ಭೂಮಿಕಾ‌‌ ಚಿತ್ರಮಂದಿರದಲ್ಲಿ “ಕಾಳಿಪ್ರಸಾದ್” ಚಿತ್ರಕ್ಕೆ ಚಾಲನೆ.

kaliprasad kannada movie muhurat

ಇದು ಅಣ್ಣವ್ರ ಅಭಿಮಾನಿಯ ಚಿತ್ರ.

ವರನಟ ಡಾ||ರಾಜಕುಮಾರ್ ಅವರ ಅಭಿಮಾನಿ ಸಮೂಹ ಬಹಳ ದೊಡ್ಡದು. ಕರ್ನಾಟಕ ಮಾತ್ರವಲ್ಲ.‌ ಇಡೀ ವಿಶ್ವದಾದ್ಯಂತ ರಾಜಕುಮಾರ್ ಅವರನ್ನು ಪ್ರೀತಿಸುವ ಸಾಕಷ್ಟು ಜನರಿದ್ದಾರೆ.Kaliprasad Kannada Movie

ತಮಿಳುನಾಡಿನವರಾದ ಕೆ.ವಿ.ಎಸ್ ರಾಯ್ ಅವರು ಸಹ ಅಣ್ಣವ್ರ ದೊಡ್ಡ ಅಭಿಮಾನಿ. “ಗುರಿ” ಚಿತ್ರದಲ್ಲಿ ಡಾ||ರಾಜ್ ಹೆಸರು ಕಾಳಿಪ್ರಸಾದ್ ಎಂದು. ಈಗ ಅದೇ ಹೆಸರಿನಲ್ಲಿ ಕೆ.ವಿ.ಎಸ್ ರಾಯ್ ಚಿತ್ರವನ್ನು ಆರಂಭಿಸಿದ್ದಾರೆ.

“ಕಾಳಿಪ್ರಸಾದ್” ಚಿತ್ರದ ಮುಹೂರ್ತ ಸಮಾರಂಭ ಭೂಮಿಕಾ ಚಿತ್ರಮಂದಿರದಲ್ಲಿ ನಡೆಯಿತು. ಹಿರಿಯ ಸಾಹಿತಿ ಪದ್ಮಶ್ರೀ ದೊಡ್ಡರಂಗೇಗೌಡ “ಕಾಳಿಪ್ರಸಾದ್” ಚಿತ್ರಕ್ಕೆ ಚಾಲನೆ ನೀಡಿದರು. ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.Kaliprasad Kannada Movie

ಪಕ್ಕದ ತಮಿಳುನಾಡಿನವನಾದ ನಾನು, ಕನ್ನಡ ಹಾಗೂ ಅಣ್ಣವ್ರ ಅಭಿಮಾನಿ. ರಾಜಕುಮಾರ್ ಮೇಲಿನ ಪ್ರೀತಿಯಿಂದಾಗಿ ಚಿತ್ರಕ್ಕೆ “ಕಾಳಿಪ್ರಸಾದ್” ಅಂತ ಹೆಸರಿಟ್ಟಿದ್ದೀನಿ. ನಮ್ಮ ಚಿತ್ರದಲ್ಲಿ ಲವ್, ಆಕ್ಷನ್, ಸೆಂಟಿಮೆಂಟ್ ಎಲ್ಲಾ‌ ಅಂಶಗಳು ಇದೆ‌. ಕರ್ನಾಟಕದ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರೀಕರಣ ನಡೆಸುತ್ತೇವೆ. ಐದು ಹಾಡುಗಳಿದೆ. ದೊಡರಂಗೇಗೌಡರು ಬರೆದಿರುವ ಹಾಡೊಂದನ್ನು ಬಳಸಿಕೊಂಡಿದ್ದೇವೆ ಎಂದು ಚಿತ್ರದ ಬಗ್ಗೆ ನಿರ್ದೇಶಕ ಕೆ.ವಿ.ಎಸ್ ರಾಯ್ ಮಾಹಿತಿ ನೀಡಿದರು.Kaliprasad Kannada Movie

ಕನ್ನಡದ ಮೇಲೆ ಅಭಿಮಾನವಿಟ್ಟು ಇಲ್ಲಿಗೆ ಬರುವ ಪ್ರತಿಯೊಬ್ಬರು ಕನ್ನಡಿಗರು. ನಮ್ಮ ಭಾಷೆಯ ಮೇಲೆ ಪ್ರೀತಿಯಿಟ್ಟು‌ ಇಲ್ಲಿಗೆ ಬಂದು ಸಿನಿಮಾ ಮಾಡುತ್ತಿರುವ, ರಾಜಕುಮಾರ್ ಅಭಿಮಾನಿಯೂ ಆಗಿರುವ ಕೆ.ವಿ.ಎಸ್ ರಾಯ್ ಅವರಿಗೆ ಹಾಗೂ ಚಿತ್ರಕ್ಕೆ ಶುಭವಾಗಲಿ ಎಂದರು ಪದ್ಮಶ್ರೀ ದೊಡ್ಡರಂಗೇಗೌಡ.Kaliprasad Kannada Movie

ನಾಯಕ ರಾಮ ತೇಜ್ , ನಾಯಕಿಯರಾದ ಸೇಜ್, ಪ್ರಿಯಾ ಶೆಟ್ಟಿ, ವೈಷ್ಣವಿ, ಸಂಗೀತ ನಿರ್ದೇಶಕಿ ಇಂದು ವಿಶ್ವನಾಥ್ ಹಾಗೂ ಚಿತ್ರದ ಉಸ್ತುವಾರಿ ಹೊತ್ತಿರುವ ಓಂ ಸತೀಶ್ ಚಿತ್ರದ ಕುರಿತು ಮಾತನಾಡಿದರು.

ಕೆ.ವಿ.ಎಸ್ ರಾಯ್ ಹಾಗೂ ರಾಮ್ ತೇಜ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎಸ್ ಎನ್ ಬಿ ಮೂರ್ತಿ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ ಹಾಗೂ ತ್ರಿಭುವನ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…