ಕನ್ನಡದ ಕೌಸಲ್ಯಾ ಸುಪ್ರಜಾ ರಾಮ ಈಗ ತಮಿಳಿಗೆ ಹೋಗುತ್ತಿದೆ!

Kannada's Kausalya Supraja Rama is now making its way to Tamil!

ಇತ್ತೀಚೆಗೆ ಸುಮಾರಷ್ಟು ಸಿನಿಮಾಗಳು ಬರುತ್ತಿವೆ; ಹೋಗುತ್ತಿವೆ. ಗೆಲುವು ಮಾತ್ರ ಎಲ್ಲರ ಕೈಗೆಟುಕುತ್ತಿಲ್ಲ. ಹೇಗಾದರೂ ಮಾಡಿ ಪ್ರೇಕ್ಷಕರನ್ನು ಥೇಟರಿಗೆ ಎಳೆದುತರಲು ಸಿನಿಮಾ ತಂಡಗಳು ಹರಸಾಹಸ ಮಾಡುತ್ತಿವೆ. ಇದರ ನಡುವೆ, ಯಾವುದೇ ಪಬ್ಲಿಸಿಟಿ ಗಿಮಿಕ್ ಇಲ್ಲದೆ, ಅಬ್ಬರದ ಪ್ರಚಾರ ಮಾಡಿ, ಪ್ರೇಕ್ಷಕರನ್ನು ದಿಕ್ಕು ತಪ್ಪಿಸದೆ, ನೋಡಿದವರ ಮನಸ್ಸಿಗೆ ಹತ್ತಿರವಾಗಿ, ಗೆದ್ದ ಸಿನಿಮಾ ʻಕೌಸಲ್ಯಾ ಸುಪ್ರಜಾ ರಾಮʼ. ಜೈಲರ್ ಸಿನಿಮಾ ಅಡ್ಡ ಬರದಿದ್ದರೆ ಈ ಹೊತ್ತಿಗೇ ಇನ್ನೂ ಬೇರೆಯದ್ದೇ ಲೆವೆಲ್ಲಿಗೆ ತಲುಪಬೇಕಿದ್ದ ಚಿತ್ರವಿದು. ʻಕೌಸಲ್ಯಾ ಸುಪ್ರಜಾ ರಾಮʼ ನೋಡಿದ ಪ್ರತಿಯೊಬ್ಬರಿಗೂ ಖುಷಿ ಕೊಟ್ಟಿದೆ. ನಿರ್ದೇಶಕ ಶಶಾಂಕ್ ಅವರ ಪಾಲಿಗಂತೂ ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಲೀಲಾ ನಂತರ ಅತಿ ಹೆಚ್ಚು ಜನಪ್ರಿಯತೆ ತಂದುಕೊಟ್ಟಿರುವ ಚಿತ್ರ ʻಕೌಸಲ್ಯಾʼ. ಕಂಟೆಂಟ್ ವಿಚಾರದಲ್ಲಿ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಅಪ್ಡೇಟ್ ಆಗಿ ಸಿನಿಮಾ ರೂಪಿಸುವುದು ಶಶಾಂಕ್ ಅವರ ಶೈಲಿ. ಅದರಲ್ಲೂ ಈ ಸಲ ಎಲ್ಲ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ʻಕೌಸಲ್ಯಾ ಸುಪ್ರಜಾʼ ಚಿತ್ರವನ್ನು ಕಟ್ಟಿಕೊಟ್ಟಿದ್ದರು. ಈಗ ಅದು ಶಶಾಂಕ್ ಅವರ ಕೈ ಹಿಡಿದಿದೆ.Kannada's Kausalya Supraja Rama is now making its way to Tamil! ಈ ಚಿತ್ರದ ಬಗ್ಗೆ ಬರೀ ಕರ್ನಾಟಕ ಮಾತ್ರವಲ್ಲೆ, ಇತರೆ ಭಾಷೆಗಳಲ್ಲೂ ಉತ್ತಮ ಅಭಿಪ್ರಾಯಗಳು ಕೇಳಿಬರುತ್ತಿವೆ. ಸದ್ಯಕ್ಕೆ ತಮಿಳಿನ ಶಿವಕಾರ್ತಿಕೇಯನ್ ʻಕೌಸಲ್ಯಾ ಸುಪ್ರಜಾ ರಾಮʼ ಚಿತ್ರದ ರಿಮೇಕ್ ಹಕ್ಕು ಕೇಳಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಎಲ್ಲವೂ ಅಂದುಕೊಂಡಂತೇ ಆದರೆ, ʻಕೌಸಲ್ಯಾʼ ತಮಿಳಿಗೆ ಹೋಗೋದು ಖಚಿತ. ಅಲ್ಲಿಂದ ಇತರೆ ಭಾಷೆಗಳಿಗೂ ಕಾಲಿಡಬಹುದು. ಎಲ್ಲರೂ ಡಬ್ಬಿಂಗ್ ಬಾಲ ಹಿಡಿದು ʻಪ್ಯಾನ್ ಇಂಡಿಯಾʼ ಗುಂಗಿನಲ್ಲಿರುವಾಗ, ʻಕೆ.ಎಸ್.ಆರ್ʼ ಥರದ ಕಂಟೆಂಟು ಪರಭಾಷೆಯಲ್ಲಿ ರಿಮೇಕ್ ಆಗಲಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ!Kannada's Kausalya Supraja Rama is now making its way to Tamil!

ಕನ್ನಡದ ಮಟ್ಟಿಗೆ ʻಕೆ.ಎಸ್.ಆರ್ʼ ಹಲವು ಬಗೆಯ ಅಚ್ಚರಿಗಳನ್ನು ಹೊತ್ತು ತಂದ ಸಿನಿಮಾ. ಈ ಸಿನಿಮಾಗೆ ಜನ ಇನ್ನೂ ದೊಡ್ಡ ಮಟ್ಟದ ಬೆಂಬಲ ನೀಡಬೇಕಿತ್ತು ಅಂತಾ ಅಂದುಕೊಳ್ಳೋ ಹೊತ್ತಿಗೆ. ಶಿವಕಾರ್ತಿಕೇಯನ್ ಥರದ ಜನಪ್ರಿಯ ನಟ ʻಕೌಸಲ್ಯಾʼ ಮೇಲೆ ಕಣ್ಣಿಟ್ಟಿರೋದು ಎಲ್ಲರೂ ಸಂತೋಷ ಪಡಬೇಕಾದ ವಿಚಾರ!Kannada's Kausalya Supraja Rama is now making its way to Tamil!

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…