“ಗೌರಿ” ಚಿತ್ರತಂಡದಿಂದ ಪುನೀತ್ ರಾಜಕುಮಾರ್ ಅವರಿಗೆ ನೃತ್ಯ ನಮನ .

ಅಪ್ಪು ಹಾಡುಗಳಿಗೆ ಸಮರ್ಜಿತ್ ಲಂಕೇಶ್ ಜೊತೆ ಹೆಜ್ಜೆ ಹಾಕುತ್ತಿದ್ದಾರೆ ಖ್ಯಾತ ನಟಿ ತಾನ್ಯ ಹೋಪ್ .

ಪತ್ರಕರ್ತ, ನಟ, ನಿರ್ಮಾಪಕ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ “ಗೌರಿ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇಂದ್ರಜಿತ್ ಅವರೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.Gauri Kannada Movie Song

ಮಾರ್ಚ್ 17, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ. ಪುನೀತ್ ಅವರ ಹುಟ್ಟುಹಬ್ಬಕ್ಕೆ “ಗೌರಿ” ತಂಡದಿಂದ ವಿಶೇಷ ಗೀತೆಯೊಂದು ಬರಲಿದೆ. ಈ ವಿಶೇಷ ಗೀತೆಗೆ ಸಮರ್ಜಿತ್ ಲಂಕೇಶ್ ಜೊತೆ ದಕ್ಷಿಣ ಭಾರತದ ಖ್ಯಾತ ನಟಿ ತಾನ್ಯ ಹೋಪ್ ಹೆಜ್ಜೆ ಹಾಕಲಿದ್ದಾರೆ. ಮೋಹನ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಈ ಹಾಡಿನ ಬಗ್ಗೆ ಚಿತ್ರತಂಡದ ಸದಸ್ಯರು ಮಾತನಾಡಿದರು.Gauri Kannada Movie Song

ನಾನು ಅಪ್ಪು ಅವರ ಅಭಿಮಾನಿ ಎಂದು ಮಾತನಾಡಿದ ಸಮರ್ಜಿತ್, ಪುನೀತ್ ಅವರ ಡ್ಯಾನ್ಸ್ ನನಗೆ ಸ್ಪೂರ್ತಿ. ಹಾಗಾಗಿ ಅವರ ಹುಟ್ಟುಹಬ್ಬದಂದು “ಗೌರಿ” ಚಿತ್ರತಂಡದಿಂದ ಈ ಹಾಡನ್ನು ಬಿಡುಗಡೆ ಮಾಡುವ ಮೂಲಕ ಅವರಿಗೆ ನಮನ ಸಲ್ಲಿಸುತ್ತಿದ್ದೇವೆ ಎಂದರು.Gauri Kannada Movie Song

ಇಂದ್ರಜಿತ್ ಅವರ ಮಗ ಸಮರ್ಜಿತ್ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರವಿದು. ಸಮರ್ಜಿತ್ ಬಹಳ ಲವಲವಿಕೆಯ ಹುಡುಗ. ಈ ಹಾಡಿನಲ್ಲಿ ಸಮರ್ಜಿತ್ ಅವರ ಜೊತೆ ಅಭಿನಯಿಸುತ್ತಿರುವುದು ಖುಷಿಯಾಗಿದೆ. ನಾನು ಸಹ ಪುನೀತ್ ಅವರ ಅಭಿಮಾನಿ‌ ಎಂದು ತಾನ್ಯ ಹೋಪ್ ತಿಳಿಸಿದರು.Gauri Kannada Movie Song

ಈಗಾಗಲೇ “ಗೌರಿ” ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಆದರೆ ಇಂದು ಸಿನಿಮಾಗಿಂತ ಈ ಹಾಡಿನ ಬಗ್ಗೆ ಹೇಳಲು ಬಯಸುತ್ತೇನೆ. ಮುಂಬರುವ ಪುನೀತ್ ಅವರ ಹುಟ್ಟುಹಬ್ಬಕ್ಕೆ “ಗೌರಿ” ಚಿತ್ರತಂಡದಿಂದ ವಿಶೇಷ ಹಾಡೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಪುನೀತ್ ರಾಜಕುಮಾರ್ ಅವರ ಚಿತ್ರಗಳ ಪ್ರಸಿದ್ದ ಹಾಡುಗಳಿಗೆ ಸಮರ್ಜಿತ್ ಹಾಗೂ ತಾನ್ಯ ಹೋಪ್ ಹೆಜ್ಜೆ ಹಾಕಲಿದ್ದಾರೆ. ಈ ವಿಶೇಷ ಗೀತೆಯ ತಾಲೀಮು ನಡೆಯುತ್ತಿದೆ. ಸದ್ಯದಲ್ಲೇ ಚಿತ್ರೀಕರಣವಾಗಲಿದೆ ಎನ್ನುತ್ತಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಸಮರ್ಜಿತ್ ಲಂಕೇಶ್ ಅವರಿಗೆ ನಾಯಕಿಯಾಗಿ ಸಾನ್ಯ ಅಯ್ಯರ್ ನಟಿಸುತ್ತಿದ್ದಾರೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…