ನೆಲದ ಘಮಲಿನ ಸಿನಿಮಾ ಕೆರೆಬೇಟೆ!

kerebete kannada movie review

Kerebete 4\5

ಅವನು ಭಯಂಕರ ಒರಟ. ಗಂಡಸು, ಹೆಂಗಸು ಅನ್ನೋದನ್ನೂ ನೋಡದೆ ಯಾರೆಂದರೆ ಅವರ ಮೇಲೆ ಮುರಕೊಂಡು ಬೀಳುವ ಕೋಪಿಷ್ಟ. ಎರಡು ಎಕರೆ ಗದ್ದೆ, ತೋಟ ಖರೀದಿ ಮಾಡೋದೇ ಇವನಿಗೆ ಬದುಕಿನ ಪರಮ ಗುರಿ. ಹೆಸರು ಕೆರೆಮನೆ ನಾಗ!
ರಾಜಾರೋಷವಾಗಿ ನಾಟಾ ಕಳ್ಳಸಾಗಾಣೆ ಮಾಡಿಕೊಂಡಿದ್ದ ನಾಗ ಜೈಲಿಂದ ಹೊರಬಂದಿರುತ್ತಾನೆ. ಮಲೆನಾಡ ಗೊಂಬೆಯೊಂದನ್ನು ನೋಡಿ ಈ ಮನೆಹಾಳನ ಮನಸೋಲುತ್ತದೆ. ಜಾತಿ ಕಾರಣಕ್ಕೆ ಒಲ್ಲೆ ಅನ್ನುವ ಅವರಪ್ಪನ ವಿರೋಧವನ್ನೂ ಲೆಕ್ಕಿಸದೆ ಹುಡುಗಿಯನ್ನು ಎತ್ತಾಕಿಕೊಂಡು ಬರುತ್ತಾನೆ. ಮುಂದೆ ಯಾರೂ ನಿರೀಕ್ಷಿಸಲೂ ಸಾಧ್ಯವಾಗದ ತಿರುವುಗಳು ಘಟಿಸುತ್ತವೆ. ಎಷ್ಟೇ ಗಟ್ಟಿಗರಾದರೂ, ನೂರು ಜನರೊಟ್ಟಿಗೆ ಬಡಿದಾಡಿ ಗೆದ್ದರೂ, ಪ್ರಳಯಾಂತಕರೇ ಆದರೂ ಜಾತಿ, ಪ್ರತಿಷ್ಠೆಗಳನ್ನು ಜಯಿಸೋದು ಸುಲಭದ ಮಾತಲ್ಲ. Kerebete' movie review: Agonising tale about love amidst casteist oppression

ಇಷ್ಟಪಟ್ಟು ಕಟ್ಟಿಕೊಂಡು ಹುಡುಗಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾದ ಜವಾಬ್ದಾರಿ ಹುಡುಗನದ್ದು. ಆದರೆ, ಕೆರೆಮನೆ ನಾಗ ಯಾಕೆ ಹಾಗೆಲ್ಲಾ ಮಾಡಿಬಿಟ್ಟ? ಆತ ಈ ರೀತಿ ವರ್ತಿಸಿದ್ದು ಸರೀನಾ ಎಂಬಿತ್ಯಾದಿಯಾಗಿ ನೋಡುಗರ ಎದೆಯಲ್ಲಿ ನೂರೆಂಟು ಪ್ರಶ್ನೆಗಳು ಮೂಡುತ್ತವೆ. ಆದರೆ ಅಸಲಿಗೆ ಅಲ್ಲಿ ನಡೆದಿದ್ದೇನು ಅಂತಾ ತಿಳಿದುಕೊಳ್ಳಬೇಕಾದರೆ, ಚಿತ್ರದ ಕಟ್ಟಕಡೆಯ ದೃಶ್ಯದ ತನಕ ಕಾಯಲೇಬೇಕು. Kerebete Review: A Film That Begins Slowly And Ends With A Flourish |  Kannada News, Times Now

ಮಲೆನಾಡು ಅಂದರೆ ಹಸಿರಿನ ಸೊಬಗು, ತಣ್ಣನೆಯ ವಾತಾವರಣ, ಜಿಟಿಜಿಟಿ ಮಳೆ ಇತ್ಯಾದಿಗಳೇ ಎಲ್ಲರ ಮನಸ್ಸಿಗೆ ಬರುತ್ತದೆ. ಆದರೆ, ಇದೇ ಹಸಿರು ಗರ್ಭದಲ್ಲಿ ಭಯಾನಕ ಕ್ರೌರ್ಯ, ಜಾತಿ, ಪ್ರತಿಷ್ಟೆಗಳೆಲ್ಲಾ ಬೇರುಬಿಟ್ಟಿವೆ. ನೆತ್ತರ ಕಲೆಗಳೆಲ್ಲಾ ಜಿಟಿಜಿಟಿ ಮಳೆಯ ನೀರಲ್ಲಿ ತೊಳೆದುಕೊಂಡು ಹೋಗುತ್ತಿದೆ… ಅನ್ನೋದನ್ನು ಕೆರೆಬೇಟೆ ಚಿತ್ರ ಸ್ಪಷ್ಟಪಡಿಸಿದೆ.
ಕೆರೆಬೇಟೆ ಮಲೆನಾಡಿನ ಅತ್ಯಂತ ಪುರಾತನ ಕ್ರೀಡೆ ಮತ್ತು ಸಂಪ್ರದಾಯ. ಸಾವಿರಾರು ಜನ ಬಿದಿರಿನ ಬುಟ್ಟಿಗಳನ್ನು ಹಿಡಿದು ಒಮ್ಮೆಲೇ ಕೆರೆಗಿಳಿದು ಮೀನು ಹಿಡಿಯುತ್ತಾರೆ. ಇದು ಈ ಚಿತ್ರದ ಆಕರ್ಷಣೆಯ ಕೇಂದ್ರಬಿಂದುವಷ್ಟೇ. ಉಳಿದಂತೆ ಬೇರೆಯದ್ದೇ ಕಥೆ, ಕಾಡುವ ವಿಚಾರಗಳನ್ನು ಕೆರೆಬೇಟೆ ಒಳಗೊಂಡಿದೆ. ಆರಂಭ ಮತ್ತು ಅಂತ್ಯ ಹದವಾಗಿದೆ. ನಡುವೆ ಬರುವ ದೃಶ್ಯಗಳು ನೋಡುಗನ ಮನಸ್ಸಿಗೆ ಕಸಿವಿಸಿ ಉಂಟುಮಾಡಬಹುದು. ಆದರೆ, ಅದಕ್ಕೇನು ಕಾರಣ ಅನ್ನೋದು ಕೂಡಾ ಕಡೆಗೆ ಮನದಟ್ಟಾಗುತ್ತದೆ. ಕಾದು ತಿಳಿಯುವ ವ್ಯವಧಾನ ಪ್ರೇಕ್ಷಕನಿಗೆ ಬೇಕಷ್ಟೇ!!Kerebete Review : ಕೆರೆಬೇಟೆ ಮಲೆನಾಡಿನ ಜನಪ್ರಿಯತೆಯನ್ನು ಬಿಂಬಿಸುವ ಸುಂದರ ಶೀರ್ಷಿಕೆ  । Kerebete Review : Kerebete is a beautiful title that reflects the  popularity of the highlands News in Kannada

ಮಲೆನಾಡಿನ ಒರಟು ಹುಡುಗನಾಗಿ ಗೌರಿಶಂಕರ್ ಅದ್ಭುತವಾಗಿ ನಟಿಸಿದ್ದಾರೆ. ನಾಯಕಿ ಬಿಂದು ಪಳಗಿದ ನಟಿಯಂತೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರನ್ನು ಬಿಟ್ಟರೆ ಸಂಪತ್ ಮೈತ್ರೇಯ ಮತ್ತು ಗೋಪಾಲ ದೇಶಪಾಂಡೆ ಇಬ್ಬರೂ ಹೆಚ್ಚು ಸ್ಕೋರ್ ಮಾಡಿಕೊಂಡಿದ್ದಾರೆ. ಜೊತೆಗೆ ರಾಜು ವೈವಿದ್ಯ, ರಾಕೇಶ್ ಪೂಜಾರಿ ಮೊದಲಾದವರು ಸಿನಿಮಾದ ಕಳೆ ಹೆಚ್ಚಿಸಿದ್ದಾರೆ.

ಗಗನ್ ಬಡೇರಿಯಾ ಅವರ ಚೆಂದದ ಟ್ಯೂನುಗಳನ್ನು ಪ್ರಮೋದ್ ಮರವಂತೆ ಬರೆದ ಸುಂದರ ಸಾಲುಗಳು ಮೆರೆಸಿ, ಮೋಹಕಗೊಳಿಸಿವೆ. ʻಮಲೆನಾಡಗೊಂಬೆ ಮಲೆನಾಡ ಗೊಂಬೆ ಮನೆಹಾಳನೊಬ್ಬ ಮನಸೋತ ನಿಂಗೆʼ ಹಾಡು ಹಿತಾನುಭವ ನೀಡುತ್ತದೆ. ಕೀರ್ತನ್ ಪೂಜಾರಿ ಛಾಯಾಗ್ರಹಣವಂತೂ ಬ್ಯೂಟಿಫುಲ್!Kerebete Review: ಕುತೂಹಲಭರಿತ ಕೆರೆಬೇಟೆಯಲ್ಲಿ ಊಹಿಸಲಾಗದ ಟ್ವಿಸ್ಟ್​ - Kerebete  review gowrishankar starrer kerebete movie tells a different story mdn  Kannada News

ಇಷ್ಟೆಲ್ಲಾ ವಿಶೇಷತೆಗಳನ್ನು ಒಟ್ಟು ಸೇರಿಸಿ, ಚೆಂದದ ಸಿನಿಮಾ ಮಾಡಿರುವ ರಾಜ್ಗುರು ಬಗ್ಗೆ ಹೇಳದಿದ್ದರೆ ತಪ್ಪಾಗುತ್ತದೆ. ನೆಲದ ಸೊಗಡಿನ ಕಥಾವಸ್ತವನ್ನು ಆಯ್ಕೆ ಮಾಡಿಕೊಂಡು, ಮಲೆನಾಡಿನ ಭಾಷೆಯನ್ನೇ ಬಳಸಿ, ಅಲ್ಲಿನ ಸಂಸ್ಕೃತಿ, ಆಚರಣೆಗಳನ್ನೂ ಕಥೆಯೊಳಗೆ ಬೆರೆಸಿರುವ ರಾಜ್ಗುರು ಕಲೆಗಾರ. ಮೊದಲ ಚಿತ್ರಕ್ಕೇ ಇಷ್ಟು ಅಚ್ಚುಕಟ್ಟಾಗಿ ಕೆಲಸ ಮಾಡಿರುವ ರಾಜ್ಗುರು ಚಿತ್ರರಂಗದಲ್ಲಿ ಇನ್ನೂ ಸಾಕಷ್ಟು ಕೃಷಿ ಮಾಡಬಲ್ಲರು.
ಒಟ್ಟಾರೆ ಮಲೆನಾಡು ಮಾತ್ರವಲ್ಲದೆ, ಕನ್ನಡ ನಾಡಿನ ಪ್ರತಿಯೊಬ್ಬ ಪ್ರೇಕ್ಷಕನೂ ನೋಡಲೇಬೇಕಾದ ಚಿತ್ರ ಕೆರೆಬೇಟೆ. ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ!

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…