ಅಂಗೈಯಲ್ಲಿ ಆರೋಗ್ಯ :- ಅರಿಶಿನ ಭಾಗ – 3

14. ಕಟ್ಟುಮೂತ್ರ ನಿವಾರಣೆ: ಶುದ್ಧ ಅರಿಶಿನ ಪುಡಿಯನ್ನು ಕಾದು ಆರಿದ ಹಸುವಿನ ಹಾಲಿಗೆ ಬೆರೆಸಿ ಕುಡಿಯುವುದರಿಂದ ಕಟ್ಟುಮೂತ್ರ ನಿವಾರಣೆ ಆಗುತ್ತದೆ. ಹೀಗೆ ದಿನದಲ್ಲಿ ೨ ಬಾರಿ, ಮೂರು ದಿನಗಳು ಸೇವಿಸಿದರೆ ಉತ್ತಮ ಫಲ ಸಿಗುತ್ತದೆ.

 

15. ಹಾಸಿಗೆಯಲ್ಲಿ ಮೂತ್ರವಿಸರ್ಜನೆ: ಮಕ್ಕಳು ರಾತ್ರಿ ವೇಳೆ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಅಂತಹ ಮಕ್ಕಳಿಗೆ ಜೇನುತುಪ್ಪದಲ್ಲಿ ಅರಿಶಿನದ ಕೊಂಬನ್ನು ತೇಯ್ದು, ಮಲಗುವ ಮುಂಚೆ ನೆಕ್ಕಿಸಿದರೆ, ರಾತ್ರಿ ಮೂತ್ರವಿಸರ್ಜನೆ ಮಾಡುವ ಅಭ್ಯಾಸ ನಿಲ್ಲುತ್ತದೆ.health tips kannada 11

 

16. ಮೂತ್ರಸಂಬಂಧೀ ರೋಗಗಳು: ಮೂತ್ರ ಸಂಬಂಧಪಟ್ಟ ರೋಗಗಳಿಗೆ ಅರಿಶಿನಕ್ಕೆ ಸಮಭಾಗದ ಮೆಣಸು ಪುಡಿ ಬೆರಸಿ, ಎಮ್ಮೆ ಹಾಲಿನ ಮೊಸರಿನಲ್ಲಿ ಕದಡಿ ಕುಡಿಯುವುದರಿಂದ, ದೋಶಗಳು ನಿವಾರಣೆಯಾಗುವುದು.

 

17. ಇಲಿ, ನಾಯಿ, ಚೇಳು ಕಚ್ಚಿದಾಗ: ೧೦೦ ML ಹಾಲು, ೧೦೦ ML ನೀರು ಬೆರಸಿ ೧೦ ಗ್ರಾಂ ಶುದ್ಧ ಅರಿಶಿನ ಬೆರೆಸಿ ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ, ನೀರಿನ ಅಂಶ ಇಂಗಿದ ಮೇಲೆ ಬರೀ ಹಾಲು ಉಳಿಯುತ್ತದೆ. ಈ ಹಾಲನ್ನು ೭-೮ ದಿನಗಳ ಕಾಲ ಸೇವಿಸುವುದರಿಂದ ಪ್ರಾಣಿಗಳ ಕಡಿತದಿಂದುಂಟಾಗುವ ವಿಷದ ಪ್ರಮಾಣ ತಗ್ಗುತ್ತದೆ. ಅರಿಶಿನದ ಗಂಧವನ್ನು ಗೋಮೂತ್ರದಲ್ಲಿ ತೇಯ್ದು ಸೇವಿಸುವುದರಿಂದಲೂ ಪ್ರಾಣಿಗಳು ಕಚ್ಚಿದಾಗ ಉಂಟಾಗುವ ವಿಷ ನಿವಾರಣೆ ಯಾಗುತ್ತದೆ.health tips kannada 11

 

18. ಕಾಲಿಗೆ ಮುಳ್ಳು: ಕಾಲಿಗೆ ಮುಳ್ಳು ಹೊಕ್ಕಿದ್ದರೆ ಅರಿಶಿನ ಹಾಗೂ ಬೆಳ್ಳುಳ್ಳಿಯನ್ನು ನುಣ್ಣಗೆ ಅರೆದು, ಮುಳ್ಳು ಹೊಕ್ಕಿರುವ ಸ್ಥಳಕ್ಕೆ ಕಟ್ಟಿದರೆ ಮುಳ್ಳು ಹೊರಬೀಳುವುದು ಮತ್ತು ನಂಜು ನಿವಾರಣೆಯಾಗುವುದು.

 

19. ವಿಳ್ಯದೆಲೆ, ಅಡಿಕೆ ಹಾಕಿಕೊಂಡಾಗ: ಸುಣ್ಣದ ಅಂಶ ಜಾಸ್ತಿಯಾಗಿ, ಕೆಲವರಿಗೆ ಬಾಯೆಲ್ಲಾ ಬೆಂದು ಹೋದ ಹಾಗೆ ಆಗುವುದು. ಅಂತಹ ಸಂದರ್ಭದಲ್ಲಿ ಹಸಿ ಅರಿಶಿನದ ಕೊಂಬನ್ನು ನೀರಿನಲ್ಲಿ ತೇಯ್ದು ಬೆಂದ ಭಾಗಕ್ಕೆ ಹಚ್ಚುತ್ತಾ ಬಂದರೆ ಕೆಲವು ದಿನಗಳಲ್ಲಿ ಗುಣವಾಗುತ್ತದೆ.

health tips kannada 11

20. ದಂತಕ್ಷಯ: ಅರಿಶಿನದ ಕೊಂಬನ್ನು ಸುಟ್ಟು ಭಸ್ಮಮಾಡಿ, ಈ ಭಸ್ಮಕ್ಕೆ ಉಪ್ಪು ಸೇರಿಸಿ ಹಲ್ಲು ಉಜ್ಜುವುದರಿಂದ, ಹಲ್ಲು ನೋವು ನಿವಾರಣೆ ಮತ್ತು ದಂತಕ್ಷಯ ನಿವಾರಣೆಯಾಗುತ್ತದೆ.

 

21. ಗಂಟಲು ನೋವಿಗೆ: ಹಾಲಿನಲ್ಲಿ ಅರಿಶಿನದ ಕೊಂಬನ್ನು ತೇಯ್ದು ಆ ಗಂಧವನ್ನು ಬಿಸಿಮಾಡಿ ಗಂಟಲಿನ ಹೊರಭಾಗಕ್ಕೆ ಹಚ್ಚಿದರೆ, ಗಂಟಲು ನೋವು ಹಾಗೂ ಗಂಟಲು ಊತ ಕಡಿಮೆಯಾಗುತ್ತದೆ.

 

ಮುಂದುವರೆಯುವುದು……….

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…