ವಿಲಕ್ಷಣ ಜಗತ್ತಿನಲ್ಲಿ ಸುತ್ತಾಡಿಸುವ ಗಿರ್ಕಿ!

Girki 3.5

ಇದನ್ನು ವಿಪರ್ಯಾಸ ಅಂತಲೇ ಹೇಳಬೇಕು. ಎಲ್ಲ ದುಷ್ಟರ ಕಣ್ಣು, ಕೇಡುಗರ ಟಾರ್ಗೆಟ್ಟು ಹೆತ್ತವರಿಲ್ಲದೆ ನರಳುವ ಅನಾಥರ ಮೇಲೇ ಇರುತ್ತೆ. ಇವರಿಗೇನಾದರೂ ಆದರೆ ಯಾರೂ ಕೇಳೋರು ಗತಿ ಇರೋದಿಲ್ಲ ಅನ್ನೋದೇ ಬಹುಶಃ ಅವರ ನಿರ್ಧಾರವೇನೋ…girki kannada movie review

ತಂದೆ ಜೊತೆಗಿಲ್ಲದೆ ಬೆಳೆದು, ತೀರಾ ಸಣ್ಣ ವಯಸ್ಸಲ್ಲಿ ತಾಯಿಯನ್ನೂ ಕಳೆದುಕೊಂಡು, ಯಾರದ್ದೋ ಮೂಲಕ ಅನಾಥಾಶ್ರಮ ಸೇರಿದ ಹುಡುಗಿ. ಬೆಳೆದಮೇಲೆ ಸ್ವತಂತ್ರವಾಗುವ ಬಯಕೆಯಿಂದ ಆಶ್ರಮದಿಂದ ಹೊರಬಂದು, ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸಕ್ಕೆ ಸೇರಿರುತ್ತಾಳೆ. ಇವನಾದರೂ ಆಷ್ಟೇ. ವಿದ್ಯೆ ನೆಟ್ಟಗೆ ತಲೆಗಂಟಿರುವುದಿಲ್ಲ.girki kannada movie review

ತನ್ನ ಪೊಲೀಸ್ ಪೇದೆ ಮಾವನ ಮೂಲಕ ಬೆಂಗಳೂರಿಗೆ ಬಂದು ಬಾರ್ ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿರುತ್ತಾನೆ. ಬೇಜಾರು ತೀರಿಸಿಕೊಳ್ಳಲು ಬಾರಿಗೆ ಬಂದವರನ್ನು ಕೂರಿಸಿ, ಟೇಬಲ್ ಮೇಲಿಟ್ಟ ಗ್ಲಾಸು ಕೂಡಾ ತಕತಕ ಕುಣಿಯುವಂತೆ ಮಜವಾಗಿ ಎಣ್ಣೆ ಹಾಕಿಕೊಡುತ್ತಾನೆ. ಅವರು ಕೊಟ್ಟ ಟಿಪ್ಸು ಜೇಬಿಗಿಳಿಸಿಕೊಳ್ಳುತ್ತಾನೆ. ಸಂಜೆಯಾಗುತ್ತಿದ್ದಂತೇ ಬಟ್ಟೆ ಅಂಗಡಿ ಹುಡುಗಿಯ ಹಿಂದಿಂದೆ ನಡೆದುಕೊಂಡು ಹೋಗಿ ನಾಲ್ಕು ಮಾತಾಡಿ ಬರುತ್ತಾನೆ.girki kannada movie review

ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಮದುವೆ ಸಿದ್ದತೆ ಕೂಡಾ ಮಾಡಿಕೊಳ್ಳುತ್ತಾರೆ. ಅಲ್ಲಿಗೆ ದುಷ್ಟರ ಕಣ್ಣು ಹುಡುಗಿಯ ಮೇಲೆ ಬೀಳುತ್ತದೆ. ಏಕಾಏಕಿ ಕಿಡ್ನ್ಯಾಪ್ ಕೂಡಾ ಮಾಡಿಬಿಡುತ್ತಾರೆ. ಇವೆಲ್ಲ ಮೊದಲ ಭಾಗದಲ್ಲಿ ನಡೆಯುವ ವಿಚಾರ. ದ್ವಿತೀಯಾರ್ಧದಲ್ಲಿ ಕ್ಷಣಕ್ಷಣಕ್ಕೂ ಟ್ವಿಸ್ಟುಗಳು ಎದುರಾಗುತ್ತವೆ. ಕಿಡ್ನ್ಯಾಪ್ ಆದ ಹುಡುಗಿಯ ತಲಾಶ್ ಆರಂಭವಾಗುತ್ತದೆ. ಊಹೆ, ಸುಳಿವುಗಳೂ ಸುಳ್ಳಾಗುತ್ತಾ ಸಾಗುವ ದಾರಿಯಲ್ಲಿ ನಿಜವೆನ್ನುವುದು ಗೊಂದಲದ ಗುಂಡಿಗೆ ಬೀಳುತ್ತದೆ. ಮತ್ತೆ ಮತ್ತೆ ಎದ್ದು ಸತ್ಯದ ಬೆನ್ನತ್ತಲಾಗುತ್ತದೆ. ನಿಜಕ್ಕೂ ರೋಚಕ ಎನಿಸುವ ಹಲವು ಆಯಾಮಗಳು ತೆರೆದುಕೊಳ್ಳುತ್ತವೆ. ಕಟ್ಟಕಡೆಯದಾಗಿ ಹುಡುಗಿ ಬದುಕಿದಳಾ? ಅಥವಾ ಕ್ರೂರಿಗಳ ದಾಹಕ್ಕೆ ಬಲಿಯಾದಳಾ ಅನ್ನೋ ಪ್ರಶ್ನೆ ಮೂಡುತ್ತದೆ. ಕೊನೆಯಲ್ಲಿ ಉತ್ತರವೂ ದೊರಕುತ್ತದೆ.girki kannada movie review

ಗಂಭೀರ ವಿಚಾರವನ್ನಿಟ್ಟುಕೊಂಡು, ಅದಕ್ಕೆ ಒಂದಿಷ್ಟು ಹಾಸ್ಯವನ್ನು ಬೆರೆಸಿ ʻಗಿರ್ಕಿʼ ಸಿನಿಮಾವನ್ನು ರೂಪಿಸಿದ್ದಾರೆ. ಕಾಮಿಡಿ ನಟನಾಗಿ ಖ್ಯಾತಿ ಹೊಂದಿರುವ ತರಂಗ ವಿಶ್ವ ಈ ಚಿತ್ರವನ್ನು ನಿರ್ಮಿಸಿರುವುದರ ಜೊತೆಗೆ ಬಹುಮುಖ್ಯ ಪಾತ್ರವಾದ ಪೊಲೀಸ್ ಪೇದೆಯಾಗಿಯೂ ಕಾಣಿಸಿಕೊಂಡಿದ್ದಾರೆ. ದಿವ್ಯ ಉರುಡುಗ ನಟನೆಯ ಬಗ್ಗೆ ಮಾತಾಡುವಂತಿಲ್ಲ.

ಪಾತ್ರಕ್ಕೆ ಬೇಕಿರುವ ಮುಗ್ಧತೆ ಮತ್ತು ರಗಡ್ ಲುಕ್ ಎರಡೂ ಹೊಂದಿರುವ ವಿಲೋಕ್ ರಾಜ್ ಕೂಡಾ ಮೊದಲ ಚಿತ್ರದಲ್ಲೇ ಗಮನ ಸೆಳೆಯುವಂತೆ ನಟಿಸಿದ್ದಾರೆ. ಪ್ರಶಾಂತ್ ಸಿದ್ದಿ, ರಮೇಶ್ ಭಟ್ ಮತ್ತು ನಂದಗೋಪಾಲ್ ಗೆ ಹೇಳಿಮಾಡಿಸಿದಂತಾ ಪಾತ್ರಗಳು ಸಿಕ್ಕಿವೆ. ಲೇಡಿ ಪಿ.ಸಿ ರಾಶಿ ಮಹದೇವ್ ಆಕರ್ಷಿಸುವ ಗುಣ ಹೊಂದಿದ್ದಾರೆ!girki kannada movie review

ಎಲ್ಲವೂ ಇರುವ ಗಿರ್ಕಿ ಸಿನಿಮಾದಲ್ಲಿ ಅನವಶ್ಯಕ ದೃಶ್ಯಗಳು ಸ್ವಲ್ಪ ಡಿಸ್ಟರ್ಬ್ ಮಾಡುತ್ತವೆ. ಇದನ್ನು ಹೊರತುಪಡಿಸಿದರೆ ಗಿರ್ಕಿ ತುಂಬಾ ಗಟ್ಟಿಯಾದ ಕಂಟೆಂಟ್ ಹೊಂದಿರುವ ಸಿನಿಮಾ. ಅನಾಥ ಮಕ್ಕಳೇ ಯಾಕೆ ಅನಾಥ ಶವವಾಗುತ್ತಾರೆ ಅನ್ನೋದರ ಬಗ್ಗೆ ಸೀರಿಯಸ್ ಆಗಿ ಥಿಂಕ್ ಮಾಡಿಸುವ ಚಿತ್ರ. ನವೀನ್ ಕುಮಾರ್ ಚೆಲ್ಲ ರಾತ್ರಿ ದೃಶ್ಯಗಳನ್ನು ಬ್ಯೂಟಿಫುಲ್ ಆಗಿ ಸೆರೆ ಹಿಡಿದಿದ್ದಾರೆ. ವೀರ್ ಸಮರ್ಥರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಶಕ್ತಿ. ನಿರ್ದೇಶಕ ವೀರೇಶ್ ಪಿ.ಎಂ. ಅವರಿಗೆ ತಳಸಮುದಾಯದ ಬವಣೆಯನ್ನು ಕಟ್ಟಿಕೊಡುವ ಕಲೆ ಗೊತ್ತು. ಗಿರ್ಕಿಯನ್ನು ಒಮ್ಮೆ ನೋಡಿ. ಖಂಡಿತಾ ನಿಮಗೆ ಇಷ್ಟವಾಗಬಹುದು!

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…