ಧುನಿಕ ಜಗತ್ತಲ್ಲಿ ಎಲ್ಲರಿಗೂ ಆರೋಗ್ಯದ್ದೆ ಚಿಂತೆ. ಒಳ್ಳೆಯ ಆರೋಗ್ಯ ಒಳ್ಳೆಯ ಆಸ್ಪತ್ರೆ ಕೇಳೋಕೆ ಎಷ್ಟು ಚೆಂದ ಅಲ್ವಾ. ಆದರೆ ಈ ಶತಮಾನದ ಅತಿ ದೊಡ್ಡ ಸಮಸ್ಯೆ ಅಂದ್ರೆ ಒಳ್ಳೆಯ ಗುಣಮಟ್ಟದ ಆಸ್ಪತ್ರೆ ಮತ್ತು ಉತ್ತಮ ಚಿಕಿತ್ಸೆ ನೀಡುವ ವೈದ್ಯರು. ಇಂತಹ ಸವಾಲಿನ ಸಮಸ್ಯೆಗಳ ನಡುವೆ ನಮ್ಮ ಬೆಂಗಳೂರಿನಲ್ಲಿ ಮೆಡಾಕ್ ಲೈಫ್ ಸಂಸ್ಥೆ ವೈದ್ಯರ ಮತ್ತು ರೋಗಿಗಳ ಪಾಲಿನ ಸೇತುವೆಯಾಗಿ ಹುಟ್ಟಿಕೊಂಡಿದೆ.
ಅಂದಹಾಗೆ ಇದೇ ಮೊಟ್ಟಮೊದಲ ಬಾರಿಗೆ ರೋಗಿಗಳ ಅನುಕೂಲಕ್ಕೆ ತಕ್ಕಂತೆ ಅಂದರೆ ರೋಗಿಗಳ ಖಾಯಿಲೆಗೆ ಅನುಗುಣವಾಗಿ ಯೋಗ್ಯ ವೈದ್ಯರ ಜೊತೆ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಸಹಕಾರಿಯಾಗಲಿದೆ ಜೊತೆಗೆ ರೋಗಿಯ ಖಾಯಿಲೆ ವಾಸಿಯಾಗುವತನಕ ವೈದ್ಯರ ಜೊತೆ ನಿರಂತರ ಸಂಪರ್ಕಕ್ಕೆ ಸಂಪೂರ್ಣ ಜವಾಬ್ದಾರಿ ಮೆಡಾಕ್ ಲೈಫ್ ಸಂಸ್ಥೆಯದ್ದಾಗಿರುತ್ತದೆ. ಇಲ್ಲಿವರೆಗೂ ವೈದ್ಯರ ಮತ್ತು ರೋಗಿಯ ನಡುವೆ ಭೇಟಿಗೆ ಅನೇಕ ಅಪ್ಲಿಕೇಶನಗಳು ಬಂದಿರಬಹುದು ಆದರೆ ರೋಗಿಗಳ ಸಂಪೂರ್ಣ ಜವಾಬ್ದಾರಿ ಹೊತ್ತ ಸಂಸ್ಥೆ ಇಲ್ಲಿಯವರೆಗೂ ಬಂದಿಲ್ಲ ಹಾಗಾಗಿ ಮೆಡಾಕ್ ಲೈಫ್ ಸಂಸ್ಥೆ ವಿಶೇಷವಾಗಿರುತ್ತದೆ.
ಈ ಸಂಸ್ಥೆಯ ಪ್ರಾರಂಭೋತ್ಸವ ಇದೇ ಜೂನ್ 15 ರಂದು ನೆರವೇರಿದೆ. ಸಮಾಜ ಸೇವಕರಾದ ಶ್ರೀ ಪ್ರಶಾಂತ್ ಚಕ್ರವರ್ತಿ ಮತ್ತು ಕಿರುತೆರೆ ನಟಿ ಕುಲವಧು ಧಾರಾವಾಹಿ ಖ್ಯಾತಿಯ ಧನ್ಯ ( ದೀಪಿಕಾ ) ಅವರು ಉದ್ಘಾಟಿಸಿದ್ದಾರೆ. ಮೆಡಾಕ್ ಲೈಫ್ ಸಂಸ್ಥೆಯ ಎಂ. ಡಿ. ನಾಸೀಫ್, ಸಿ. ಇ. ಓ. ಡಾ. ದರ್ಶನ್ ಎಸ್ ಅಂಗಡಿ ( UK ) ವ್ಯವಸ್ಥಾಪಕ ಮುನೀರ್, ಆಸೀಫ್ ಡೆಪ್ಯೂಟಿ ಮ್ಯಾನೇಜರ್ ಮತ್ತು ಯೋಜನಾ ವ್ಯವಸ್ಥಾಪಕ ಸುಜೀಶ್ ರವರನ್ನು ಒಳಗೊಂಡ ಅನುಭವಿ ತಂಡ ಈ ಸಂಸ್ಥೆಯೊಂದಿಗೆ ರೋಗಿಗಳ ನೋವುಗಳಿಗೆ ಸ್ಪಂದಿಸಲು ಮುಂದಾಗಿದ್ದಾರೆ. ಕೇವಲ ದುಡ್ಡಿಗಾಗೆ ಆರೋಗ್ಯದ ಜೊತೆ ಆಟವಾಡುವ ಕೆಲವು ಸಂಸ್ಥೆಗಳ ನಡುವೆ ರೋಗಿಗಳ ಅನುಕೂಲಕ್ಕೆಂದು ನಮ್ಮ ಬೆಂಗಳೂರಿನಲ್ಲಿ ಶುರುವಾಗಿರುವ ಸಂಸ್ಥೆಗೆ ಶುಭ ಹಾರೈಸೋಣ.