14. ಕಟ್ಟುಮೂತ್ರ ನಿವಾರಣೆ: ಶುದ್ಧ ಅರಿಶಿನ ಪುಡಿಯನ್ನು ಕಾದು ಆರಿದ ಹಸುವಿನ ಹಾಲಿಗೆ ಬೆರೆಸಿ ಕುಡಿಯುವುದರಿಂದ ಕಟ್ಟುಮೂತ್ರ ನಿವಾರಣೆ ಆಗುತ್ತದೆ. ಹೀಗೆ ದಿನದಲ್ಲಿ ೨ ಬಾರಿ, ಮೂರು ದಿನಗಳು ಸೇವಿಸಿದರೆ ಉತ್ತಮ ಫಲ ಸಿಗುತ್ತದೆ.
15. ಹಾಸಿಗೆಯಲ್ಲಿ ಮೂತ್ರವಿಸರ್ಜನೆ: ಮಕ್ಕಳು ರಾತ್ರಿ ವೇಳೆ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಅಂತಹ ಮಕ್ಕಳಿಗೆ ಜೇನುತುಪ್ಪದಲ್ಲಿ ಅರಿಶಿನದ ಕೊಂಬನ್ನು ತೇಯ್ದು, ಮಲಗುವ ಮುಂಚೆ ನೆಕ್ಕಿಸಿದರೆ, ರಾತ್ರಿ ಮೂತ್ರವಿಸರ್ಜನೆ ಮಾಡುವ ಅಭ್ಯಾಸ ನಿಲ್ಲುತ್ತದೆ.
16. ಮೂತ್ರಸಂಬಂಧೀ ರೋಗಗಳು: ಮೂತ್ರ ಸಂಬಂಧಪಟ್ಟ ರೋಗಗಳಿಗೆ ಅರಿಶಿನಕ್ಕೆ ಸಮಭಾಗದ ಮೆಣಸು ಪುಡಿ ಬೆರಸಿ, ಎಮ್ಮೆ ಹಾಲಿನ ಮೊಸರಿನಲ್ಲಿ ಕದಡಿ ಕುಡಿಯುವುದರಿಂದ, ದೋಶಗಳು ನಿವಾರಣೆಯಾಗುವುದು.
17. ಇಲಿ, ನಾಯಿ, ಚೇಳು ಕಚ್ಚಿದಾಗ: ೧೦೦ ML ಹಾಲು, ೧೦೦ ML ನೀರು ಬೆರಸಿ ೧೦ ಗ್ರಾಂ ಶುದ್ಧ ಅರಿಶಿನ ಬೆರೆಸಿ ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ, ನೀರಿನ ಅಂಶ ಇಂಗಿದ ಮೇಲೆ ಬರೀ ಹಾಲು ಉಳಿಯುತ್ತದೆ. ಈ ಹಾಲನ್ನು ೭-೮ ದಿನಗಳ ಕಾಲ ಸೇವಿಸುವುದರಿಂದ ಪ್ರಾಣಿಗಳ ಕಡಿತದಿಂದುಂಟಾಗುವ ವಿಷದ ಪ್ರಮಾಣ ತಗ್ಗುತ್ತದೆ. ಅರಿಶಿನದ ಗಂಧವನ್ನು ಗೋಮೂತ್ರದಲ್ಲಿ ತೇಯ್ದು ಸೇವಿಸುವುದರಿಂದಲೂ ಪ್ರಾಣಿಗಳು ಕಚ್ಚಿದಾಗ ಉಂಟಾಗುವ ವಿಷ ನಿವಾರಣೆ ಯಾಗುತ್ತದೆ.
18. ಕಾಲಿಗೆ ಮುಳ್ಳು: ಕಾಲಿಗೆ ಮುಳ್ಳು ಹೊಕ್ಕಿದ್ದರೆ ಅರಿಶಿನ ಹಾಗೂ ಬೆಳ್ಳುಳ್ಳಿಯನ್ನು ನುಣ್ಣಗೆ ಅರೆದು, ಮುಳ್ಳು ಹೊಕ್ಕಿರುವ ಸ್ಥಳಕ್ಕೆ ಕಟ್ಟಿದರೆ ಮುಳ್ಳು ಹೊರಬೀಳುವುದು ಮತ್ತು ನಂಜು ನಿವಾರಣೆಯಾಗುವುದು.
19. ವಿಳ್ಯದೆಲೆ, ಅಡಿಕೆ ಹಾಕಿಕೊಂಡಾಗ: ಸುಣ್ಣದ ಅಂಶ ಜಾಸ್ತಿಯಾಗಿ, ಕೆಲವರಿಗೆ ಬಾಯೆಲ್ಲಾ ಬೆಂದು ಹೋದ ಹಾಗೆ ಆಗುವುದು. ಅಂತಹ ಸಂದರ್ಭದಲ್ಲಿ ಹಸಿ ಅರಿಶಿನದ ಕೊಂಬನ್ನು ನೀರಿನಲ್ಲಿ ತೇಯ್ದು ಬೆಂದ ಭಾಗಕ್ಕೆ ಹಚ್ಚುತ್ತಾ ಬಂದರೆ ಕೆಲವು ದಿನಗಳಲ್ಲಿ ಗುಣವಾಗುತ್ತದೆ.
20. ದಂತಕ್ಷಯ: ಅರಿಶಿನದ ಕೊಂಬನ್ನು ಸುಟ್ಟು ಭಸ್ಮಮಾಡಿ, ಈ ಭಸ್ಮಕ್ಕೆ ಉಪ್ಪು ಸೇರಿಸಿ ಹಲ್ಲು ಉಜ್ಜುವುದರಿಂದ, ಹಲ್ಲು ನೋವು ನಿವಾರಣೆ ಮತ್ತು ದಂತಕ್ಷಯ ನಿವಾರಣೆಯಾಗುತ್ತದೆ.
21. ಗಂಟಲು ನೋವಿಗೆ: ಹಾಲಿನಲ್ಲಿ ಅರಿಶಿನದ ಕೊಂಬನ್ನು ತೇಯ್ದು ಆ ಗಂಧವನ್ನು ಬಿಸಿಮಾಡಿ ಗಂಟಲಿನ ಹೊರಭಾಗಕ್ಕೆ ಹಚ್ಚಿದರೆ, ಗಂಟಲು ನೋವು ಹಾಗೂ ಗಂಟಲು ಊತ ಕಡಿಮೆಯಾಗುತ್ತದೆ.