‌ಜೀವಂತ ಕತೆಯ ಜೋರ್ಡನ್!

jordan kannada movie review

Jordan 3.5/5

ಮನೆಯಲ್ಲಿ ಕಡುಬಡತನ, ಅಪ್ಪನಿಗೆ ಮೈತುಂಬ ಸಾಲ, ಅಮ್ಮನಿಗೆ ಮೈಮೇಲೆ ಚಿನ್ನದೊಡವೆ ಹಾಕಿಕೊಳ್ಳುವ ಕನವರಿಕೆ. ಚೂಟಿ ಹುಡುಗನಿಗೆ ಓದಬೇಕೆನ್ನುವ ತುಡಿತದ ಜೊತೆಗೆ ಹಣ ಸಂಪಾದಿಸಿ ಮನೆ ಕಷ್ಟವನ್ನು ನೀಗಿಸುವ ಜವಾಬ್ದಾರಿ.

ಸ್ಲಂಗಳಲ್ಲಿ ವಾಸಿಸುವ ಮಕ್ಕಳ ಸಂಕಟ, ಸವಾಲುಗಳನ್ನೇ ಕಥೆಯ ರೂಪದಲ್ಲಿ ಪೋಣಿಸಿ ತೆರೆಮೇಲೆ ಕಟ್ಟಿಕೊಟ್ಟಿರುವ ಚಿತ್ರ ಜೋರ್ಡನ್. ದೀಪದ ಗೆಳಗೆ ಕತ್ತು ಅನ್ನುವಂತೆ ಊರಿಗೇ ಉಪದೇಶ ನೀಡುವ ತಂದೆ ತನ್ನದೇ ಮನೆಗೆ ಬೆಳಕಾಗಲು ಸಾಧ್ಯವಾಗದೆ ಕೈ ಚೆಲ್ಲಿರುತ್ತಾನೆ. ಇಸ್ತ್ರಿ ಮಾಡಿ ಸಂಪಾದಿಸುವ ಹಣದಲ್ಲಿ ಸುಕ್ಕುಗಟ್ಟಿದ ತನ್ನ ಬದುಕನ್ನು ಸರಿ ಮಾಡಿಕೊಳ್ಳದೇ ಹೆಣಗಾಡುತ್ತಿರುತ್ತಾನೆ. ಇಂಥ ವ್ಯಕ್ತಿ ತನ್ನ ಮಗನ ಬುದ್ದಿವಂತಿಕೆ ಮತ್ತು ಒಳ್ಳೇತನಗಳಿಂದ ಹೇಗೆ ತಲೆಯೆತ್ತಿ ನಿಲ್ಲುತ್ತಾನೆ ಅನ್ನೋದು ʻಜೋರ್ಡನ್ʼ ಚಿತ್ರದ ಹಂದರ.jordan kannada movie review

ಬಾಲನಟ ಮಹೇಂದ್ರನ ಸುತ್ತ ನಡೆಯುವ ಘಟನಾವಳಿಗಳೇ ಚಿತ್ರದ ಜೀವಾಳ. ಹುಡುಗನ ಚುರುಕುತನದಂತೆಯೇ ಚಿತ್ರದ ನಿರೂಪಣೆಯೂ ಚುರುಕಾಗಿದ್ದಿದ್ದರೆ ಇನ್ನೂ ಚೆಂದ ಇರುತ್ತಿತ್ತು.

ಕಾರ್ ಡ್ರೈವರ್, ಎನ್ ಜಿ ಓ ಕಾರ್ಯಕರ್ತನ ಪಾತ್ರಗಳ ಜೊತೆಗೆ ಕಿಚ್ಚ ಸುದೀಪ ಪಾತ್ರಗಳೂ ಚಿತ್ರಕ್ಕೆ ಪೂರಕವಾಗಿವೆ. ಸುದೀಪ್ ಚಿತ್ರದಲ್ಲಿ ಅಭಿನಯಿಸದೇ ಇದ್ದರೂ ಅವರ ಛಾಯೆ ಸಿನಿಮಾಗೆ ತಿರುವು ನೀಡುತ್ತದೆ. ಎನ್ ಜಿ ಓ ಮುಖ್ಯಸ್ಥೆಯಾಗಿ ಬರುವ ಗೌರಿ ಲಂಕೇಶ್ ಅಚ್ಛರಿ ಮೂಡಿಸುತ್ತಾರೆ. ಸರಿ ಸುಮಾರು ಆರೇಳು ವರ್ಷಗಳ ಹಿಂದೆ ಚಿತ್ರಿತವಾಗಿರುವ ಈ ಚಿತ್ರದಲ್ಲಿ ಗೌರಿ ಬಹುಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಇಲ್ಲವಾಗಿ ಆರು ವರ್ಷಗಳ ನಂತರ ಸಿನಿಮಾವೊಂದರ ಮೂಲಕ ಅವರು ಮತ್ತೆ ಜೀವಂವಾಗಿ ಎದ್ದುಬಂದಿದ್ದಾರೆ.jordan kannada movie review

ಪ್ರಾಮಾಣಿಕತೆಗೇ ಹೆಸರಾದ ತಂದೆ ಯಾರೋ ಬಿಟ್ಟುಹೋದ ಬಟ್ಟೆಗಳನ್ನು ಮಗನ ಕೈಲಿ ಮಾರಿಸುವಂತಾ ವಿಚಾರ ಆ ಪಾತ್ರದ ಆಶಯವನ್ನು ನುಂಗಿಕೊಂಡಿತಾ ಅನ್ನಿಸುತ್ತದೆ. ಕೆಲವೊಂದು ಕಡೆ ಇಂಥಾ ಲಾಜಿಕ್ ಗಳು ಮಿಸ್ ಆದರೂ ʻಜೋರ್ಡನ್ʼ ಎಲ್ಲಿಯೂ ಬೋರು ಹೊಡೆಸದಂದೆ ನೋಡಿಸಿಕೊಳ್ಳಲು ಕಾರಣ ಮಹೇಂದ್ರ, ಸಂಪತ್ ಮೈತ್ರೇಯ ಮತ್ತು ಸಿತಾರಾ ಈ ಮೂವರ ಸಹಜ ಅಭಿನಯ.

ಯಾವುದೇ ರೋಚಕತೆ ಇಲ್ಲದ, ನಮ್ಮ ನಡುವಿನ ಸಹಜ ವಿಚಾರಗಳೇ ಇಲ್ಲಿ ಸರಕಾಗಿರುವುದರಿಂದ ʻಜೋರ್ಡನ್ʼ ಎಲ್ಲೂ ಕೃತಕ ಎನ್ನಿಸುವುದಿಲ್ಲ. ಬದುಕಿನ ಕಷ್ಟಗಳೇ ಗೊತ್ತಿಲ್ಲದೆ ಬೆಳೆಯುವ ಮಕ್ಕಳಿಗೆ ಒಮ್ಮೆ ಈ ಚಿತ್ರವನ್ನು ತೋರಿಸಿದರೆ, ಸಮಾಜದ ನಿಜ ಸ್ಥಿತಿಗಳು ಅವರಿಗೆ ತಿಳಿಸಿದಂತಾಗುತ್ತದೆ. ಜೊತೆಗೆ ದೊಡ್ಡವರೂ ಒಮ್ಮೆ ನೋಡಿದರೆ ತಮ್ಮ ಮಕ್ಕಳನ್ನು ಹೇಗೆ ಪೊರೆಯಬೇಕೆನ್ನುವುದರ ಅರಿವಾಗುತ್ತದೆ.maxresdefault 3 e1672406082849

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…