ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2
ದೀಪಾವಳಿಗೆ ವಿಶೇಷ ಎಪಿಸೋಡ್ ಪ್ರಸಾರ

nammamma superstar

ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ‘ನನ್ನಮ್ಮ ಸೂಪರ್ ಸ್ಟಾರ್’ ಪ್ರೇಕ್ಷಕರನ್ನು ರಂಜಿಸಿದ್ದು ಗೊತ್ತೇ ಇದೆ. ಮೊದಲ ಸೀಸನ್ ಮೆಗಾ ಹಿಟ್ ಬಳಿಕ ಸೀಸನ್ 2 ಮೂಲಕ ಮತ್ತೊಮ್ಮೆ ಕಿರುತೆರೆ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲು ಇಡೀ ತಂಡ ಸಜ್ಜಾಗಿದೆ.

ಈಗಾಗಲೇ ‘ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2’ ಗ್ರ್ಯಾಂಡ್ ಒಪನಿಂಗ್ ಕೂಡ ಆಗಿದೆ. ಮೊದಲ ಸೀಸನ್ ನಲ್ಲಿ ಸೆಲೆಬ್ರೆಟಿ ತಾಯಿ ಮಕ್ಕಳಿಂದ ಕೂಡಿದ್ದ ಈ ಶೋ ಈ ಬಾರಿ ಸೆಲೆಬ್ರೆಟಿಗಳ ಜೊತೆ ಸಾಮಾನ್ಯ ಜನರನ್ನು ಒಳಗೊಂಡಿದೆ. ಅಕ್ಟೋಬರ್ 15ರಂದು ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಗ್ರ್ಯಾಂಡ್ ಒಪನಿಂಗ್ ಆಗಿದ್ದು, ಎರಡು ಎಪಿಸೋಡ್ ಗಳು ಪ್ರಸಾರವಾಗಿದೆ.nammamma superstar

ದೀಪಾವಳಿ ಹಬ್ಬದ ಪ್ರಯುಕ್ತ ದೀಪಾವಳಿ ಸ್ಪೆಷಲ್ ಎಪಿಸೋಡ್ ಚಿತ್ರೀಕರಣದಲ್ಲಿ ತಂಡ ಬ್ಯುಸಿಯಾಗಿದ್ದು, ಹಬ್ಬದ ಸಡಗರ ಹೆಚ್ಚಿಸಲು ಅಮ್ಮ ಮಕ್ಕಳ 12 ಹೊಸ ಜೋಡಿಗಳು ರೆಡಿಯಾಗಿದ್ದಾರೆ. ಇದೇ ಖುಷಿಯಲ್ಲಿ ನನ್ನಮ್ಮ ಸೂಪರ್ ಸ್ಟಾರ್ ತಂಡ ಮಾಧ್ಯಮದವರನ್ನು ಎದುರು ಗೊಂಡಿತ್ತು.

‘ನನ್ನಮ್ಮ ಸೂಪರ್ ಸ್ಟಾರ್’ ಕಿರುತೆರೆ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿತ್ತು. ಸೀರಿಯಲ್ ನಡುವೆ ಈ ಶೋ ಹೊಸ ಬಗೆಯ ಕಾನ್ಸೆಪ್ಟ್ ನೊಂದಿಗೆ ಮನೆ ಮಂದಿಗೆಲ್ಲ ರಂಜನೆ ನೀಡಿತ್ತು. ತಾಯಿ ಮಕ್ಕಳ ಆಟ, ನಗು, ಅಳು, ತಮಾಷೆ ವೀಕ್ಷಕರ ಮನಗೆದ್ದಿತ್ತು. ಕಾರ್ಯಕ್ರಮವೂ ಜನಪ್ರಿಯವಾಗಿ ಯಶಸ್ವಿಯಾಗಿತ್ತು. ಆ ಯಶಸ್ಸಿನ ಬೆನ್ನಲ್ಲೇ ಸೀಸನ್ 2 ಆರಂಭವಾಗಿದೆ.nammamma superstar

ಈ ಬಾರಿ ನಿರಂಜನ್ ದೇಶಪಾಂಡೆ ಕಾರ್ಯಕ್ರಮ ನಿರೂಪಣೆ ಮಾಡಲಿದ್ದು, ಇವರ ಜೊತೆಗೆ ಮೊದಲ ಸೀಸನ್ ವಿನ್ನರ್ ವಂಶಿಕಾ ನಿರೂಪಕಿಯಾಗಿ ರಂಜಿಸಲಿದ್ದಾರೆ. ಹಿಂದಿನಂತೆ ಈ ಸೀಸನ್ ನಲ್ಲಿಯೂ ನಟಿ ತಾರಾ, ಅನು ಪ್ರಭಾಕರ್ ಹಾಗೂ ಸೃಜನ್ ಲೋಕೇಶ್ ಜಡ್ಜಸ್ ಗಳಾಗಿರಲಿದ್ದಾರೆ.

ಈ ಬಗ್ಗೆ ಮಾತನಾಡಿದ ಕಲರ್ಸ್ ಕನ್ನಡದ ಪ್ರೋಗ್ರಾಮ್ ಹೆಡ್ ಪ್ರಕಾಶ್ ‘ನನ್ನಮ್ಮ ಸೂಪರ್ ಸ್ಟಾರ್’ ಮಕ್ಕಳ ಇನೋಸೆನ್ಸ್ ಇಟ್ಟುಕೊಂಡು ಮನರಂಜನೆ ನೀಡುವ ಕಾರ್ಯಕ್ರಮ. ಬುದ್ದಿವಂತಿಕೆ, ಪ್ರತಿಭೆಗಿಂತ ಮಕ್ಕಳ ಮುಗ್ಧತೆಯೇ ಈ ಕಾರ್ಯಕ್ರಮದ ಕೇಂದ್ರ ಬಿಂದು. ಮೊದಲ ಸೀಸನ್ ದೊಡ್ಡ ಮಟ್ಟದಲ್ಲಿ ಹಿಟ್ ಆದ ಕಾರಣದಿಂದ ಸೀಸನ್ 2 ಆರಂಭವಾಗಿದೆ. ಈ ಕಾರ್ಯಕ್ರಮ ಕೂಡ ಸಕ್ಸಸ್ ಆಗಲಿದೆ ಎಂಬ ಭರವಸೆ ಇದೆ ಎಂದು ತಿಳಿಸಿದ್ರು.nammamma superstar

ನಟಿ ತಾರಾ ಮಾತನಾಡಿ ‘ನನ್ನಮ್ಮ ಸೂಪರ್ ಸ್ಟಾರ್’ ಮೊದಲ ಸೀಸನ್ ಬಹಳ ದೊಡ್ಡ ಹೆಸರು ಮಾಡಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಕೂಡ ಜನಪ್ರಿಯತೆ ಗಳಿಸಿಕೊಂಡ್ರು. ಹೊಸತನದಿಂದ ಕೂಡಿದ ಶೋ ಇದಾಗಿತ್ತು. ಮೊದಲ ಸೀಸನ್ ಯಶಸ್ಸೇ ಸೀಸನ್ 2 ಆರಂಭ ಮಾಡಲು ಕಾರಣ. ಈ ಬಾರಿ ಇಡೀ ಕರ್ನಾಟಕವನ್ನು ಸುತ್ತಿ ಅಲ್ಲಿರುವ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಸಾಮಾನ್ಯ ಜನರಿಗೂ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದ್ರು.

ಲೋಕೇಶ್ ಪ್ರೊಡಕ್ಷನ್ ಬ್ಯಾನರ್ ನಡಿ ಈ ಕಾರ್ಯಕ್ರಮ ನಿರ್ಮಾಣವಾಗುತ್ತಿದ್ದು, ಈ ಬಗ್ಗೆ ಮಾತನಾಡಿದ ನಟ ಸೃಜನ್ ಲೋಕೇಶ್ ಕಲರ್ಸ್ ಕನ್ನಡದ ಜೊತೆ ನನ್ನದು ಎಂಟು ವರ್ಷಗಳ ಜರ್ನಿ. ಅಲ್ಲಿಂದ ಇಲ್ಲಿಯವರೆಗೂ ನನಗೆ ಸಪೋರ್ಟ್ ಮಾಡಿಕೊಂಡು ಬಂದಿದ್ದಾರೆ.nammamma superstar

ನಾನು ಪ್ರೊಡಕ್ಷನ್ ಮಾಡಿರಬಹುದು ಆದ್ರೆ ಒಂದು ತಂಡವಾಗಿ ನಾವು ಗೆದ್ದಿದ್ದೇವೆ. ನನ್ನಮ್ಮ ಸೂಪರ್ ಸ್ಟಾರ್, ರಾಜಾ ರಾಣಿ, ಗಿಚ್ಚಿ ಗಿಲಿ ಗಿಲಿ ಶೋ ಇದೆಲ್ಲದರ ಗೆಲುವಿಗೆ ಡೈರೆಕ್ಷನ್ ತಂಡ ಕಾರಣ. ನಿರ್ದೇಶಕ ಪ್ರಕಾಶ್ ಹಾಗೂ ವಿಜಯ್ ಕ್ರಿಯೆಟಿವಿಟಿ ಎಲ್ಲಾ ಕಾರ್ಯಕ್ರಮಗಳನ್ನು ಇಷ್ಟರ ಮಟ್ಟಿಗೆ ಗೆಲ್ಲಿಸಿದೆ. ಸ್ಪರ್ಧಿಗಳು ಕೂಡ ಅಷ್ಟೇ ಲವಲವಿಕೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ತಮ್ಮ ಮನದ ಮಾತುಗಳನ್ನು ಹಂಚಿಕೊಂಡ್ರು.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…