ರಿಯಲ್‌ ಸೈಕೋ ಕಿಲ್ಲರ್ ಕುರಿತ ಚಿತ್ರ ದ್ವಿಪಾತ್ರ!

Film about real psycho killer double role!

ನೈಜ ಘಟನೆ ಆಧರಿಸಿ ಸಿನಿಮಾ ಮಾಡೋದು ಅಂದರೆ ಸುಲಭದ ಮಾತಲ್ಲ. ಒಂದು ಸಲ ರಿಯಲ್ ಇನ್ಸಿಡೆಂಟ್ ಬೇಸ್ ಅಂದ ತಕ್ಷಣ ಅನೇಕ ರೀತಿಯ ಸವಾಲುಗಳು ಎದುರಾಗುತ್ತವೆ. ಮೂಲ ಘಟನೆಯನ್ನು ಸ್ವಲ್ಪ ತಿರುಚಿದರೂ ಅಪಾರ ಎದುರಾಗುವ ಸಂದರ್ಭವಿರುತ್ತದೆ. ಆದರೆ ನಡೆದ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವ ಸಿನಿಮಾವೊಂದು ತೆರೆಗೆ ಬರಲು ಅಣಿಯಾಗಿದೆ. ಅದು ದ್ವಿಪಾತ್ರ!Film about real psycho killer double role!

ಕೇರಳದಲ್ಲಿ ನಡೆದ ನೈಜ ಘಟನೆ ಆಧರಿಸಿ ಕಥಾಹಂದರ ಹೆಣೆದಿರುವ ನಿರ್ದೇಶಕ ಶ್ರೀವತ್ಸ ಆರ್. ಅವರು ದ್ವಿಪಾತ್ರ ಎಂಬ ಚಿತ್ರದ ಮೂಲಕ ಅದನ್ನು ತೆರೆಗೆ ತರುತ್ತಿದ್ದಾರೆ. ಈ ಚಿತ್ರದ. ಟ್ರೈಲರ್ ಪ್ರದರ್ಶನ ಹಾಗೂ ಪತ್ರಿಕಾಗೋಷ್ಟಿ ಇತ್ತೀಚೆಗೆ ನಡೆಯಿತು. ಈ ಚಿತ್ರದಲ್ಲಿ ಹಿರಿಯನಟ ಅವಿನಾಶ್, ಚಂದೂಗೌಡ, ನೀನಾಸಂ ಅಶ್ವಥ್, ಮಾಳವಿಕ ಅವಿನಾಶ್, ಸತ್ಯ, ಸ್ನೇಹ ಹೆಗಡೆ, ಪಾಯಲ್ ಚಂಗಪ್ಪ, ಬಿಗ್ಬಾಸ್ ರಘುಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಶ್ರೀವತ್ಸ ನಾನೊಬ್ಬ ಚಾಟರ್ಡ್ ಅಕೌಂಟೆಂಟ್ ಆದರೂ ಸಿನಿಮಾ ಬಗ್ಗೆ ಮೊದಲಿಂದಲೂ ಆಸಕ್ತಿಯಿತ್ತು. ೨೦೧೬ರಲ್ಲಿ ಕೇರಳದಲ್ಲಿ ಇಂಥದ್ದೊಂದು ಘಟನೆ ನಡೆದಿತ್ತು, ಡಬಲ್ ಡಿಎನ್ಎ ಮನುಷ್ಯನಿಗಿದ್ದರೆ ಏನಾಗುತ್ತೆ, ಆತನೊಬ್ಬ ಸೈಕೋಕಿಲ್ಲರ್ ಆದರೆ ಹೇಗಿರುತ್ತೆ ಎಂದು ಚಿತ್ರದಲ್ಲಿ ತೋರಿಸಿದ್ದೇನೆ, ಚಿತ್ರದಲ್ಲಿ ೪ ಪ್ರಮುಖ ಪಾತ್ರಗಳಿದ್ದು, ಡಿಫರೆಂಟ್ ಜಾನರ್ ಕಥೆಯನ್ನು ಜನರ ಮುಂದಿಡಬೇಕೆಂದು ಈ ಸಿನಿಮಾ ಮಾಡಿದ್ದೇವೆ, ನಮ್ಮ ಚಿತ್ರಕ್ಕೆ ಬಿಜಿಎಂ ದೊಡ್ಡ ಶಕ್ತಿ.Film about real psycho killer double role! ಚಿತ್ರಕಥೆ ತುಂಬಾ ಫಾಸ್ಟಾಗಿದ್ದು, ಕ್ಷಣ ಮಿಸ್ ಆದರೂ ಲಿಂಕ್ ತಪ್ಪಿಹೋಗುತ್ತದೆ ಎಂದು ಹೇಳಿದರು, ನಂತರ ನಾಯಕ ಚಂದೂಗೌಡ ಮಾತನಾಡಿ ಒಬ್ಬ ಸೀರಿಯಲ್ ಕಿಲ್ಲರ್ ಹೆಣ್ಣುಮಕ್ಕಳನ್ನು ಕೊಲೆ ಮಾಡ್ತಿದ್ದ, ಆತ ಏಕೆ, ಹೇಗೆ ಕೊಲೆಗಾರನಾದ ಎಂಬ ಕಾರಣವನ್ನು ಕಂಡುಹಿಡಿಯುವ ಡಿಸಿಪಿ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ನಂತರ ಮಾತನಾಡಿದ ರಘುಗೌಡ, ಶ್ರೀವತ್ಸ ಅವರು ಈ ಕಥೆ ಹೇಳಿದಾಗ ತುಂಬಾ ಕುತೂಹಲ ಮೂಡಿತು, ತನ್ನ ಮೋಜು ಮಸ್ತಿಗೆ ಸಿಸಿ ಟಿವಿ ಹ್ಯಾಕ್ ಮಾಡುವುದು ಮಾಡ್ತಿರ್ತಾನೆ. ಕಾಮಿಡಿ ಪಾತ್ರವಾದರೂ ಕಥೆಯ ಜೊತೆಗೇ ಸಾಗುತ್ತದೆ ಎಂದು ಹೇಳಿದರು. ಚಿತ್ರದ ನಾಯಕಿ ಪಾಯಲ್ ಚಂಗಪ್ಪ ಮಾತನಾಡಿ ಈವರೆಗೆ ಹೆಚ್ಚಾಗಿ ಕಾಮಿಡಿ ಪಾತ್ರಗಳನ್ನೇ ಮಾಡಿದ್ದೆ.Film about real psycho killer double role!

ಇದರಲ್ಲಿ ಡಿಟೆಕ್ಟಿವ್ ಆಗಿ ಕಾಣಿಸಿಕೊಂಡಿದ್ದೇನೆ ಎಂದರೆ, ಮತ್ತೊಬ್ಬ ನಟಿ ಸ್ನೇಹ ಹೆಗಡೆ ಮಾತನಾಡಿ ಚಂದೂಗೌಡ ಅವರ ಪತ್ನಿ ಮೀನಾಜೋಸೆಫ್ ಎಂಬ ಗರ್ಭಿಣಿ ಮಹಿಳೆಯ ಪಾತ್ರವನ್ನು ಮಾಡಿದ್ದೇನೆ ಎಂದರು. ಪ್ರಮುಖ ಪಾತ್ರಧಾರಿ ವಿಕ್ಕಿ ಕೋಲಾರ ಮಾತನಾಡುತ್ತ, ನನ್ನದು ನೆಗೆಟಿವ್ ಶೇಡ್ ಇರುವ ಸೈಕೋಥರದ ಪಾತ್ರ ಎಂದು ಹೇಳಿದರು, ಸಂಗೀತ ನಿರ್ದೇಶಕ ಮಹರಾಜ್ ಮಾತನಾಡುತ್ತ ಎರಡು ಹಾಡುಗಳಿದ್ದು, ಲೈವ್ ಇನ್ಸ್ಟ್ರುಮೆಂಟ್ ಉಪಯೋಗಿಸಿದ್ದೇವೆ ಎಂದು ಹೇಳಿದರು. ನಿರ್ಮಾಪಕ ಸತ್ಯಾಶ್ರಯ ಮಾತನಾಡಿ, ಈ ಚಿತ್ರವನ್ನು ಕೋವಿಡ್ ಟೈಮ್ನಲ್ಲೇ ಶುರು ಮಾಡಿದೆವು. ನಂತರ ಮಧುಸೂದನ್ ನಮ್ಮ ಜೊತೆಯಾದರು. ನಿರ್ದೇಶಕ ಶ್ರೀವತ್ಸ ಅವರ ತಾಯಿ ಜಯಶ್ರೀ ಅವರೂ ಸಹ ಕೈಜೋಡಿಸಿದರು. ಚಿತ್ರವೀಗ ಬಿಡುಗಡೆಯ ಹಂತ ತಲುಪಿದೆ ಎಂದರು. ಛಾಯಾಗ್ರಾಹಕ ಅಮರ್ಗೌಡ ಮಾತನಾಡಿದರು. ಪ್ರಶಾಂತ್ ಸಿದ್ದಿ, ಸುಚೇಂದ್ರಪ್ರಸಾದ್ ಸೇರಿದಂತೆ ಇನ್ನೂ ಅನೇಕ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…