ಪ್ರೇಮಕಥೆಯೊಂದಿಗೆ ಶಶಾಂಕ್ ಮತ್ತೆ ಬಂದರು.

“ಲವ್ 360” ಮೂಲಕ ಡಾಕ್ಟರ್ ಪ್ರವೀಣ್ ಆಕ್ಟರ್ ಆದರು.‌

“ಮೊಗ್ಗಿನ ಮನಸ್ಸು”, ” ಕೃಷ್ಣನ್ ಲವ್ ಸ್ಟೋರಿ ” ಯಂತಹ ಅದ್ಭುತ ಲವ್ ಸ್ಟೋರಿ ಚಿತ್ರಗಳ ನಿರ್ದೇಶಕ ಶಶಾಂಕ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ “ಲವ್ 360”. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆ ದೊರಕಿದೆ. ಈ ಸಂತಸ ಹಂಚಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.WhatsApp Image 2022 05 11 at 10.23.00 PM 1

ಬಹಳ ದಿನಗಳ ನಂತರ ನಿಮ್ಮನೆಲ್ಲಾ ನೋಡುತ್ತಿರುವುದು ಖುಷಿಯಾಗಿದೆ.
ಮೂರುವರ್ಷಗಳ ನಂತರ “ತಾಯಿಗೆ ತಕ್ಕ ಮಗ” ಚಿತ್ರದ ನಂತರ ನಾನು ನಿರ್ದೇಶಿಸಿರುವ ಚಿತ್ರವಿದು. ಲಾಕ್ ಡೌನ್ ಸಮಯದಲ್ಲಿ ಸಿದ್ದವಾದ ಕಥೆಯಿದು. ನಾನು ಉಪೇಂದ್ರ ಅವರ ಚಿತ್ರ ನಿರ್ದೇಶಿಸಬೇಕಿತ್ತು.‌ ಅದು ದೊಡ್ಡಮಟ್ಟದ ಚಿತ್ರ. ಚಿತ್ರೀಕರಣಕ್ಕೆ ಕೊರೋನ ನಿಯಮಾವಳಿಗಳು ಸಹಕಾರಿಯಾಗುವಂತೆ ಕಾಣಲಿಲ್ಲ. ಹಾಗಾಗಿ ಆ ಚಿತ್ರ ಮುಂದೂಡಿ, ಈ ಚಿತ್ರ ಆರಂಭ ಮಾಡಿದೆ. ಅದರಲ್ಲೂ ಹೊಸಬರೊಂದಿಗೆ ನಾನು ಕೆಲಸ ಮಾಡಿ ಸುಮಾರು ವರ್ಷಗಳೇ ಆಗಿತ್ತು. ಈ ಚಿತ್ರದ ಮೂಲಕ ಪ್ರವೀಣ್ ಎಂಬ ನೂತನ ಪ್ರತಿಭೆಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ.WhatsApp Image 2022 05 11 at 10.23.00 PM

ಪ್ರವೀಣ್ ಸೇರಿದಂತೆ ಅವರ ಕುಟುಂಬದರೆಲ್ಲಾ ವೈದ್ಯರು. ಹೊಸಪೇಟೆ ಬಳಿಯ ಮಾರಮ್ಮನಹಳ್ಳಿಯಲ್ಲಿ ಇವರ ಆಸ್ಪತ್ರೆ ಇದೆ. ಸಾವಿರಾರು ಜನಕ್ಕೆ ಉಚಿತ ಚಿಕಿತ್ಸೆ ನೀಡಿ‌ ಪ್ರವೀಣ್ ತಂದೆ ಆ ಊರಿನ ಸುತ್ತ ಹೆಸರುವಾಸಿಯಾಗಿದ್ದರು. ಎಂ.ಬಿ.ಬಿ.ಎಸ್ ಓದಿರುವ ಪ್ರವೀಣ್ ಗೆ ನಟನೆಯಲ್ಲಿ ಆಸಕ್ತಿ. ಈ ಕುರಿತು ಅವರ ತಾಯಿ ನನ್ನ ಬಳಿ ಹೇಳಿದರು. ನಿರ್ಮಾಣವನ್ನೂ ಮಾಡುವುದಾಗಿ ಹೇಳಿದ್ದರು. ಆದರೆ ಅವರ ಬಳಿ ಈ ಚಿತ್ರಕ್ಕೆ ಬೇಕಾದಷ್ಟು ಹಣವಿಲ್ಲದ ಕಾರಣ, ನಮ್ಮ ಶಶಾಂಕ್ ಸಿನಿಮಾಸ್ ಸಂಸ್ಥೆ ಸಹ ನಿರ್ಮಾಣಕ್ಕೆ ಕೈ ಜೋಡಿಸಿತ್ತು. ಪ್ರವೀಣ್ ಗೆ ನಟನೆಗೆ ಬೇಕಾದ ಎಲ್ಲಾ ತಯಾರಿ ನೀಡಿ, ಚಿತ್ರ ಆರಂಭಿಸಲಾಯಿತು. ರಚನಾ ಇಂದರ್ ಈ ಚಿತ್ರದ ನಾಯಕಿ. ಗೋಪಾಲ್ ದೇಶಪಾಂಡೆ, ಡ್ಯಾನಿ ಕುಟ್ಟಪ್ಪ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಭಿಷೇಕ್ ಕಲ್ಲತ್ತಿ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸಿದ್ ಶ್ರೀರಾಮ್ ಹಾಗೂ ಸಂಚಿತ್ ಹೆಗಡೆ ಹಾಡಿರುವ ಹಾಡುಗಳು ಕೇಳುಗರ ಮನ ಗೆದ್ದಿದೆ‌.

84406229

ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ದವಾಗಲಿದ್ದು, ಸೆನ್ಸಾರ್ ಮಂಡಳಿ ವೀಕ್ಷಿಸಿದ ನಂತರ ಬಿಡುಗಡೆ ದಿನಾಂಕ ಘೋಷಣೆ ಮಾಡುವುದಾಗಿ ನಿರ್ದೇಶಕ ಶಶಾಂಕ್ ತಿಳಿಸಿದರು.WhatsApp Image 2022 05 11 at 10.22.59 PM

ನಾನು ಎಂ.ಬಿ.ಬಿ.ಎಸ್ ವಿದ್ಯಾರ್ಥಿಯಾಗಿದಾಗಿನಿಂದಲೂ ನಟನೆಯಲ್ಲಿ ಆಸಕ್ತಿ. ತಿಂಗಳಲ್ಲಿ ಮೂರು ದಿನ ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ಗೆ ಬಂದು ಅಭಿನಯ ಕಲಿಯುತ್ತಿದೆ. ಅಪ್ಪನಿಗೆ ವಿಷಯ ತಿಳಿದು ಬಯ್ಯುತ್ತಿದ್ದರು. ಈಗ ಅಪ್ಪ ಇಲ್ಲ. ಅಮ್ಮನ ಮುಂದೆ ನನ್ನ ಆಸೆ ಹೇಳಿಕೊಂಡೆ. ಅಮ್ಮ ನನ್ನ‌ ಆಸೆಗೆ ಆಸರೆಯಾದರು. ಆನಂತರ ಶಶಾಂಕ್ ಸರ್ ಪರಿಚಯವಾಯಿತು. ಶಶಾಂಕ್ ಅವರು ಸಾಕಷ್ಟು ವರ್ಕ್ ಶಾಪ್ ನಡೆಸಿ ನನಗೆ ಅಭಿನಯ ಕಲಿಸಿದರು. ಸಾಕಷ್ಟು ತಯಾರಿ ಮಾಡಿಕೊಂಡು ಚಿತ್ರರಂಗಕ್ಕೆ ಬಂದಿದ್ದೀನಿ. ಈ ಚಿತ್ರದಲ್ಲಿ ಬೋಟ್ ಮ್ಯಕಾನಿಕ್ ಪಾತ್ರ ಮಾಡಿದ್ದೀನಿ. ಡಾಕ್ಟರ್ ಆಗಬೇಕಿತ್ತು. ಈಗ ಆಕ್ಟರ್ ಆಗಿದ್ದೀನಿ ಅಂದರು ಪ್ರವೀಣ್.197583 e1652321781487

ನಾನು “ಲವ್ ಮಾಕ್ಟೇಲ್” ಚಿತ್ರದಲ್ಲಿ ಅಭಿನಯಿಸಿದ್ದೆ. ಆದರೆ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿರುವ ಮೊದಲ ಚಿತ್ರವಿದು. ಈ ಚಿತ್ರದ ಆಡಿಷನ್ ಇದಾಗ ಅಮ್ಮ ಜಡೆ ಹಾಕಿ, ಜುಮಕಿ ಹಾಕಿಸಿಕೊಂಡು ಕರೆದುಕೊಂಡು ಹೋಗಿದ್ದರು. ನಾನು ಬೇಡ ಅಂದೆ. ಅಮ್ಮ ಇರಲಿ ಅಂದರು. ಶಶಾಂಕ್ ಅವರಿಗೆ ನಾನು ಹೋಗಿದ್ದ ರೀತಿ ಇಷ್ಟವಾಯಿತಂತೆ. ಆನಂತರ ನಾನು ಸೆಲೆಕ್ಟ್ ಆದೆ. ನಂತರ ನಿರ್ದೇಶಕರು ವರ್ಕ್ ಶಾಪ್ ಮೂಲಕ ಅಭಿನಯ ಹೇಳಿಕೊಟ್ಟರು. ಪಾತ್ರ ತುಂಬಾ ಚೆನ್ನಾಗಿದೆ ಅಂದರು ರಚನಾ ಇಂದರ್. ಗೋಪಾಲ್ ದೇಶಪಾಂಡೆ, ಡ್ಯಾನಿ ಕುಟ್ಟಪ್ಪ ಹಾಗೂ ಕಾವ್ಯ ಶಾಸ್ತ್ರಿ ತಮ್ಮ ಪಾತ್ರದ ಬಗ್ಗೆ, ಛಾಯಾಗ್ರಾಹಕ ಅಭಿಷೇಕ್ ಕಲ್ಲತ್ತಿ ಹಾಗೂ ಸಾಹಸ ನಿರ್ದೇಶಕದ ಬಗ್ಗೆ ಮಾಸ್ ಮಾದ ಮಾತನಾಡಿದರು.ab67616d0000b273df4b689a789d5fb407e9991e e1652321758232

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…