ಗೋಲ್ಡನ್‌ ಸ್ಟಾರ್ ಕಣ್ಣು ಪ್ಯಾನ್‌ ಇಂಡಿಯಾ ಮೇಲೆ!

Golden Star Eye on Pan India!

ವಿಖ್ಯಾತ್‌ ಪ್ರೊಡಕ್ಷನ್‌ ಅಂದರೇನೆ, ಅದ್ಧೂರಿತನ ಕಣ್ಮುಂದೆ ಬರುತ್ತದೆ. ಈ ವರೆಗೆ ನಿರ್ಮಾಪಕ ವಿಖ್ಯಾತ್‌ ನಿರ್ಮಿಸಿರುವ ಪುಷ್ಪಕ ವಿಮಾನ, ಇನ್ಸ್‌ಪೆಕ್ಟರ್‌ ವಿಕ್ರಂ, ಮಾನ್ಸೂನ್‌ ರಾಗ ಮೊದಲಾದ ಚಿತ್ರಗಳು ತಾಂತ್ರಿಕವಾಗಿ ಶ್ರೀಮಂತಿಕೆ ಹೊಂದಿದ್ದವು. ಅದೆಷ್ಟೇ ಕಷ್ಟವಾದರೂ ತೆರೆಮೇಲಿನ ದೃಶ್ಯಗಳು ರಿಚ್‌ ಆಗಿ ಮೂಡಿಬರಬೇಕು ಅಂತಾ ಬಯಸೋ ನಿರ್ಮಾಪಕರಲ್ಲಿ ವಿಖ್ಯಾತ್‌ ಖ್ಯಾತರಾಗಿದ್ದಾರೆ. ಸ್ಟಾರ್‌ಗಳ ಡೇಟ್ಸ್‌ ಸಿಕ್ತಾ, ರಪಾರಪಾ ಸಿನಿಮಾ ಮುಗಿಸಿ, ವ್ಯಾಪಾರ ಮುಗಿಸುವ ಜಾಯಮಾನ ವಿಖ್ಯಾತ್‌ ಅವರದ್ದಲ್ಲ. ಇಂಥ ವಿಖ್ಯಾತ್‌ ಈಗ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರಿಗಾಗಿ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಇನ್ನೂ ಟೈಟಲ್‌ ರಿವೀಲ್‌ ಆಗದ ಚಿತ್ರದ ಪೋಸ್ಟರ್‌ ಇಂದು ಹೊರಬಂದಿದೆ. ಈ ಬಾರಿ ಗಣೇಶ್‌ ಜನರನ್ನು ಗ್ಲೋಬಲ್‌ ಲೆವೆಲ್ಲಿನಲ್ಲಿ ರಂಜಿಸಲೆಂದೇ ಸಿದ್ದವಾಗುತ್ತಿದ್ದಾರೆ ಅನ್ನೋ ಸೂಚನೆಯಂತೂ ದೊರಕಿದೆ..Golden Star Eye on Pan India! WhatsApp Image 2023 07 02 at 4.10.42 PM

ಇದು ಗಣೇಶ್ ಅವರ ವೃತ್ತಿ ಬದುಕಿನಲ್ಲಿ ಮಹತ್ತರವಾಗಿ ದಾಖಲಾಗಬಹುದಾದ ಚಿತ್ರವಾಗಲಿದೆ ಅನ್ನೋದು ನಿರ್ಮಾಪಕ ವಿಖ್ಯಾತ್‌ ಅಭಿಪ್ರಾಯವಾಗಿದೆ.  ಇದು ಗಣೇಶ್ ನಟನೆಯ 42ನೇ ಚಿತ್ರವಾಗಿದೆ.  ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ನಿರ್ಮಾಣದ 6ನೇ ಚಿತ್ರವಿದು.  ವಿಶೇಷವೆಂದರೆ, ಇದು ಬಿಗ್ ಬಜೆಟ್ಟಿನ, ದೊಡ್ಡ ಕ್ಯಾನ್ವಾಸಿನ ಪ್ಯಾನಿಂಡಿಯಾ ಚಿತ್ರ. ಈ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಪ್ಯಾನಿಂಡಿಯಾ ಲೆವೆಲ್ಲಿಗೆ ಲಗ್ಗೆಯಿಡಲಿದ್ದಾರೆ. ಈ ಸಿನಿಮಾ ಬಗೆಗಿನ ತಯಾರಿಗಳು ಚಾಲ್ತಿಯಲ್ಲಿವೆ. ನಿರ್ದೇಶಕರು, ತಾರಾಗಣ, ತಾಂತ್ರಿಕ ವರ್ಗ, ನಾಯಕಿ ಯಾರು ಎಂಬ ವಿಚಾರಗಳು ಇಷ್ಟರಲ್ಲಿಯೇ ಬಯಲಾಗಲಿವೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…