈ ಎನಿಸಿಕೊಂಡಿದ್ದಾರೆ. ಶಾಲಾ ದಿನಗಳು ಮತ್ತು ಕೆಲಸದಲ್ಲಿದ್ದಾಗ ಸಂಸ್ಥೆಯ ಕಾರ್ಯಕ್ರಮಗಳಲ್ಲಿಯೂ ಡ್ಯಾನ್ಸ್ ಮಾಡಿದ ಅನುಭವ ಇದೆ. ನಿತ್ಯ ಯೋಗಾಭ್ಯಾಸ, ವಾಕಿಂಗ್, ಸೈಕ್ಲಿಂಗ್ ಇವರ ದಿನಚರಿಯಲ್ಲೊಂದು….Nange Yaru Illa Illi Song Pankhuri Movie

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…