6. ಕಾಲಿನ ಹಿಮ್ಮಡಿ ಒಡೆದಿರುವುದಕ್ಕೆ: ಕಾಲಿನ ಹಿಮ್ಮಡಿ ಒಡೆದಾಗ, ಅರಿಶಿನದ ಪುಡಿಗೆ ಹರಳೆಣ್ಣೆಯನ್ನು ಬೆರೆಸಿ, ಕಲಿಸಿ ಹಚ್ಚಿದಾಗ ನೋವು ನಿವಾರಣೆಯಾಗುತ್ತದೆ,ಹಲವು ದಿನಗಳ ನಂತರ ಬಿರುಕು ವಾಸಿಯಾಗುತ್ತದೆ.
7. ಮೊಡವೆ: ಪ್ರತಿದಿನ ಸ್ನಾನಮಾಡುವ ಮುನ್ನ ಅರಿಶಿನದ ಪುಡಿಯನ್ನು ಹಚ್ಚಿದರೆ, ಮೊಡವೆಗಳು ಬರುವುದಿಲ್ಲ.
8. ಮುಖದ ಚರ್ಮಕಾಂತಿ: ಹಸಿಯ ಅರಿಶಿನದ ಕೊಂಬು ಮತ್ತು ತೆಂಗಿನ ಹಾಲಿನಲ್ಲಿ ರಕ್ತಚಂದನದಿಂದ ತೇಯ್ದು, ಅದನ್ನು ಮುಖದ ಚರ್ಮಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ಶುದ್ಧಿ ಮಾಡಿಕೊಂಡರೆ, ಹಲವು ದಿನಗಳಲ್ಲಿ ಮುಖದ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಮುಖದ ಮೇಲಿನ ಕೂದಲು ನಿವಾರಣೆಗೆ ಅರಿಶಿನದ ಪುಡಿಯನ್ನು ಕೊಬ್ಬರಿ ಎಣ್ಣೆಯೊಂದಿಗೆ ಹಚ್ಚಿದಾಗ ಕೆಲವು ದಿನಗಳಲ್ಲಿ ಮುಖದ ಮೇಲಿನ ಕೂದಲು ಮಾಯವಾಗುತ್ತದೆ.
9. ಊತ(ಬಾತುಕೊಳ್ಳುವುದು): ಶರೀರದ ಯಾವ ಭಾಗದಲ್ಲಿ ಊತ ಕಂಡುಬಂದರೆ ಅರಿಶಿನದ ಕೊಂಬನ್ನು ನೀರಿನಲ್ಲಿ ತೇಯ್ದು ಪಟ್ಟು ಹಾಕಿದರೆ ಆ ಭಾಗದ ಊತ ಕಡಿಮೆಯಾಗುವುದು.
10. ನೆಗಡಿಗೆ: ನೆಗಡಿ(ಶೀತ) ಉಂಟಾದಾಗ, ಹಾಲಿಗೆ ಅರಿಶಿನದ ಪುಡಿ, ಶುಂಠಿಪುಡಿ ಸೇರಿಸಿ ಕುದಿಸಿದ ಹಾಲನ್ನು ಕುಡಿಯುವುದರಿಂದ ನೆಗಡಿ, ಕೆಮ್ಮು, ಗಂಟಲು ನೋವು ಕಡಿಮೆಯಾಗುತ್ತದೆ.
11. ತಲೆನೋವು ಹಾಗೂ ಮೂಗು ಕಟ್ಟುವುದಕ್ಕೆ: ಅರಿಶಿನದ ಪುಡಿ ಹಾಗೂ ರಾಗಿ ಹಿಟ್ಟನ್ನು ಕೆಂಡದ ಮೇಲೆ ಉದುರಿಸಿ ಅದರ ಹೊಗೆಯನ್ನು ಸೇವಿಸಿದರೆ ಕಟ್ಟಿದ ಮೂಗು ಬಿಡುತ್ತದೆ ಮತ್ತು ನೆಗಡಿಯಿಂದ ತಲೆನೋವು ಕಡಿಮೆಯಾಗುತ್ತದೆ.