“ಜವಾನ್” ಆಗಿ ಬರಲಿದ್ದಾರೆ ಜನಪ್ರಿಯ ನಟ ಶಾರುಖ್ ಖಾನ್.

ರೆಡ್ ಚಿಲ್ಲಿ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಅಟ್ಲಿ ನಿರ್ದೇಶನ.

2023 ಜೂನ್ 2ಕ್ಕೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸಿನಿಮಾ ಬಿಡುಗಡೆ

ಜೂನ್ 03 2022; ಹಲವು ಕಾರಣಕ್ಕೆ ಸದ್ದು ಮತ್ತು ಸುದ್ದಿಯಲ್ಲಿರುವ ಸ್ಟಾರ್ ಕಾಂಬಿನೇಷನ್ ವೊಂದು ಇದೀಗ ಅಧಿಕೃತವಾಗಿದೆ. ಅಂದರೆ, ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ತಮಿಳಿನ ಸ್ಟಾರ್ ನಿರ್ದೇಶಕ ಅಟ್ಲಿ, ‘ಜವಾನ್’ ಸಿನಿಮಾ ಮೂಲಕ ಕೈ ಜೋಡಿಸಿದ್ದಾರೆ. ಅಟ್ಲಿ ಸಿನಿಮಾ ಅಂದ್ರೆ ಅಲ್ಲಿ ಕಮರ್ಷಿಯಲ್ ಅಂಶಗಳೇ ಹೈಲೈಟ್. ಇದೀಗ ಶಾರುಖ್ ಮೇಲೆ ಆ ಪ್ರಯೋಗಕ್ಕೆ ಮುಂದಾಗಿದ್ದಾರೆ ನಿರ್ದೇಶಕ ಅಟ್ಲಿ. ಈವರೆಗೂ ಹಿಂದಿಯಲ್ಲಿ ಮಾತ್ರ ತೆರೆಕಾಣುತ್ತಿದ್ದ ಶಾರುಖ್ ಸಿನಿಮಾ, ಇದೀಗ ಅಟ್ಲಿ ಆ್ಯಕ್ಷನ್ ಕಟ್ ಹೇಳಲಿರುವ ಜವಾನ್ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗುತ್ತಿದೆ ಎಂಬುದು ವಿಶೇಷ. ಹಿಂದಿಯ ಜತೆಗೆ ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿಯೂ ಈ ಸಿನಿಮಾ ಸಿದ್ಧವಾಗುತ್ತಿದೆ.
ರಾಜಾ ರಾಣಿ, ತೇರಿ, ಮೆರ್ಸೆಲ್, ಬಿಗಿಲ್ ಸಿನಿಮಾಗಳ ಮೂಲಕವೇ ಕಾಲಿವುಡ್ ನಲ್ಲಿ ಹವಾ ಕ್ರಿಯೆಟ್ ಮಾಡಿರುವ ಅಟ್ಲಿ, ಶಾರುಖ್ ಜತೆ ಸಿನಿಮಾ ಮಾಡಲಿದ್ದಾರೆ ಎಂದಾಗಲೇ ಅಭಿಮಾನಿ ವಲಯದಲ್ಲಿ ಕುತೂಹಲ ಮೂಡಿತ್ತು. ಇದೀಗ ಚಿತ್ರದ ಮೊದಲ ಲುಕ್ ಮತ್ತಷ್ಟು ಕೌತುಕ ಸೃಷ್ಟಿಸಿದೆ. ಬಿಡುಗಡೆ ಆಗಿರುವ ಕಿರು ಟೀಸರ್ ನಲ್ಲಿ ಶಾರುಖ್ ಅವರ ರಗಡ್ ಲುಕ್ ಮೋಡಿ ಮಾಡುತ್ತಿದೆ.WhatsApp Image 2022 06 03 at 4.28.32 PM

ಈ ಸಿನಿಮಾ ಬಗ್ಗೆ ಹೇಳಿಕೊಳ್ಳುವ ಶಾರುಖ್ ಖಾನ್, ಜವಾನ್ ಸಿನಿಮಾದ ಕಥೆ ಎಲ್ಲ ಕಡೆ ಸಲ್ಲುತ್ತದೆ. ಭಾಷೆಗೂ ಮೀರಿ ಯೂನಿವರ್ಸಲ್ ಕಥೆಯಾಗಿದೆ. ಅಂಥ ಕಥೆ ಹೆಣೆದಿರುವ ಅಟ್ಲಿಗೆ ಧನ್ಯವಾದ ಹೇಳಲೇಬೇಕು. ನನಗೆ ಇದೊಂದು ಹೊಸ ಅನುಭವ. ಮೈನವಿರೇಳಿಸುವ ಆ್ಯಕ್ಷನ್ ಸಿನಿಮಾದ ಹೈಲೆಟ್. ಸದ್ಯ ಬಿಡುಗಡೆ ಆಗಿರುವ ಟೀಸರ್ ಸಣ್ಣ ಝಲಕ್ ಅಷ್ಟೇ ಎಂದಿದ್ದಾರೆ ಶಾರುಖ್.

ಇದೇ ವಿಚಾರವಾಗಿ ಮಾತನಾಡುವ ನಿರ್ದೇಶಕ ಅಟ್ಲಿ, ಇದೊಂದು ವಿಶ್ಯುವಲ್ ಟ್ರೀಟ್ ಸಿನಿಮಾ. ಪ್ರೇಕ್ಷಕನಿಗೆ ಹೊಸ ಥರದ ಅನುಭವ ಈ ಸಿನಿಮಾದಲ್ಲಿ ಸಿಗಲಿದೆ. ಆ್ಯಕ್ಷನ್ ಜತೆಗೆ ಕಮರ್ಷಿಯಲ್, ಡ್ರಾಮ, ಎಮೀಷನಲ್ ಕಂಟೆಂಟ್ ಸಿನಿಮಾದಲ್ಲಿ ಇರಲಿದೆ. ಈ ಸಿನಿಮಾವನ್ನು ಸ್ವತಃ ಶಾರುಖ್ ಪ್ರಸೆಂಟ್ ಮಾಡುತ್ತಿರುವುದು ಮತ್ತಷ್ಟು ಖುಷಿ ನೀಡಿದೆ ಎಂದಿದ್ದಾರೆ ಅಟ್ಲಿ.

2023ರ ಜೂನ್ 2ಕ್ಕೆ ಬಿಡುಗಡೆ..
Link https://bit.ly/jawanAnnouncement
ಸದ್ಯ ಪಠಾಣ್ ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿರುವ ಶಾರುಖ್, ಅದರ ಜತೆಗೆ ಜವಾನ್ ಚಿತ್ತದ ಕೆಲಸದಲ್ಲಿಯೂ ಭಾಗವಹಿಸಲಿದ್ದಾರೆ. ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ ಸಿನಿಮಾ ರಿಲೀಸ್ ದಿನಾಂಕವನ್ನೂ ಘೋಷಿಸಿದೆ. 2023ರ ಜೂನ್ 2ರಂದು ಈ ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಹೊರಬೀಳಲಿದೆ. ಈ ಚಿತ್ರವನ್ನು ಶಾರುಖ್ ಒಡೆತನದ ರೆಡ್ ಚಿಲ್ಲೀಸ್ ಎಙಟರ್ಟೈನ್ ಮೆಂಟ್ ಸಂಸ್ಥೆ ನಿರ್ಮಿಸುತ್ತಿದೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…