ಕಿರಿಕ್ ಹುಡುಗಿ ಗ್ಯಾರೇಜ್ ಹುಡುಗನ ಪ್ರೇಮಕಥೆ

ಕಿರಿಕ್ ಎಂದಕೂಡಲೇ ನಮಗೆಲ್ಲ ನೆನಪಾಗೋದು ರಕ್ಷಿತ್ ಶೆಟ್ಟಿ, ರಶ್ಮಿಕಾ ಅಭಿನಯದ ಕಿರಿಕ್ ಪಾರ್ಟಿ. ಈಗ ಕಿರಿಕ್ ಹೆಸರಿನಲ್ಲೇ ಹೊಸ ಚಿತ್ರವೊಂದು ನಿರ್ಮಾಣವಾಗುತ್ತಿದೆ. ರವಿ ಶೆಟ್ಟಿ, ಪೂಜಾ ರಾಮಚಂದ್ರ ನಾಯಕ, ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ನಾಗತಿಹಳ್ಳಿ ಗಂಗಾಧರ್ ಆಕ್ಷನ್ ಕಟ್ ಹೇಳಿದ್ದಾರೆ.WhatsApp Image 2022 06 09 at 12.42.39 PM

ಶ್ರೀ ಮುಕ್ತಿನಾಗ ಫಿಲಂಸ್ ಲಾಂಛನದಲ್ಲಿ ನಾಗರಾಜ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಕೀರ್ತಿವರ್ಧನ್ ಅವರ ಛಾಯಾಗ್ರಹಣ ಹಾಗೂ ಕಾರ್ತೀಕ್ ವೆಂಕಟೇಶ್ ಅವರ ಸಂಗೀತ ಸಂಯೋಜನೆಯಿರುವ ಈ ಚಿತ್ರಕ್ಕೆ ಭಾರ್ಗವ ವಿಎಫ್‍ಎಕ್ಸ್ ಕಾರ್ಯ ನಿರ್ವಹಿಸಿದ್ದಾರೆ.WhatsApp Image 2022 06 09 at 12.42.40 PM

ಈ ಸಂದರ್ಭದಲ್ಲಿ ನಾಯಕ ರವಿ ಶೆಟ್ಟಿ ಮಾತನಾಡುತ್ತ ನಿರ್ದೇಶಕರು ನನ್ನ ಸ್ನೇಹಿತರು, ನಿರ್ಮಾಪಕ ನಾಗರಾಜು ಅವರು ನನ್ನ ಸಂಬಂಧಿಕರು, ಗ್ಯಾರೇಜ್ ಮೆಕ್ಯಾನಿಕ್ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಕರ್ತ ಚಿತ್ರದಲ್ಲಿ ನೆಗೆಟಿವ್ ರೋಲ್ ಮಾಡಿದ್ದ ನಾನು ಹೀರೋ ಆಗಿ ನಟಿಸಿರುವ ಮೊದಲ ಚಿತ್ರವಿದು, ಮಾತಿನಭಾಗ ಮುಗಿದು ಹಾಡುಗಳ ಚಿತ್ರೀಕರಣ ಮಾತ್ರವೇ ಬಾಕಿ ಇದೆ ಎಂದು ಹೇಳಿದರು.WhatsApp Image 2022 06 09 at 12.42.41 PM

ಸಂಗೀತ ನಿರ್ದೇಶಕ ಕಾರ್ತೀಕ್ ವೆಂಕಟೇಶ್ ಮಾತನಾಡಿ ಈ ಚಿತ್ರದಲ್ಲಿ 4 ಹಾಡುಗಳಿದ್ದು, ಮುಂದಿನ ತಿಂಗಳು ಆಡಿಯೋ ರಿಲೀಸ್ ಮಾಡುವ ಯೋಜನೆಯಿದೆ. ನಾಯಕ ಮಿಡಲ್‍ಕ್ಲಾಸ್ ಹುಡುಗನಾದರೆ, ನಾಯಕಿ ಹೈಕ್ಲಾಸ್ ಹುಡುಗಿಯಾಗಿರುತ್ತಾಳೆ. ಅಂಡರ್ ವರ್ಲ್ಡ್ ಡಾನ್ ಮಗಳು ಹಾಗೂ ಗ್ಯಾರೇಜ್ ಮೆಕ್ಯಾನಿಕ್ ನಡುವೆ ನಡೆಯುವ ಪ್ರೇಮಕಥೆಯಿದು. ಅಹಂಕಾರಿ ನಾಯಕಿಯ ಹುಟ್ಟಡಗಿಸಲು ನಾಯಕ ಆಕೆಯನ್ನು ಕಿಡ್ನಾಪ್ ಮಾಡಿಕೊಂಡು ಹೋಗುವಾಗ ಇಬ್ಬರ ನಡುವೆ ದ್ವೇಶ ಕರಗಿ ಪ್ರೀತಿ ಮೂಡುತ್ತದೆ. ಕ್ಲೇ ಮ್ಯಾಕ್ಸ್‌ ನಲ್ಲಿ ಅವರಿಬ್ಬರೂ ಒಂದಾಗ್ತಾರಾ ಇಲ್ವಾ ಅನ್ನೋದೇ ಕಥೆ ಎಂದು ಹೇಳಿದರು. ನಾಯಕಿಯ ತಂದೆಯಾಗಿ ಬಲ ರಾಜವಾಡಿ, ತಾಯಿಯಾಗಿ ಜ್ಯೋತಿ ನಟಿಸಿದ್ದಾರೆ.WhatsApp Image 2022 06 09 at 12.42.42 PM

ನಿರ್ಮಾಪಕ ನಾಗರಾಜ್ ಮಾತನಾಡಿ ನಿರ್ದೇಶಕರು ಬಂದು ಈ ಕಥೆ ಹೇಳಿದಾಗ ಕಂಟೆಂಟ್ ಇಷ್ಟವಾಯಿತು. ಹಾಗಾಗಿ ನಿರ್ಮಾಣ ಮಾಡಲು ಒಪ್ಪಿದೆ ಎಂದರು. ಹರೀಶ್ ಶೆಟ್ಟಿ ಚಿತ್ರದ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ನಾಯಕಿ ಪೂಜಾ ಮಾತನಾಡಿ ಕಾಲೇಜ್‍ಗೆ ಹೋಗುತ್ತಲೇ ನಾನು ಮಾಡುವಂಥ ಕಿರಿಕ್‍ಗಳಿಂದ ನನ್ನ ಲೈಫ್‍ನಲ್ಲಿ ಏನೇನಾಗುತ್ತೆ ಎನ್ನುವುದೇ ಚಿತ್ರದ ಕಥೆ ಎಂದರು.WhatsApp Image 2022 06 09 at 12.42.41 PM 1

ಛಾಯಾಗ್ರಾಹಕ ಕೀರ್ತಿವರ್ಧನ್ ಮಾತನಾಡುತ್ತ ನಿರ್ದೇಶಕ ಗಂಗಾಧರ್ ನನ್ಜೊತೆ ಅಸಿಸ್ಟೆಂಟ್ ಆಗಿದ್ದರು, 3 ವರ್ಷದ ಹಿಂದೆಯೇ ಮಾಡಿಕೊಂಡಿದ್ದ ಕಥೆಯಿದು, ಕಾರವಾರದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಭಾಗವನ್ನು ಚಿತ್ರೀಕರಿಸಿದ್ದೇವೆ. ಸದ್ಯ ಚಿತ್ರದ ಡಬ್ಬಿಂಗ್ ನಡೆಯುತ್ತಿದೆ ಎಂದು ಹೇಳಿದರು. ಹಿರಿಯ ಕಲಾವಿದರಾದ ಹೊನ್ನವಳ್ಳಿ ಕೃಷ್ಣ ಗ್ಯಾರೇಜ್ ಮಾಲೀಕನಾಗಿ ನಟಿಸಿದ್ದರೆ, ಮತ್ತೊಬ್ಬನಟ ಟೆನ್ನಿಸ್‍ಕೃಷ್ಣ ಅವರು ತರಕಾರಿ ಏಜೆಂಟ್ ಪಾತ್ರವನ್ನು ನಿರ್ವಹಿಸಿದ್ದಾರೆ. ಕಾರವಾರ, ಮೈಸೂರು, ನಾಗಮಂಗಲದಲ್ಲಿ ಕಿರಿಕ್ ಚಿತ್ರಕ್ಕೆ 30 ದಿನಗಳಕಾಲ ಚಿತ್ರೀಕರಣ ನಡೆಸಲಾಗಿದೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…