Health Tips Kannada
1. 1 ಹಿಡಿ ತುಳಸಿ, 1 ತುಂಡು ಶುಂಠಿ, ಚೂರು ಬೆಲ್ಲ 3 ಸೇರಿಸಿ ಚೆನ್ನಾಗಿ ನುಣ್ಣಗೆ ಅರೆದು ಗುಳಿಗೆಗಳ ರೀತಿ ಮಾಡಿಟ್ಟುಕೊಂಡು ಪ್ರತಿನಿತ್ಯ ಊಟಕ್ಕೆ ಮುಂಚೆ ಸೇವಿಸುತ್ತಿದ್ದರೆ ಪಚನಶಕ್ತಿ ಹೆಚ್ಚುವುದು. ಆಹಾರ ಚನ್ನಾಗಿ ಜೀರ್ಣವಾಗುವುದು.
2. ಈರುಳ್ಳಿ ಎಲೆಯನ್ನು ಚೆನ್ನಾಗಿ ಅಗೆದು ತಿನ್ನುವುದರಿಂದ ಲಾಲಾರಸ ಹೆಚ್ಚು ಉತ್ಪತ್ತಿಯಾಗಿ ಜೀರ್ಣಶಕ್ತಿ ಉತ್ತಮವಾಗುತ್ತದೆ.
3. ಅಜೀರ್ಣವಾದಾಗ ನೀರಿಗೆ ನಿಂಬೆರಸ ಹಿಂಡಿ 1 ಚಿಟಿಕೆ ಅಡಿಗೆ ಸೋಡಾ ಹಾಕಿ ಕುಡಿದರೆ ಅನುಕೂಲವಾಗುತ್ತದೆ.
ನಂಬಿಕೆಗಿಂತ ಸಂದೇಹವೆ ಹೆಚ್ಚಾದರೆ ಯಾವ ಸಂಬಂಧವೂ ಉಳಿಯಲ್ಲ.
4. ಪ್ರತಿನಿತ್ಯ ಆಹಾರದಲ್ಲಿ ಕ್ಯಾರೆಟ್ಟನ್ನು ಹಸಿಯಾಗಿ ಬಳಸುತ್ತಿದ್ದರೆ ಪಚನಶಕ್ತಿ ಉತ್ತಮವಾಗುತ್ತದೆ.
5. ಊಟಕ್ಕೆ ಮುಂಚೆ ಅನಾನಸ್ ಹಣ್ಣಿನ ರಸ ಸೇವನೆಯಿಂದ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಹಾಗೂ ಸುಲಭವಾಗಿ ವಿಸರ್ಜಿಸಲ್ಪಡುತ್ತದೆ.
ನೀವು ನನ್ನನ್ನು ವಶಪಡಿಸಿಕೊಳ್ಳುವ ಏಕೈಕ ಮಾರ್ಗವೆಂದರೆ ಪ್ರೀತಿಯ ಮೂಲಕ.
6. ಅಜೀರ್ಣ, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆ ಇದ್ದಾಗ ಊಟದ ನಂತರ ಶುಂಠಿ ಮೊರಬ್ಬದ 2 ತುಂಡು ಬಾಯಿಗೆ ಹಾಕಿಕೊಂಡು ಚೆನ್ನಾಗಿ ಅಗೆದು ತಿಂದರೆ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ, ಜಠರದ ಕ್ರಿಯಾಶೀಲತೆ ಹೆಚ್ಚುತ್ತದೆ.
7. ಹಸಿ ಮೂಲಂಗಿಯನ್ನು ತುರಿದು ಕೋಸಂಬರಿ ಅಥವಾ ಮೊಸರಿನ ಜೊತೆ ಸಲಾಡ್ ರೀತಿ ಮಾಡಿ ಸೇವಿಸುವುದರಿಂದ ತಿಂದ ಆಹಾರ ಚೆನ್ನಾಗಿ ಜೀರ್ಣಿಸು ತ್ತದೆ.
8. ಪರಂಗಿ ಕಾಯಿಯ ಹೋಳುಗಳಿಗೆ ಜೀರಿಗೆ, ಮೆಣಸು ಹಾಗೂ ಉಪ್ಪು ಪುಡಿಯನ್ನು ಉದುರಿಸಿ ಸ್ವಲ್ಪ ನಿಂಬೆರಸ ಸೇರಿಸಿ ತಿಂದರೆ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.