ಹೊಸ ದಿನಚರಿಯಲ್ಲಿ ಬೆಸೆದ ಬಾಂಧವ್ಯ!

hosa dinachari kannada movie review

Hosa Dinachari 4/5

ಒಬ್ಬರಿಗೊಬ್ಬರು ಸಂಬಂಧವೇ ಇಲ್ಲದವರು, ಬಂಧವಿದ್ದೂ ದಿಕ್ಕಾಪಾಲಾದವರು. ಎಲ್ಲ ಇದ್ದೂ ಏನೂ ಇಲ್ಲದವರು… ಬದುಕಿಗೆ ನೂರೆಂಟು ಮುಖಗಳು. ಒಬ್ಬೊಬ್ಬರ ಲೈಫಲ್ಲೂ ಒಂದೊಂದು ಬಗೆಯ ಕೊರತೆ, ಸಂಕಟ. ಇವುಗಳ ನಡುವೆಯೂ ಖುಷಿಯನ್ನು ಹುಡುಕಿಕೊಳ್ಳಬೇಕು. ಆಗ ತೆರೆದುಕೊಳ್ಳೋದು ಹೊಸ ದಿನಚರಿ!hosa dinachari kannada movie review

ಹೆತ್ತವರನ್ನು ಮರೆತು ಫಾರಿನ್ ಪಾಲಾದವರು, ತನ್ನವರಿಂದ ದೂರವೇ ಉಳಿದು ಪರರ ಸೇವೆಗೆ ನಿಂತ ವೈದ್ಯ, ಜೊತೆಗಿದ್ದೂ ಕಿತ್ತಾಡಿಕೊಳ್ಳುವ ಟೆಕ್ಕಿಗಳು, ನಲತ್ತೈದು ವರ್ಷ ಜೊತೆಗೆ ಬಾಳ್ವೆ ನಡೆಸಿದರೂ ಅದೇ ಪ್ರೀತಿಯನ್ನು ಪೋಷಿಸಿಕೊಂಡು ಬಂದ ವೃದ್ಧ ದಂಪತಿ, ಸಾಂಗತ್ಯ ಬಯಸುವ ಯುವಕ, ಬೇರುಗಳನ್ನು ಹುಡುಕಿಕೊಂಡು ಬರುವ ಹುಡುಗಿ…. ಹೀಗೆ ಅನೇಕ ಪಾತ್ರಗಳು ಹೊಸ ದಿನಚರಿಯಲ್ಲಿ ಬೆರೆತಿವೆ.hosa dinachari kannada movie review

ಖರೀದಿಸಲು ಸಾಧ್ಯವಾಗದ್ದು ಅಂತೇನಾದರೂ ಇದ್ದರೆ ಅದು ಪ್ರೀತಿ ಮಾತ್ರ. ಅದು ಮಾಯೆ. ಯಾರಿಗೆ, ಯಾವಾಗ, ಎಲ್ಲಿ ದಕ್ಕುತ್ತದೆ ಅಂತಾ ನಿಖರವಾಗಿ ಹೇಳಲಿಕ್ಕಾಗುವುದಿಲ್ಲ. ಬದುಕು ಇಷ್ಟೇ ಅಂತಾ ತೀರ್ಮಾನಿಸಿ ನಿಂತ ಒಣ ಹೃದಯದಲ್ಲಿಯೂ, ಯಾವುದೇ ಕ್ಷಣ ಒಲವಿನ ಚಿಗುರು ಟಿಸಿಲೊಡೆಯಬಹುದು. ಸಾವಿರ ವರ್ಷವಾದರೂ ಹೀಗೇ ಇದ್ದುಬಿಡಬೇಕು ಅಂದುಕೊಂಡವರು ಜೊತೆಗಿರಲಾರದೇ ಅರ್ಧಕ್ಕೇ ಎದ್ದು ನಡೆಯಬಹುದು. ಬೇಡ ಬೇಡ ಅಂತಾ ಬ್ರೇಕಪ್ಪಿಗೆ ತಯಾರಾದವರು ಬಿಟ್ಟೂಬಿಡಲಾರದೆ ಅಂಟಿಕೊಂಡು ಬಾಳ್ವೆ ನಡೆಸಬಹುದು. ಅದು, ವಿಧಿ ಲಿಖಿತವೋ, ಹಣೇಬರಹವೋ, ಅದೃಷ್ಟವೋ, ದುರಾದೃಷ್ಟವೋ ಗೊತ್ತಿಲ್ಲ. ಇಲ್ಲಿ ಯಾವುದೂ ಪೂರ್ವನಿರ್ಧಾರಿತವಲ್ಲ. ಎಲ್ಲವೂ ಆಕಸ್ಮಿಕ. ಯಾರ ಬದುಕಲ್ಲಿ ಏನು ಬೇಕಾದರೂ ಘಟಿಸಬಹುದು. ಆದರೆ ಪ್ರೀತಿ ಮಾತ್ರ ನಿರಂತರ ಪ್ರವಹಿಸುತ್ತಲೇ ಇರುತ್ತದೆ. ಮತ್ತೆ ಮತ್ತೆ ಬಂದು ಎದೆಗೆ ಅಪ್ಪಳಿಸುತ್ತಿರುತ್ತದೆ. ಥೇಟು ಸಮುದ್ರದ ಅಲೆಗಳಂತೆ…hosa dinachari kannada movie review

– ಇಂಥ ಅದೆಷ್ಟೋ ಅವ್ಯಕ್ತ ಭಾವನೆಗಳನ್ನು ಒಂದೇ ಹಿಡಿಯಲ್ಲಿ ಹಿಡಿದು, ಬೊಗಸೆ ತುಂಬಾ ಮೊಗೆದುಕೊಟ್ಟಿರುವ ಚಿತ್ರ ಹೊಸ ದಿನಚರಿ. ಎಲ್ಲೆಲ್ಲೋ ಚೆದುರಿಹೋದ ಪಾತ್ರಗಳು ಬಂದು ಒಟ್ಟು ಸೇರುತ್ತವೆ. ದಿಕ್ಕು ದೆಸೆಯಿಲ್ಲದಂತೆ ಹರಿಯುವ ನಾಲ್ಕು ಪ್ರತ್ಯೇಕ ನದಿಗಳು ಒಂದು ಕೂಡಿ ಸಾಗರಕ್ಕೆ ಸೇರಿದಂತೆ ಇಲ್ಲಿ ʻಹೊಸ ದಿನಚರಿʼಯನ್ನು ಆರಂಭಿಸುತ್ತವೆ.

ʻಹೊಸ ದಿನಚರಿʼಯನ್ನು ಸಿನಿಮಾರಂಗಕ್ಕೆ ಹೊಸಬರಾದ ವೈಶಾಖ್ ಪುಷ್ಪಲತಾ ಮತ್ತು ಕೀರ್ತಿ ಶೇಖರ್ ಜೊತೆ ಸೇರಿ ನಿರ್ದೇಶನ ಮಾಡಿದ್ದಾರೆ. ಇವರು ಆಯ್ಕೆ ಮಾಡಿಕೊಂಡಿರುವ ವಿಚಾರವೇ ಇಷ್ಟು ಕ್ಯೂಟ್ ಆಗಿರುವಾಗ ಸಿನಿಮಾ ಮನಸ್ಸಿಗೆ ಹತ್ತಿರವಾಗದೇ ಇರಲು ಹೇಗೆ ಸಾಧ್ಯ? ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಕಥೆಯ ರೂಪ ಕೊಟ್ಟು ತೆರೆಯ ಮೇಲೆ ಕಟ್ಟುವುದು ಕಷ್ಟದ ಕೆಲಸ. ಅದೂ ಯಾವುದೇ ರೋಚಕತೆಯನ್ನು ಬೆರೆಸದೆ, ಅತಿರಂಜಕ ಅಂಶಗಳನ್ನು ತುರುಕದೇ ತಣ್ಣಗೆ ಹೇಳವುದು ಸುಮ್ಮನೇ ಮಾತಲ್ಲ. ಆದರೆ, ಅದನ್ನು ನಿರ್ದೇಶಕದ್ವಯರು ಸಲೀಸಾಗಿ ನೆರವೇರಿಸಿದ್ದಾರೆ.hosa dinachari kannada movie review

ಬಾಬು ಹಿರಣ್ಣಯ್ಯ ಅದ್ಭುತ ಕಲಾವಿದ. ಹೊಸ ದಿನಚರಿ ನೋಡಿದ ಮೇಲೆ ಅವರ ಮೇಲಿನ ಗೌರವ ಹೆಚ್ಚಾಗುತ್ತದೆ. ಅರುಣಾ ಬಾಲರಾಜ್ ಕೂಡಾ ಇಷ್ಟವಾಗುತ್ತಾರೆ. ಚೇತನ್ ವಿಕ್ಕಿ ಮತ್ತು ದೀಪಕ್ ಸುಬ್ರಮಣ್ಯ ಎಂಬ ಇಬ್ಬರು ಕಲಾವಿದರು ಅಚ್ಛರಿ ಹುಟ್ಟಿಸುವಂತೆ ನಟಿಸಿ ʻಹೊಸ ದಿನಚರಿʼಯಲ್ಲಿ ಎಲ್ಲರನ್ನೂ ಆವರಿಸಿಕೊಳ್ಳುತ್ತಾರೆ. ಭಾರತೀಯ ಸಿನಿಮಾರಂಗದಲ್ಲಿ ಈ ಇಬ್ಬರೂ ನಟರು ದೊಡ್ಡ ಮಟ್ಟಕ್ಕೆ ಬೆಳೆದುನಿಲ್ಲೋದು ಖಚಿತ. ತಾಂತ್ರಿಕವಾಗಿಯೂ ಯಾವ ಕೊರತೆಗಳಿಲ್ಲದ ಸರಳ, ಸುಂದರ ಸಿನಿಮಾ ಇದು. ನೋಡಿದ ಯಾರಿಗೇ ಆದರೂ ಇಷ್ಟವಾಗುವ ʻಹೊಸ ದಿನಚರಿʼಯನ್ನು ಎಲ್ಲರೂ ಒಮ್ಮೆ ನೋಡಿ…

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…