ಕಳ್ಳರ ದುಡ್ಡನ್ನು ಲಪಟಾಯಿಸುವ ಕೌಟಿಲ್ಯ!

koutilya kannada movie review

Koutilya 3/5

ಅರ್ಜುನ್ ರಮೇಶ್ ಮತ್ತು ಪ್ರಿಯಾಂಕ ಚಿಂಚೋಳಿ ಕಿರುತೆರೆಯ ಜನಪ್ರಿಯ ಜೋಡಿ. ಇದೇ ಜೋಡಿ ಈಗ ಹಿರಿತೆರೆ ಪ್ರವೇಶಿಸಿದೆ. ಈಗ ಇವರು ನಟಿಸಿರುವ ಕೌಟಿಲ್ಯ ಚಿತ್ರ ತೆರೆಗೆ ಬಂದಿದೆ. ಬಿ.ಎ. ವಿಜೇಂದ್ರ ಮತ್ತು ಸುರೇಖ ಕೆ.ಎಸ್. ನಿರ್ಮಾಣದ ಈ ಚಿತ್ರವನ್ನು ಪ್ರಭಾಕರ್ ಶೇರ್ ಖಾನೆ ನಿರ್ದೇಶಿಸಿದ್ದಾರೆ.Koutilya Official Trailer

ಕೌಟಿಲ್ಯ ಕಥಾ ವಸ್ತು ಬ್ಲಾಕ್ ಮನಿ, ಮಾದಕವಸ್ತುಗಳ ಸುತ್ತ ಹೆಣೆದಿರುವ ಕತೆ. ಅನಾಮತ್ತಾಗಿ ದುಡ್ಡು ಮಾಡಿಕೊಂಡಿರುವ ರಾಜಕಾರಣಿಗಳು, ವ್ಯಾಪಾರಿಗಳ ಹಣವನ್ನು ಒಬ್ಬ ವ್ಯಕ್ತಿ ಹೇಗೆ ಲಪಟಾಯಿಸುತ್ತಾನೆ ಎನ್ನುವ ಪ್ರಮುಖ ಎಳೆಯ ಸುತ್ತ ಬೇರೆ ಒಂದಿಷ್ಟು ವಿಚಾರಗಳನ್ನು ಸೇರಿಸಿ ಕೌಟಿಲ್ಯ ಚಿತ್ರವನ್ನು ರೂಪಿಸಿದ್ದಾರೆ. ಕೌಟಿಲ್ಯ ಚಿತ್ರವನ್ನು ಒಂದೇ ಏಟಿಗೆ ಚನ್ನಾಗಿದೆ ಅಥವಾ ಚನ್ನಾಗಿಲ್ಲ ಅಂತಾ ಹೇಳಲಿಕ್ಕಗುವುದಿಲ್ಲ. ಆದರೆ ನೇರವಾಗಿ ಹೇಳಬಹುದಾಗಿದ್ದ, ಒಂದೊಳ್ಳೆ ಕಥಾವಸ್ತುವನ್ನು ಗೊಂದಲದ ಜೊತೆಗೆ ನಿರೂಪಿಸಿದ್ದಾರೆ. ಬಹುಶಃ ನಿರ್ದೇಶಕ ಶೇರ್ ಖಾನೆ ಅವರ ಅತಿಯಾದ ಕಾನ್ಫಿಡೆನ್ಸ್, ನಾನೇನು ಸೃಷ್ಟಿಸಿದರೂ ಜನ ನೋಡುತ್ತಾರೆ ಎನ್ನುವ ನಂಬಿಕೆಯಿAದ ಕೌಟಿಲ್ಯನನ್ನು ಕಟ್ಟಿನಿಲ್ಲಿಸಿದ್ದಾರೆ.Koutilya Official Trailer

ಚೆಂದದ ಕಥಾವಸ್ತುವಾಗಬಲ್ಲ, ಸಿನಿಮಾವೊಂದನ್ನು ನಿರೂಪಣೆಯಿಂದಲೇ ವಿಕಾರಗೊಳಿಸಿದ ಕೀರ್ತಿ ಪ್ರಭಾಕರ್ ಅವರಿಗೆ ಸಲ್ಲುತ್ತದೆ. ನಿಜಕ್ಕೂ ಅಭಿನಂದಿಸಬೇಕಿರುವುದು ನಿರ್ದೇಶಕರ ಕಲಾಕೃತಿಯನ್ನು ನಂಬಿ ಹಣ ಹೂಡಿಕೆ ಮಾಡಿದ ನಿರ್ಮಾಪಕರನ್ನು.Koutilya Official Trailer

ಇನ್ನು ಅರ್ಜುನ್ ರಮೇಶ್ ನಟನೆ, ದನಿ ಎಲ್ಲವೂ ಪಾತ್ರಕ್ಕೆ ಪೂರಕವಾಗಿದೆ. ಅನಗತ್ಯ ಅರಚಾಟ ಇಲ್ಲದಿದ್ದರೆ ಕೌಟಿಲ್ಯ ಮತ್ತೊಂದು ಲೆವೆಲ್ಲಿಗೆ ನಿಲ್ಲುತ್ತಿತ್ತು. ನೀನಾಸಂ ಅಶ್ವಥ್ ಮತ್ತು ಪ್ರಿಯಾಂಕ ಚಿಂಚೋಳಿ ಕೂಡಾ ಚೆಂದನೆಯ ಅಭಿನಯ ನೀಡಿದ್ದಾರೆ. ಇವೆಲ್ಲದರ ಜೊತೆಗೆ ಕಾಮಿಡಿ ನಟರ ದಂಡೇ ಈ ಚಿತ್ರದಲ್ಲಿದ್ದು, ಎಲ್ಲರೂ ಒಂದು ಮಟ್ಟಕ್ಕೆ ನಗಿಸುವಲ್ಲಿ ಗೆದ್ದಿದ್ದಾರೆ! ಒಟ್ಟಾರೆಯಾಗಿ ಒಂದು ಸಲ ನೋಡಬಹುದಾದ ಸಿನಿಮಾ ಕೌಟಿಲ್ಯ…

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…